• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಬೀಳ್ಕೊಡುಗೆ ಸಮಾರಂಭದಲ್ಲಿ ರಾಷ್ಟ್ರಪತಿ ಕೋವಿಂದ್ ಕಡೆಗೆ ನೋಡದ ಪ್ರಧಾನಿ?

|
Google Oneindia Kannada News

ಜುಲೈ 23 ರಂದು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಿರ್ಗಮಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಬೀಳ್ಕೊಡುವ ಸಮಾರಂಭವನ್ನು ಆಯೋಜಿಸಲಾಗಿತ್ತು. ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಗೌರವಾನ್ವಿತ ಗಣ್ಯರು ಸಂಸತ್ತಿನ ಸದಸ್ಯರೊಂದಿಗೆ ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ಬೀಳ್ಕೊಡುಗೆ ಕಾರ್ಯಕ್ರಮದ ನಂತರ, ಈವೆಂಟ್‌ನ ಆರು ಸೆಕೆಂಡುಗಳ ಅವಧಿಯ ವಿಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಲು ಪ್ರಾರಂಭಿಸಿದೆ. ಈ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಈ ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳು ಕೋವಿಂದ್ ಅವರನ್ನು ನಿರ್ಲಕ್ಷಿಸಲಾಗಿದೆ ಮತ್ತು ಅವರನ್ನು ಸ್ವಾಗತಿಸಲಿಲ್ಲ ಎಂಬ ಸಂದೇಶದೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಕ್ಲಿಪ್‌ನಲ್ಲಿ, ರಾಮ್ ನಾಥ್ ಕೋವಿಂದ್ ಅವರು ಕೈ ಜೋಡಿಸಿ ಪ್ರಧಾನಿ ಬಳಿಗೆ ಬರುತ್ತಿರುವುದನ್ನು ಕಾಣಬಹುದು ಆದರೆ ನರೇಂದ್ರ ಮೋದಿ ಅವರತ್ತ ನೋಡಲಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಕ್ಲಿಪ್ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಕ್ಲಿಪ್ ವೈರಲ್

ಕೆಲ ಕಿಡಿಗೇಡಿಗಳು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಹೊತ್ತಿಸಲು ಈ ರೀತಿ ಮಾಡಿದ್ದಾರೆ. ಈ ವಿಡಿಯೋ ಕ್ಲಿಪ್ ಅನ್ನು ನಂಬಿ ಹಲವಾರು ಜನ ಪ್ರತಿಕ್ರಿಯೆ ನೀಡಿದ್ದಾರೆ. "ರಾಷ್ಟ್ರಪತಿ ಅವರಿಗೆ ಕೃತಜ್ಞತೆ ಸಲ್ಲಿಸುವುದಕ್ಕಿಂತ ಫೋಟೋಶೂಟ್ ಮುಖ್ಯವಾಗಿದೆ" ಎಂದು ಕೆಲವು ಟ್ವಿಟರ್ ಬಳಕೆದಾರರು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಆದರೆ ಕೆಲವು ಬಳಕೆದಾರರು ಫೇಸ್‌ಬುಕ್‌ನಲ್ಲಿ "ಹೊರಹೋಗುವ 'ಅಧ್ಯಕ್ಷ'ಗಿಂತ 'ಫೋಟೋಗ್ರಾಫ್' ಮುಖ್ಯವಾದಾಗ" ಎಂದು ಬರೆದಿದ್ದಾರೆ.

ವಿಪಕ್ಷ ನಾಯಕರಿಂದ ಆಕ್ರೋಶ

ಸಂಜಯ್ ಸಿಂಗ್ ಮತ್ತು ವೀರೇಂದ್ರ ಚೌಧರಿ ಅವರಂತಹ ಬಳಕೆದಾರರು ಮತ್ತು ರಾಜಕೀಯ ನಾಯಕರು ವೈರಲ್ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಎಎಪಿ ನಾಯಕ ಸಂಜಯ್ ಸಿಂಗ್ ಹಿಂದಿಯಲ್ಲಿ ಬರೆದಿದ್ದಾರೆ, ಇದು "ಇಂತಹ ಅವಮಾನ ಸರ್. ಈ ಜನರು ಹೀಗಿದ್ದಾರೆ. ನಿಮ್ಮ ಅವಧಿ ಮುಗಿದಿದೆ. ಈಗ ಅವರು ನಿಮ್ಮತ್ತ ನೋಡುವುದಿಲ್ಲ'' ಎಂದು ಬರೆದಿದ್ದಾರೆ.

