ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಏನಿದು ಅಚ್ಚರಿ! ಕೋವಿಡ್ 19 ಲಸಿಕೆ ಪಡೆದವರ ಮೈಯಲ್ಲಿ ಕರೆಂಟ್!

|
Google Oneindia Kannada News

ಬೆಂಗಳೂರು, ಜೂ. 09: ಕೊರೊನಾ ಸೋಂಕಿಗೆ ಲಸಿಕೆ ಹಾಕಿಸಿಕೊಂಡ ಜಾಗದಲ್ಲಿ ಎಲ್‌ಇಡಿ ಬಲ್ಬ್ ಆನ್ ಅಚ್ಚರಿಯೋ, ಪವಾಡವೋ, ವೈಜ್ಞಾನಿಕ ಕಾರಣವೋ ಗೊತ್ತಿಲ್ಲ. ಆದರೆ ಕೋವಿಡ್- 19 ವ್ಯಾಕ್ಸಿನ್ ಹಾಕಿಸಿಕೊಂಡ ಜಾಗದಲ್ಲಿ ಎಲ್‌ಇಡಿ ಬಲ್ಬ್ ಇಟ್ಟರೆ ಅದು ಉರಿಯುತ್ತದೆ! ಅಚ್ಚರಿಯಾದರೂ ಸತ್ಯ. ಇದು ಬೇರೆ ಯಾರೋ ಹೇಳುತ್ತಿರುವ ಮಾತಲ್ಲ. ಒನ್ಇಂಡಿಯಾ ಕನ್ನಡ ಸುದ್ದಿ ಮಾಧ್ಯಮ ವರದಿಗಾರನಾಗಿ ನಾನು ಸ್ವತಃ ನನ್ನನ್ನು ಪ್ರಯೋಗಕ್ಕೆ ಒಳಡಿಸಿಕೊಂಡು ಹಂಚಿಕೊಳ್ಳುತ್ತಿರುವ ವಿಚಿತ್ರ ಸಂಗತಿ! ವ್ಯಾಕ್ಸಿನ್ ಹಾಕಿಸಿಕೊಂಡ ಜಾಗದಲ್ಲಿ ಬಲ್ಬ್ ಇಟ್ಟರೆ ಉರಿಯುತ್ತದೆ ಎಂಬ ಅಸಲಿ ಸತ್ಯಾಂಶವನ್ನು ಪ್ರಯೋಗದ ವಿಡಿಯೋ ಮೂಲಕವೇ ಒನ್ಇಂಡಿಯಾ ಕನ್ನಡ ಸಮಗ್ರ ವರದಿಯನ್ನು ನಾಡಿನ ಜನರ ಮುಂದಿಡುತ್ತಿದೆ.

Recommended Video

Covid Vaccine ಲಸಿಕೆ ಪಡೆದವರ ಮೈಯಲ್ಲಿ Corrent!! | Oneindia Filmibeat

ಒನ್ಇಂಡಿಯಾ ಕನ್ನಡ ಪ್ರಯೋಗ: ಎಲ್‌ಇಡಿ ರೀಚಾರ್ಜೆಬಲ್ ಬಲ್ಬ್ ಇಟ್ಟರೆ ಮಾತ್ರ ವಿದ್ಯುತ್ ಬರುತ್ತದೆ. ಆದರೆ ನಾನ್ ರೀಚಾರ್ಜೆಬಲ್ ಬಲ್ಟ್ ಇಟ್ಟರೆ ಬಲ್ಬ್ ಇಟ್ಟರೆ ಅದು ಉರಿಯುವುದಿಲ್ಲ. ಇದರ ವೈಜ್ಞಾನಿಕ ಕಾರಣ ಇಷ್ಟೇ. ಎಲ್ಇಡಿ ರೀಚಾರ್ಜೆಬಲ್ ಬಲ್ಬ್‌ನಲ್ಲಿ ವಿದ್ಯುತ್ ಶೇಖರಣೆಯಾಗಿರುತ್ತದೆ. ನ್ಯೂಟ್ರಲ್ ಮತ್ತು ಫೇಸ್ ಒಂದಾದರೆ ಶೇಖರಣೆಯಾಗಿರುವ ವಿದ್ಯುತ್ ಬಲ್ಬ್‌ನಲ್ಲಿ ಉರಿಯುತ್ತದೆ. ಇದನ್ನೇ ವೈಜ್ಞಾನಿಕ ಪರಿಭಾಷೆಯಲ್ಲಿ ಸರ್ಕ್ಯೂಟ್ ಕಂಪ್ಲೀಟ್ ಆಗಬೇಕು ಅಂತ ಹೇಳುತ್ತಾರೆ.

