ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಇದು ಬೆಂಗಳೂರು ಹಿಂಸಾಚಾರದ ವಿಡಿಯೋ ಅಲ್ಲ

|
Google Oneindia Kannada News

ನವದೆಹಲಿ, ಆಗಸ್ಟ್ 25: ಫೇಸ್‌ಬುಕ್‌ನಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದು 2020ರ ಆಗಸ್ಟ್ 11ರಂದು ಬೆಂಗಳೂರಿನಲ್ಲಿ ಹಿಂಸಾಚಾರದ ದೃಶ್ಯ ಎಂದು ಪ್ರತಿಪಾದಿಸಲಾಗಿದೆ. ಈ ವಿಡಿಯೋ ಬೇರೆ ರಾಜ್ಯಗಳಲ್ಲಿಯೂ ವೈರಲ್ ಆಗಿದೆ.

Recommended Video

Chris Gayle went to a party with Usain Bolt, who has now tested Corona Positive | Oneindia Kannada

'ಈ ಜನರು ತಮ್ಮ ಕೆಲಸ ಮಾಡುತ್ತಿದ್ದಾರೆ ಮತ್ತು ಹಿಂದೂಗಳು ನಿದ್ರಿಸುತ್ತಿದ್ದಾರೆ' ಎಂದು ಕ್ಯಾಪ್ಷನ್ ಹಾಕಲಾಗಿದೆ. ಗುಂಪೊಂದು ಗಲಭೆಯಲ್ಲಿ ತೊಡಗಿದ್ದು, ಕಿಡಿಗೇಡಿಗಳನ್ನು ನಿಯಂತ್ರಿಸುವಲ್ಲಿ ಪೊಲೀಸ್ ಸಿಬ್ಬಂದಿ ಹರಸಾಹಸಪಡುವುದು ವಿಡಿಯೋದಲ್ಲಿ ದಾಖಲಾಗಿದೆ. ಇದು ನಿಜಕ್ಕೂ ಹಿಂಸಾಚಾರವೊಂದರ ದೃಶ್ಯವೇ. ಆದರೆ ವಿಡಿಯೋದಲ್ಲಿ ಹೇಳಿರುವಂತೆ ಬೆಂಗಳೂರಿನಲ್ಲಿ ನಡೆದ ಗಲಭೆಯದ್ದಲ್ಲ.

Fact check; ಕೇಂದ್ರ ಗ್ರಾಮೀಣಾಭಿವೃದ್ಧಿ ಕೆಲಸದ ಸುತ್ತೋಲೆ ನಕಲಿ Fact check; ಕೇಂದ್ರ ಗ್ರಾಮೀಣಾಭಿವೃದ್ಧಿ ಕೆಲಸದ ಸುತ್ತೋಲೆ ನಕಲಿ

ವಾಸ್ತವವಾಗಿ ಈ ಘಟನೆಯ ಫೋಟೊಗಳು ಮತ್ತು ವಿಡಿಯೋಗಳನ್ನು ಎಎಎನ್ಐ 2020ರ ಜುಲೈ 19ರಂದು ಟ್ವೀಟ್ ಮಾಡಿತ್ತು. 'ಪಶ್ಚಿಮ ಬಂಗಾಳದ ಉತ್ತರ ದಿಂಜಾಪುರದಲ್ಲಿನ ಕಲಾಗಛ್ ಎಂಬಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ವಿರುದ್ಧದ ಪ್ರತಿಭಟನೆಯ ವೇಳೆ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯರ ನಡುವೆ ಸಂಘರ್ಷ ಉಂಟಾಗಿದೆ. ಪ್ರತಿಭಟನಾಕಾರರನ್ನು ಚೆದುರಿಸಲು ಭದ್ರತಾ ಸಿಬ್ಬಂದಿ ಅಶ್ರುವಾಯುಗಳನ್ನು ಪ್ರಯೋಗಿಸಿದ್ದರು' ಎಂದು ಎಎನ್‌ಐ ಮಾಹಿತಿ ನೀಡಿತ್ತು. ಮುಂದೆ ಓದಿ.

ರಸ್ತೆ ತಡೆ, ಪ್ರತಿಭಟನೆ

ರಸ್ತೆ ತಡೆ, ಪ್ರತಿಭಟನೆ

ಕಲಾಗಛ್‌ನಲ್ಲಿ ಬಾಲಕಿಯೊಬ್ಬಳ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಸ್ಥಳೀಯರು ಪ್ರತಿಭಟನೆ, ರಸ್ತೆ ತಡೆ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸರ ವಾಹನಗಳು ಮತ್ತು ಬಸ್‌ಗಳಿಗೆ ಬೆಂಕಿ ಹಚ್ಚ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಭಾರಿ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿತ್ತು.

