ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ವೈರಲ್ ಫೋಟೋ ಬಾಂಗ್ಲಾ ವಿರುದ್ಧದ ಪ್ರತಿಭಟನೆಯದ್ದಾ?

|
Google Oneindia Kannada News

ಢಾಕಾ, ಅಕ್ಟೋಬರ್ 25: ಬಾಂಗ್ಲಾದೇಶದಲ್ಲಿ ಹಿಂದೂ ವಿರೋಧಿ ಹಿಂಸಾಚಾರದ ವಿರುದ್ಧ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಗಡಿಯುದ್ದಕ್ಕೂ ಭಾರೀ ಖಂಡನೆ ವ್ಯಕ್ತವಾಗಿದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಉದ್ದೇಶಿತ ದಾಳಿಗಳನ್ನು ವಿರೋಧಿಸಿ ಸಾವಿರಾರು ಜನರು ಇತ್ತೀಚೆಗೆ ಅಸ್ಸಾಂನ ಬರಾಕ್ ಕಣಿವೆಯಲ್ಲಿ ಜಮಾಯಿಸಿದರು. ಈ ನಡುವೆ ಅಸ್ಸಾಂನ ಎಲ್ಲೆಡೆಯಿಂದ ಹಿಂದುಗಳು ಬಾಂಗ್ಲಾದೇಶ ಗಡಿಯಲ್ಲಿ ಹಿಂಸಾಚಾರದ ವಿರುದ್ಧ ಪ್ರತಿಭಟಿಸಲು ಒಟ್ಟುಗೂಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಬೃಹತ್ ಸಮಾವೇಶದ ಚಿತ್ರ ವೈರಲ್ ಆಗಿದೆ.

ಬಂಗಾಳಿಯಲ್ಲಿನ ವೂರಲ್ ಸಂದೇಶ ಈ ರೀತಿ ಹೇಳುತ್ತದೆ. "ಅಸ್ಸಾಂ-ಬಾಂಗ್ಲಾದೇಶ ಗಡಿಯಲ್ಲಿ ಭಾರೀ ಉದ್ವಿಗ್ನತೆ! ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಸಾಮೂಹಿಕ ಹತ್ಯೆಯನ್ನು ವಿರೋಧಿಸಿ ಬರಾಕ್ ನಿಂದ ಗುವಾಹಟಿಯವರೆಗಿನ ಹಿಂದೂಗಳು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಹೀಗಾಗಿ ಭಾರತ-ಬಾಂಗ್ಲಾದೇಶದ ಗಡಿಯಲ್ಲಿ ಮತ್ತು ಗಡಿಯ ಸಮೀಪವಿರುವ ಮುಸ್ಲಿಂ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ರಾಮನಿಗೆ ನಮಸ್ಕಾರ. ಹಿಂದೂಗಳೇ ಎಚ್ಚೆತ್ತುಕೊಳ್ಳಿ. #ಬಾಂಗ್ಲಾದೇಶಿದಲ್ಲಿ ಹಿಂದೂಗಳನ್ನು ಉಳಿಸಿ" ಎನ್ನುವ ಹೇಳಿಕೆಯೊಂದಿಗೆ ಫೋಟೋವೊಂದನ್ನು ಶೇರ್ ಮಾಡಲಾಗಿದೆ.

ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ಈ ಫೋಟೋವನ್ನು ಕರ್ನಾಟಕದ ಮಂಗಳೂರು ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿಯವರು 2019 ರಲ್ಲಿ ಆಗಮಿಸಿದಾಗ ನಡೆದ ರ್ಯಾಲಿಯಲ್ಲಿ ತೆಗೆಯಲಾಗಿದೆ ಎಂದು ಕಂಡುಹಿಡಿದಿದೆ. ಅಲ್ಲದೆ ಅಸ್ಸಾಂ ಪೊಲೀಸರು ಇತ್ತೀಚೆಗೆ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಕಾರಣ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಮತ್ತು ಭಯೋತ್ಪಾದಕ ಸಂಘಟನೆ ಅಲ್-ಖೈದಾದಿಂದ ಸಂಭವನೀಯ ಭಯೋತ್ಪಾದಕ ದಾಳಿಗಳಾಗಿವೆಯೇ ಹೊರತು ಹಿಂದೂಗಳ ಮೇಲಿನ ದಾಳಿಯಲ್ಲ.

Fact Check: Is this photo from Assam Barak Valley protest?

ತನಿಖೆ

ವೈರಲ್ ಚಿತ್ರವನ್ನು ಹಲವಾರು ಟ್ವಿಟ್ಟರ್ ಬಳಕೆದಾರರು ಏಪ್ರಿಲ್ 2019 ರಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಳಕೆದಾರರು ಮಂಗಳೂರಿನ ನೆಹರು ಮೈದಾನದಲ್ಲಿ ಏಪ್ರಿಲ್ 13, 2019 ರಂದು ಪಿಎಂ ಮೋದಿಯನ್ನು ನೋಡಲು ನೆರೆದಿದ್ದ ಬೃಹತ್ ಜನಸಮೂಹದ ದೃಶ್ಯ ಎಂದು ಹೇಳಿಕೊಂಡಿದ್ದಾರೆ.

