ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಸಮೀರ್ ವಾಂಖೆಡೆ ಹೆಸರಿನಲ್ಲಿ ಮೂರು ಟ್ವಿಟ್ಟರ್ ಖಾತೆ?

|
Google Oneindia Kannada News

ಮುಂಬೈ ಅಕ್ಟೋಬರ್ 26: ದೇಶಾದ್ಯಂತ ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣ ಸಾಕಷ್ಟು ಚರ್ಚೆಯಲ್ಲಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಹಲವಾರು ಆರೋಪಗಳು ಕೇಳಿ ಬಂದಿವೆ. ಹಲವಾರು ಸೆಲೆಬ್ರಿಟಿಗಳು ಶಾರುಖ್ ಖಾನ್(ಎಸ್‌ಆರ್‌ಕೆ)ಗೆ ಬೆಂಬಲ ಸೂಚಿಸಿದ್ದಾರೆ. ಇನ್ನೂ ರಾಜಕಾರಣಿಗಳು ವಾಂಖೆಡೆ ವಿರುದ್ಧ ಮುನ್ನುಗ್ಗುತ್ತಿದ್ದಾರೆ. ಇದರ ಮಧ್ಯೆ ಸಾಮಾಜಿಕ ಮಾಧ್ಯಮವೂ ಸಹ ಉನ್ನತ-ಪ್ರಕರಣದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದೆ. ಈ ಘಟನೆಗಳ ಹಿನ್ನೆಲೆಯಲ್ಲಿ, ಟ್ವಿಟ್ಟರ್‌ನಲ್ಲಿ ವಾಂಖೆಡೆ ಅವರ ಹೆಸರಿನಲ್ಲಿ ಬಹು ಖಾತೆಗಳು ಹುಟ್ಟಿಕೊಂಡಿವೆ. "@SmeerWankhede", "@sameerwankhedee" ಮತ್ತು "@Wankhed_Sameer" ಹೆಸರಿನ ಖಾತೆಗಳನ್ನು ಕ್ರಾಪ್ ಮಾಡಲಾಗಿದೆ. ಮಾತ್ರವಲ್ಲದೆ ಈ ಖಾತೆಗಳ ಟ್ವೀಟ್‌ಗಳು ವೈರಲ್ ಆಗಿದ್ದು, ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಅನೇಕ ಜನರು ಈ ಖಾತೆಗಳನ್ನು ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರದ್ದು ಎಂದು ನಂಬುತ್ತಾರೆ. ಅವರಿಗೆ ತಮ್ಮ ಬೆಂಬಲವನ್ನು ನೀಡುತ್ತಿದ್ದಾರೆ. ಆದಾಗ್ಯೂ, ವಾಂಖೆಡೆ ಹೆಸರಿನಲ್ಲಿ ಹಲವು ಟ್ವಿಟರ್ ಹ್ಯಾಂಡಲ್‌ಗಳು ಜನರನ್ನು ಗೊಂದಲಕ್ಕೀಡು ಮಾಡಿದೆ. ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ಮೇಲೆ ತಿಳಿಸಲಾದ ಎಲ್ಲಾ ಟ್ವಿಟ್ಟರ್ ಹ್ಯಾಂಡಲ್‌ಗಳು ವಾಂಖೆಡೆಯ ಹೆಸರಿನಲ್ಲಿವೆ ಆದರೆ ಅವು ವಾಂಖೆಡೆ ಬಳಸುತ್ತಿರುವ ಖಾತೆಗಳು ಅಲ್ಲ ಎಂದು ಕಂಡುಹಿಡಿದಿದೆ. ಮತ್ತೊಂದು ವಿಷಯವೆಂದರೆ IRS ಅಧಿಕಾರಿ ಟ್ವಿಟರ್‌ನಲ್ಲಿ ಇಲ್ಲ.

ಈ ಖಾತೆಗಳನ್ನು ಒಂದೊಂದಾಗಿ ನೋಡೋಣ.

Fact Check:Three tweeter account in the name of Sameer Wankhede?