ಹಿಂಸಾಚಾರ ನಡೆಸಿದ್ದ ಸ್ಥಳೀಯರು

ಹಿಂಸಾಚಾರ ನಡೆಸಿದ್ದ ಸ್ಥಳೀಯರು

ಅನೇಕ ರಾಷ್ಟ್ರೀಯ ಮಾಧ್ಯಮಗಳು ಈ ವರದಿಯನ್ನು ಪ್ರಮುಖವಾಗಿ ಪ್ರಕಟಿಸಿದ್ದವು. ಪಶ್ಚಿಮ ಬಂಗಾಳದ ದಿಂಜಾಪುರದಲ್ಲಿ 15 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆಯಿಂದ ಕ್ರುದ್ಧರಾಗಿದ್ದ ಸ್ಥಳೀಯರು ಹಿಂಸಾಚಾರ ನಡೆಸಿ, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾನಿಗೊಳಿಸಿದ್ದರು.

Fake: ದೀಪಿಕಾ, ರಣವೀರ್ ಜೊತೆ ಇರುವುದು ದಾವೂದ್ ಇಬ್ರಾಹಿಂ ಅಲ್ಲ

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಇದೇ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದೆ. ಜುಲೈ 30ರಂದು ಎನ್‌ಟಿಕೆ ಬಾಂಗ್ಲಾ ವಾಹಿನಿ ಅಪ್‌ಲೋಡ್ ಮಾಡಿದ್ದ ವಿಡಿಯೋವನ್ನು ಹಂಚಿಕೊಂಡಿರುವ ಅನೇಕರು, ಇದು ಬೆಂಗಳೂರಿನಲ್ಲಿ ನಡೆದ ಹಿಂಸಾಚಾರದ ವಿಡಿಯೋ ಎಂದು ಪ್ರತಿಪಾದಿಸಲು ಪ್ರಯತ್ನಿಸುತ್ತಿದ್ದಾರೆ.

ಹಗಲಿನ ವೇಳೆ ನಡೆದ ಘರ್ಷಣೆ

ಹಗಲಿನ ವೇಳೆ ನಡೆದ ಘರ್ಷಣೆ

ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಬೆಂಗಳೂರಿನ ಗಲಭೆಯ ವಿಡಿಯೋವಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಬೆಂಗಳೂರಿನಲ್ಲಿ ಗಲಭೆ ನಡೆದಿದ್ದು ರಾತ್ರಿ ವೇಳೆ. ಅಲ್ಲದೆ ಅದು ಕಟ್ಟಡಗಳಿಂದ ತುಂಬಿರುವ ಪ್ರದೇಶ. ಆದರೆ ವಿಡಿಯೋದಲ್ಲಿ ಇರುವುದು ಹೆಚ್ಚು ಕಟ್ಟಡಗಳಿಲ್ಲದ ಹೈವೇ ರಸ್ತೆ. ಇದು ಜತೆಗೆ ಹಗಲಿನ ವೇಳೆ ಈ ಗಲಭೆ ನಡೆದಿದೆ. ಹೀಗಾಗಿ ಈ ವಿಡಿಯೋ ಬೆಂಗಳೂರಿದ್ದನ್ನೆವು ಹೇಳಿಕೆ ಫೇಕ್ ಎನ್ನುವುದು ಸ್ಪಷ್ಟ.

Fact Check

ಕ್ಲೇಮು

ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿರುವ ವಿಡಿಯೋ ಬೆಂಗಳೂರಿನ ಹಿಂಸಾಚಾರಕ್ಕೆ ಸಂಬಂಧಿಸಿದ್ದು.

ಪರಿಸಮಾಪ್ತಿ

ಇದು ಬೆಂಗಳೂರಿನ ಗಲಭೆಯ ವಿಡಿಯೋವಲ್ಲ. ಜುಲೈ 19ರಂದು ಪಶ್ಚಿಮ ಬಂಗಾಳದ ಕಲಾಗಛ್ ಎಂಬಲ್ಲಿ ಪ್ರತಿಭಟನೆ ವೇಳೆ ಸಂಭವಿಸಿದ ಸಂಘರ್ಷದ ವಿಡಿಯೋ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A viral video of violence claiming it is from a scene from the Bengaluru riots is false. The fact is video is from West Bengal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X