ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಕೊರೊನಾ ಲಸಿಕೆ ಹಾಕಿಸಿಕೊಂಡವರು ಅನಸ್ತೇಶಿಯಾ ಪಡೆದರೆ ಸಾವು?

|
Google Oneindia Kannada News

ನವದೆಹಲಿ, ಜೂನ್ 16: ಪ್ರತಿಯೊಬ್ಬರೂ ಆದಷ್ಟು ಬೇಗ ಕೊರೊನಾ ಲಸಿಕೆ ಪಡೆಯಲು ಹವಣಿಸುತ್ತಿದ್ದಾರೆ. ಆದರೆ ಒಮ್ಮೆ ಕೊರೊನಾ ಲಸಿಕೆ ಪಡೆದ ಬಳಿಕ ನೀವು ಯಾವುದೇ ಶಸ್ತ್ರ ಚಿಕಿತ್ಸೆಗೆ ಒಳಗಾಗುವುದಾದರೆ ಆ ಸಂದರ್ಭದಲ್ಲಿ ನೋವು ಮರೆಯಾಗುವಂತೆ ನೀಡುವ ಅನಸ್ತೇಶಿಯಾದಿಂದ ಸಾವು ಸಂಭವಿಸಬಹುದು ಎನ್ನುವ ವರದಿಗಳು ಹರಿದಾಡುತ್ತಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಕೊರೊನಾ ಲಸಿಕೆ ಪಡೆದವರು ಅನಸ್ತೇಶಿಯಾ ಪಡೆದರೆ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗುತ್ತಿದೆ.

Fact Check: ಧೂಮಪಾನಿಗಳಿಗೆ ಕೊರೊನಾ ಸೋಂಕು ತಗುಲುವ ಪ್ರಮಾಣ ಕಡಿಮೆ?Fact Check: ಧೂಮಪಾನಿಗಳಿಗೆ ಕೊರೊನಾ ಸೋಂಕು ತಗುಲುವ ಪ್ರಮಾಣ ಕಡಿಮೆ?

ಆದರೆ ಲಸಿಕೆ ಪಡೆದವರು ಅನಸ್ತೇಶಿಯಾ ಪಡೆದರೆ ಸಾವು ಸಂಭವಿಸುತ್ತದೆ ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ, ಆದರೆ ಎರೆಡು ಲಸಿಕೆಯ ಪ್ರಯೋಜನ ಪಡೆಯಲು ಲಸಿಕೆ ಪಡೆದ ಬಳಿಕ ತಕ್ಷಣವೇ ಯಾವುದೇ ಶಸ್ತ್ರ ಚಿಕಿತ್ಸೆಗೆ ಒಳಗಾಗದಂತೆ ತಜ್ಞರು ಸಲಹೆ ನೀಡುತ್ತಾರೆ.

Fact Check: Viral Claim Saying Anaesthetics Can Kill Vaccinated People

ಯಾವುದೇ ಲಸಿಕೆ ತಯಾರಕರು ಲಸಿಕೆ ಹಾಕಿಸಿಕೊಂಡವರನ್ನು ಅರಿವಳಿಕೆ ಒಳಗೊಂಡ ಶಸ್ತ್ರಚಿಕಿತ್ಸೆಯಿಂದ ದೂರವಿರುವಂತೆ ಹೇಳಿಲ್ಲ. ಐಸಿಎಂಆರ್‌ನ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ. ಸಮಿರನ್ ಪಾಂಡಾ ಹೇಳುವ ಪ್ರಕಾರ, '' ಕೊರೊನಾ ಲಸಿಕೆ ಪಡದವರು ಅನಸ್ತೇಶಿಯಾ ಪಡೆದರೆ ಸಾವು ಸಂಭವಿಸುವುದಿಲ್ಲ, ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ'' ಎಂದು ಹೇಳಿದ್ದಾರೆ.

ಮಲೇಷ್ಯನ್ ಸೊಸೈಟಿ ಆಫ್ ಅನಸ್ತೇಸಿಯೋಲಾಜಿಸ್ಟ್‌ ಆಂಡ್ ಕಾಲೇಜ್ ಆಫ್ ಅನಸ್ತೇಶಿಯಾಲಾಜಿಸ್ಟ್ ಕೂಡ ಈ ಸುದ್ದಿ ಜನರ ಹಾದಿಯನ್ನು ತಪ್ಪಿಸುವಂತದ್ದು ಎಂದು ಹೇಳಿದೆ.

ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಈ ಕುರಿತು ಮಾತನಾಡಿ, ''ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು, ಇಲ್ಲಿಯವರೆಗೆ ಲಸಿಕೆ ಪಡೆದವರು ಅನಸ್ತೇಶಿಯಾದಿಂದ ಮೃತಪಟ್ಟ ಯಾವುದೇ ಘಟನೆಗಳು ವರದಿಯಾಗಿಲ್ಲ'' ಎಂದು ತಿಳಿಸಿದ್ದಾರೆ.

Fact Check

ಕ್ಲೇಮು

ಕೊರೊನಾ ಲಸಿಕೆ ಪಡೆದಿದ್ದವರು ಅನಸ್ತೇಶಿಯಾ ಪಡೆದರೆ ಸಾವು ಸಂಭವಿಸುತ್ತದೆ.

ಪರಿಸಮಾಪ್ತಿ

ಕೊರೊನಾ ಲಸಿಕೆ ಪಡೆದಿದ್ದವರು ಕೊರೊನಾ ಲಸಿಕೆ ಪಡೆದರೆ ಸಾವು ಸಂಭವಿಸುತ್ತದೆ ಎಂಬುದು ಸುಳ್ಳು ಅದಕ್ಕೆ ಯಾವುದೇ ಪುರಾವೆ ಇಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
All of us are trying to get vaccinated against Covid-19 at the earliest. But once vaccinated, can you go for a surgery that involves anaesthetics a drug used to induce temporary loss of sensation or awareness?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X