ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: 'ಈಶ್ವರ ಅಲ್ಲಾಹ್‌ ತೆರೋ ನಾಮ್‌' ಬದಲಿಗೆ 'ಜೈ ಶ್ರೀರಾಮ್‌'?, ವಿಡಿಯೋ ಹಿಂದಿನ ಸತ್ಯ

|
Google Oneindia Kannada News

ನವದೆಹಲಿ, ಅಕ್ಟೋಬರ್‌ 10: ಈ ತಿಂಗಳ ಆರಂಭದಲ್ಲಿ ದೇಶದಲ್ಲಿ ಮಹಾತ್ಮ ಗಾಂಧಿಜಿಯ 152 ನೇಯ ಜನ್ಮ ದಿನವನ್ನು ಅಂತಾರಾಷ್ಟ್ರೀಯ ಅಹಿಂಸೆಯ ದಿನವನ್ನಾಗಿ ಆಚರಣೆ ಮಾಡಲಾಗಿದೆ. ಆದರೆ ಇದೀಗ ಈ ದಿನ ಕಾರ್ಯಕ್ರಮದಲ್ಲಿ ಮಾಡಲಾದ ಭಜನೆಯಲ್ಲಿ 'ಈಶ್ವರ ಅಲ್ಲಾ ತೆರೋ ನಾಮ್‌' ಬದಲಿಗೆ 'ಜೈ ಶ್ರೀರಾಮ್‌' ಎಂದು ಹೇಳಲಾಗಿದೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಮಹಾತ್ಮ ಗಾಂಧಿಜಿಯ 152 ನೇಯ ಜನ್ಮ ದಿನವನ್ನು ಅಂತಾರಾಷ್ಟ್ರೀಯ ಅಹಿಂಸೆಯ ದಿನವನ್ನಾಗಿ ಆಚರಣೆ ಮಾಡಿದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಅವರ ''ರಘು ಪತಿ ರಾಘವ ರಾಜರಾಮ್‌" ಭಜನೆಯನ್ನು ಬಿಜೆಪಿ ಲೋಕ ಸಭಾ ಸಂಸದ ಹಾಗೂ ಗಾಯಕ ಹನ್ಸ್ ರಾಜ್ ಹನ್ಸ್ ಅವರು ಹಾಡಿದ್ದಾರೆ.

Fact Check: ನ್ಯೂಯಾರ್ಕ್ ಟೈಮ್ಸ್‌ ಮುಖಪುಟದಲ್ಲಿ ಮೋದಿ ಬಗ್ಗೆ ವರದಿ ಮಾಡಿಲ್ಲFact Check: ನ್ಯೂಯಾರ್ಕ್ ಟೈಮ್ಸ್‌ ಮುಖಪುಟದಲ್ಲಿ ಮೋದಿ ಬಗ್ಗೆ ವರದಿ ಮಾಡಿಲ್ಲ

ಈ ವಿಡಿಯೋವು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಹಾಗೆಯೇ 'ಈಶ್ವರ ಅಲ್ಲಾ ತೆರೋ ನಾಮ್‌' ಎಂಬ ("ಈಶ್ವರ ಹಾಗೂ ಅಲ್ಲಾಹ್‌ ಎಂಬುವುದು ದೇವರೆ ನಿನ್ನದೆ ಹೆಸರು") ಈ "ವಾಕ್ಯವನ್ನು ಈ ಭಜನೆಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ತೆಗೆದು ಹಾಕಿದೆ," ಎಂದು ಹೇಳಲಾಗುತ್ತಿದೆ. ಹಾಗೆಯೇ ಈ ವಾಕ್ಯದ ಬದಲಾಗಿ, "ಜೈ ಶ್ರೀರಾಮ್‌, ಸೀತಾ ರಾಮ್‌," ಎಂಬ ವಾಕ್ಯವನ್ನು ಈಗ ಸೇರಿಸಲಾಗಿದೆ ಎಂದು ಕೂಡಾ ನೆಟ್ಟಿಗರು ಹೇಳಿಕೊಂಡಿದ್ದಾರೆ.

Fact Check: Jai Sri Ram instead of Ishwar Allah Tero Naam, truth behind the video

