ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ನ್ಯೂಯಾರ್ಕ್ ಟೈಮ್ಸ್‌ ಮುಖಪುಟದಲ್ಲಿ ಮೋದಿ ಬಗ್ಗೆ ವರದಿ ಮಾಡಿಲ್ಲ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್‌ 29: ಇತ್ತೀಚೆಗೆ ದಿ ನ್ಯೂಯಾರ್ಕ್ ಟೈಮ್ಸ್‌ ಸೆಪ್ಟೆಂಬರ್‌ 26 ರಂದು ತನ್ನ ಮುಖಪುಟದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಹೊಗಳಿ ವರದಿ ಪ್ರಕಟ ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ ವೈರಲ್‌ ಆಗಿದೆ. ಆದರೆ ಈ ವೈರಲ್‌ ಫೋಟೋ ಬಗ್ಗೆ ದಿ ನ್ಯೂಯಾರ್ಕ್ ಟೈಮ್ಸ್‌ ಈಗ ಸ್ಪಷ್ಟಣೆಯನ್ನು ನೀಡಿದೆ.

ದಿ ನ್ಯೂಯಾರ್ಕ್ ಟೈಮ್ಸ್‌ ಸೆಪ್ಟೆಂಬರ್‌ 26 ರಂದು ತನ್ನ ಮುಖಪುಟದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ "ಭೂಮಿಯ ಕೊನೆಯ ಉತ್ತಮ ಭರವಸೆ" ಎಂದು ಶೀರ್ಷಿಕೆ ನೀಡಿ ನರೇಂದ್ರ ಮೋದಿಯ ದೊಡ್ಡ ಫೋಟೋ ಸಹಿತ ವರದಿ ಮಾಡಿದೆ ಎಂದು ಫೋಟೋವೊಂದು ವೈರಲ್‌ ಆಗಿದೆ. ಈ ಫೋಟೋವನ್ನು ಅದೇಷ್ಟೋ ಮಂದಿ ನರೇಂದ್ರ ಮೋದಿ ಬೆಂಬಲಿಗರು ಪೋಸ್ಟ್‌ ಮಾಡಿದ್ದಾರೆ.

Fact Check: ವಿಪಕ್ಷ ನಾಯಕರ ಸಭೆಗೆ ಸುಬ್ರಮಣಿಯನ್ ಸ್ವಾಮಿ ಭಾಗಿಯಾಗಿದ್ರಾ?Fact Check: ವಿಪಕ್ಷ ನಾಯಕರ ಸಭೆಗೆ ಸುಬ್ರಮಣಿಯನ್ ಸ್ವಾಮಿ ಭಾಗಿಯಾಗಿದ್ರಾ?

ಇನ್ನು ದಿ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟವಾಗಿದೆ ಎಂದು ವೈರಲ್‌ ಆದ ಈ ವರದಿಯ ಫೋಟೋದಲ್ಲಿ ಕಿಕ್ಕರ್‌ ಕೂಡಾ ಇದೆ. ಅದರಲ್ಲಿ "ವಿಶ್ವದ ಅತೀ ಪ್ರೀತಿಗೆ ಪಾತ್ರರಾದ ಹಾಗೂ ಶಕ್ತಿಯುತ ನಾಯಕ, ನಮ್ಮಗೆ ಹರಸಲು ಇಲ್ಲಿ ಇದ್ದಾರೆ," ಎಂದು ಉಲ್ಲೇಖ ಮಾಡಲಾಗಿದೆ.

