ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಈ ಸುಂದರ ಎಕ್ಸ್‌ಪ್ರೆಸ್‌ವೇ ಕಾಶ್ಮೀರದಲ್ಲ, ಕರ್ನಾಟಕದ್ದು

|
Google Oneindia Kannada News

ಬೆಂಗಳೂರು, ಆ. 19: ಕಾಶ್ಮೀರದ 53 ಹಳ್ಳಿಗಳು ಮತ್ತು ಐದು ಜಿಲ್ಲೆಗಳನ್ನು ಸಂಪರ್ಕಿಸುವ ಬಹುನಿರೀಕ್ಷಿತ ರಿಂಗ್‌ ರೋಡ್‌ ಎಂದು ಹೇಳಿಕೊಂಡು ಒಂದು ರಸ್ತೆಯ ಸುಂದರ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಈ ಚಿತ್ರವು ತಪ್ಪು ದಾರಿಗೆ ಎಳೆಯುವಂತಿದೆ ಎಂದು ಕಂಡು ಹಿಡಿದಿದೆ. ಹಾಗೆಯೇ ಈ ವೈರಲ್ ಚಿತ್ರವು ಬೆಂಗಳೂರಿನ ನೈಸ್ ರಿಂಗ್ ರಸ್ತೆಯ ಭಾಗವಾಗಿದೆ ಎಂದು ಫಾಕ್ಟ್‌ ಚೆಂಕ್‌ ಮೂಲಕ ತಿಳಿದು ಬಂದಿದೆ. ಇನ್ನು ಶ್ರೀನಗರ ವರ್ತುಲ ರಸ್ತೆ ಯೋಜನೆ ಭೂಸ್ವಾಧೀನ ಹಂತದಲ್ಲಿದೆ ಎಂದು ತಿಳಿದು ಬಂದಿದೆ.

Fact Check: ಭಾರತೀಯ ರೈಲ್ವೆ 10 ಹೊಸ ನಿಯಮ ಜಾರಿ ಮಾಡಿದೆಯೇ?Fact Check: ಭಾರತೀಯ ರೈಲ್ವೆ 10 ಹೊಸ ನಿಯಮ ಜಾರಿ ಮಾಡಿದೆಯೇ?

ಶ್ರೀನಗರ ಮತ್ತು ಜಮ್ಮು ರಿಂಗ್ ರಸ್ತೆ ಯೋಜನೆಗಳ ಆರಂಭಕ್ಕೆ ಚಾಲನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇ 2018 ರಲ್ಲಿ ಮಾಡಿದ್ದಾರೆ. ಅದು ಪೂರ್ಣವಾಗಿದೆ ಎಂದು ಚಿತ್ರವೊಂದು ವೈರಲ್‌ ಆಗುತ್ತಿದೆ. ಆದರೆ ರಿವರ್ಸ್ ಇಮೇಜ್ ಸರ್ಚ್ ಸಹಾಯದಿಂದ, ವೈರಲ್ ಚಿತ್ರದ ಬಗ್ಗೆ ಮಾಹಿತಿ ಕಳೆ ಹಾಕಿದಾಗ, ಈ ಚಿತ್ರವು 2008 ರಿಂದ ಹಲವಾರು ವೆಬ್‌ಸೈಟ್‌ಗಳು ಮತ್ತು ವರದಿಗಳಲ್ಲಿ ಹಾಕಲಾಗಿದೆ ಎಂದು ತಿಳಿದು ಬಂದಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

Fact Check: This beautiful expressway is in Karnataka, not in Kashmir

2018 ರಲ್ಲಿ, ಫೇಸ್‌ಬುಕ್‌ನಲ್ಲಿ ಈ ಚಿತ್ರವನ್ನು ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್‌ನ ಒಂದು ನೋಟ ಎಂದು ಹಂಚಿಕೊಳ್ಳಲಾಗಿದೆ. ಅದೇ ಸ್ಥಳದ ಒಂದೇ ರೀತಿಯ ಚಿತ್ರ, ಆದರೆ ಬೇರೆ ಆಂಗಲ್‌ನಿಂದ ತೆಗೆಯಲಾಗಿದೆ. ಇದನ್ನು 2014 ರಲ್ಲಿ "ಬಿಸಿನೆಸ್ ಇನ್ಸೈಡರ್" ಕೂಡಾ ಹಂಚಿಕೊಂಡಿದೆ.

ವೈರಲ್ ಇಮೇಜ್ ಮತ್ತು "ಬಿಸಿನೆಸ್ ಇನ್ಸೈಡರ್"ನ ಚಿತ್ರವನ್ನು ಗಮನಿಸಿದರೆ, ರಸ್ತೆಯು ಒಂದು ಬದಿಯಲ್ಲಿ ನೀರಿನ ಪ್ರದೇಶ ಹಾಗೂ ಇನ್ನೊಂದು ಬದಿಯಲ್ಲಿ ಕಂದು ಛಾವಣಿಯ ಕಟ್ಟಡವನ್ನು ಹೊಂದಿದೆ. ಇವೆರಡು ಕೂಡಾ ಎರಡು ಚಿತ್ರಗಳಲ್ಲಿ ಇದೆ.

ಹಳೆಯ 10, 5 ನಾಣ್ಯಗಳನ್ನು ಮಾರಿ ಸಾಕಷ್ಟು ಹಣ ಗಳಿಸಿ, ಷರತ್ತು ಅನ್ವಯ!ಹಳೆಯ 10, 5 ನಾಣ್ಯಗಳನ್ನು ಮಾರಿ ಸಾಕಷ್ಟು ಹಣ ಗಳಿಸಿ, ಷರತ್ತು ಅನ್ವಯ!