"ಕ್ಯಾಮೆರಾಜೀವಿ ಎಂಬ ಪದ ಅಸಂಸದೀಯವಲ್ಲ. ಮೋದಿಜಿ ನಿಮ್ಮ ಗಮನ ಎಲ್ಲಿದೆ? ನಾನು ಇಲ್ಲಿದ್ದೇನೆ" ಎಂದು ಕಾಂಗ್ರೆಸ್ ನಾಯಕ ವೀರೇಂದ್ರ ಚೌಧರಿ ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ವೈರಲ್ ವಿಡಿಯೊವನ್ನು ಟ್ರಿಮ್ ಮಾಡಲಾಗಿದೆ ಎಂದು ಕಂಡುಹಿಡಿದಿದೆ. ಮೂಲ ವಿಡಿಯೋದಲ್ಲಿ ಸಂಸತ್ತಿನಲ್ಲಿ ರಾಮ್ ನಾಥ್ ಕೋವಿಂದ್ ಅವರ ವಿದಾಯ ಕಾರ್ಯಕ್ರಮದ ಸಂದರ್ಭದಲ್ಲಿ ಮೋದಿ ಅವರಿಗೆ ಶುಭಾಶಯ ಕೋರುವುದನ್ನು ಕಾಣಬಹುದು.

ಸಂಪೂರ್ಣ ವಿಡಿಯೋ ಇಲ್ಲಿದೆ..

ಸಂಸತ್ತಿನಲ್ಲಿ ರಾಮ್ ನಾಥ್ ಕೋವಿಂದ್ ಅವರ ವಿದಾಯವು ಇತ್ತೀಚಿನ ಘಟನೆಯಾದ ಕಾರಣ, ಮೂಲ ವಿಡಿಯೋವನ್ನು ಕಂಡುಹಿಡಿಯುವುದು ಕಷ್ಟವಾಗಲಿಲ್ಲ. ಜುಲೈ 23 ರಂದು ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ನಿರ್ಗಮಿತ ರಾಷ್ಟ್ರಪತಿಯವರ ಬೀಳ್ಕೊಡುಗೆ ಸಮಾರಂಭದ ಮೂಲ ವಿಡಿಯೋವನ್ನು ಕಂಡುಹಿಡಿಯಲಾಯಿತು.

ಮೂಲ ವಿಡಿಯೋದಲ್ಲಿ ರಾಮ್ ನಾಥ್ ಕೋವಿಂದ್ ಅವರು ಅತಿಥಿಗಳನ್ನು ಕೈ ಜೋಡಿಸಿ ಸ್ವಾಗತಿಸುತ್ತಿದ್ದಾರೆ. ಅದೇ ರೀತಿ ಪ್ರಧಾನಿಯವರನ್ನು ಸ್ವಾಗತಿಸಿದಾಗ, ನರೇಂದ್ರ ಮೋದಿಯವರು ಅದೇ ಹಾವಭಾವ ಮತ್ತು ನಗುವಿನೊಂದಿಗೆ ಗೌರವಯುತವಾಗಿ ಪ್ರತಿಕ್ರಿಯಿಸಿದರು. ಕೋವಿಂದ್ ಅವರು ಇತರ ಗಣ್ಯರನ್ನು ಸ್ವಾಗತಿಸಲು ಮತ್ತು ಮಾತನಾಡಲು ಹೋದಾಗ, ಪ್ರಧಾನಿ ಇನ್ನೊಂದು ಕಡೆ ನೋಡಿದರು.

