ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಈ ಫೋಟೋಗಳು ಕರ್ನಲ್ ತ್ರಿಪಾಠಿ ಮೇಲಾದ ದಾಳಿಯದ್ದಾ?

|
Google Oneindia Kannada News

ಇಂಫಾಲ, ನವೆಂಬರ್ 21: ನವೆಂಬರ್ 13 ರಂದು ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿ ಉಗ್ರರು ಹೊಂಚು ಹಾಕಿ ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆಯ ನಾಲ್ವರು ಯೋಧರು, ಅಸ್ಸಾಂ 46 ರೈಫಲ್​​ನ ಕಮಾಂಡಿಂಗ್​ ಅಧಿಕಾರಿ, ಅವರ ಮಗ, ಪತ್ನಿ ಸೇರಿ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದರು. ಘಟನೆಯಲ್ಲಿ ಹುತಾತ್ಮರಾದ ಕಮಾಂಡಿಂಗ್​ ಆಫೀಸರ್ ​​ ಕರ್ನಲ್​ ವಿಪ್ಲವ್​ ತ್ರಿಪಾಠಿಯೊಂದಿಗೆ ಅವರ ಹೆಂಡತಿ, ಮಗುವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಇದು ಒಂದಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ಹಿಂಸಾಚಾರದ ಎರಡು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕೇಂದ್ರ ಸಚಿವರು ಮತ್ತು ಇತರ ಶಾಸಕರು ಸೇರಿದಂತೆ ಹಲವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಚಿತ್ರದಲ್ಲಿ ಭದ್ರತಾ ಪಡೆಗಳು ಸುಟ್ಟ ವಾಹನದ ಮುಂದೆ ನಿಂತಿರುವುದನ್ನು ಕಾಣಬಹುದು. ಎರಡನೇ ಚಿತ್ರವನ್ನು ಕರ್ನಲ್ ವಿಪ್ಲವ್ ತ್ರಿಪಾಠಿ ಅವರ ಕುಟುಂಬದವಿರುವ ಫೋಟೋದೊಂದಿಗೆ ಸೇನಾ ಸಿಬ್ಬಂದಿ ರಸ್ತೆಯಿಂದ ಮರದ ಕೊಂಬೆಗಳನ್ನು ತೆಗೆದುಹಾಕುತ್ತಿರುವ ದೃಶ್ಯವಿದೆ. ಆದರೆ ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ಎರಡೂ ಚಿತ್ರಗಳು ಹಳೆಯದಾಗಿವೆ. ಜೊತೆಗೆ ಇವು ಮಣಿಪುರದಲ್ಲಿ ಇತ್ತೀಚೆಗೆ ನಡೆದ ದಾಳಿಗೆ ಸಂಬಂಧಿಸಿಲ್ಲ ಎಂದು ಕಂಡುಹಿಡಿದಿದೆ.

Fact Check:These photos are from the attack on Colonel Tripathi?

ಮಣಿಪುರ ದಾಳಿ: ಕುಟುಂಬದೊಂದಿಗೆ ಕೊಲ್ಲಲ್ಪಟ್ಟ ಕರ್ನಲ್ ತ್ರಿಪಾಠಿ ಯಾರು?ಮಣಿಪುರ ದಾಳಿ: ಕುಟುಂಬದೊಂದಿಗೆ ಕೊಲ್ಲಲ್ಪಟ್ಟ ಕರ್ನಲ್ ತ್ರಿಪಾಠಿ ಯಾರು?

ತನಿಖೆ

ಸಾಮಾಜಿಕ ಜಾಲತಾಣದಲ್ಲಿ ಮೊದಲ ಚಿತ್ರವನ್ನು ಹುಡುಕಿದಾಗ ಇದು 2015 ರಲ್ಲಿ ಅಧಿಕ ಸುದ್ದಿ ವರದಿಗಳಿಂದ ಹಂಚಿಕೊಳ್ಳಲಾಗಿದೆ ಎಂದು ಕಂಡುಬಂದಿದೆ. ಈ ವರದಿಗಳ ಪ್ರಕಾರ, ಚಿತ್ರವು ಜೂನ್ 2015 ರಲ್ಲಿ ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲಿ ನಡೆದ ಉಗ್ರಗಾಮಿ ದಾಳಿಯ ನಂತರ ತೆಗೆಯಲಾಗಿದೆ. ಎನ್‌ಡಿಟಿವಿ ವರದಿಯ ಪ್ರಕಾರ, ಉಗ್ರರು ತಮ್ಮ ಬೆಂಗಾವಲು ಪಡೆಯನ್ನು ಹೊಂಚು ಹಾಕಿ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ 18 ಸೈನಿಕರು ಸಾವನ್ನಪ್ಪಿದ್ದು ಕನಿಷ್ಠ 11 ಮಂದಿ ಗಾಯಗೊಂಡಿದ್ದಾರೆ.