ಇನ್ನು ಈ ವಿಡಿಯೋದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉಪಾಧ್ಯಕ್ಷ ಎಮ್‌ ವೆಂಕಯ್ಯ ನಾಯ್ಡು ಕೂಡಾ ಕಂಡು ಬಂದಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಶೀತಲ್‌ ಚೋಪ್ರಾ ಎಂಬವರು, "ಕೊನೆಯದಾಗಿ 'ರಘು ಪತಿ ರಾಘವ ರಾಜರಾಮ್‌' ಭಜನೆಯಿಂದ 'ಈಶ್ವರ ಅಲ್ಲಾ ತೆರೋ ನಾಮ್‌' ಅನ್ನು ತೆಗೆದು ಹಾಕಿ ಅದರ ಬದಲಾಗಿ ಈಗ 'ಜೈ ಶ್ರೀರಾಮ್‌, ಸೀತಾ ರಾಮ್‌' ಎಂದು ಸೇರಿಸಲಾಗಿದೆ. ಧನ್ಯವಾದಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ," ಎಂದು ಹೇಳಿದ್ದಾರೆ. ಈ ವಿಡಿಯೋದ ಸತ್ಯಾಸತ್ಯತೆಯ ಇಂಡಿಯಾ ಟುಡೇ ಆಂಟಿ ಫೇಕ್‌ ನ್ಯೂಸ್‌ ವಾರ್‌ ರೂಮ್‌ ಪರಿಶೀಲನೆ ನಡೆಸಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಭಜನೆಯ ವಿಡಿಯೋದ ಸಣ್ಣ ತುಣುಕಿನಲ್ಲಿ 'ಈಶ್ವರ ಅಲ್ಲಾ ತೆರೋ ನಾಮ್‌' ಇಲ್ಲದಿದ್ದರೂ ನಿಜವಾದ ವಿಡಿಯೋದಲ್ಲಿ ಅಂದರೆ ಸಂಪೂರ್ಣ ವಿಡಿಯೋದಲ್ಲಿ ಬಿಜೆಪಿ ಲೋಕ ಸಭಾ ಸಂಸದ ಹಾಗೂ ಗಾಯಕ ಹನ್ಸ್ ರಾಜ್ ಹನ್ಸ್ ಅವರು 'ಈಶ್ವರ ಅಲ್ಲಾ ತೆರೋ ನಾಮ್‌' ಎಂದು ಹಾಡಿರುವುದು ಕಂಡು ಬಂದಿದೆ.

ನವದೆಹಲಿಯ ಗಾಂಧಿ ಸ್ಮೃತಿಯಲ್ಲಿ ಪ್ರತಿ ವರ್ಷವೂ ಕುಡಾ ಅಕ್ಟೋಬರ್‌ 2 ರಂದು ಮಹಾತ್ಮ ಗಾಂಧಿಜಿ ಅವರ ಜನ್ಮ ದಿನದಂದು ಭಜನೆಯನ್ನು ಮಾಡಲಾಗುತ್ತದೆ. ಹಾಗೆಯೇ ಜನವರಿ 30 ರಂದು ಗಾಂಧಿಜಿಯ ಪುಣ್ಯತಿಥಿಯ ಹಿನ್ನೆಲೆ ಭಜನೆಯನ್ನು ಮಾಡಲಾಗುತ್ತದೆ. ಈಗ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಹಲವಾರು ಜನರು ಮಾಸ್ಕ್‌ ಅನ್ನು ಧರಿಸಿರುವುದು ನಾವು ಗಮನಿಸಬಹುದಾಗಿದೆ. ಇದರಿಂದಾಗಿ ಈ ವಿಡಿಯೋ ಇತ್ತೀಚಿನದ್ದು ಎಂಬುವುದು ಸ್ಪಷ್ಟವಾಗಿದೆ.

Fact Check: ದೇಶದಲ್ಲಿ ಹಿಂದೂ ದೇವಾಲಯ ಮಾತ್ರ ಜಿಎಸ್‌ಟಿ ಪಾವತಿಸಬೇಕೆ?Fact Check: ದೇಶದಲ್ಲಿ ಹಿಂದೂ ದೇವಾಲಯ ಮಾತ್ರ ಜಿಎಸ್‌ಟಿ ಪಾವತಿಸಬೇಕೆ?

ಕೀ ವರ್ಡ್ ಸರ್ಚ್ ಮಾಡುವ ಮೂಲಕ ಈ ವಿಡಿಯೋ ತುಣುಕಿನ ಸಂಪೂರ್ಣವಾದ ವಿಡಿಯೋವು ಅಕ್ಟೋಬರ್‌ 4 ರಂದು "Hans Raj Hans Live" ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವುದು ಕಂಡು ಬಂದಿದೆ. ಈ ಬಗ್ಗೆ ಚಾನೆಲ್‌ನಲ್ಲಿ ನೀಡಿರುವು ವಿವರಣೆ ಪ್ರಕಾರ ಇದು ಮಹಾತ್ಮ ಗಾಂಧಿಜಿಯ 152 ನೇಯ ಜನ್ಮ ದಿನವನ್ನು ಗಾಂಧಿ ಸ್ಮೃತಿಯಲ್ಲಿ ಮಾಡಲಾದ ಭಜನೆ ಆಗಿದೆ.