ಕ್ಲಿಪ್ ಎಡಿಟ್ ಮಾಡಿ ವೈರಲ್

ಕ್ಲಿಪ್ ಎಡಿಟ್ ಮಾಡಿ ವೈರಲ್

ಈ ಸಂಪೂರ್ಣ ಸರಣಿಯನ್ನು Sansad TV ಯ ಯೂಟ್ಯೂಬ್ ಚಾನೆಲ್‌ನಲ್ಲಿಯೂ ನೋಡಬಹುದು. ಕೋವಿಂದ್ ಮತ್ತು ಪ್ರಧಾನಿ ನಡುವಿನ ಸಂವಾದವು 00:58 ಟೈಮ್‌ಸ್ಟ್ಯಾಂಪ್‌ನಲ್ಲಿ ನಡೆಯುತ್ತದೆ. ಆದರೆ ವೈರಲ್ ಕ್ಲಿಪ್ ಅನ್ನು ಉದ್ದೇಶಪೂರ್ವಕವಾಗಿ ತಪ್ಪಾದ ಸಂದೇಶ ನೀಡಲು ಉದ್ದವಾದ ವಿಡಿಯೊವನ್ನು ತುಂಡಾಗಿಸಿ ಜೋಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಕೋವಿಂದ್ ಅವರಿಗೆ ಶುಭಾಶಯ ಕೋರುತ್ತಿರುವ ಛಾಯಾಚಿತ್ರವನ್ನು ಭಾರತದ ರಾಷ್ಟ್ರಪತಿಯವರ ಅಧಿಕೃತ ಹ್ಯಾಂಡಲ್‌ನಿಂದ ಟ್ವೀಟ್ ಮಾಡಲಾಗಿದೆ. ರಾಮ್ ನಾಥ್ ಕೋವಿಂದ್ ಅವರು ತಮ್ಮ ವಿದಾಯ ಭಾಷಣದಲ್ಲಿ ಪ್ರಧಾನಿಯವರಿಗೆ ಧನ್ಯವಾದ ಅರ್ಪಿಸಿದರು. ಜುಲೈ 22 ರಂದು ಪ್ರಧಾನಿ ಮೋದಿಯವರ ನಿವಾಸದಲ್ಲಿ ವಿದಾಯ ಭೋಜನದೊಂದಿಗೆ ಅವರನ್ನು ಗೌರವಿಸಲಾಯಿತು. ಹಾಗಾಗಿ, ಪ್ರಧಾನಿಯವರ ಎಡಿಟ್ ಮಾಡಿದ ಕ್ಲಿಪ್ ವೈರಲ್ ಆಗಿದ್ದು, ಅವರು ನಿವೃತ್ತಿಯಾಗುತ್ತಿರುವ ರಾಷ್ಟ್ರಪತಿಗಳಿಗೆ ಶುಭಾಶಯ ಕೋರದೆ ಅವರನ್ನು ಕಡೆಗಣಿಸಿದ್ದಾರೆ ಎಂಬುದು ತಪ್ಪು ಹೇಳಿಕೆಯಾಗಿದೆ.

Fact Check

ಕ್ಲೇಮು

ಬೀಳ್ಕೊಡುಗೆ ಸಮಾರಂಭದಲ್ಲಿ ರಾಷ್ಟ್ರಪತಿ ಕೋವಿಂದ್ ಕಡೆಗೆ ನೋಡದೆ ಪ್ರಧಾನಿ ಮೋದಿ ಕಡೆಗಣಿಸಿದ್ದಾರೆ ಎಂದು ವಿಡಿಯೋ ಕ್ಲಿಪ್ ಹಂಚಿಕೆ.

ಪರಿಸಮಾಪ್ತಿ

ಮೂಲ ವಿಡಿಯೋದಲ್ಲಿ ರಾಮ್ ನಾಥ್ ಕೋವಿಂದ್ ಅವರಿಗೆ ನರೇಂದ್ರ ಮೋದಿಯವರು ಹಾವಭಾವ ಮತ್ತು ನಗುವಿನೊಂದಿಗೆ ಗೌರವಯುತವಾಗಿ ಪ್ರತಿಕ್ರಿಯಿಸಿದರು.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು factcheck@one.in ಗೆ ಇಮೇಲ್ ಮಾಡಿ

English summary
Prime Minister Narendra Modi ignored President Ram Nath Kovind during the farewell ceremony. A video clip of such a message has gone viral. What is the truth behind this?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X