• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fact Check: ಲಡಾಖ್ ಸಂಘರ್ಷದ ವಿಷ್ಯ; ಏನು ಫೋಟೋಗಳ ಹಿಂದಿನ ಸತ್ಯ?

|

ನವದೆಹಲಿ, ಸಪ್ಟೆಂಬರ್.09: ಭಾರತ-ಚೀನಾ ಸೇನೆಗಳ ಸಂಘರ್ಷದ ನಡುವೆ ಲಡಾಖ್ ಬಳಿ ಬಂಕರ್ ಗಳನ್ನು ಸೆರೆ ಹಿಡಿಯಲಾಗುತ್ತಿದೆ ಎಂದು ತೋರಿಸುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

"ಲಡಾಖ್ ಪೂರ್ವ ಪ್ರದೇಶಗಳಲ್ಲಿ ಸಂಘರ್ಷ ಹೆಚ್ಚಾಗುತ್ತಿದೆ" ಎಂದು ಉಲ್ಲೇಖಿಸಿದ ಪೋಸ್ಟ್ ಗಳು ಮತ್ತು ಬ್ರೇಕಿಂಗ್ ನ್ಯೂಸ್ ಬರಹಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಭಾರತ-ಚೀನಾ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿರುವ ಬಗ್ಗೆ ಕಾಮೆಂಟ್ ಗಳನ್ನು ಮಾಡಲಾಗುತ್ತಿದೆ. ಈ ಫೋಟೋಗಳ ಹಿಂದಿನ ಸತ್ಯ ಏನು ಎಂಬುದರ ಬಗ್ಗೆ "Oneindia" ಫ್ಯಾಕ್ಟ್ ಚೆಟ್ ನಡೆಸಿದೆ.

Fact Check: ಚೀನಾ ಯೋಧರ ಸಮಾಧಿ ಹಿಂದಿನ ಸತ್ಯವೇನು?

ಕಳೆದ 2016ರ ಆಕ್ಟೋಬರ್ ತಿಂಗಳಿನಲ್ಲಿ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರದ ಅಡಿಯಲ್ಲಿ ಚೀನಾ-ಭಾರತೀಯ ಸೇನೆಗಳು ಜಂಟಿ ಕಾರ್ಯಾಚರಣೆ ನಡೆಸಿದ್ದವು. ಅಂದು ಭಾರತೀಯ ಸೇನೆಯ ಉತ್ತರದ ಕಮಾಂಡರ್ ಈ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಇದೀಗ ಅದೇ ಫೋಟೋಗಳನ್ನು ಪೋಸ್ಟ್ ಮಾಡಿ, ಲಡಾಖ್ ನಲ್ಲಿ ಸೇನಾ ಸಂಘರ್ಷ ಹೆಚ್ಚುತ್ತಿದೆ ಎನ್ನುವ ಬಗ್ಗೆ ಸುಳ್ಳು ಸಂದೇಶಗಳನ್ನು ಹರಿ ಬಿಡಲಾಗುತ್ತಿದೆ.

ಭಾರತ ಚೀನಾ ಜಂಟಿ ವ್ಯಾಯಾಮದ ಬಗ್ಗೆ ವರದಿ

ಜಮ್ಮು-ಕಾಶ್ಮೀರದ ಪೂರ್ವ ಲಡಾಖ್ ಪ್ರದೇಶದಲ್ಲಿ 2016ರ ಆಗಸ್ಟ್.20ರಂದು ಭಾರತ-ಚೀನಾ ಸೇನಾಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆ ಬಗ್ಗೆ ಪಿಟಿಐ ವರದಿ ಮಾಡಿತ್ತು. "ಚೀನಾ ಮತ್ತು ಭಾರತ ನಡುವಿನ ಪರಮಾಣು ವಿಷಯ ಮತ್ತು ವಿಶ್ವಸಂಸ್ಥೆಯಲ್ಲಿ ಮಸೂದ್ ಅಜರ್ ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಬಗ್ಗೆ ರಾಜತಾಂತ್ರಿಕ ಚರ್ಚೆಗಳು ನಡೆಯುತ್ತಿದ್ದವು" ಎಂದು ಪಿಟಿಐ ವರದಿ ಮಾಡಿತ್ತು.

