• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fact Check: ಸಸ್ಯಾಹಾರಿ ಆಹಾರದಿಂದ ಕೊರೊನಾವೈರಸ್ ತಡೆಗಟ್ಟಬಹುದೇ?

|

ಸಸ್ಯಾಹಾರಿ ಆಹಾರಗಳಿಂದ ಕೊರೊನಾವೈರಸ್ ತಡೆಗಟ್ಟಬಹುದು ಎನ್ನುವ ಸುದ್ದಿ ಸಾಮಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಾಂಸಾಹಾರ ಸೇವಿಸುವುದರಿಂದಲೇ ಕೊರೊನಾ ಸೋಂಕು ಹೆಚ್ಚಾಗುತ್ತಿದೆ, ಅಥವಾ ಕೊರೊನಾ ಮತ್ತೆ ಬರುತ್ತಿದೆ ಎಂದು ಹೇಳಲಾಗುತ್ತಿದೆ.

ಹಾಗೆಯೇ ಐಸಿಎಂಆರ್ ಹೀಗೊಂದು ನೋಟಿಸ್ ನೀಡಿದೆ ಎಂದು ಹೇಳಲಾಗುತ್ತಿದ್ದು, ಅದು ಸುಳ್ಳು ಎಂಬುದು ಸಾಬೀತಾಗಿದೆ. ಈ ಕುರಿತು ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ. ಮಾರ್ಚ್ 13 ರಂದು ಪತ್ರಿಕಾಗೋಷ್ಠಿಯಲ್ಲಿ ಐಸಿಎಂಆರ್ ಸ್ಪಷ್ಟಪಡಿಸಿದ್ದು, ಯಾವುದೋ ಒಂದು ಆಹಾರದಿಂದ ಕೊರೊನಾವೈರಸ್ ಹರಡುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ.

ಭಾರತದಲ್ಲಿ ಭಯ ಹುಟ್ಟಿಸಿದ ಕೊರೊನಾವೈರಸ್ 2ನೇ ಅಲೆಭಾರತದಲ್ಲಿ ಭಯ ಹುಟ್ಟಿಸಿದ ಕೊರೊನಾವೈರಸ್ 2ನೇ ಅಲೆ

ಕೊರೊನಾ ವೈರಸ್ ಹಾಗೂ ಆಹಾರಕ್ಕೆ ಯಾವುದೇ ಸಂಬಂಧವಿಲ್ಲ, ಆದಷ್ಟು ಹೊರಗಿನ ಆಹಾರವನ್ನು ತಿನ್ನಬೇಡಿ, ಮನೆಯಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿ ಎಂದು ಸಲಹೆ ನೀಡಲಾಗಿತ್ತು. ಜನರು ಚಿಕನ್ ಸೇರಿದಂತೆ ಯಾವುದೇ ಮಾಂಸವನ್ನು ಸೇವಿಸಬಹುದು ಅದರಿಂದ ಯಾವುದೇ ತೊಂದರೆಯಿಲ್ಲ ಎಂದು ಐಸಿಎಂಆರ್ ಹೇಳಿದೆ.

ಎಫ್‌ಎಸ್‌ಎಸ್‌ಎಐ ಮುಖ್ಯಸ್ಥ ಮಾತನಾಡಿ, ಕೊರೊನಾವೈರಸ್ ಚಿಕನ್, ಮಟನ್ ಅಥವಾ ಸೀಫುಡ್‌ಗಳಿಂದ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸೋಮವಾರ 46951 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಈ ಅವಧಿಯಲ್ಲಿ 21,180 ಸೋಂಕಿತರು ಗುಣಮುಖರಾಗಿದ್ದು, ಒಂದೇ ದಿನ 212 ಜನರು ಪ್ರಾಣ ಬಿಟ್ಟಿದ್ದಾರೆ.

ಸೋಮವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು 1,16,46,081 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ.

ದೇಶದಲ್ಲಿ ಈವರೆಗೂ 1,11,51,468 ಸೋಂಕಿತರು ಗುಣಮುಖರಾಗಿದ್ದು, ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟವರ ಸಂಖ್ಯೆ 1,59,967ಕ್ಕೆ ಏರಿಕೆಯಾಗಿದೆ. ಉಳಿದಂತೆ 3,34,646 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

Fact Check

ಕ್ಲೇಮು

ಸಸ್ಯಾಹಾರಿ ಆಹಾರ ಸೇವನೆಯಿಂದ ಕೊರೊನಾವೈರಸ್‌ನ್ನು ತಡೆಗಟ್ಟಬಹುದು.

ಪರಿಸಮಾಪ್ತಿ

ಯಾವುದೇ ಆಹಾರದಿಂದ ಕೊರೊನಾ ಸೋಂಕು ಹರಡುವುದಿಲ್ಲ, ಮಾಂಸಾಹಾರವನ್ನು ಯಾವುದೇ ಭಯವಿಲ್ಲದೆ ಸೇವಿಸಬಹುದು, ಸಸ್ಯಾಹಾರದಿಂದ ಕೊರೊನಾವೈರಸ್ ತಡೆಗಟ್ಟಬಹುದು ಎಂಬುದು ಸುಳ್ಳು.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು factcheck@one.in ಗೆ ಇಮೇಲ್ ಮಾಡಿ

English summary
On social media the claims that eating non-veg food can cause Coronavirus keeps coming back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X