ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಪಂಜಾಬ್ ಸಿಎಂ ಆದ ಬಳಿಕ ವಿದ್ಯುತ್ ಕಂಬ ಹತ್ತಿದ್ರಾ ಚರಣಜಿತ್ ಸಿಂಗ್ ಚನ್ನಿ?

|
Google Oneindia Kannada News

ಚಂಡೀಗಢ, ಅಕ್ಟೋಬರ್ 22: ಸಾಮಾಜಿಕ ಜಾಲತಾಣದಲ್ಲಿ ಪ್ರಚಾರದ ದೃಷ್ಟಿಯಿಂದ ಅನೇಕ ರಾಜಕಾರಣಿಗಳ ವಿಡಿಯೋಗಳು ಹಾಗೂ ಫೋಟೋಗಳು ಸುಳ್ಳು ಸಂದೇಶಯೊಂದಿಗೆ ವೈರಲ್ ಆಗುತ್ತಲೇ ಇರುತ್ತವೆ. ಇಂಥಹ ತಪ್ಪು ಸಂದೇಶದೊಂದಿಗೆ ಪಂಜಾಬ್ ಸಿಎಂ ಫೋಟೋವೊಂದು ವೈರಲ್ ಆಗಿದೆ.

ಪಂಜಾಬ್‌ನ ಮೊಹಾಲಿಯ ಕುರಾಲಿಯಲ್ಲಿ ಸಿಎಂ ಸ್ವತಃ ಬಡವರಿಗೆ ವಿದ್ಯುತ್ ಅನ್ನು ಮರುಸ್ಥಾಪಿಸುತ್ತಿದ್ದಾರೆ ಎಂದು ಹೇಳುವುದರೊಂದಿಗೆ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರು ವಿದ್ಯುತ್ ಕಂಬದ ಮೇಲೆ ಹತ್ತಿದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ.

ಈ ಪೋಸ್ಟ್‌ನ ಶೀರ್ಷಿಕೆಯಲ್ಲಿ "ಪಂಜಾಬ್ ಸಿಎಂ ಚರಂಜಿತ್ ಚನ್ನಿ ಕುರಲಿ ಜನರಿಂದ ವಿದ್ಯುತ್ ಸಂಬಂಧಿತ ದೂರುಗಳನ್ನು ಪಡೆದರು. ಬಡವರು ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಂಡಿದೆ ಎಂದು ಚನ್ನಿಗೆ ಜನ ದೂರು ನೀಡಿದರು. ನಂತರ ಚನ್ನಿ ಸ್ಥಳಕ್ಕೆ ಭೇಟಿ ನೀಡಿ ಅವರು ಸ್ವತಃ ವಿದ್ಯುತ್ ಕಂಬವನ್ನು ಹತ್ತಿ ವಿದ್ಯುತ್ ಪುನಃಸ್ಥಾಪಿಸಿದರು" ಎಂದು ಬರೆಯಲಾಗಿದೆ.

 Fact Check: Is this photo of Punjab CM Channi climbing up an electricity pole is truth

ಆದರೆ ಈ ಫೋಟೋದ ಸಂದೇಶ ತಪ್ಪಾಗಿದೆ ಎಂದು ಇಂಡಿಯಾ ಟುಡೆ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ಕಂಡುಹಿಡಿದಿದೆ. ಈ ಪೋಟೋವನ್ನು 2016 ರಲ್ಲಿ ಚನ್ನಿ ಪಂಜಾಬ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ವರ್ಷಗಳ ಮೊದಲು ತೆಗೆಯಲಾಗಿದೆ.

ತನಿಖೆಯಿಂದ ಸತ್ಯ ಬಯಲು

ಪಂಜಾಬ್ ಕಾಂಗ್ರೆಸ್ಸಿನಲ್ಲಿ ಸಾಕಷ್ಟು ರಾಜಕೀಯ ಮನಸ್ತಾಪಗಳ ನಡುವೆ ಈ ಫೋಟೋ ವೈರಲ್ ಆಗಿದೆ. ಚನ್ನಿ ಈ ವರ್ಷ ಸೆಪ್ಟೆಂಬರ್ 20 ರಂದು ಪಂಜಾಬ್ ನ 16 ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದಾಗ್ಯೂ ವೈರಲ್ ಪೋಸ್ಟ್‌ನಲ್ಲಿ ಹೇಳಿರುವಂತೆ ಚನ್ನಿ ವಿದ್ಯುತ್ ಸಂಪರ್ಕವನ್ನು ಹತ್ತಿ ಕಡಿತಗೊಂಡಿರುವ ವಿದ್ಯುತ್ ಅನ್ನು ಮರುಸ್ಥಾಪಿಸುವ ಬಗ್ಗೆ ಯಾವುದೇ ಇತ್ತೀಚಿನ ವರದಿ ಕಂಡು ಬಂದಿಲ್ಲ. ವೈರಲ್ ಫೋಟೊವನ್ನು ರಿವರ್ಸ್ ಸರ್ಚ್ ಮಾಡಿದಾಗ 2016 ರಲ್ಲಿ ದಿ ಟ್ರಿಬ್ಯೂನ್‌ನ ವರದಿಯಲ್ಲಿ ಇದೇ ಫೋಟೋ ಕಂಡುಬಂದಿದೆ.