Fact Check: Is this photo from Assam Barak Valley protest?

ಸುದ್ದಿ ವರದಿಗಳ ಪ್ರಕಾರ, ಆ ವರ್ಷ ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ಅವರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು. ಮಾಧ್ಯಮಗಳು ಈ ವೇಳೆ ಇದೇ ರೀತಿಯ ಗುಂಪಿನ ಹಲವಾರು ಚಿತ್ರಗಳು ಮತ್ತು ವೀಡಿಯೊಗಳನ್ನು ಸಹ ಪ್ರಕಟಿಸಿವೆ. ಆದರೆ ವೈರಲ್ ಫೋಟೋ ಲಭ್ಯವಾಗಿಲ್ಲ. ವೈರಲ್ ಫೋಟೋ ಮಂಗಳೂರು ನೆಹರು ಮೈದಾನದೆಂದು ಹೇಳಲು ಮೈದಾನದ ಇನ್ನಿತರ ಫೋಟೋಗಳಿಗೆ ಹೋಲುತ್ತದೆ.

Fact Check: Is this photo from Assam Barak Valley protest?

ನೆಹರೂ ಮೈದಾನದ ಗೂಗಲ್ ಸ್ಟ್ರೀಟ್ ವ್ಯೂ ಇಮೇಜ್‌ನೊಂದಿಗೆ ವೈರಲ್ ಚಿತ್ರದಲ್ಲಿ ಕಂಡುಬರುವ ಕಟ್ಟಡ, ಮರಗಳು ಮತ್ತು ಇತರೆ ರಚನೆಗಳು ಹೋಲುತ್ತವೆ. ಆದರೆ ಈ ಚಿತ್ರದಲ್ಲಿರುವ ಬಹುಮಹಡಿ ಕಟ್ಟಡ ಮಾತ್ರ ಹೋಲಿಕೆಯಾಗುವುದಿಲ್ಲ. ಯಾಕೆಂದರೆ ವೈರಲ್ ಫೋಟೋ 2019 ರಲ್ಲಿ ತೆಗೆದದ್ದಾಗಿದೆ. ಆದರೆ ಗೂಗಲ್ ಸ್ಟ್ರೀಟ್ ವ್ಯೂ ಚಿತ್ರವನ್ನು ಸುಮಾರು ಎರಡು ವರ್ಷಗಳ ನಂತರ ಮಾರ್ಚ್ 2021 ರಲ್ಲಿ ಕ್ಲಿಕ್ ಮಾಡಲಾಗಿದೆ. ಆಗ ಕಟ್ಟಡ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಸದ್ಯ ಗಿರಮರಗಳು ಬೆಳಿದು ಕಟ್ಟಡ ಕಾಣಿಸುತ್ತಿಲ್ಲ. ಹೀಗಾಗಿ ವೈರಲ್ ಫೋಟೋದೊಂದಿಗೆ ಗೂಗಲ್ ಸ್ಟ್ರೀಟ್ ವ್ಯೂ ಚಿತ್ರವನ್ನು ಹೋಲಿಸಿ ನೋಡಿದರೆ ವ್ಯತ್ಯಾಸ ಕಾಣಿಸಬಹುದು.

Fact Check: Is this photo from Assam Barak Valley protest?

ವೈರಲ್ ಚಿತ್ರ

ಆದ್ದರಿಂದ ಭಾರೀ ಜನಸಮೂಹದ ವೈರಲ್ ಚಿತ್ರ ಅಸ್ಸಾಂನ ಪ್ರತಿಭಟನೆಯಿಂದ ಬಂದಿರುವುದಲ್ಲ ಎಂದು ದೃಢಪಡಿಸಲಾಗಿದೆ. ಇದನ್ನು 2019 ರಲ್ಲಿ ಮಂಗಳೂರಿನಲ್ಲಿ ನಡೆದ ಪಿಎಂ ಮೋದಿಯವರು ಭಾಗವಹಿಸಿದ ರ್ಯಾಲಿಯಲ್ಲಿ ತೆಗೆದುಕೊಳ್ಳಲಾಗಿದೆ.

Fact Check

ಕ್ಲೇಮು

ವೈರಲ್ ಫೋಟೋ ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೆದ ದಾಳಿ ಖಂಡಿಸಿ ಅಸ್ಸಾಂನಲ್ಲಿ ನಡೆದ ಪ್ರತಿಭಟನೆಯಲ್ಲ.

ಪರಿಸಮಾಪ್ತಿ

ಮಂಗಳೂರಿನಲ್ಲಿ ನಡೆದ ಪಿಎಂ ಮೋದಿಯವರು ಭಾಗವಹಿಸಿದ ರ್‍ಯಾಲಿಯಲ್ಲಿ ತೆಗೆದುಕೊಳ್ಳಲಾಗಿದ ಫೋಟೋವಾಗಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Thousands of people gathered at Assam’s Barak Valley recently to protest against the targeted attacks against minorities in Bangladesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X