ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: 84ರ ಸ್ಟಾನ್ ಸ್ವಾಮಿ ಕಾಲುಗಳನ್ನೇ ಕಟ್ಟಿ ಹಾಕಿದ್ದರೇ ವೈದ್ಯರು!?

|
Google Oneindia Kannada News

ನವದೆಹಲಿ, ಜುಲೈ 08: ಎಲ್ಗಾರ್ ಪರಿಷದ್ ಪ್ರಕರಣದ ಆರೋಪಿ, ಬುಡಕಟ್ಟು ಜನರ ಪರ ಹೋರಾಟಗಾರ ಹಾಗೂ ಕ್ರೈಸ್ತ ಪಾದ್ರಿ 84 ವರ್ಷದ ಸ್ಟಾನ್ ಸ್ವಾಮಿ ನಿಧನ ನಂತರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ಸಾಕಷ್ಟು ಸುದ್ದಿ ಆಗುತ್ತಿದೆ.

ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ವೃದ್ಧನ ಕಾಲಿಗೆ ಕಬ್ಬಿಣದ ಸರಳುಗಳಿಂದ ಕಟ್ಟಿ ಹಾಕಿರುವ ಫೋಟೋದಲ್ಲಿ ಇರುವುದು ಅದೇ ಕ್ರೈಸ್ತ ಪಾದ್ರಿ ಸ್ಟಾನ್ ಸ್ವಾಮಿ ಎಂದು ಹೇಳಲಾಗುತ್ತಿದೆ. ಈ ಫೋಟೋ ಹಾಗೂ ಸುದ್ದಿ ಹಿಂದಿನ ಅಸಲಿ ಕಥೆ ಏನು. ಬುಡಕಟ್ಟು ಜನಾಂಗ ಪರ ಹೋರಾಟ ಮಾಡಿದ ಧೀಮಂತ ನಾಯಕನನ್ನು ಹೀಗೆ ನಡೆಸಿಕೊಳ್ಳಲಾಗಿತ್ತಾ. ಫೋಟೋ ಹಿಂದಿನ ಅಸಲಿ ಎಷ್ಟು ನಕಲಿ ಎಷ್ಟು ಎಂಬುದರ ಬಗ್ಗೆ "ಇಂಡಿಯಾ ಟುಡೇ ಆಂಟಿ-ಫೇಕ್ ನ್ಯೂಸ್ ವಾರ್ ರೂಮ್" ವಿಸ್ತೃತ ವರದಿ ಮಾಡಿದೆ.

ಸ್ಟಾನ್ ಸ್ವಾಮಿ ಸಾವಿನ ಬೆನ್ನಲ್ಲೇ ಕಂಪ್ಯೂಟರ್‌ ದಾಖಲೆಗಳಲ್ಲಿನ ಗುಟ್ಟು ಬಯಲು?ಸ್ಟಾನ್ ಸ್ವಾಮಿ ಸಾವಿನ ಬೆನ್ನಲ್ಲೇ ಕಂಪ್ಯೂಟರ್‌ ದಾಖಲೆಗಳಲ್ಲಿನ ಗುಟ್ಟು ಬಯಲು?

ಕಳೆದ ಜುಲೈ 5ರಂದು ಕ್ರೈಸ್ತ ಪಾದ್ರಿ ಸ್ಟಾನ್ ಸ್ವಾಮಿ ಮುಂಬೈನ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ವಿಧಿವಶರಾದರು. ಆದರೆ ಬೆಡ್ ಮೇಲೆ ಕಾಲು ಕಟ್ಟಿ ಹಾಕಿಸಿಕೊಂಡು ಕುಳಿತಿರುವ ವ್ಯಕ್ತಿಯ ಫೋಟೋ ಸ್ಟಾನ್ ಸ್ವಾಮಿರಿಗೆ ಸಂಬಂಧಿಸಿದ್ದಲ್ಲ ಎಂಬುದು ಸತ್ಯಶೋಧನಾ ವರದಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಹಾಗಿದ್ದರೆ ಬೆಡ್ ಮೇಲೆ ಕಾಲು ಕಟ್ಟಿ ಹಾಕಿಸಿಕೊಂಡು ಮಲಗಿರುವ ವ್ಯಕ್ತಿ ಯಾರು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋದ ಹಿಂದಿನ ಕಥೆಯನ್ನು ಮುಂದೆ ಓದಿ...