ಈ ವರದಿಯ ಪ್ರಕಾರ, ಫೋಟೋ ಜುಲೈ 27, 2016 ರಂದು ಚನ್ನಿ ವಿದ್ಯುತ್ ಕಂಬವನ್ನು ಹತ್ತಿ ಪಂಜಾಬ್‌ನ ರೂಪನಗರದ ಚಮ್ಕೌರ್ ಸಾಹಿಬ್‌ನಲ್ಲಿರುವ ಸಿಹೋನ್ ಮಜ್ರಾ ಗ್ರಾಮದಲ್ಲಿ ಜಲಮಂಡಳಿಗೆ ವಿದ್ಯುತ್ ಪೂರೈಕೆಯನ್ನು ಮರುಸ್ಥಾಪಿಸಿದರು. ಘಟನೆಯ ಸಮಯದಲ್ಲಿ ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿ ಮೈತ್ರಿ ಪಂಜಾಬ್ ನಲ್ಲಿ ಅಧಿಕಾರದಲ್ಲಿತ್ತು.

ಚನ್ನಿ ಪ್ರಕಾರ, ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್ 9.80 ಲಕ್ಷ ಮೊತ್ತದ ವಿದ್ಯುತ್ ಬಿಲ್ಲುಗಳನ್ನು ಪಾವತಿಸದ ಕಾರಣ ನಿವಾಸಿಗಳ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ ಪಂಜಾಬ್‌ನ ಪ್ರತಿ ಹಳ್ಳಿಯ ನೀರಿನ ಬಿಲ್‌ಗಳನ್ನು ಮನ್ನಾ ಮಾಡುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು. ಈ ಘಟನೆಯನ್ನು ದಿ ಹಿಂದೂಸ್ತಾನ್ ಟೈಮ್ಸ್ ಮತ್ತು ಟೈಮ್ಸ್ ಆಫ್ ಇಂಡಿಯಾ ಕೂಡ ವರದಿ ಮಾಡಿದೆ.

ಎಲೆಕ್ಟ್ರಿಕ್ ಡ್ಯೂಗಳನ್ನು ಮನ್ನಾ

ಪಂಜಾಬ್‌ನ ಹೊಸ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನಂತರ ಚನ್ನಿ ಅವರು ಬಡವರ ಎಲ್ಲಾ ಬಾಕಿ ವಿದ್ಯುತ್ ಮತ್ತು ನೀರಿನ ಬಿಲ್‌ಗಳನ್ನು ಮನ್ನಾ ಮಾಡಲಾಗುವುದು ಎಂದು ಚನ್ನಿ ಘೋಷಿಸಿದರು. ಅಕ್ಟೋಬರ್ 18, 2021 ರಂದು, 2 ಕಿ.ವ್ಯಾ ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವವರ ಪಾವತಿಸದ ವಿದ್ಯುತ್ ಬಾಕಿಯನ್ನು ಮನ್ನಾ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸಂಕೇತಿಸಲು ಚನ್ನಿ ವಿದ್ಯುತ್ ಬಿಲ್‌ಗಳ ಪ್ರತಿಗಳನ್ನು ಸುಟ್ಟರು.

ವರದಿಗಳ ಪ್ರಕಾರ, ಪಂಜಾಬ್ ಸರ್ಕಾರವು ಪೆನಾಲ್ಟಿ ಇಲ್ಲದೆ ತಮ್ಮ ಬಿಲ್‌ಗಳನ್ನು ಪಾವತಿಸಲು ಸಾಧ್ಯವಾಗದ ಗ್ರಾಹಕರಿಗೆ ವಿದ್ಯುತ್ ಪುನಃಸ್ಥಾಪಿಸಲು ನಿರ್ಧರಿಸಿದೆ. ಹೀಗಾಗಿ ವೈರಲ್ ಫೋಟೋ 2016 ರ ಘಟನೆಯಿಂದ ಬಂದದ್ದು ಎಂಬುದು ಸ್ಪಷ್ಟವಾಗಿದೆ. ಫೋಟೋ ಕ್ಲಿಕ್ಕಿಸಿದಾಗ ಚನ್ನಿ ಪಂಜಾಬ್ ಸಿಎಂ ಆಗಲಿ ಅಥವಾ ರಾಜ್ಯದಲ್ಲಿ ಕಾಂಗ್ರೆಸ್ ಆಗಲಿ ಅಧಿಕಾರದಲ್ಲಿರಲಿಲ್ಲ ಎನ್ನುವುದು ಸ್ಸಷ್ಟ.

Fact Check

ಕ್ಲೇಮು

ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರು ವಿದ್ಯುತ್ ಕಂಬದ ಮೇಲೆ ಹತ್ತಿ ವಿದ್ಯುತ್ ಮರುಸ್ಥಾಪಿಸಿದರು.

ಪರಿಸಮಾಪ್ತಿ

ಚರಣಜಿತ್ ಸಿಂಗ್ ಚನ್ನಿ ಅವರು ವಿದ್ಯುತ್ ಕಂಬದ ಮೇಲೆ ಹತ್ತಿ ವಿದ್ಯುತ್ ಮರುಸ್ಥಾಪಿಸಿದಾಗ ಸಿಎಂ ಆಗಿರಲಿಲ್ಲ. ಹಳೆಯ ಫೋಟೋ ವೈರಲ್ ಮಾಡಲಾಗಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A photograph of Punjab Chief Minister Charanjit Singh Channi climbing up an electricity pole is being circulated on social media with the claim that the CM is himself restoring electricity for the poor in Kurali in Punjab’s Mohali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X