@SmeerWankhede

ಹೀಗೊಂದು ಖಾತೆ ಟ್ವೀಟರ್‌ನಲ್ಲಿದೆ. "ಜೋನಲ್ ಡೈರೆಕ್ಟರ್ @ನಾರ್ಕೋಟಿಕ್ಸ್ ಬ್ಯೂರೋ" (Zonal Director @narcoticsbureau)ಎಂದು ಉಲ್ಲೇಖಿಸಿದ ಈ ಖಾತೆ ನಿಜವಾಗಲೂ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆದಲ್ಲ. ಬದಲಿಗೆ ಈ ಖಾತೆಯ ಮೂಲ ಹೆಸರನ್ನು ಬದಲಿಸಲಾಗಿದೆ ಎಂದು ತನಿಖೆಯಿಂದ ಬಯಲಾಗಿದೆ. ಹೆಸರು ಬದಲಾಗುವ ಮುನ್ನ ಈ ಖಾತೆ 14,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಗಳಿಸಿತ್ತು.

ಇದೇ ವರ್ಷ ಆಗಸ್ಟ್‌ನಲ್ಲಿ ಈ ಖಾತೆಯನ್ನು ರಚಿಸಲಾಗಿದೆ. ಅಕ್ಟೋಬರ್ 23, 2021 ರಂದು ಮೊದಲ ಪೋಸ್ಟ್ ಮಾಡಲಾಗಿದೆ. ಜೊತೆಗೆ ಹಳೆಯ ಟ್ವೀಟ್‌ಗಳನ್ನು ಅಳಿಸಿ ಹಾಕಲಾಗಿದೆ. ಆದರೆ ಅನೇಕ ಜನರು ಆಗಸ್ಟ್‌ನಲ್ಲಿ ಈ ವ್ಯಕ್ತಿಯನ್ನು "ಸ್ನೇಹಾ ಅಗರ್ವಾಲ್" ಎಂದು ಸಂಬೋಧಿಸಿದ್ದಾರೆ. ಬಳಕೆದಾರರಿಗೆ ಉತ್ತರಿಸುವಾಗ "@iSnehaAgarwal" ಎಂದು ಟ್ಯಾಗ್ ಮಾಡಿದ್ದಾರೆ. ಆದರೆ ಪ್ರಸ್ತುತ ಟ್ವಿಟರ್ ಖಾತೆಯಲ್ಲಿ "@iSnehaAgarwal" ಸಕ್ರಿಯವಾಗಿಲ್ಲ. ವೇಬ್ಯಾಕ್ ಮೆಷಿನ್‌ನಲ್ಲಿ "@iSnehaAgarwal" ನಿಂದ ಪೋಸ್ಟ್ ಮಾಡಿದ ಟ್ವೀಟ್‌ ಕಂಡುಕೊಳ್ಳಲಾಗಿದೆ.

Fact Check:Three tweeter account in the name of Sameer Wankhede?

"@SmeerWankhede" ನ ಟ್ವಿಟರ್ ಐಡಿಯನ್ನು "@iSnehaAgarwal" ಜೊತೆಗೆ ತಾಳೆ ಮಾಡಿ ನೋಡಲಾಗಿದೆ. ವಿಶೇಷ ಅಂದರೆ ಟ್ವಿಟರ್ ಐಡಿ ಒಂದು ವಿಶಿಷ್ಟ ಸಂಖ್ಯಾ ಐಡಿಯಾಗಿದ್ದು ಅದು ಟ್ವಿಟರ್ ಹ್ಯಾಂಡಲ್ ಬದಲಾದರೂ ಬದಲಾಗುವುದಿಲ್ಲ. ಆನ್‌ಲೈನ್ ಟೂಲ್ TweetBeaver ಸಹಾಯದಿಂದ, "@SmeerWankhede" ನ Twitter ID 1422016623163047937 ಎಂದು ಕಂಡುಹಿಡಿಯಲಾಗಿದೆ.

ಜೊತೆಗೆ "@iSnehaAgarwal" ನ ಮೂಲ ಕೋಡ್ ಪುಟವನ್ನು ತೆರೆದು ನೋಡಿದಾಗ ಈ ಪುಟದಲ್ಲಿ ಅದೇ Twitter ID ಅನ್ನು ಕಂಡುಕೊಳ್ಳಲಾಗಿದೆ. "@SmeerWankhede" ಈ ಹಿಂದೆ "@iSnehaAgarwal" ಆಗಿ ಸಕ್ರಿಯವಾಗಿತ್ತು ಎಂಬುದನ್ನು ಇದು ಖಚಿತಪಡಿಸುತ್ತದೆ.

Fact Check:Three tweeter account in the name of Sameer Wankhede?