ಕಾಲು ಕಟ್ಟಿ ಹಾಕಿಸಿಕೊಂಡು ಮಲಗಿರುವ ವ್ಯಕ್ತಿ ಯಾರು?

ಕಾಲು ಕಟ್ಟಿ ಹಾಕಿಸಿಕೊಂಡು ಮಲಗಿರುವ ವ್ಯಕ್ತಿ ಯಾರು?

ಆಸ್ಪತ್ರೆ ಹಾಸಿಗೆ ಮೇಲೆ ಕಬ್ಬಿಣದ ಸರಳುಗಳಿಂದ ಕಾಲಿಗೆ ಬೇಡಿ ಹಾಕಿಸಿಕೊಂಡು ಮಲಗಿರುವ ವ್ಯಕ್ತಿ ಸ್ಟಾನ್ ಸ್ವಾಮಿ ಅಲ್ಲ ಎಂಬುದು ಸ್ಪಷ್ಟವಾಗಿದೆ. ಹಾಗಿದ್ದರೆ ಆ ವ್ಯಕ್ತಿ ಯಾರು ಎಂಬ ಪ್ರಶ್ನೆಗೂ ಇಲ್ಲಿ ಉತ್ತರ ಸಿಕ್ಕಿದೆ. 92 ವರ್ಷದ ಆ ವ್ಯಕ್ತಿಯ ಹೆಸರು ಬಾಬುರಾಮ್ ಬಲವಾನ್ ಸಿಂಗ್. ಕೊಲೆ ಪ್ರಕರಣದ ಅಪರಾಧಿಯಾಗಿದ್ದ ಈತನನ್ನು ಉತ್ತರ ಪ್ರದೇಶದ ಇಟಾಹ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. 92 ವರ್ಷದ ಹಿರಿಯ ವ್ಯಕ್ತಿಯನ್ನು ಸರಪಳಿಯಿಂದ ಕಟ್ಟಿ ಹಾಕಿದ್ದಕ್ಕಾಗಿ ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು.

ಹಲವು ಮಾಧ್ಯಮಗಳಲ್ಲಿ ಇದೇ ಚಿತ್ರಗಳ ಬಳಕೆ

ಹಲವು ಮಾಧ್ಯಮಗಳಲ್ಲಿ ಇದೇ ಚಿತ್ರಗಳ ಬಳಕೆ

"ನಾವು ಗೂಗಲ್‌ನಲ್ಲಿ ಈ ಬಗ್ಗೆ ಮರು ಹುಡುಕಾಟ ನಡೆಸಿದ ಸಂದರ್ಭದಲ್ಲಿ 2021ರ ಮೇ ತಿಂಗಳಿನಲ್ಲಿ ಅನೇಕ ಮಾಧ್ಯಮಗಳು ಇದೇ ಒಂದು ಚಿತ್ರವನ್ನು ಬಾರಿ ಬಾರಿ ಬಳಸಿರುವುದು ಬೆಳಕಿಗೆ ಬಂದಿದೆ," ಎಂದು," ಇಂಡಿಯಾ ಟುಡೇ ಆಂಟಿ-ಫೇಕ್ ನ್ಯೂಸ್ ವಾರ್ ರೂಮ್ ತಿಳಿಸಿದೆ.