ಸರ್ಕ್ಯೂಟ್ ಪೂರ್ಣ ಗೊಳಿಸುವ ಯಾವುದೇ ವಸ್ತು ಮೇಲೆ ಇಟ್ಟರೂ ಎಲ್‌ಇಡಿ ರೀಚಾರ್ಜೆಬಲ್ ಬಲ್ಬ್‌ ಹೊತ್ತಿ ಉರಿಯುತ್ತದೆ. ಇದನ್ನು ಪ್ರಯೋಗದ ಮೂಲಕವೇ ಒನ್ಇಂಡಿಯಾ ಕನ್ನಡ ಸುದ್ದಿ ಮಾಧ್ಯಮ ಸತ್ಯ ಸಂಗತಿಯನ್ನು ಜನರ ಮುಂದಿಡುತ್ತಿದೆ. ಈ ಸತ್ಯಾಂಶ ತಿಳಿಯದೇ ಕೊರೊನಾ ಲಸಿಕೆ ಹಾಕಿಸಿಕೊಂಡವರ ಮೈಮೇಲೆ ಎಲ್ಇಡಿ ಬಲ್ಬ್‌ ಇಟ್ಟರೆ ಅದು ಉರಿಯುತ್ತದೆ ಎಂಬ ಸುದ್ದಿ, ವಿಡಿಯೋನ್ನು ಹರಿ ಬಿಟ್ಟು ಜನರನ್ನು ಬೆಚ್ಚಿ ಬೀಳಿಸಲಾಗಿದೆ.

Fact-Check: The LED Bulb Doesn’t Just Glow at COVID-19 Vaccinated arm

ಎಲ್ಇಡಿ ಬಲ್ಬ್ ನನ್ನ ಮೇಲೆ ಪ್ರಯೋಗ:
ನಾನು ಒನ್ ಇಂಡಿಯಾ ಕನ್ನಡ ವರದಿಗಾರ. ಕೋವಿಡ್ 19 ಹಿನ್ನೆಲೆಯಲ್ಲಿ ಮೇ. 05 ರಂದು ಪತ್ರಕರ್ತ ಆಗಿದ್ದ ಕಾರಣದಿಂದ ಕೆ.ಜಿ ಜನರಲ್ ಆಸ್ಪತ್ರೆಯಲ್ಲಿ ಕೋ ವ್ಯಾಕ್ಸಿನ್ ಲಸಿಕೆ ಪಡೆದಿದ್ದೆ. ಒಂದು ತಿಂಗಳು ಅವಧಿ ಮುಗಿದ ಹಿನ್ನೆಲೆಯಲ್ಲಿ ಜೂ. 9 ರಂದು ವಾಣಿ ವಿಲಾಸ ಆಸ್ಪತ್ರೆಯಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ಕೋವ್ಯಾಕ್ಸಿನ್ ಲಸಿಕೆ ಎರಡನೇ ಡೋಸ್ ಹಾಕಿಸಿಕೊಂಡೆ. ಅದಾಗಿ ಹದಿನೈದು ನಿಮಿಷ ವೀಕ್ಷಣಾ ಕೊಠಡಿಯಲ್ಲಿ ವಿಶ್ರಾಂತಿ ಪಡೆದು ಭಾರತ್ ನಗರದಲ್ಲಿರುವ ನನ್ನ ಮನೆಗೆ ಬಂದೆ.

