ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ರೈತರ ಪ್ರತಿಭಟನೆ ವೇಳೆ ರಿಲಾಯನ್ಸ್ ಜಿಯೋ ಟವರ್ ಸುಟ್ಟು ಭಸ್ಮ?

|
Google Oneindia Kannada News

ನವದೆಹಲಿ, ಜನವರಿ 01: ಪಂಜಾಬ್‌ನಲ್ಲಿ ರೈತರ ಪ್ರತಿಭಟನೆ ವೇಳೆ 100 ಕ್ಕೂ ಹೆಚ್ಚು ಜಿಯೋ ಟವರ್‌ಗಳು ಸುಟ್ಟು ಭಸ್ಮವಾಗಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸುಟ್ಟು ಹೋದ ಟವರ್‌ಗಳೆಲ್ಲವೂ ರಿಲಾಯನ್ಸ್ ಜಿಯೋದಾಗಿತ್ತು ಎಂದು ಹೇಳಲಾಗಿದೆ. ರೈತರ ಪ್ರತಿಭಟನೆ ಪ್ರಭಾವದಿಂದಾಗಿ ಜಿಯೋ ಟವರ್‌ ಸುಟ್ಟು ಭಸ್ಮವಾಗಿದೆ ಎನ್ನುವ ಮಾತುಗಳನ್ನಾಡುತ್ತಿದ್ದಾರೆ.

"ಬರೀ ತಿಂಗಳಲ್ಲ, ವರ್ಷಗಳವರೆಗೂ ಹೋರಾಟಕ್ಕೆ ನಾವು ಸಿದ್ಧ"

ಆದರೆ ಹರಿದಾಡುತ್ತಿರುವ ವಿಡಿಯೋ 2017ರದ್ದಾಗಿದೆ, ಡೆಹ್ರಾಡೂನ್‌ನಲ್ಲಿ ಸೆರೆಹಿಡಿದ ವಿಡಿಯೋ ಇದಾಗಿತ್ತು. ಆಗ ಸಾಕಷ್ಟು ಮಾಧ್ಯಮಗಳು ಇದರ ವರದಿ ಮಾಡಿದ್ದವು. 2017ರ ಜೂನ್ 29 ರಂದು ವಸಂತವಿಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿತ್ತು. ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಮನೆಯ ಮೇಲಿದ್ದ ಟವರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

Fact Check: Old Video From Dehradun Viral As Jio Tower Burning In Punjab

ಇದು ಹಳೆಯ ಚಿತ್ರವಾಗಿದ್ದು, ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇದು ರೈತರು ಪ್ರತಿಭಟನೆ ವೇಳೆ ಮಾಡಿದ ಕಾರ್ಯವಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಇತ್ತೀಚೆಗಷ್ಟೇ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ರೈತರಲ್ಲಿ ಮನವಿ ಮಾಡಿದ್ದು, ದರಯವಿಟ್ಟು ಯಾವುದೇ ಮೊಬೈಲ್ ಟವರ್‌ಗಳನ್ನು ಧ್ವಂಸ ಮಾಡಬೇಡಿ ಎಂದು ಕೇಳಿಕೊಂಡಿದ್ದರು.

Fact Check

ಕ್ಲೇಮು

ಪಂಜಾಬ್‌ನಲ್ಲಿ ನಡೆದ ರೈತರ ಪ್ರತಿಭಟನೆ ವೇಳೆ ನೂರಕ್ಕೂ ಹೆಚ್ಚು ರಿಲಾಯನ್ಸ್ ಜಿಯೋ ಟವರ್‌ಗಳು ಸುಟ್ಟು ಭಸ್ಮವಾಗಿದ್ದವು.

ಪರಿಸಮಾಪ್ತಿ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ 2017ರದ್ದಾಗಿದ್ದು, ರೈತರು ಯಾವುದೇ ರಿಲಾಯನ್ಸ್ ಜಿಯೋ ಟವರ್‌ಗೆ ಬೆಂಕಿ ಹಚ್ಚಿಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A video showing a burning mobile tower has gone viral with the false claim that it shows telecommunications company, Reliance Jio’s mobile tower burning in Punjab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X