ಈ ವಿಡಿಯೋದ 1:52 ಹಾಗೂ 2 ನಿಮಿಷದ ನಡುವೆ ಹನ್ಸ್ ರಾಜ್ ಹನ್ಸ್ ಅವರು ಜೈ ಶ್ರೀರಾಮ್‌ ಅನ್ನು ನಾಲ್ಕು ಬಾರಿ ಹಾಡಿರುವುದು ಕಂಡು ಬಂದಿದೆ. ಆದರೆ ಮಹಾತ್ಮ ಗಾಂಧಿಯ ನಿಜವಾದ ಭಜನೆಯಲ್ಲಿ ಇಷ್ಟು ಬಾರಿ ಜೈ ಶ್ರೀ ರಾಮ್‌ ಎಂದು ಹೇಳುವುದಿಲ್ಲ. ಏನೇ ಆದರೂ ಈ ವಿಡಿಯೋದಲ್ಲಿ ಹನ್ಸ್ ರಾಜ್ ಹನ್ಸ್ ಅವರು 2:38 ನಿಮಿಷದಿಂದ 3:18 ನಿಮಿಷದ ಸಮಯದಲ್ಲಿ "ಈಶ್ವರ ಅಲ್ಲಾಹ್‌ ತೆರೋ ನಾಮ್‌, ಸಬ್‌ಕೋ ಸನ್ಮತಿ ದೇ ಭಗವಾನ್‌" (ಈಶ್ವರ ಅಲ್ಲಾಹ್‌ ನಿನ್ನ ಹೆಸರು, ಎಲ್ಲರಿಗೂ ಒಳ್ಳೆಯ ಬುದ್ಧಿ ನೀಡು ದೇವರೇ) ಎಂಬ ವಾಕ್ಯವನ್ನು ಹಾಡಿದ್ದಾರೆ.

ರಘುಪತಿ ರಾಘವ ರಾಜರಾಮ್‌ ಭಜನೆಯನ್ನು ಮೊದಲು ಶ್ರೀ ರಾಮ ರಾಮಾಯಣದಲ್ಲಿ ಲಕ್ಷ್ಮಣಾಚಾರ್ಯರು ಬರೆದಿದ್ದಾರೆ. ಬಳಿಕ ಮಹಾತ್ಮ ಗಾಂಧಿ ಇದನ್ನು ಬದಲಾವಣೆ ಮಾಡಿ, "ಈಶ್ವರ ಅಲ್ಲಾಹ್‌ ತೆರೋ ನಾಮ್‌, ಸಬ್‌ಕೋ ಸನ್ಮತಿ ದೇ ಭಗವಾನ್‌" ಎಂಬುವುದನ್ನು ಸೇರಿಸಿಕೊಂಡಿದ್ದಾರೆ. ಪ್ರಸ್ತುತ ಈ ಭಜನೆಯೇ ಜನಪ್ರಿಯವಾಗಿದೆ.

ಇನ್ನು ಈ ಸಂಪೂರ್ಣ ವಿಡಿಯೋವನ್ನು ನೋಡಿದಾಗ "ಈಶ್ವರ ಅಲ್ಲಾಹ್‌ ತೆರೋ ನಾಮ್‌, ಸಬ್‌ಕೋ ಸನ್ಮತಿ ದೇ ಭಗವಾನ್‌" ಎಂಬ ವಾಕ್ಯವನ್ನು ಈ ಭಜನೆಯಿಂದ ತೆಗೆದು ಹಾಕಿಲ್ಲ ಎಂಬುವುದು ಸ್ಪಷ್ಟವಾಗಿದೆ. ಹಾಗೆಯೇ ಈ ರೀತಿ ಹನ್ಸ್ ರಾಜ್ ಹನ್ಸ್ ಈ ವಾಕ್ಯವನ್ನು ಬಿಟ್ಟು ಭಜನೆ ಮಾಡಿದ್ದರೆ ದೊಡ್ಡ ಸುದ್ದಿಯಂತೂ ಆಗುತ್ತಿತ್ತು ಎಂಬುವುದು ಸ್ಪಷ್ಟ.

(ಒನ್‌ಇಂಡಿಯಾ ಸುದ್ದಿ)

Fact Check

ಕ್ಲೇಮು

'ಈಶ್ವರ ಅಲ್ಲಾಹ್‌ ತೆರೋ ನಾಮ್‌' ತೆಗೆದು ಹಾಕಲಾಗಿದೆ, 'ಜೈ ಶ್ರೀರಾಮ್‌, ಸೀತಾ ರಾಮ್‌' ಎಂದು ಸೇರಿಸಲಾಗಿದೆ.

ಪರಿಸಮಾಪ್ತಿ

'ಈಶ್ವರ ಅಲ್ಲಾಹ್‌ ತೆರೋ ನಾಮ್‌' ತೆಗೆದು ಹಾಕಲಾಗಿಲ್ಲ. ಸಂಪೂರ್ಣ ವಿಡಿಯೋದಲ್ಲಿ ಇದನ್ನು ಹಾಡಲಾಗಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: 'Jai Sri Ram' instead of 'Ishwar Allah Tero Naam', truth behind the video. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X