ಅಷ್ಟರಲ್ಲಿ ಸಮಯ ಮಧ್ಯಾಹ್ನ 3 ಗಂಟೆ ಆಗಿತ್ತು. ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದ " ವ್ಯಾಕ್ಸಿನ್ ಹಾಕಿಸಿಕೊಂಡ ಜಾಗದಲ್ಲಿ ಎಲ್ಇಡಿ ಬಲ್ಬ್ ಇಟ್ಟರೆ ಅದು ಹೊತ್ತಿ ಉರಿಯುತ್ತದೆ" ಸುದ್ದಿಯನ್ನು ಗಮನಿಸಿ ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ನಾನೇ ಪ್ರಯೋಗಕ್ಕೆ ಒಳಪಡಿಸಿಕೊಂಡೆ. ವ್ಯಾಕ್ಸಿನ್ ಹಾಕಿಸಿಕೊಂಡ ಜಾಗದಲ್ಲಿ ಮೊದಲು ಎಲ್ಇಡಿ ರೀಚಾರ್ಜೆಬಲ್ ಬಲ್ಬ್ ಇಟ್ಟೆ. ಹೊತ್ತಿ ಉರಿಯಿತು. ಅಚ್ಚರಿಗೊಂಡು ನಾನ್ ರೀಚಾರ್ಜೆಬಲ್ ಬಲ್ಬ್‌ನ್ನು ಅದೇ ಜಾಗದಲ್ಲಿ ಇಟ್ಟು ಪರೀಕ್ಷಿಸಿದೆ. ಅದು ಹೊತ್ತಿ ಉರಿಯಲಿಲ್ಲ. ಅವಾಗಲೇ ಇದರ ಅಸಲಿ ಸತ್ಯಾಂಶ ಗೊತ್ತಾಯಿತು.

ಹಣ್ಣಿನ ಮೇಲಿಟ್ಟರೂ ಬಲ್ಬ್‌ ಉರಿಯುತ್ತದೆ: ಇನ್ನು ರೀಚಾರ್ಜೆಬಲ್ ಎಲ್ ಇಡಿ ಬಲ್ಬ್‌ನ್ನು ಹಲಸಿನ ಹಣ್ಣಿನ ತೊಳೆ ಮೇಲಿಟ್ಟಾಗಲೂ ಅದು ಪ್ರಕಾಶಮಾನವಾಗಿ ಉರಿಯತೊಡಗಿತು. ನಾನ್- ರೀಚಾರ್ಜೆಬಲ್ ಬಲ್ಬ್ ಇಟ್ಟಾಗ ಅದು ಉರಿಯಲಿಲ್ಲ. ಇದರ ವೈಜ್ಞಾನಿಕ ಕಾರಣ ಇಷ್ಟೇ. ರೀಚಾರ್ಜೆಬಲ್ ಬಲ್ಬ್‌ನಲ್ಲಿ ವಿದ್ಯುತ್ ಸಂಗ್ರಹವಾಗಿರುತ್ತದೆ. ಫೇಸ್ ಮತ್ತು ನೂಟ್ರಲ್ ಎರಡೂ ಒಂದಾದಾಗ ಸಾಮಾನ್ಯವಾಗಿ ವಿದ್ಯುತ್ ದೀಪ ಹೊತ್ತಿ ಉರಿಯುತ್ತದೆ.

Fact-Check: The LED Bulb Doesn’t Just Glow at COVID-19 Vaccinated arm

ದೇಹದ ಯಾವುದೇ ಬೆವರುವ ಜಾಗದಲ್ಲಿ ರೀಚಾರ್ಜೆಬಲ್ ಎಲ್ಇಡಿ ಬಲ್ಬ್ ಇಟ್ಟರೆ ಅದು ಹೊತ್ತಿ ಉರಿಯುತ್ತದೆ. ಹಣ್ಣು, ತರಕಾರಿ ಯಾವುದರ ಮೇಲಿಟ್ಟರೂ ಎಲ್‌ಇಡಿ ರೀಚಾರ್ಜೆಬಲ್ ಬಲ್ಬ್‌ ಉರಿಯುತ್ತದೆ. ಯಾರೋ ವ್ಯಾಕ್ಸಿನ್ ಹಾಕಿಸಿಕೊಂಡ ಪುಣ್ಯಾತ್ಮರು ಈ ಅಸಲಿ ಸತ್ಯದ ಪೂರ್ವಾಪರ ಆಲೋಚಿಸದೇ ರೀಚಾರ್ಜೆಬಲ್ ಎಲ್‌ಇಡಿ ಬಲ್ಬ್‌ನ್ನು ಮೈಮೇಲೆ ಇಟ್ಟುಕೊಂಡು ಅದನ್ನೇ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟಿದ್ದಾರೆ. ಇದನ್ನೇ ನಂಬಿ ಕೆಲವು ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿವೆ.

