ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: 'ಕಚ್ಚಾ ಬಾದಮ್' ಗಾಯಕ ಭುವನ್ ಬಡ್ಯಾಕರ್‌ಗೆ ಭಾರತೀಯ ರೈಲ್ವೆಯಲ್ಲಿ ಕೆಲಸ

|
Google Oneindia Kannada News

'ಕಚ್ಚಾ ಬದಾಮ್' ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದವರು ಭುವನ್ ಬಡ್ಯಾಕರ್. ಅವರು ಬೀರ್ಭುಮ್ ಜಿಲ್ಲೆಯ ವಿವಿಧ ಹಳ್ಳಿಗಳಿಗೆ ಕಡಲೆಕಾಯಿ ಮಾರಾಟ ಮಾಡುವಾಗ ಖರೀದಿದಾರರನ್ನು ಆಕರ್ಷಿಸಲು ಹಾಡನ್ನು ರಚಿಸಿದರು. ಅವರ ಈ ಹಾಡನ್ನು ನಂತರ ರೀಮಿಕ್ಸ್ ಮಾಡಲಾಯಿತು ಮತ್ತು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಯಿತು. ಅದು ಈಗ 50 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ.

ಇತ್ತೀಚೆಗೆ ಭುವನ್ ಬಡ್ಯಾಕರ್ ರೈಲಿನಲ್ಲಿ ವಾಕಿ-ಟಾಕಿ ಮೂಲಕ ಮಾತನಾಡುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಜೊತೆಗೆ ಭಾರತೀಯ ರೈಲ್ವೆ ಅವರಿಗೆ "ರೈಲ್ವೆ ಮ್ಯಾನೇಜರ್" ಹುದ್ದೆಯನ್ನು ನೀಡಿದೆ ಎಂಬ ಸಂದೇಶದೊಂದಿದೆ ಅದನ್ನು ಹಂಚಿಕೊಳ್ಳಲಾಗಿದೆ.

Fact check: ಈ ದ್ವೇಷದ ಭಾಷಣ ಜಹಾಂಗೀರ್ಪುರಿ ಹಿಂಸಾಚಾರಕ್ಕೆ ಸಂಬಂಧಿಸಿದ್ದಾ? Fact check: ಈ ದ್ವೇಷದ ಭಾಷಣ ಜಹಾಂಗೀರ್ಪುರಿ ಹಿಂಸಾಚಾರಕ್ಕೆ ಸಂಬಂಧಿಸಿದ್ದಾ?

ಈ ವಿಡಿಯೋದಲ್ಲಿ ಬಿಳಿ ಸಮವಸ್ತ್ರಧಾರಿಯೊಬ್ಬ ರೈಲಿನ ಬಾಗಿಲ ಬಳಿ ನಿಂತು ವಾಕಿಟಾಕಿಯಲ್ಲಿ ಸೂಚನೆ ನೀಡುತ್ತಿರುವುದು ಕಂಡುಬಂದಿದೆ. ಆ ವ್ಯಕ್ತಿ ಬಡ್ಯಾಕರ್ ಅವರಂತೆ ಕಾಣುತ್ತಾರೆ. ವಾಕಿಟಾಕಿ ಮೂಲಕ ರೈಲು ಚಲಿಸುವಂತೆ ಸೂಚನೆ ನೀಡುತ್ತಾರೆ. ಆ ವ್ಯಕ್ತಿ ಇದನ್ನು ರೆಕಾರ್ಡ್ ಮಾಡುತ್ತಿದ್ದ ಒಬ್ಬ ವ್ಯಕ್ತಿಯನ್ನು ನೋಡಿ ಮುಗುಳ್ನಗುತ್ತಾರೆ. ಈ ಸಂಪೂರ್ಣ ಕಿರು ವಿಡಿಯೊದಲ್ಲಿ, "ಕಚ್ಚಾ ಬಾದಮ್" ಹಾಡು ಪ್ಲೇ ಆಗಿದೆ.

Fact Check: ‘Kachcha Badam’ Singer Bhuvan Badyakar Get Job in Indian Railways

ಫೇಸ್‌ಬುಕ್ ಬಳಕೆದಾರರು ಈ ವೀಡಿಯೊವನ್ನು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ, "ಕಚ್ಚಾ ಬಾದಮ್ ಹಾಡಿನ ಗಾಯಕನಿಗೆ ಈಗ ಕೆಲಸ ಸಿಕ್ಕಿದೆ. ಅವರು ರೈಲ್ವೇ ಮ್ಯಾನೇಜರ್ ಆಗಿದ್ದಾರೆ" ಎಂದು ಬರೆದಿದ್ದಾರೆ. ಈ ವಿಡಿಯೊ ಆರು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಬಿಳಿ ಸಮವಸ್ತ್ರದಲ್ಲಿದ್ದ ವ್ಯಕ್ತಿ ಭುವನ್ ಬಡ್ಯಾಕರ್ ಅಲ್ಲ ಎಂದು ಕಂಡುಹಿಡಿದಿದೆ. ಇದನ್ನು ಗಾಯಕ ಮತ್ತು ವಿಡಿಯೊ ಚಿತ್ರೀಕರಿಸಿದ ವ್ಯಕ್ತಿ ಇಬ್ಬರೂ ಖಚಿತಪಡಿಸಿದ್ದಾರೆ.

ಭಾರತೀಯ ರೈಲ್ವೇಯಿಂದ ಬಡ್ಯಾಕರ್ ನೇಮಕಗೊಂಡಿರುವ ಯಾವುದೇ ಸುದ್ದಿ ವರದಿಗಳಾಗಿಲ್ಲ. ಅವರ ಹಾಡು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಾಗಿನಿಂದಲೂ ಗಾಯಕ ಮಾಧ್ಯಮದಲ್ಲಿ ಸುದ್ದಿಯಲ್ಲಿದ್ದಾರೆ.