ಇಂಡಿಯಾ ಟುಡೇ ನಂತರ ಗೂಗಲ್ ನಕ್ಷೆಗಳು ಮತ್ತು ಗೂಗಲ್ ಅರ್ಥ್ ನಲ್ಲಿ ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಅನ್ನು ಹುಡುಕಿದೆ. ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ (ಎನ್‌ಐಸಿಇ) ಕಛೇರಿಯೆಂದು ಗುರುತಿಸಲಾದ ಕಂದು ಛಾವಣಿಯೊಂದಿಗೆ ಅದೇ ಕಟ್ಟಡವು ಕಂಡುಬಂದಿದೆ. ಈ ಕಟ್ಟಡ ಎದುರು ನೀರಿನ ಪ್ರದೇಶ ಇರುವುದು ಗೂಗಲ್‌ ಅರ್ಥ್ ಹಾಗೂ ನಕ್ಷೆಗಳು ತೋರಿಸುತ್ತದೆ. ಈ ಕಾಶ್ಮೀರದ್ದು ಎಂದು ಹೇಳಲಾದ ಚಿತ್ರ ಹಾಗೂ ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್‌ನ ಚಿತ್ರವು ಒಂದೇ ಆಗಿದೆ.

ಗೂಗಲ್ ನಕ್ಷೆಯಲ್ಲಿ ಎನ್‌ಐಸಿಇ ಕಚೇರಿಯ ಚಿತ್ರಗಳನ್ನು ಮತ್ತಷ್ಟು ಪರಿಶೀಲಿಸಿದಾಗ ವೈರಲ್ ಚಿತ್ರದಲ್ಲಿ ಕಾಣುವ ಕಟ್ಟಡವು ಎನ್‌ಐಸಿಇ ಕಚೇರಿಯಾಗಿದೆ ಎಂದು ತಿಳಿದು ಬಂದಿದೆ. ಗೂಗಲ್ ಮ್ಯಾಪ್‌ನಲ್ಲಿ ಬಳಕೆದಾರರು ಅಪ್‌ಲೋಡ್ ಮಾಡಿದ ಅದೇ ಸ್ಥಳದ ಇನ್ನೊಂದು ಚಿತ್ರವು ಕೂಡಾ ಇದು ಕರ್ನಾಟಕದ ಚಿತ್ರ ಎಂಬುವುದನ್ನು ಖಾತರಿ ಪಡಿಸಿದೆ.

ಶ್ರೀನಗರ ರಿಂಗ್‌ ರೋಡ್‌

ಎನ್‌ಎಚ್‌ಎಐ ಮಹತ್ವಾಕಾಂಕ್ಷೆಯ ಶ್ರೀನಗರ ರಿಂಗ್‌ ರೋಡ್‌ 52 ಹಳ್ಳಿಗಳು ಮತ್ತು ಐದು ಜಿಲ್ಲೆಗಳಾದ ಪುಲ್ವಾಮ, ಬುಡ್ಗಾಮ್, ಬಾರಾಮುಲ್ಲಾ, ಶ್ರೀನಗರ ಮತ್ತು ಬಂಡಿಪೋರಾಗಳ ಮೂಲಕ ಹಾದು ಹೋಗುತ್ತದೆ. ವರದಿಗಳ ಪ್ರಕಾರ, ಯೋಜನೆಯು ಭೂಸ್ವಾಧೀನ ಹಂತದಲ್ಲಿದೆ ಮತ್ತು ಇನ್ನೂ ಪೂರ್ಣಗೊಂಡಿಲ್ಲ. ಅನೇಕ ಭೂಮಾಲೀಕರು ಭೂಮಿಗೆ ಬದಲಾಗಿ ಅಧಿಕಾರಿಗಳಿಂದ ನ್ಯಾಯಯುತ ಪರಿಹಾರವನ್ನು ನೀಡಲಾಗಿಲ್ಲ ಎಂದು ಆರೋಪಿಸಿದ ಹಿನ್ನೆಲೆಯಿಂದಾಗಿ ಯೋಜನೆಯು ವಿಳಂಬವಾಗುತ್ತಿದೆ ಎಂದು ವರದಿಗಳು ಹೇಳುತ್ತವೆ.

ಆದ್ದರಿಂದ, ವೈರಲ್ ಚಿತ್ರವು ಬೆಂಗಳೂರಿನ ನೈಸ್ ರಿಂಗ್ ರಸ್ತೆಯದ್ದು ಮತ್ತು ಶ್ರೀನಗರಕ್ಕೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

(ಒನ್‌ ಇಂಡಿಯಾ)

Fact Check

ಕ್ಲೇಮು

ಈ ಚಿತ್ರ ಕಾಶ್ಮೀರದ 53 ಹಳ್ಳಿಗಳು ಮತ್ತು ಐದು ಜಿಲ್ಲೆಗಳನ್ನು ಸಂಪರ್ಕಿಸುವ ಬಹುನಿರೀಕ್ಷಿತ ರಿಂಗ್‌ ರೋಡ್‌

ಪರಿಸಮಾಪ್ತಿ

ಈ ಚಿತ್ರ ಕಾಶ್ಮೀರದ ರಿಂಗ್‌ ರೋಡ್‌ ಅಲ್ಲ, ಬದಲಾಗಿ ಕರ್ನಾಟಕದ್ದು ಆಗಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: This beautiful expressway is in Karnataka, not in Kashmir. To know more, Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X