ಭೂಮಿ ಕಂಪಿಸಿದ ಗಡಿ ಗ್ರಾಮಗಳಲ್ಲಿ ಕಾರ್ಯಾಚರಣೆ

ಭೂಮಿ ಕಂಪಿಸಿದ ಗಡಿ ಗ್ರಾಮಗಳಲ್ಲಿ ಕಾರ್ಯಾಚರಣೆ

ಭಾರತದ ಗಡಿ ಗ್ರಾಮವೊಂದರಲ್ಲಿ ಸಂಭವಿಸಿದ ಭೂಮಿ ಕಂಪಿಸಿದ ಸಂದರ್ಭದಲ್ಲಿ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ(ಎಚ್‌ಎಡಿಆರ್) ಕಾರ್ಯಾಚರಣೆ ಸನ್ನಿವೇಶವನ್ನು ಚಿತ್ರಿಸಲಾಗಿದೆ. ಅಂದು ಉಭಯ ಸೇನೆಗಳು ನಡೆಸಿದ ರಕ್ಷಣಾ ಕಾರ್ಯಾಚರಣೆ, ಸಂತ್ರಸ್ತರ ಸ್ಥಳಾಂತರ, ವೈದ್ಯಕೀಯ ಸೇವೆ ನೀಡಿದ್ದವು.

ಭಾರತ-ಚೀನಾ ಜಂಟಿ ಸೇನಾ ವ್ಯಾಯಾಮ

ಭಾರತ-ಚೀನಾ ಜಂಟಿ ಸೇನಾ ವ್ಯಾಯಾಮ

ಇದರ ಮುಂದುವರಿದ ಭಾಗವಾಗಿ ಫೆಬ್ರವರಿ.06ರಂದು ಪೂರ್ವ ಲಡಾಖ್ ನ ಚುಶುಲ್ ಗ್ಯಾರಿಸನ್‌ನಲ್ಲಿ ನಡೆದ ಬಾರ್ಡರ್ ಪರ್ಸನಲ್ ಮೀಟಿಂಗ್ ಹಟ್ ಪ್ರದೇಶದಲ್ಲಿ ಮೊಲ್ಡೊ ಗ್ಯಾರಿಸನ್‌ನ ಚೀನಾದ ಸೈನ್ಯದೊಂದಿಗೆ ನಡೆದ ಮೊದಲ ಜಂಟಿ ಕಾರ್ಯಾಚರಣೆ ನಡೆಸಲಾಗಿತ್ತು. ಈ ಬಾರಿ ಚೀನಾದ ಗಡಿ ಪ್ರದೇಶಗಳಲ್ಲಿ ವ್ಯಾಯಾಮ ನಡೆಸಲಾಗಿದ್ದು, ಭಾರತೀಯ ಸೇನೆಯ ನೇತೃತ್ವವನ್ನು ಬ್ರಿಗೇಡಿಯರ್ ಆರ್ ಎಸ್ ರಮಣ್ ವಹಿಸಿಕೊಂಡಿದ್ದರು. ಚೀನಾ ಸೇನೆಯ ನೇತೃತ್ವವನ್ನು ಸೀನಿಯರ್ ಕರ್ನಲ್ ಫ್ಯಾನ್ ಜುನ್ ವಹಿಸಿಕೊಂಡಿದ್ದರು.

"ಗಡಿಯಲ್ಲಿ ಸೇನಾ ಸಹಕಾರ ಮತ್ತು ವಿಶ್ವಾಸ ವೃದ್ಧಿ"

"ಈ ವ್ಯಾಯಾಮವು ಉತ್ತಮ ಯಶಸ್ಸನ್ನು ಕಂಡಿತ್ತು ಅಲ್ಲದೇ ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಗಡಿ ಪ್ರದೇಶದ ಜನರಿಗೆ ಸಹಾಯ ಮಾಡುವುದಕ್ಕೆ ಸಾಧ್ಯವಾಯಿತು. ಮಾತ್ರವಲ್ಲದೆ ಪೂರ್ವ ಲಡಾಖ್, ಸೈನ್ಯದ ಎಲ್‌ಎಸಿ ಉದ್ದಕ್ಕೂ ಎರಡು ಗಡಿ ಕಾವಲು ಪಡೆಗಳ ನಡುವೆ ವಿಶ್ವಾಸ ಮತ್ತು ಸಹಕಾರದ ಮಟ್ಟವನ್ನು ಹೆಚ್ಚಿಸಿತ್ತು" ಎಂದು ವರದಿಯಾಗಿತ್ತು.

Fact Check

ಕ್ಲೇಮು

ಲಡಾಖ್ ನಲ್ಲಿ ಭಾರತ-ಚೀನಾ ಸೈನಿಕರ ಸಂಘರ್ಷ

ಪರಿಸಮಾಪ್ತಿ

ಭಾರತ ಚೀನಾ ಸೇನೆಗಳ ಜಂಟಿ ವ್ಯಾಯಾಮದ ಹಳೆಯ ಫೋಟೋಗಳಿವು.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು factcheck@one.in ಗೆ ಇಮೇಲ್ ಮಾಡಿ

English summary
Fact Check :Old Image Of India-China Soldiers Being Passed Of As Clashes In Ladakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X