ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಆರೋಗ್ಯ ಸಚಿವಾಲಯ ಕೊರೊನಾ ನಿಧಿಯ ಅಡಿಯಲ್ಲಿ 5,000ರೂ. ನೀಡುತ್ತಿದೆಯೇ?

|
Google Oneindia Kannada News

ಕೊರೊನಾ ಸಂಬಂಧಿತ ಸುಳ್ಳು ಸುದ್ದಿಗಳು ಜನರ ನೆಮ್ಮದಿ ಹಾಳು ಮಾಡುವುದಿಲ್ಲದೆ ಮೋಸಕ್ಕೆ ಗುರಿ ಮಾಡುತ್ತಿವೆ. ಕೊರೊನಾ ಹೋಗಲಾಡಿಸಲು ಅಥವಾ ಹರಡದಂತೆ ತಡೆಗಟ್ಟಲು ಹಲವಾರು ಸುಳ್ಳು ಸುದ್ದಿಗಳನ್ನು ವೈರಲ್ ಮಾಡಲಾಗುತ್ತಿತ್ತು. ಆದರೀಗ ಕೊರೊನಾ ಹೆಸರೇಳಿ ಜನರ ಬಳಿ ಹಣ ಪೀಕುವಂತ ಘಟನೆಗಳು ನಡೆದಿವೆ. ಇತ್ತೀಚೆಗೆ ಕೋವಿಡ್-19 ನಿಧಿಯಡಿ ಭಾರತ ಸರ್ಕಾರ 5,000 ರೂಪಾಯಿಗಳನ್ನು ವಿತರಿಸುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸಂದೇಶವೊಂದು ಹರಿದಾಡುತ್ತಿದೆ. ಸಂದೇಶದ ಜೊತೆಗೆ, ಈ ಹಣವನ್ನು ಪಡೆಯಲು ವೈಯಕ್ತಿಕ ವಿವರಗಳನ್ನು ನಮೂದಿಸಲು ಕೇಳಲಾಗುತ್ತಿದೆ. ಇದನ್ನು ನಂಬಿ ಜನ ತಮ್ಮ ವೈಯಕ್ತಿಕ ಖಾತೆಗಳ ವಿವರಗಳನ್ನು ಹಂಚಿಕೊಂಡಲ್ಲಿ ಹಣ ಪೀಕುವ ಜಾಲ ಇದಾಗಿದೆ. ಆದರೆ ಈ ಸಂದೇಶ ತಪ್ಪಾಗಿದ್ದು ಇದನ್ನು ನಂಬದಿರಲು PIB (Press Information Bureau)ಸೂಚಿಸಿದೆ.

PIB ಸತ್ಯ ಪರಿಶೀಲನೆ

PIB ಇದೊಂದು ಹಗರಣ ಮತ್ತು ಅಂತಹ ಯಾವುದೇ ಸ್ಕೀಮ್ ಅಸ್ತಿತ್ವದಲ್ಲಿಲ್ಲ ಎಂದು ಸ್ಪಷ್ಟಪಡಿಸಿದೆ. PIB ತನ್ನ ಫ್ಯಾಕ್ಟ್-ಚೆಕಿಂಗ್ ಹ್ಯಾಂಡಲ್ @PIBFactCheck ಮೂಲಕ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಟ್ವೀಟ್ ಜನರಿಗೆ ಎರಡು ಕ್ರಮಗಳನ್ನೂ ಸೂಚಿಸಿದೆ. ಮೊದಲಿಗೆ, ಸಂದೇಶವನ್ನು ಯಾರಾದರೂ ಸ್ವೀಕರಿಸಿದರೆ ಅದನ್ನು ಯಾರಿಗೂ ಫಾರ್ವರ್ಡ್ ಮಾಡದಂತೆ ಅದು ಕೇಳಿದೆ. ಎರಡನೆಯದಾಗಿ, ಚಲಾವಣೆಯಲ್ಲಿರುವ ಲಿಂಕ್‌ನಲ್ಲಿ ಯಾವುದೇ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡದಂತೆ PIB ಜನರಿಗೆ ಸಲಹೆ ನೀಡಿದೆ. 2022 ರ ಜನವರಿ 15 ರವರೆಗೆ ಮಾತ್ರ ಸರ್ಕಾರದಿಂದ ಪರಿಹಾರವನ್ನು ನೀಡಲಾಗುತ್ತದೆ ಎಂದು ಸಂದೇಶದಲ್ಲಿ ಹೇಳಲಾಗಿದೆ. ಇದು ಕೂಡ ತಪ್ಪು ಮಾಹಿತಿಯಾಗಿದೆ. ಇಂತಹ ದುರುದ್ದೇಶಪೂರಿತ ಸಂದೇಶಗಳಿಗೆ ಯಾವುದೇ ಗಮನ ಕೊಡಬೇಡಿ ಮತ್ತು ಅವರ ವೈಯಕ್ತಿಕ ಮಾಹಿತಿಯ ಬಗ್ಗೆ ಜಾಗರೂಕರಾಗಿರಿ ಎಂದು ಜನರಿಗೆ ಸೂಚಿಸಲಾಗಿದೆ.

