ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಇದು ಬಾಂಗ್ಲಾದೇಶದ ವಿಗ್ರಹ ಧ್ವಂಸದ ವಿಡಿಯೋನಾ?

|
Google Oneindia Kannada News

ಢಾಕಾ, ಅಕ್ಟೋಬರ್ 20: ನವರಾತ್ ಬಾಂಗ್ಲಾದೇಶದಲ್ಲಿ ಹಿಂದು ದೇವಾಲಯಗಳ ಮೇಲೆ ದಾಳಿ, ದುರ್ಗಾ ಮೂರ್ತಿ ಧ್ವಂಸ, ದೇವಾಲಯಗಳ ಧ್ವಂಸ ಎನ್ನುವ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಈ ವೇಳೆ ಅಪಾರ ಹಿಂದೂ ದೇವಾಲಯಗಳು ಅಪಾರ ಆಸ್ತಿ ನಾಶ ಮಾಡಲಾಗಿದೆ ಎಂದು ಘಟನೆಗೆ ಸಂಬಂಧಿಸಿವೆ ಎನ್ನುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ. ಇದರಲ್ಲಿ ವ್ಯಕ್ತಿಯೊಬ್ಬರು ದೇವಾಲಯದೊಳಗೆ ವಿಗ್ರಹವನ್ನು ಒಡೆಯುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ.

ಈ ವಿಡಿಯೋ ಹಂಚಿಕೆ ವೇಳೆ ಢಾಕಾದಲ್ಲಿ ಹಿಂದೂಗಳ ಮತ್ತೊಂದು ಆರಾಧನಾ ಸ್ಥಳವನ್ನು ಧ್ವಂಸ ಮಾಡಲಾಗಿದೆ ಎಂದು ಹೇಳಲಾಗಿದೆ. ಮಾತ್ರವಲ್ಲದೇ ಹಲವಾರು ಫೇಸ್‌ಬುಕ್ ಬಳಕೆದಾರರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ.

ಈ ವೈರಲ್ ವಿಡಿಯೋ ನವರಾತ್ರಿಯಂದು ಬಾಂಗ್ಲಾದೇಶದಲ್ಲಾದ ದುರ್ಗಾ ಮೂರ್ತಿ ಧ್ವಂಸದ ವಿಡಿಯೋ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ವಿಡಿಯೋದಲ್ಲಿ ಆಂಕರ್ ತನ್ನ ಪರಿಚಯದ ನಂತರ, ಬಂಗಾಳಿ ಭಾಷೆಯಲ್ಲಿ ವಾಯ್ಸ್ಓವರ್ ಕಥೆಯನ್ನು ವಿವರಿಸಲಾಗಿದೆ ಮತ್ತು ದೇವಸ್ಥಾನಕ್ಕೆ ವ್ಯಕ್ತಿಯೊಬ್ಬ ಪ್ರವೇಶಿಸುವ ಸಿಸಿಟಿವಿ ದೃಶ್ಯಗಳನ್ನು ತೋರಿಸಲಾಗುತ್ತದೆ.

Fact check: Is this a video of Bangladesh idol vandalism?

ವೈರಲ್ ವಿಡಿಯೋದಲ್ಲಿ ವ್ಯಕ್ತಿಯೋರ್ವ ವಿಗ್ರಹದ ಮುಂದೆ ಸ್ವಲ್ಪ ಹೊತ್ತು ನಿಂತು ಬಳಿಕ ಗರ್ಭಗುಡಿಗೆ ನುಗ್ಗುತ್ತಾನೆ. ಆಶ್ಚರ್ಯವೆಂದರೆ ದೇವಸ್ಥಾನದಲ್ಲಿ ಅರ್ಚಕ ಇರುವಾಗಲೇ ವ್ಯಕ್ತಿ ದೇವಸ್ಥಾನಕ್ಕೆ ಆಗಮಿಸುತ್ತಾನೆ. ಆರ್ಚಕರಿಗೆ ಪ್ರಾರ್ಥನೆ ಮಾಡುವುದಾಗಿ ಹೇಳಿ ಕೈಮುಗಿದು ನಿಂತುಕೊಳ್ಳುತ್ತಾನೆ. ಬಳಿಕ ಅರ್ಚಕ ಕಣ್ಮರೆಯಾಗಿ ಹೋಗುತ್ತಿದ್ದಂತೆ ದೇವಾಲಯದೊಳಗಿನ ಕಾಳಿ ದೇವಿಯ ವಿಗ್ರಹವನ್ನು ಧ್ವಂಸಗೊಳಿಸುತ್ತಾನೆ. ಘಟನೆಯ ಬಗ್ಗೆ ಅರ್ಚಕ ವಿವರಿಸುವ ಧ್ವನಿ ಕೂಡ ಕೇಳಿಸುತ್ತದೆ.

ವೈರಲ್ ವಿಡಿಯೋದೊಂದಿಗೆ "ಇನ್ನೊಂದು ಢಾಕಾದ ಮಿರ್ಪುರದಲ್ಲಿ ಹಿಂದೂ ದೇವಾಲಯದ ಮೇಲೆ ನಡೆದ ದಾಳಿಯಾಗಿದೆ. ರಾಸೆದುಲ್ ಹಸನ್ ಎಂಬ ದುಷ್ಕರ್ಮಿ ಹಿಂದೂ ಎಂದು ಬಿಂಬಿಸಿಕೊಂಡು ದೇವಸ್ಥಾನ ಪ್ರವೇಶಿಸಿದ. ನಂತರ ಅವನು ದೇವಸ್ಥಾನದಲ್ಲಿರುವ ಮೂರ್ತಿಯನ್ನು ಧ್ವಂಸ ಮಾಡಿದನು" ಎಂದು ಬರೆಯಲಾಗಿದೆ.

