ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಸೆಪ್ಟೆಂಬರ್ 25ರಿಂದ ದೇಶಾದ್ಯಂತ ಮತ್ತೆ ಲಾಕ್‌ಡೌನ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 24: ದೇಶಾದ್ಯಂತ ಸೆ.25 ಅಥವಾ 28ರಿಂದ ಮತ್ತೆ ಲಾಕ್‌ಡೌನ್ ಘೋಷಿಸಲಾಗುತ್ತದೆ ಎನ್ನುವ ಸುಳ್ಳು ಸುದ್ದಿ ಹರಿದಾಡುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಏಳು ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಬುಧವಾರ ನಡೆಸಿದ ಸಭೆಯಲ್ಲಿ ಲಾಕ್‌ಡೌನ್ ಮಾನದಂಡಗಳನ್ನು ಮುಮೌಲ್ಯಮಾಪನ ಮಾಡಲು ಕೇಳಿದ್ದರು, ಮತ್ತು ಇದು ಆರ್ಥಿಕ ತೊಂದರೆಯನ್ನು ಸೃಷ್ಟಿಸುತ್ತದೆ ಎಂದು ಕೂಡ ಹೇಳಲಾಗಿತ್ತು.

Fact Check: ರಾಖಿ ಸಾವಂತ್ ಪಾಕಿಸ್ತಾನ ಧ್ವಜವನ್ನು ಅಪ್ಪಿಕೊಂಡಿದ್ದೇಕೆ?Fact Check: ರಾಖಿ ಸಾವಂತ್ ಪಾಕಿಸ್ತಾನ ಧ್ವಜವನ್ನು ಅಪ್ಪಿಕೊಂಡಿದ್ದೇಕೆ?

ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರ ಸೆ.25ರಿಂದ ಮತ್ತೊಂದು ಸುತ್ತಿನ ಲಾಕ್‌ಡೌನ್ ಘೋಷಿಸಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಮತ್ತೆ ಲೋಕಲ್ ಲಾಕ್‌ಡೌನ್ ಶುರುವಾಗುತ್ತಾ ಎಂಬ ಪ್ರಶ್ನೆ

ಮತ್ತೆ ಲೋಕಲ್ ಲಾಕ್‌ಡೌನ್ ಶುರುವಾಗುತ್ತಾ ಎಂಬ ಪ್ರಶ್ನೆ

ಕೊರೊನಾ ಸೋಂಕಿನ ಪ್ರಮಾಣ ದಿನೇದಿನೆ ಹೆಚ್ಚಾಗುತ್ತಿದೆ. ಕೊರೊನಾ ಸೋಂಕು ಹೆಚ್ಚಾಗಿರುವ ಕರ್ನಾಟಕವೂ ಸೇರಿ ಏಳು ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದರು. ಇದರ ಬೆನ್ನಿಗೆ ಮತ್ತೆ ಲೋಕಲ್ ಲಾಕ್​ಡೌನ್ ಶುರುವಾಗುತ್ತಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ. ಆದರೆ ಈ ಕುರಿತು ಯಾವುದೇ ಪ್ರಸ್ತಾಪವಾಗಿಲ್ಲ.

ಕರ್ನಾಟಕಕ್ಕೆ ಮೋದಿ ಕೊಟ್ಟ ಮೂರು ಸಲಹೆ

ಕರ್ನಾಟಕಕ್ಕೆ ಮೋದಿ ಕೊಟ್ಟ ಮೂರು ಸಲಹೆ

-ಕರ್ನಾಟಕದಲ್ಲಿ ಕೊರೊನಾ ಸೋಂಕು ಹೆಚ್ಚಿರುವ 9 ಜಿಲ್ಲೆಗಳಿಗೆ ವಿಶೇಷ ಯೋಜನೆ ರೂಪಿಸಿ, ದಕ್ಷ ಹಾಗೂ ಪರಿಣಾಮಕಾರಿ ನಿರ್ವಹಣೆಗಾಗಿ ಪ್ರತಿ ಜಿಲ್ಲೆಗೆ ವಿಶೇಷ ಕಾರ್ಯಪಡೆ ರಚಿಸಬೇಕು
-ಕೊರೊನಾ ನಿಯಂತ್ರಣಕ್ಕಾಗಿ ಎನ್‌​ಡಿಆರ್​ಎಫ್ ನಿಧಿಯಲ್ಲಿ ಶೇ.50 ಅನುದಾನ ಬಳಸಿಕೊಳ್ಳಿ
-ಸೋಂಕಿನ ನಿಖರ ಫಲಿತಾಂಶಕ್ಕಾಗಿ ಆರ್​ಟಿಪಿಸಿಆರ್ ಟೆಸ್ಟ್​ಗಳನ್ನು 3 ಪಟ್ಟು ಹೆಚ್ಚಿಸಿ