ವ್ಯಾಕ್ಸಿನ್‌ಗೂ ಬಲ್ಬ್‌ ಉರಿಯುವುದಕ್ಕೂ ಸಂಬಂಧವಿಲ್ಲ: ಕೊರೊನಾ ಸೋಂಕಿನ ಬಗ್ಗೆ ಈ ಮೊದಲು ಸಹ ಸುಳ್ಳು ಸಂಗತಿ ಹಬ್ಬಿಸಿ ಲಕ್ಷಾಂತರ ಮಂದಿ ಲಸಿಕೆ ಹಾಕಿಸಿಕೊಳ್ಳದೇ ಹಿಂದೇಟು ಹಾಕಿದ್ದರು. ಇದೀಗ ವ್ಯಾಕ್ಸಿನ್ ಹಾಕಿಸಿಕೊಂಡ ಜಾಗದಲ್ಲಿ ಬಲ್ಬ್ ಇಟ್ಟರೆ, ಅದು ಹೊತ್ತಿ ಉರಿಯುತ್ತದೆ ಎಂಬ ಆತಂಕಕ್ಕೆ ಒಳಗಾಗಿ ಯಾರೂ ಸಹ ವ್ಯಾಕ್ಸಿನ್ ಹಾಕಿಸಿಕೊಳ್ಳದೇ ಇರಬೇಡಿ. ಎಲ್‌ಇಡಿ ರೀಚಾರ್ಜೆಬಲ್ ಉರಿಯುವುದಕ್ಕೂ ಲಸಿಕೆ ಹಾಕಿಸಿಕೊಳ್ಳುವುದಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಯಾರೂ ಸಹ ಬಲ್ಬ್ ಉರಿಯುವ ಸುದ್ದಿಗೆ ಕಿವಿಗೊಟ್ಟು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಭಯಪಡಬೇಡಿ. ಕಡ್ಡಾಯವಾಗಿ ವ್ಯಾಕ್ಸಿನ್ ಹಾಕಿಸಿಕೊಂಡು ಸುರಕ್ಷಿತವಾಗಿರಿ ಎಂಬುದು ಒನ್ಇಂಡಿಯಾ ಕನ್ನಡ ಮಾಧ್ಯಮದ ಮನವಿ.

Fact Check

ಕ್ಲೇಮು

ಕೊರೊನಾ ಲಸಿಕೆ ಪಡೆದವರಲ್ಲಿ ವಿದ್ಯುತ್ ಸಂಚಾರ, ಎಲ್ಇಡಿ ಬಲ್ಬ್ ಆನ್.

ಪರಿಸಮಾಪ್ತಿ

ಕೊರೊನಾ ವ್ಯಾಕ್ಸಿನ್‌ಗೂ ಬಲ್ಬ್‌ ಉರಿಯುವುದಕ್ಕೂ ಸಂಬಂಧವಿಲ್ಲ. Static ವಿದ್ಯುತ್ ಸಾಧ್ಯತೆ, ಎಲ್ಇಡಿ ಬಲ್ಬ್ ಆನ್ ನಿಜ. ಆದರೆ, ರೀಚಾರ್ಜೆಬಲ್ ಬಲ್ಬ್ ಇದಾಗಿದ್ದು, ಲಸಿಕೆ ಪಡೆಯದವರಲ್ಲೂ ಬಲ್ಬ್ ಆನ್ ಆಗುತ್ತದೆ.

Rating

Half True
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A video going viral on the internet shows a man lighting a bulb by bringing it in contact with his body at the spot where he got vaccinated against COVID-19. one can’t light a bulb at the COVID-19 vaccine site. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X