ಉಗ್ರಗಾಮಿ ದಾಳಿಗಳಿಗೆ ಸಂಬಂಧಿಸಿದಂತೆ ವರ್ಷಗಳಲ್ಲಿ ಬಹು ಮಾಧ್ಯಮ ವರದಿಗಳನ್ನು ಕಂಡುಕೊಳ್ಳಲಾಗಿದೆ. ಸದ್ಯ ವೈರಲ್ ಆಗಿರುವ ಎರಡನೇ ಚಿತ್ರವೂ ಈ ಹಿಂದೆ ಮಾದ್ಯಮದಲ್ಲಿ ವರದಿಯಾಗಿರುವುದು ಕಂಡುಬಂದಿದೆ. ಕನಿಷ್ಠ 2014 ರಿಂದ ಚಿತ್ರವು ಕಾಣಸಿಗುತ್ತದೆ. ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಆಗಸ್ಟ್ 2014 ರಲ್ಲಿ ರಾಯಿಟರ್ಸ್ ವೆಬ್‌ಸೈಟ್‌ನಲ್ಲಿ ಇತರ ಚಿತ್ರಗಳ ಸೆಟ್‌ನೊಂದಿಗೆ ಈ ಫೋಟೋವಿರುವುದು ಕಂಡುಬಂದಿದೆ. ರಾಯಿಟರ್ಸ್ ಪ್ರಕಾರ, ಚಿತ್ರವು ಅಸ್ಸಾಂ ಮತ್ತು ನಾಗಾಲ್ಯಾಂಡ್‌ನ ಹಳ್ಳಿಗಳ ನಡುವೆ ಪ್ರಾದೇಶಿಕ ವಿವಾದದಿಂದಾಗಿ ನಡೆದ ಘರ್ಷಣೆಯಿಂದ ಬಂದಿದೆ. ಫೋಟೋದ ಶೀರ್ಷಿಕೆಯ ಪ್ರಕಾರ, "ಈಶಾನ್ಯ ಭಾರತದ ರಾಜ್ಯವಾದ ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ರಸ್ತೆಯನ್ನು ತಡೆಯಲು ಪ್ರತಿಭಟನಾಕಾರರು ಎಸೆದ ಮರದ ಕೊಂಬೆಗಳನ್ನು ಭಾರತೀಯ ಸೇನೆಯ ಸಿಬ್ಬಂದಿ ತೆಗೆದುಹಾಕಿದ್ದಾರೆ."

Fact Check:These photos are from the attack on Colonel Tripathi?

ಈ ಘಟನೆಯನ್ನು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಢಾಕಾ ಟ್ರಿಬ್ಯೂನ್ ಪ್ರಕಾರ, ಚಿತ್ರವು ಅಸ್ಸಾಂ ಮತ್ತು ನಾಗಾಲ್ಯಾಂಡ್ ನಡುವಿನ ಐದನೇ ದಿನದ ಅಶಾಂತಿಯದ್ದಾಗಿದೆ. ಐದನೇ ದಿನ, ಕರ್ಫ್ಯೂ ಅನ್ನು ಧಿಕ್ಕರಿಸಿ, ಗೋಲಾಘಾಟ್ ಜಿಲ್ಲೆಯ ನಿವಾಸಿಗಳು ನಾಗಾ ಬುಡಕಟ್ಟು ಜನಾಂಗದವರ ದಾಳಿಯಿಂದ ತಮ್ಮನ್ನು ರಕ್ಷಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಪೊಲೀಸರ ಮೇಲೆ ದಾಳಿ ಮಾಡಿದ್ದರು.

Fact Check:These photos are from the attack on Colonel Tripathi?

ಆದ್ದರಿಂದ ಎರಡೂ ಚಿತ್ರಗಳು ಹಳೆಯದಾಗಿದ್ದು ಕರ್ನಲ್ ವಿಪ್ಲವ್ ತ್ರಿಪಾಠಿ, ಅವರ ಕುಟುಂಬ ಮತ್ತು ಇತರ ನಾಲ್ವರು ಸೈನಿಕರನ್ನು ಕೊಂದ ಮಣಿಪುರದ ಇತ್ತೀಚಿನ ದಾಳಿಗೆ ಸಂಬಂಧಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

Fact Check

ಕ್ಲೇಮು

ಕರ್ನಲ್ ವಿಪ್ಲವ್ ತ್ರಿಪಾಠಿ, ಅವರ ಕುಟುಂಬ ಮತ್ತು ಇತರ ನಾಲ್ವರು ಸೈನಿಕರನ್ನು ಕೊಂದ ಮಣಿಪುರದ ಇತ್ತೀಚಿನ ದಾಳಿಗೆ ಸಂಬಂಧಿಸಿದ ಫೋಟೋಗಳು ವೈರಲ್ ಆಗಿವೆ.

ಪರಿಸಮಾಪ್ತಿ

ವೈರಲ್ ಫೋಟೋಗಳು ಹಳೆಯದಾಗಿದ್ದು ಎರಡು ಪ್ರತ್ಯೇಕ ಸ್ಥಳಗಳಿಂದ ಬಂದವುಗಳಾಗಿವೆ. ವೈರಲ್ ಫೋಟೋಗಳಿಗೆ ಮತ್ತು ಮಣಿಪುರದ ಇತ್ತೀಚಿನ ದಾಳಿಗೆ ಯಾವುದೇ ಸಂಬಂಧವಿಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Colonel Viplav Tripathi, the Commanding Officer of Khuga Battalion of the Assam Rifles, his wife, their 8-year-old son, and four other soldiers were killed during an ambush by militants in Manipur's Churachandpur district on November 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X