AFWA ತನಿಖೆ

ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ಈ ಘಟನೆಯು ಎರಡು ವರ್ಷಕ್ಕಿಂತ ಹಳೆಯದು ಎಂದು ಕಂಡು ಹಿಡಿದಿದೆ. ಜೊತೆಗೆ ಇದು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿಡಿಯೋವಲ್ಲ್ ಎಂದು ಕಂಡುಹಿಡಿದಿದೆ.

ಇದೇ ಘಟನೆಯನ್ನು 2019 ರಲ್ಲಿ ಬಾಂಗ್ಲಾದೇಶದ ಕೆಲವು ನ್ಯೂಸ್ ಚಾನೆಲ್ ಗಳು ಈ ವರದಿ ಮಾಡಿರುವುದನ್ನು ಕಾಣಬಹುದು.

ಈ ವರದಿಗಳ ಪ್ರಕಾರ ಫೆಬ್ರವರಿ 28, 2019 ರಂದು ಒಬ್ಬ ವ್ಯಕ್ತಿ ತನ್ನನ್ನು ಮಿಥುನ್ ಚಕ್ರವರ್ತಿ ಎಂದು ಪರಿಚಯಿಸಿಕೊಂಡು ಮಿರ್ಪುರದ ಕಾಳಿ ದೇವಸ್ಥಾನವನ್ನು ಪ್ರವೇಶಿಸಿದನು. ತಾನು ಪ್ರಾರ್ಥನೆಗಳನ್ನು ಮಾಡುವುದಾಗಿ ಅರ್ಚಕರಿಗೆ ಹೇಳಿದನು. ಆ ವ್ಯಕ್ತಿ ವಿಗ್ರಹದ ಮುಂದೆ ಕೆಲವು ನಿಮಿಷಗಳ ಕಾಲ ಕೈಮುಗಿದು ನಿಂತು, ನಂತರ ಮುಖ್ಯ ದೇವಾಲಯದ ಒಳಗೆ ಹೋಗಿ ವಿಗ್ರಹವನ್ನು ಧ್ವಂಸಗೊಳಿಸಿದನು. ದೇವಸ್ಥಾನದ ಅರ್ಚಕರು ಆ ವ್ಯಕ್ತಿಯನ್ನು ಎದುರಿಸಿ ಆತನನ್ನು ಪೊಲೀಸರಿಗೆ ಒಪ್ಪಿಸಿದರು. ಆ ವ್ಯಕ್ತಿ ನಂತರ ತನ್ನ ಹೆಸರು ರಾಸೆದುಲ್ ಹಾಸನ್ ಎಂದು ಬಹಿರಂಗಪಡಿಸಿದನು.

ವೈರಲ್ ಕ್ಲಿಪ್ ಬಾಂಗ್ಲಾದೇಶ ನ್ಯೂಸ್ ಚಾನೆಲ್ "ಏಕಟರ್ ಟಿವಿ" ಯ ಆನ್ ಸ್ಕ್ರೀನ್ ಲೋಗೋವನ್ನು ಹೊಂದಿದೆ. ಫೆಬ್ರವರಿ 28, 2019 ರಂದು ಅಪ್‌ಲೋಡ್ ಮಾಡಿದ ಅದರ ಯೂಟ್ಯೂಬ್ ಚಾನೆಲ್‌ನಲ್ಲಿ ಮೂಲ ಸುದ್ದಿ ತುಣುಕನ್ನು ನೋಡಬಹುದು. ಮಿಥುನ್ ಚಕ್ರವರ್ತಿ ಎಂಬ ಹಿಂದೂ ವ್ಯಕ್ತಿಯಂತೆ ನಟಿಸಿ ದುಷ್ಕರ್ಮಿ ಢಾಕಾದ ಮಿರ್‌ಪುರ್‌ನಲ್ಲಿರುವ ಹಿಂದೂ ದೇವಾಲಯದ ಮೇಲೆ ಹೇಗೆ ದುಷ್ಕರ್ಮಿ ದಾಳಿ ಮಾಡಿದನೆಂಬುದರ ವಿವರಗಳನ್ನು ವೀಡಿಯೊ ವಿವರಣೆಯಲ್ಲಿ ನೀಡಲಾಗಿದೆ.

ಆದ್ದರಿಂದ ನವರಾತ್ರಿಯಂದು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಗುರಿಯಾಗಿಸಿಕೊಂಡ ದಾಳಿಗಳ ನಡುವೆ ಹಳೆಯ ವೀಡಿಯೊವನ್ನು ಇತ್ತೀಚಿನ ಘಟನೆಯಾಗಿ ಪ್ರಸಾರ ಮಾಡಲಾಗುತ್ತಿದೆ ಎಂದು ದೃಢೀಕರಿಸಬಹುದು.

Fact Check

ಕ್ಲೇಮು

ಬಾಂಗ್ಲಾದೇಶದಲ್ಲಿ ನವರಾತ್ರಿಯಂದು ಹಿಂದೂ ವಿಗ್ರಹಗಳ ಧ್ವಂಸ ಮಾಡಿದ ವಿಡಿಯೋ ವೈರಲ್

ಪರಿಸಮಾಪ್ತಿ

ಬಾಂಗ್ಲಾದೇಶದಲ್ಲಿ ನವರಾತ್ರಿಯಂದು ಹಿಂದೂ ವಿಗ್ರಹಗಳ ಧ್ವಂಸ ಮಾಡಿದ್ದಾರೆಂದು ಹಳೆಯ ವಿಡಿಯೋ ವೈರಲ್ ಮಾಡಲಾಗಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A number of videos have gone viral on the social networking site of the attack on Hindu temples in Bangladesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X