ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: IAF Mi-17V5 ಹೆಲಿಕಾಪ್ಟರ್ ಪತನದ ಹೀಗೊಂದು ವಿಡಿಯೋ ವೈರಲ್

|
Google Oneindia Kannada News

ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಅವರಿದ್ದ IAF Mi-17V5 ಹೆಲಿಕಾಪ್ಟರ್ ತಮಿಳುನಾಡಿನ ಕೂನೂರ್ ಬಳಿ ಅಪಘಾತಕ್ಕೀಡಾಗಿದೆ ಎಂದು ಡಿಸೆಂಬರ್ 8 ರಂದು ಭಾರತೀಯ ವಾಯುಪಡೆಯು ಆಘಾತಕಾರಿ ಸುದ್ದಿಯನ್ನು ಟ್ವೀಟ್ ಮಾಡಿದೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಐಎಎಫ್ ತಿಳಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಬಿಪಿನ್ ರಾವತ್ ಮತ್ತು ಶ್ರೀಮತಿ ರಾವತ್ ಸೇರಿದಂತೆ 14 ಪ್ರಯಾಣಿಕರಲ್ಲಿ 13 ಮಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಈ ಹಿನ್ನೆಲೆಯಲ್ಲಿ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಪತನಗೊಳ್ಳುವ ಚಾಪರ್ನ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಇದು ಇತ್ತೀಚಿನ IAF Mi-17V5 ಹೆಲಿಕಾಪ್ಟರ್ ಪತನವನ್ನು ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಟ್ವಿಟ್ಟರ್ ಬಳಕೆದಾರ @_SirDonBradman_ ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋ ಶೀರ್ಷಿಕೆಯನ್ನು "ತಮಿಳುನಾಡಿನ ವಿಡಿಯೊದಲ್ಲಿ ಬಿಪಿನ್ ರಾವತ್ ಹೆಲಿಕಾಪ್ಟರ್ ಪತನಗೊಂಡಿದೆ" ಎಂದು ಬರೆದಿದ್ದಾರೆ. ಈ ವಿಡಿಯೋವನ್ನು ಸುಮಾರು ಒಂದು ಲಕ್ಷ ಬಾರಿ ವೀಕ್ಷಿಸಲಾಗಿದೆ. ಟ್ವಿಟರ್ ಬಳಕೆದಾರರು @MarwadiClub ಸಹ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು ಟೈಮ್ಸ್ ಮೀಡಿಯಾ 24 ಮತ್ತು ಅಸ್ಸಾಂ 123 ನ್ಯೂಸ್ ಎಂಬ ಫೇಸ್‌ಬುಕ್ ಪುಟಗಳು ಸಹ ಹಂಚಿಕೊಂಡಿವೆ. ಎರಡೂ ಪುಟಗಳು ಎರಡು ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿವೆ.

ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್, ಅವರ ಪತ್ನಿ ಸೇರಿ ಹಿರಿಯ ರಕ್ಷಣಾ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಕೂನೂರ್‌ನಲ್ಲಿ ಪತನಗೊಂಡಿದೆ. IAFನ ಹೊಸ Mi-17 V5 ಹೆಲಿಕಾಪ್ಟರ್ ಸೂಲೂರು ವಾಯುನೆಲೆಯಿಂದ ವೆಲ್ಲಿಂಗ್ಟನ್‌ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿಗೆ ತೆರಳುವಾಗ 12.20 ರ ಸಮಯದಲ್ಲಿ ಈ ದುರ್ಘಟನೆ ಜರುಗಿದೆ. ಕೊಯಮತ್ತೂರಿನ ಸೂಲೂರಿನ ಸೇನಾ ನೆಲೆಯಿಂದ Mi ಹೆಲಿಕಾಪ್ಟರ್ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ನೀಲಗಿರಿಯಲ್ಲಿ ಈ ಅಪಘಾತ ಸಂಭವಿಸಿದೆ.

Fact check: Viral video of the helicopter crash of Bipin Rawat?