 ಸ್ಪಷ್ಟಣೆ ನೀಡಿದ ದಿ ನ್ಯೂಯಾರ್ಕ್ ಟೈಮ್ಸ್‌

ಸ್ಪಷ್ಟಣೆ ನೀಡಿದ ದಿ ನ್ಯೂಯಾರ್ಕ್ ಟೈಮ್ಸ್‌

ದಿ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಮೋದಿಯನ್ನು ಶ್ಲಾಘಿಸಿ ವರದಿ ಪ್ರಕಟವಾಗಿದೆ ಎಂದು ಹೇಳಿರುವ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಈ ಬಗ್ಗೆ ದಿ ನ್ಯೂಯಾರ್ಕ್ ಟೈಮ್ಸ್‌ ಇಂದು ಸ್ಪಷ್ಟಣೆಯನ್ನು ನೀಡಿದೆ. "ಅತೀ ಹೆಚ್ಚು ಪ್ರಕಟಣೆಯನ್ನು ಹೊಂದಿರುವ ಪತ್ರಿಕೆಗಳಲ್ಲಿ ಒಂದಾದ ಪತ್ರಿಕೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಬಗ್ಗೆ ವರದಿ ಮಾಡಲಾಗಿದೆ ಎಂದು ವೈರಲ್‌ ಆಗುತ್ತಿರುವ ಚಿತ್ರ ಸಂಪೂರ್ಣವಾಗಿ ತಿರುಚಿತ ಚಿತ್ರವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕುರಿತಾದ ವರದಿಯನ್ನು ನೀವು ಪರಿಶೀಲನೆ ಮಾಡಬೇಕಾದರೆ, ಈ ಲಿಂಕ್‌ನಲ್ಲಿ ನೋಡಬಹುದು," ಎಂದು ದಿ ನ್ಯೂಯಾರ್ಕ್ ಟೈಮ್ಸ್‌ ವೆಬ್‌ಸೈಟ್‌ನ ಲಿಂಕ್‌ ಅನ್ನು ಉಲ್ಲೇಖ ಮಾಡಿ, ದಿ ನ್ಯೂಯಾರ್ಕ್ ಟೈಮ್ಸ್‌ ಕಮ್ಯುನಿಕೇಷನ್ಸ್‌ ಟ್ವೀಟ್‌ ಮಾಡಿದೆ.

 ಎಡಿಟೆಟ್‌ ಫೋಟೋದಲ್ಲಿ ಏನೇಲ್ಲ ತಪ್ಪು ಆಗಿತ್ತು?

ಎಡಿಟೆಟ್‌ ಫೋಟೋದಲ್ಲಿ ಏನೇಲ್ಲ ತಪ್ಪು ಆಗಿತ್ತು?

ಸೆಪ್ಟೆಂಬರ್‌ 26 ರಂದು ದಿ ನ್ಯೂಯಾರ್ಕ್ ಟೈಮ್ಸ್‌ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಹೊಗಳಿ ಪ್ರಕಟ ಮಾಡಿದೆ ಎಂದು ಹೇಳಲಾದ ಈ ತಿರುಚಿತ ಫೋಟೋದಲ್ಲಿ ಮುಖ್ಯವಾಗಿ ಸೆಪ್ಟೆಂಬರ್‌ನ ಅಕ್ಷರವೇ ತಪ್ಪಾಗಿದೆ. September ಬದಲಾಗಿ ಆ ಎಡಿಟೆಡ್‌ ಫೋಟೋದಲ್ಲಿ Setpember ಎಂದು ಪ್ರಕಟವಾಗಿದೆ. ಇನ್ನು ನ್ಯೂಯಾರ್ಕ್ ಟೈಮ್ಸ್‌ನ ಅಕ್ಷರ ಶೈಲಿಗೂ ಈ ಎಡಿಡೆಟ್‌ ಫೋಟೋದ ಅಕ್ಷರ ಶೈಲಿಗೂ ನಡುವೆ ವ್ಯತ್ಯಾಸವಿದೆ. ಅದಕ್ಕೂ ಮುಖ್ಯವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ ದಿನದಂದು ದಿ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಆ ಬಗ್ಗೆ ಯಾವುದೇ ವರದಿ ಪ್ರಕಟವಾಗಿಲ್ಲ ಎಂಬುವುದು ದಿ ನ್ಯೂಯಾರ್ಕ್ ಟೈಮ್ಸ್‌ ಹಂಚಿಕೊಂಡ ಲಿಂಕ್‌ನಿಂದ ಸ್ಪಷ್ಟವಾಗಿದೆ.