92ರ ವೃದ್ಧ ತೀವ್ರ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆ ದಾಖಲು

92ರ ವೃದ್ಧ ತೀವ್ರ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆ ದಾಖಲು

ಎನ್ ಡಿ ಟಿವಿ ವರದಿ ಪ್ರಕಾರ, "92 ವರ್ಷದ ಬಾಬುರಾಮ್ ಬಲವಾನ್ ಸಿಂಗ್ ಕೊಲೆ ಪ್ರಕರಣವೊಂದರಲ್ಲಿ ಅಪರಾಧಿಯಾಗಿದ್ದು, ಜೀವಾವಧಿ ಶಿಕ್ಷೆಗೆ ಗುರಿ ಆಗಿರುವ ಅಪರಾಧಿಯಲ್ಲಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಇಟಾಹ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ವ್ಯಕ್ತಿಯ ಫೋಟೋ ವೈರಲ್ ಆಗುತ್ತಿದ್ದಂತೆ ಉತ್ತರ ಪ್ರದೇಶದ ಕಾರಾಗೃಹ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆನಂದ್ ಕುಮಾರದ್, ವಾರ್ಡನ್ ಅಶೋಕ್ ಯಾದವ್ ಎಂಬುವವರನ್ನು ಅಮಾನತುಗೊಳಿಸಲಾಗಿದೆ. ಈ ಫೋಟೋ ಮತ್ತು ಘಟನೆ ಬಗ್ಗೆ ಮೇಲ್ವಿಚಾರಕಿಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.

'ಅಂದು ಕರ್ತವ್ಯದಲ್ಲಿದ್ದ ಅಧಿಕಾರಿಯೊಬ್ಬರು ವೃದ್ಧನ ಕಾಲನ್ನು ಹಾಸಿಗೆಗೆ ಕಟ್ಟಿ ಹಾಕಿದ್ದಾರೆ ಎಂದು ಇಟಾಹ ಜಿಲ್ಲಾ ಜೈಲಾಧಿಕಾರಿ ಕುಲ್ದೀಪ್ ಸಿಂಗ್ ಭದೌರಿಯಾ ತಿಳಿಸಿದ್ದಾರೆ ಎಂದು ಪಂಜಾಬ್ ಕೇಸರಿ ವರದಿ ಮಾಡಿದೆ. ಈ ವರದಿ ಪ್ರಕಾರ, ಆಸ್ಪತ್ರೆಗೆ ದಾಖಲಾದ ಹಿರಿಯ ವ್ಯಕ್ತಿಯ ಮಾನಸಿಕ ಸ್ಥಿತಿ ಸ್ಥಿರವಾಗಿರದೇ ಆಗಾಗ ತಮ್ಮ ಹಾಸಿಗೆಯಿಂದ ತಪ್ಪಿಸಿಕೊಂಡು ಹೋಗುವುದಕ್ಕೆ ಪ್ರಯತ್ನಿಸುತ್ತಿದ್ದರು. ಹೀಗಾಗಿ ರೋಗಿ ಅಲ್ಲಿಂದ ಮತ್ತೊಮ್ಮೆ ತಪ್ಪಿಸಿಕೊಂಡು ಹೋಗುವುದನ್ನು ತಡೆಯುವುದಕ್ಕಾಗಿ ವೈದ್ಯರು ಆತನ ಕಾಲುಗಳನ್ನು ಕಟ್ಟಿ ಹಾಕುವಂತೆ ಸಲಹೆ ನೀಡಿದ್ದರು ಎಂದು ಹೇಳಲಾಗಿದೆ.

ಅಸಲಿಗೆ ಫೋಟೋದಲ್ಲಿ ಉಲ್ಲೇಖಿಸಲಾದ ಸ್ಟಾನ್ ಸ್ವಾಮಿ ಹಿನ್ನೆಲೆ?

ಅಸಲಿಗೆ ಫೋಟೋದಲ್ಲಿ ಉಲ್ಲೇಖಿಸಲಾದ ಸ್ಟಾನ್ ಸ್ವಾಮಿ ಹಿನ್ನೆಲೆ?