ರಾವತ್ ಜೊತೆಯಲ್ಲಿ ಅವರ ಪತ್ನಿ ಮಧುಲಿಕಾ ರಾವತ್, ಅವರ ವಯಕ್ತಿಕ ಸಿಬ್ಬಂದಿ ಮತ್ತು ಇತರ ಅಧಿಕಾರಿಗಳು 09 ಜನರು ಸೇರಿ ಒಟ್ಟು 14 ಮಂದಿ ಇದ್ದರು ಎನ್ನಲಾಗಿದ್ದು ಇವರಲ್ಲಿ ರಾವತ್ ಜೊತೆಯಲ್ಲಿ ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಮಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಐಎಎಫ್ ಟ್ವಿಟರ್‌ನಲ್ಲಿ ತಿಳಿಸಿದೆ. ಪೂರ್ಣ ಮೂರು ವರ್ಷಗಳ ಅವಧಿಗೆ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ನಂತರ ರಾವತ್ ಅವರು ಡಿಸೆಂಬರ್ 31, 2019 ರಂದು ಭಾರತದ ಮೊದಲ ಸಿಡಿಎಸ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಫೆಬ್ರವರಿ 3, 2015 ರಂದು ನಾಗಾಲ್ಯಾಂಡ್‌ನ ದಿಮಾಪುರ್‌ನಲ್ಲಿ ಚೀತಾ ಅಪಘಾತದಲ್ಲಿ ರಾವತ್ ಅಪಾಯದಿಂದ ಪಾರಾಗಿದ್ದರು. ಆ ಸಮಯದಲ್ಲಿ ಅವರು ಲೆಫ್ಟಿನೆಂಟ್ ಜನರಲ್ ಆಗಿದ್ದರು.

ಆಲ್ಟ್ ನ್ಯೂಸ್ ವೈರಲ್ ವಿಡಿಯೋದ ಹಿಂದಿನ ಸತ್ಯವನ್ನು ಕಂಡುಹಿಡಿದಿದೆ. ರಿವರ್ಸ್ ಇಮೇಜ್ ಹುಡುಕಾಟದ ಮೂಲಕ ವೀಡಿಯೊ ಫೆಬ್ರವರಿ 2020 ರ ಹಿಂದಿನದು ಎಂದು ಕಂಡುಹಿಡಿದಿದೆ. ಇದನ್ನು ಅಥೆನ್ಸ್ ಮೂಲದ ಪತ್ರಕರ್ತ ಬಾಬಕ್ ತಘ್ವೇ ಪೋಸ್ಟ್ ಮಾಡಿದ್ದಾರೆ. ಅವರ ಟ್ವೀಟ್‌ನ ಪ್ರಕಾರ, ಸಿರಿಯಾದ ಅರಬ್ ಏರ್ ಫೋರ್ಸ್‌ನ Mi-17 ಅನ್ನು ಟರ್ಕಿಶ್ ಸೇನೆಯು ಸಿರಿಯಾದ ಅಲ್-ನೈರಾಬ್ ಬಳಿ ಹೊಡೆದುರುಳಿಸಿದೆ ಎಂದು ವೀಡಿಯೊ ತೋರಿಸುತ್ತದೆ.

ವೀಡಿಯೊದ ವಿವರಗಳನ್ನು ಪರಿಶೀಲಿಸಲು Alt News ಗೆ ಸಾಧ್ಯವಾಗುತ್ತಿಲ್ಲ. ಆದಾಗ್ಯೂ, ಇದು ಇತ್ತೀಚಿನ ಪತನಕ್ಕೆ ಸಂಬಂಧಿಸಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ, ಹೆಲಿಕಾಪ್ಟರ್ ಕೆಳಗೆ ಬೀಳುತ್ತಿರುವುದನ್ನು ತೋರಿಸುವ ಸಿರಿಯಾದ ಹಳೆಯ ವೀಡಿಯೊ ಡಿಸೆಂಬರ್ 8 ರಂದು ಅಪಘಾತಕ್ಕೀಡಾದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಎಂಬ ಹೇಳಿಕೆ ತಪ್ಪಾಗಿದೆ. ಹೀಗಾಗಿ ವೈರಲ್ ವಿಡಿಯೋಕ್ಕೂ ನಿನ್ನೆ ನಡೆದ IAF Mi-17V5 ಹೆಲಿಕಾಪ್ಟರ್ ಪತನಕ್ಕೂ ಸಂಬಂಧಿಸಿಲ್ಲ.

Fact Check

ಕ್ಲೇಮು

ಬಿಪಿನ್ ರಾವತ್ ಅವರಿದ್ದ IAF Mi-17V5 ಹೆಲಿಕಾಪ್ಟರ್ ಪತನದ ವಿಡಿಯೋ ವೈರಲ್ ಮಾಡಲಾಗಿದೆ.

ಪರಿಸಮಾಪ್ತಿ

ವೈರಲ್ ವಿಡಿಯೋಕ್ಕೂ ಬಿಪಿನ್ ರಾವತ್ ಅವರಿದ್ದ IAF Mi-17V5 ಹೆಲಿಕಾಪ್ಟರ್ ಅಪಘಾತಕ್ಕೂ ಯಾವುದೇ ಸಂಬಂಧವಿಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
the Indian Air Force tweeted shocking news that an IAF Mi-17V5 helicopter, with Chief of Defence Staff General Bipin Rawat on board, met with an accident near Coonoor, Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X