 Setpember ಪದ ತಪ್ಪಿನಿಂದ ಪೇಚಿಗೆ ಸಿಲುಕಿದ ಬಿಜೆಪಿಗರು

Setpember ಪದ ತಪ್ಪಿನಿಂದ ಪೇಚಿಗೆ ಸಿಲುಕಿದ ಬಿಜೆಪಿಗರು

ಅತೀ ದೊಡ್ಡ ಮಾಧ್ಯಮವಾದ ದಿ ನ್ಯೂಯಾರ್ಕ್ ಟೈಮ್ಸ್‌ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು "ಭೂಮಿಯ ಕೊನೆಯ ಉತ್ತಮ ಭರವಸೆ" ಎಂದು ಹೇಳಿದೆ ಎಂದು ಫೋಟೋದಲ್ಲಿ ಕಾಣಿಸಿಕೊಳ್ಳುತ್ತಿದೆ ಹಲವಾರು ಬಿಜೆಪಿ ಬೆಂಬಲಿಗರು ಈ ಫೋಟೋವನ್ನು ಸ್ಟೇಟಸ್‌ ಹಾಕಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೆಲವು ಬಿಜೆಪಿ ನಾಯಕರು, "ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಅಂತಾರಾಷ್ಟ್ರೀಯ ಮಟ್ಟದ ಪತ್ರಿಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ಮುಖಪುಟದಲ್ಲಿ ವರದಿ ಮಾಡಿ ಶ್ಲಾಘಿಸಿದೆ," ಎಂದು ಹೇಳಿದ್ದಾರೆ. ಆದರೆ ಅಷ್ಟೇ ವೇಗವಾಗಿ ಈ ಫೋಟೋ ಎಡಿಟ್‌ ಮಾಡುವ ಸಂದರ್ಭದಲ್ಲಿ ಎಡಿಟ್‌ ಮಾಡಿದ ವ್ಯಕ್ತಿ ಮಾಡಿದ ಒಂದು ತಪ್ಪು ನೆಟ್ಟಿಗರ ಗಮನಕ್ಕೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಈ Setpember ಪದ ತಪ್ಪಿನ ಬಗ್ಗೆ ಭಾರೀ ಹಾಸ್ಯ ಮಾಡಲಾಗಿದೆ. ಎಡಿಟ್‌ ಮಾಡುವಾಗ ಈ ಸೂಕ್ಷ್ಮವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ನೆಟ್ಟಿಗರು ಈ ಫೋಟೋವನ್ನು ಹಂಚಿಕೊಂಡ ಬಿಜೆಪಿ ಬೆಂಬಲಿಗರ ಕಾಲೆಳೆದಿದ್ದಾರೆ. ಈ ಬಗ್ಗೆ ಮೇಮ್‌ಗಳು ಕೂಡಾ ವೈರಲ್‌ ಆಗಿದೆ.

 ಬಿಜೆಪಿ ಕಾಲೆಳೆದ ಕಾಂಗ್ರೆಸ್‌

ಬಿಜೆಪಿ ಕಾಲೆಳೆದ ಕಾಂಗ್ರೆಸ್‌

ಸೆಪ್ಟೆಂಬರ್‌ 26 ರಂದು ದಿ ನ್ಯೂಯಾರ್ಕ್ ಟೈಮ್ಸ್‌ ಮಾಡಿದ ವರದಿ ಇದಲ್ಲ, ಇಂತಹ ವರದಿಯನ್ನು ದಿ ನ್ಯೂಯಾರ್ಕ್ ಟೈಮ್ಸ್‌ ಮಾಡಿಲ್ಲ ಎಂದು ತಿಳಿಯುತ್ತಿದ್ದಂತೆ ಕಾಂಗ್ರೆಸ್‌ ಪಕ್ಷವು ಬಿಜೆಪಿಯ ವಿರುದ್ದ ವಾಗ್ದಾಳಿ ನಡೆಸಿದೆ. "ಕೆಲವು ಜನರು ಅಂತರಾಷ್ಟ್ರೀಯ ಮಾಧ್ಯಮವನ್ನು ಟೀಕಿಸುತ್ತಾರೆ ಮತ್ತು ಅದೇ ಹೆಸರಿನಲ್ಲಿ ಸುಳ್ಳು ಪ್ರಚಾರ ಮಾಡುತ್ತಾರೆ. ಇಂತಹ ಸುಳ್ಳು ಪ್ರಚಾರ ಮಾಡುವ 'ವಿಶೇಷ ಪಕ್ಷದ' ಜನರು ನಾಚಿಕೆಪಡಬೇಕು," ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

(ಒನ್‌ಇಂಡಿಯಾ ಸುದ್ದಿ)

Fact Check

ಕ್ಲೇಮು

ದಿ ನ್ಯೂಯಾರ್ಕ್ ಟೈಮ್ಸ್‌ ತನ್ನ ಮುಖಪುಟದಲ್ಲಿ ನರೇಂದ್ರ ಮೋದಿ ಚಿತ್ರ ಸಹಿತ ವರದಿ ಪ್ರಕಟ ಮಾಡಿದೆ. ಅದರಲ್ಲಿ ಮೋದಿ "ಭೂಮಿಯ ಕೊನೆಯ ಉತ್ತಮ ಭರವಸೆ" ಎಂದು ಹೇಳಿದೆ. "ವಿಶ್ವದ ಅತೀ ಪ್ರೀತಿಗೆ ಪಾತ್ರರಾದ ಹಾಗೂ ಶಕ್ತಿಯುತ ನಾಯಕ, ನಮ್ಮಗೆ ಹರಸಲು ಇ

ಪರಿಸಮಾಪ್ತಿ

ದಿ ನ್ಯೂಯಾರ್ಕ್ ಟೈಮ್ಸ್‌ ನರೇಂದ್ರ ಮೋದಿಯ ಬಗ್ಗೆ ಈ ವರದಿಯನ್ನು ಪ್ರಕಟ ಮಾಡಿಲ್ಲ. ಈ ಬಗ್ಗೆ ದಿ ನ್ಯೂಯಾರ್ಕ್ ಟೈಮ್ಸ್‌ ಸ್ಪಷ್ಟಣೆ ನೀಡಿದ್ದು, ಇದು ಸುಳ್ಳು ಎಂದು ಹೇಳಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: New York Times Image of Last Best Hope Modi On Front Page is Fake. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X