Fact Check: ‘Kachcha Badam’ Singer Bhuvan Badyakar Get Job in Indian Railways

ವೈರಲ್ ವಿಡಿಯೊವನ್ನು ಬಡ್ಯಾಕರ್ ಅವರಿಗೆ ಕಳುಹಿಸಿದಾಗ ಅವರು ನನಗೆ ಯಾವುದೇ ಭಾರತೀಯ ರೈಲ್ವೆಯಲ್ಲಿ ಉದ್ಯೋಗವನ್ನು ನೀಡಲಾಗಿಲ್ಲ ಎಂದು ಖಚಿತಪಡಿಸಿದ್ದಾರೆ. ಅವರು ತಮ್ಮದೇ ಆದ ಹಾಡುಗಳನ್ನು ಬರೆಯುವ ಮತ್ತು ರೆಕಾರ್ಡ್ ಮಾಡುವಲ್ಲಿ ನಿರತರಾಗಿದ್ದಾರೆ ಎಂದು ಹೇಳಿದ್ದಾರೆ.

'ಡೈಲಿ ಟ್ರಾವೆಲ್ ಹ್ಯಾಕ್' ಎಂಬುದು ಬಿಹಾರದ ಧನಂಜಯ್ ಕುಮಾರ್ ಅವರು ನಡೆಸುತ್ತಿರುವ ಟ್ರಾವೆಲ್ ಬ್ಲಾಗ್ ಆಗಿದೆ. 2021 ರ ಅಕ್ಟೋಬರ್‌ನಲ್ಲಿ ಬಿಹಾರದ ಬರೌನಿ ಜಂಕ್ಷನ್ ರೈಲು ನಿಲ್ದಾಣದಲ್ಲಿ ಈ ವಿಡಿಯೊವನ್ನು ಚಿತ್ರೀಕರಿಸಿದ್ದೇನೆ ಎಂದು ಕುಮಾರ್ ತಿಳಿಸಿದ್ದಾರೆ. "ವೀಡಿಯೊದಲ್ಲಿರುವ ಬಿಳಿ ಸಮವಸ್ತ್ರಧಾರಿ ಭುವನ್ ಬಡ್ಯಾಕರ್ ಅಲ್ಲ. ಅವನು ಅವನನ್ನು ಹೋಲುತ್ತಿದ್ದನು ಅಷ್ಟೇ. ಜೊತೆಗೆ ವಿಡಿಯೋದಲ್ಲಿ ತನ್ನ ಮಗ ದಕ್ಷ್ ಅನೇಕ ಬಾರಿ "ಚಲಿಯೇ" ಎಂದು ಕೂಗುತ್ತಿದ್ದನೆಂದು ಕುಮಾರ್ ಹೇಳಿದ್ದಾರೆ.

Fact Check: ‘Kachcha Badam’ Singer Bhuvan Badyakar Get Job in Indian Railways

ಬರೌನಿ ಜಂಕ್ಷನ್ ರೈಲು ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವ ರೈಲ್ವೇ ಗಾರ್ಡ್‌ಗಳಲ್ಲಿ ಒಬ್ಬರಾದ ಮನೋಜ್, ಈ ವಿಡಿಯೊದಲ್ಲಿ ಕಾಣುವ ವ್ಯಕ್ತಿ ರೈಲ್ವೇ ಗಾರ್ಡ್ ಕೆಕೆ ಮುರ್ಮು ಎಂದು ಹೇಳಿದ್ದಾರೆ. "ಅವರು ಆಗಾಗ್ಗೆ ಯುಪಿ-ಬಿಹಾರಕ್ಕೆ ಹೋಗುವ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಕಳೆದ ಗುರುವಾರವೂ ಅವರು ತೇಜಸ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬರೌನಿಗೆ ಬಂದಿದ್ದರು ಎಂದು ಅವರು ಹೇಳಿದರು.

ಹೀಗಾಗಿ, ವೀಡಿಯೊದಲ್ಲಿರುವ ವ್ಯಕ್ತಿ ಭುವನ್ ಬಡ್ಯಾಕರ್ ಅಲ್ಲ ಮತ್ತು ಅವರು ಭಾರತೀಯ ರೈಲ್ವೇಯಲ್ಲಿ ಉದ್ಯೋಗ ಪಡೆದಿದ್ದಾರೆ ಎಂಬ ಹೇಳಿಕೆಗಳು ಸುಳ್ಳು.

Fact Check

ಕ್ಲೇಮು

'ಕಚ್ಚಾ ಬಾದಮ್' ಗಾಯಕ ಭುವನ್ ಬಡ್ಯಾಕರ್‌ಗೆ ಭಾರತೀಯ ರೈಲ್ವೇಯಲ್ಲಿ ಕೆಲಸ ಸಿಕ್ಕಿದೆ

ಪರಿಸಮಾಪ್ತಿ

ನಮಗೆ ಭಾರತೀಯ ರೈಲ್ವೇಯಲ್ಲಿ ಕೆಲಸ ಸಿಕ್ಕಿಲ್ಲ ವೈರಲ್ ಸಂದೇಶ ತಪ್ಪಾಗಿದೆ ಎಂದು 'ಕಚ್ಚಾ ಬಾದಮ್' ಗಾಯಕ ಭುವನ್ ಬಡ್ಯಾಕರ್‌ ಸ್ಪಷ್ಟಪಡಿಸಿದ್ದಾರೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
The message that 'Kachcha Badam' singer Bhuvan Badakar has been offered a job in Indian Railways is viral. Learn the truth behind this viral photo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X