ಎಲ್ಘಾರ್ ಪರಿಷತ್ ಪ್ರಕರಣದಲ್ಲಿ ಕ್ರೈಸ್ತ ಪಾದ್ರಿ ಹಾಗೂ ಬುಡಕಟ್ಟು ಜನಾಂಗ ಪರ ಹೋರಾಟಗಾರ ಸ್ಟಾನ್ ಸ್ವಾಮಿ ಅನ್ನು ಕಳೆದ ವರ್ಷ ಬಂಧಿಸಲಾಗಿದ್ದು, ನವಮುಂಬೈನ ತಲೋಜಾ ಕಾರಾಗೃಹದಲ್ಲಿ ಇರಿಸಲಾಗಿತ್ತು. ರಾಷ್ಟ್ರೀಯ ತನಿಖಾ ತಂಡವು ಸ್ಟಾನ್ ಸ್ವಾಮಿ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಕಳೆದ ಮೇ ತಿಂಗಳಿನಲ್ಲಿ ಸ್ಟಾನ್ ಸ್ವಾಮಿರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿತ್ತು. ತಲೋಜಾ ಕಾರಾಗೃಹದಲ್ಲಿ ತಮ್ಮ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ಅನುಮತಿ ನೀಡುವಂತೆ ಮೇ 28ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸ್ಟಾನ್ ಸ್ವಾಮಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಕಳೆದ ಜೂನ್ ತಿಂಗಳಿನಲ್ಲಿ ಸ್ಟಾನ್ ಸ್ವಾಮಿ ಆರೋಗ್ಯ ಹದಗೆಟ್ಟಿರುವುದರ ಬಗ್ಗೆ ಸರಿಯಾದ ದಾಖಲೆಗಳು ಇಲ್ಲದ ಕಾರಣ ಜಾಮೀನು ನೀಡದಂತೆ ಹೈಕೋರ್ಟ್ ಗೆ ಎನ್ಐಎ ತಂಡವು ಅಫಿಟವಿಟ್ ಸಲ್ಲಿಸಿತ್ತು.

ಕಳೆದ ಜುಲೈ 04ರಂದು ಕೊರೊನಾವೈರಸ್ ಸೋಂಕಿನಿಂದ ಬಳಲುತ್ತಿದ್ದ ಸ್ಟಾನ್ ಸ್ವಾಮಿ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು, ವೆಂಟಿಲೇಟರ್ ಮೂಲಕ ಉಸಿರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಾಂಬೈ ಹೈಕೋರ್ಟ್ ನಲ್ಲಿ ತಮ್ಮ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿರುವುದರ ನಡುವೆ ಇತ್ತ ಸ್ಟಾನ್ ಸ್ವಾಮಿ ವಿಧಿವಶರಾಗಿದ್ದರು.

Fact Check

ಕ್ಲೇಮು

2021ರ ಜುಲೈ 5ರಂದು ಮೃತಪಟ್ಟ ಕ್ರೈಸ್ತ ಪಾದ್ರಿ ಹಾಗೂ ಬುಡಕಟ್ಟು ಜನಗಳ ಹಕ್ಕುಗಳ ಪರ ಹೋರಾಟಗಾರ ಸ್ಟಾನ್ ಸ್ವಾಮಿ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿಯೂ ಕೂಡಾ ಅವರ ಕಾಲುಗಳು ಹಾಗೂ ಆಸ್ಪತ್ರೆ ಹಾಸಿಗೆಗೆ ಕಬ್ಬಿಣದ ಸರಳುಗಳ

ಪರಿಸಮಾಪ್ತಿ

ಈ ವ್ಯಕ್ತಿಯ ಹೆಸರು ಬಾಬುರಾಮ್ ಬಲವಾನ್ ಸಿಂಗ್. 2021ರ ಮೇ ತಿಂಗಳಿನಲ್ಲಿ ಕೊಲೆ ಪ್ರಕರಣದ ಅಪರಾಧಿ ಆಗಿದ್ದ ಈತನನ್ನು ಉತ್ತರ ಪ್ರದೇಶ ಇಟಾಹ ಜಿಲ್ಲಾ ಆಸ್ಪತ್ರೆಯಲ್ಲಿ ಹೀಗೆ ಕಟ್ಟಿ ಹಾಕಲಾಗಿತ್ತು. 92 ವರ್ಷದ ವೃದ್ಧನನ್ನು ಹೀಗೆ ಕಟ್ಟಿ ಹಾಕಿದ್ದಕ್ಕ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
An Image Of An Elderly Man Feet Chained To The Footboard Of The Hospital Bed Went Viral On Social Media With The Claim That The Man In The Photo Is Late Fr Swamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X