@sameerwankhedee

ಈ ಖಾತೆಯನ್ನು ಹೊಂದಿರುವ ವ್ಯಕ್ತಿಯು ಬಯೋ ವಿಭಾಗದಲ್ಲಿ "Works for @narcoticsbureau. Managed by me." ಎಂದು ಬರೆದಿದ್ದಾರೆ. OSINT ತಜ್ಞ ಮತ್ತು ಪ್ರೋಗ್ರಾಮರ್ ಅಜಯೇಂದ್ರ ಊರ್ಮಿಳಾ ತ್ರಿಪಾಠಿ ಅವರು ಈ ಖಾತೆ ಈ ಹಿಂದೆ "@FAUGtweets" ಹೆಸರಿನಲ್ಲಿ ಸಕ್ರಿಯವಾಗಿತ್ತು ಎಂದು ಟ್ವೀಟ್ ಮಾಡಿದ್ದಾರೆ. AFWA ಯೊಂದಿಗೆ ಮಾತನಾಡಿದ ಅವರು, ಅವರು ಟ್ರ್ಯಾಕ್ ಮಾಡುವ ಅಂತಹ ನಕಲಿ ಖಾತೆಗಳ ದೊಡ್ಡ ಡೇಟಾಬೇಸ್ ಅನ್ನು ಹೊಂದಿದ್ದಾರೆ ಎಂದು ಹೇಳಿದರು.

Fact Check:Three tweeter account in the name of Sameer Wankhede?

ವೇಬ್ಯಾಕ್ ಮೆಷಿನ್‌ನಲ್ಲಿ "@FAUGtweets" ಟ್ವೀಟ್‌ನ್ನು ಕಂಡುಹಿಡಿಯಲಾಗಿದೆ. "@sameerwankhedee" ನ Twitter ID 1301945427097350149 ಎಂದಾಗಿದೆ. ಇದು "@FAUGtweets" ಟ್ವೀಟರ್ ನದ್ದೇ ಐಡಿಯಾಗಿದೆ. ಎರಡೂ ಟ್ವೀಟ್ ಗಳು ಒಂದೇ ವ್ಯಕ್ತಿಗೆ ಸೇರಿವೆ ಎಂದು ಇದು ಸಾಬೀತುಪಡಿಸುತ್ತದೆ.

Fact Check:Three tweeter account in the name of Sameer Wankhede?

@Wankhed_Sameer

ಈ ಖಾತೆಯನ್ನು ಈ ತಿಂಗಳು ರಚಿಸಲಾಗಿದೆ. ಒಬ್ಬ ವ್ಯಕ್ತಿ ಜನಪ್ರಿಯವಾದಾಗ, ಅನೇಕ ಜನರು ಅವನ/ಅವಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ರಚಿಸುತ್ತಾರೆ. ಅನುಯಾಯಿಗಳ ಸಂಖ್ಯೆಯನ್ನು ಹೆಚ್ಚಿಸಲು ಸಂವೇದನಾಶೀಲ ಟ್ವೀಟ್‌ಗಳನ್ನು ಪೋಸ್ಟ್ ಮಾಡುತ್ತಾರೆ. ಟ್ವಿಟರ್ ಹ್ಯಾಂಡಲ್ ಅನ್ನು ರಚಿಸಿದ ವ್ಯಕ್ತಿ "@Wankhed_Sameer" ಬಯೋ ವಿಭಾಗದಲ್ಲಿ "ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ವಲಯ ನಿರ್ದೇಶಕ" ಎಂದು ಉಲ್ಲೇಖಿಸಿದ್ದಾರೆ.

Fact Check:Three tweeter account in the name of Sameer Wankhede?

ಹೀಗಾಗಿ ಈ ಮೂರು ಟ್ವೀಟರ್ ಖಾತೆಗಳು ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆಗೆ ಸೇರಿದ್ದಲ್ಲ ಎನ್ನುವುದು ಬಹುತೇಕ ಖಚಿತವಾಗಿದೆ.

Fact Check

ಕ್ಲೇಮು

ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರ ಹೆಸರಿನಲ್ಲಿ ಮೂರು ಟ್ವೀಟರ್ ಖಾತೆಗಳು

ಪರಿಸಮಾಪ್ತಿ

ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರ ಹೆಸರಿನಲ್ಲಿರುವ ಈ ಖಾತೆಗಳು ಸಮೀರ್ ಅವರದಲ್ಲ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Three tweeter accounts under the name of Sameer Wankhede have gone viral. For many people, these accounts are a source of confusion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X