Fact Check: Is Health Ministry Giving Rs 5,000 Under Covid-19 Fund?

PIB ಮೂಲಕ ಸತ್ಯ-ಪರೀಕ್ಷೆ

PIB ಜನರು ನಕಲಿಯಾಗಬಹುದಾದ ಚಿತ್ರಗಳು, ವೀಡಿಯೊಗಳು ಮತ್ತು ಲೇಖನಗಳನ್ನು ಕಳುಹಿಸಲು ಅನುಮತಿಸುತ್ತದೆ. ಸಂದೇಶ ವಿಡಿಯೋ ಅಥವಾ ಫೋಟೋಗಳ ಆಧಾರ ಮೇಲೆ ಸತ್ಯ-ಪರೀಕ್ಷೆಯನ್ನು ನಡೆಸುತ್ತದೆ. ಜನರು ಈ ಕೆಳಗಿನ ಹಂತಗಳ ಮೂಲಕ ಸತ್ಯ-ಪರಿಶೀಲನೆಯನ್ನು ಮಾಡಬಹುದು.

www.factcheck.pib.gov.in ಗೆ ಹೋಗಿ ಮತ್ತು ಚಿತ್ರ ಅಥವಾ ವೀಡಿಯೊವನ್ನು ಅಪ್‌ಲೋಡ್ ಮಾಡಿ.

ಅಥವಾ ಚಿತ್ರ ಅಥವಾ ವೀಡಿಯೊವನ್ನು Whatsapp ಸಂಖ್ಯೆ +91-8799711259 ಗೆ ಸಂದೇಶದ ಮೂಲಕ ಕಳುಹಿಸಿ

ಅಥವಾ, ಇಮೇಲ್ ವಿಳಾಸ [email protected] ಗೆ ಇಮೇಲ್ ಮೂಲಕ ಫೈಲ್‌ಗಳನ್ನು ಕಳುಹಿಸಿ

Fact Check: Is Health Ministry Giving Rs 5,000 Under Covid-19 Fund?
ಕೊರೊನಾ ಲಾಕ್‌ಡೌನ್

ಇತ್ತೀಚೆಗೆ ವಿವಿಧ ಯುಟ್ಯೂಬ್ ಚಾನೆಲ್‌ಗಳು COVID-19 3ನೇ ಅಲೆಯಿಂದಾಗಿ ಪ್ರಧಾನಿ ಮೋದಿ ಲಾಕ್‌ಡೌನ್ ಅನ್ನು ಘೋಷಣೆ ಮಾಡಿದ್ದಾರೆಂದು ವಿಡಿಯೊಗಳನ್ನು ಅಪ್‌ಲೋಡ್ ಮಾಡಿವೆ. ವೀಡಿಯೊಗಳ ಶೀರ್ಷಿಕೆಯಲ್ಲಿ COVID-19 ಸಾಂಕ್ರಾಮಿಕದ ಮೂರನೇ ಅಲೆಯ ಕಾರಣ ಲಾಕ್‌ಡೌನ್ ಅನ್ನು ಹೇರಲಾಗಿದೆ ಎಂದು ಹಿಂದಿಯಲ್ಲಿ ಬರೆಯಲಾಗಿದೆ. ವಿಡಿಯೋಗಳು ವ್ಯಾಪಕವಾಗಿ ಪ್ರಸಾರವಾಗುವುದರಿಂದ, ಪಿಐಬಿ ಫ್ಯಾಕ್ಟ್ ಚೆಕ್ ಅಂತರ್ಜಾಲದಲ್ಲಿ ಹೊರಹೊಮ್ಮುವ ವೀಡಿಯೊಗಳು ನಕಲಿ ಎಂದು ಸ್ಪಷ್ಟೀಕರಣವನ್ನು ನೀಡಿದೆ. ಜೊತೆಗೆ ಇಂತಹ ನಕಲಿ ವೀಡಿಯೊಗಳು ಅಥವಾ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳದಂತೆ ಸಲಹೆ ನೀಡಿದೆ.


ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಎಚ್ಚರಿಕೆ

ಕಳೆದ ವರ್ಷ ಇಂತಹ ಚಟುವಟಿಕೆಯಲ್ಲಿ ತೊಡಗುವ ಜಾಲತಾಣಗಳನ್ನು ಗುರುತಿಸಿ ದಂಡಿಸಲಾಗುವುದು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಎಚ್ಚರಿಕೆಯ ಸುತ್ತೋಲೆ ಹೊರಡಿಸಿದೆ.''ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ ಸೆಕ್ಷನ್‌ 2(1)(ಡಬ್ಲ್ಯು) ಅಡಿಯಲ್ಲಿಸೂಚಿಸಲಾಗಿರುವ ನಿಯಮಾವಳಿಗಳಿಗೆ ಎಲ್ಲಾ ಜಾಲತಾಣಗಳು ಬದ್ದವಾಗಿರಬೇಕು. ಕಾಯಿದೆ ಉಲ್ಲಂಘನೆಯನ್ನು ಸರಕಾರ ಸಹಿಸುವುದಿಲ್ಲ. ಸಾಮಾಜಿಕ ಮಾಧ್ಯಮಗಳು ಬಳಕೆದಾರರ ಉಪಯೋಗಕ್ಕೆ ಸೀಮತವಾಗಿರಬೇಕೆ ವಿನಾ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹರಡಿ ಸಮಾಜದ ಸ್ವಾಸ್ಥ್ಯ ಕದಡಲು ಆಸ್ಪದ ನೀಡಬಾರದು. ಕೊರೊನಾ ಕುರಿತು ಯಾವುದೇ ಸುಳ್ಳು ಮಾಹಿತಿ ಹರಡಿದರೂ ಅಂಥವರ ವಿರುದ್ದ ಕಾನೂನು ಶಿಸ್ತು ಕ್ರಮ ಕೈಗೊಳ್ಳಲಾಗುವುದು,'' ಎಂದು ಸಚಿವಾಲಯ ಎಚ್ಚರಿಸಿದೆ. ಆದರೂ ಸಾಮಾಜಿಕ ಜಾಲತಾಣದಲ್ಲಿ ಇಂಥಹ ಸುಳ್ಳು ಸಂದೇಶಗಳನ್ನು ಹಂಚಿಕೊಳ್ಳಳಾಗುತ್ತಿದೆ.

Fact Check

ಕ್ಲೇಮು

ಆರೋಗ್ಯ ಸಚಿವಾಲಯ ಕೊರೊನಾ ನಿಧಿಯ ಅಡಿಯಲ್ಲಿ 5,000ರೂಪಾಯಿ ನೀಡುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿಬಿಡಲಾಗಿದೆ.

ಪರಿಸಮಾಪ್ತಿ

PIB ಇದೊಂದು ಹಗರಣ ಮತ್ತು ಅಂತಹ ಯಾವುದೇ ಸ್ಕೀಮ್ ಅಸ್ತಿತ್ವದಲ್ಲಿಲ್ಲ ಎಂದು ಸ್ಪಷ್ಟಪಡಿಸಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A message has been circulating on social media saying that the government of India is distributing Rs 5,000 under the Covid-19 fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X