ಕರ್ನಾಟಕದ 9 ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹೆಚ್ಚಳ

ಕರ್ನಾಟಕದ 9 ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಹೆಚ್ಚಳ

ಕರ್ನಾಟಕದಲ್ಲೂ ಒಂಭತ್ತು ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾಗಿದೆ. ಆ ಜಿಲ್ಲೆಗಳಲ್ಲಿ ಈಗ ತೆಗೆದುಕೊಂಡಿರುವ ಕ್ರಮಗಳು ಸಾಕೇ ಅಥವಾ ಇನ್ನೂ ಹೆಚ್ಚಿನ ನಿಗಾ ಅವಶ್ಯವೇ ಎಂಬಿತ್ಯಾದಿ ಸಂದೇಹಗಳನ್ನು ನಿವಾರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೂ ಸಲಹೆ ನೀಡಿದ್ದಾರೆ.

Recommended Video

ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡ್ಲಿ | Oneindia Kannada
7 ರಾಜ್ಯಗಳಿಗೆ ಮಾರ್ಗದರ್ಶಿ ಸೂತ್ರ

7 ರಾಜ್ಯಗಳಿಗೆ ಮಾರ್ಗದರ್ಶಿ ಸೂತ್ರ

ಇದಲ್ಲದೇ ಏಳೂ ರಾಜ್ಯಗಳಿಗೆ ಅನ್ವಯವಾಗುವಂತೆ 12 ಮಾರ್ಗದರ್ಶಿ ಸೂತ್ರಗಳನ್ನು ಅವರು ನೀಡಿದ್ದಾರೆ. ಪೂರ್ಣವರದಿಗೆ ಈ ಕೊಂಡಿ ಕ್ಲಿಕ್ಕಿಸಿ ಕೊರೊನಾ ಹೆಚ್ಚಿರುವ ಕರ್ನಾಟಕ, ಪಂಜಾಬ್, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ನವದೆಹಲಿ ರಾಜ್ಯಗಳ ಮುಖ್ಯಮಂತ್ರಿ ಅವರೊಂದಿಗೆ ಮೋದಿ ವಿಡಿಯೋ ಸಂವಾದ ನಡೆಸಿದರು. ಕೊರೊನಾ ನಿಯಂತ್ರಣಕ್ಕೆ ಏನೇನು ಬಿಗಿ ಕ್ರಮ ಕೈಗೊಳ್ಳಬೇಕು, ಆರ್ಥಿಕ ಚಟುವಟಿಕೆಗಳನ್ನು ಬಿಗಿ ಕ್ರಮ ಹಾಗೂ ಆಸ್ಪತ್ರೆಗಳ ಖಾತ್ರಿ ಮಾಡಿಕೊಂಡು ಹಂತಹಂತವಾಗಿ ಆರಂಭಿಸಬೇಕು ಎಂದು ಸೂಚನೆ ನೀಡಿದರು.

Fact Check

ಕ್ಲೇಮು

ಸೆಪ್ಟೆಂಬರ್ 25ರಿಂದ ದೇಶಾದ್ಯಂತ ಮತ್ತೊಂದು ಸುತ್ತಿನ ಲಾಕ್‌ಡೌನ್

ಪರಿಸಮಾಪ್ತಿ

ಸೆಪ್ಟೆಂಬರ್ 25ರಿಂದ ಯಾವುದೇ ಲಾಕ್‌ಡೌನ್ ಇಲ್ಲ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
There have been rumours afloat that there would be another lockdown either on September 25 or September 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X