ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಈರುಳ್ಳಿ ಮೇಲೆ ಫ್ರಿಜ್‌ನ ಒಳಗೆ ಕಂಡುಬರುತ್ತಾ ಬ್ಲ್ಯಾಕ್ ಫಂಗಸ್?

|
Google Oneindia Kannada News

ನವದೆಹಲಿ, ಜೂನ್ 2: ದೇಶಾದ್ಯಂತ ಕೊರೊನಾ ವೈರಸ್ ಅಲೆಯ ಉತ್ತಂಗದಲ್ಲಿರಬೇಕಾದರೆ ಭಾರತಕ್ಕೆ ಮತ್ತೊಂದು ಆಘಾತ ನೀಡಿದ್ದು ಬ್ಲ್ಯಾಕ್ ಫಂಗಸ್. ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡ ಕೆಲ ರೋಗಿಗಳಲ್ಲಿ ಈ ಫಂಗಸ್ ಕಾಣಿಸಿಕೊಂಡು ಗಂಭೀರ ಪರಿಣಾಮವನ್ನು ಉಂಟು ಮಾಡುತ್ತಿದೆ. ಮ್ಯೂಕೋರ್ಮೈಕೋಸಿಸ್ ಎಂಬ ಈ ಶಿಲೀಂಧ್ರದ ಕಾರಣದಿಂದಾಗಿ ಸಾಕಷ್ಟು ಜನರು ಭಾರತದಲ್ಲಿ ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ.

ಇಂತಾ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕೆಲ ಸುದ್ದಿಗಳು ಜನರನ್ನು ಆತಂಕಕ್ಕೆದೂಡಿದೆ. ಅಡುಗೆ ಮನೆಯಲ್ಲಿ ನಿತ್ಯವೂ ಬಳಕೆ ಮಾಡುವ ಈರುಳ್ಳಿ ಮುಂತಾದ ತರಕಾರಿಗಳಲ್ಲಿ ಮೇಲೆ ಮತ್ತು ಫ್ರಿಜ್‌ನ ಒಳಗೆ ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್ ಕಾಣಿಸಿಕೊಳ್ಳುತ್ತದೆ ಎಂಬ ಸಂದೇಶಗಳು ಹರಿದಾಡುತ್ತಿದೆ.

ಕೊರೊನಾ ಲಸಿಕೆ ಪ್ರಕ್ರಿಯೆ ಬಗ್ಗೆ ಮಿಥ್ಯೆಗಳು ಮತ್ತು ವಾಸ್ತವಾಂಶಗಳುಕೊರೊನಾ ಲಸಿಕೆ ಪ್ರಕ್ರಿಯೆ ಬಗ್ಗೆ ಮಿಥ್ಯೆಗಳು ಮತ್ತು ವಾಸ್ತವಾಂಶಗಳು

ಆದರೆ ಈ ಬಗ್ಗೆ ತಜ್ಞರು ಸ್ಪಷ್ಟನೆಯನ್ನು ನೀಡಿದ್ದಾರೆ. ಈರುಳ್ಳಿ ಮುಂತಾದ ತರಕಾರಿಗಳ ಮೇಲೆ ಕಾಣಿಸಿಕೊಳ್ಳುವ ಮತ್ತು ಫ್ರಿಜ್ ನ ಒಳಗೆ ಕಂಡು ಬರುವ ಕಪ್ಪು ವಸ್ತುವಿಗೂ ಮ್ಯೂಕೋರ್ಮೈಕೋಸಿಸ್ ಶಿಲೀಂದ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

Fact Check: Is black mold inside refrigerators and on onions are causing mucormycosis?

ಫ್ರಿಜ್‌ನಲ್ಲಿ ಕಂಡುಬರುವ ಈ ಫಂಗಸ್ ರೂಪದ ವಸ್ತುವನ್ನು ಸ್ಟಾಕೈಬೋಟ್ರೀಸ್ ಚಾರ್ಟೇರಮ್(Stachybotrys chartarum) ಎಂದು ಕರೆಯಲಾಗುತ್ತದೆ. ಇವುಗಳಿಂದ ನಿರ್ಷ್ಟವಾಗಿ ಯಾವ ಪರಿಣಾಮವಾಗುತ್ತದೆ ಎಂಬ ಉಲ್ಲೇಖಗಳು ಇಲ್ಲ. ಆದರೆ ಇವುಗಳು ಕಂಡು ಬಂದಲ್ಲಿ ಅವುಗಳನ್ನು ಸ್ವಚ್ಚಗೊಳಿಸಬೇಕು ಎನ್ನುತ್ತಾರೆ ತಜ್ಞರು.

Recommended Video

ಕೊರೊನ ವ್ಯಾಕ್ಸಿನ್ ಹಾಕ್ಸಿಲ್ಲ ಅಂದ್ರೆ ಸಂಬಳ ಕಟ್ | Oneindia Kannada

ಇನ್ನು ಈರುಳ್ಳಿ ಮುಂತಾದ ತರಕಾರಿಗಳಲ್ಲಿ ಕಂಡು ಬರುವ ಈ ಕಪ್ಪು ಬಣ್ಣದ ವಸ್ತು ಶಿಲೀಂದ್ರವೇ ಆಗಿದ್ದರೂ ಈಗಾಗಲೇ ಹೇಳಿದಂತೆ ಆತಂಕವನ್ನು ಹುಟ್ಟಿಸಿರುವ ಬ್ಲ್ಯಾಕ್ ಫಂಗಸ್ ಅಲ್ಲ. ಇದು ಮಣ್ಣಿನಲ್ಲಿ ಕಂಡು ಬರುವ ಸಾಮಾನ್ಯವಾದ ಒಂದು ಫಂಗಸ್ ಆಗಿದೆ. ಆದರೆ ಇವುಗಳು ಕೂಡ ಅಪರೂಪಕ್ಕೆ ಎಂಬಂತೆ ಕೆಲ ಬಾರಿ ಸಣ್ಣ ದುಷ್ಪರಿಣಾಮಗಳನ್ನು ಬೀರುವ ಸಾಧ್ಯತೆಯಿರುತ್ತದೆ. ಹಾಗಾಗಿ ಈರುಳ್ಳಿ ಮುಂತಾದ ತರಕಾರಿಗಳನ್ನು ಸೇವಿಸುವಾಗಿ ಚೆನ್ನಾಗಿ ತೊಳೆದು ಸೇವಿಸುವುದು ಅಗತ್ಯವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

Fact Check

ಕ್ಲೇಮು

ಈರುಳ್ಳಿ ಮೇಲೆ ಫ್ರಿಜ್‌ನ ಒಳಗೆ ಇರುವ ಕಪ್ಪು ವಸ್ತುಗಳೇ ಬ್ಲ್ಯಾಕ್ ಫಂಗಸ್

ಪರಿಸಮಾಪ್ತಿ

ಈರುಳ್ಳಿ ಮೇಲೆ ಕಂಡು ಬರುವ ಕಪ್ಪು ವಸ್ತುವಿಗೂ ಮ್ಯೂಕೋರ್ಮೈಕೋಸಿಸ್‌ಗೂ ಯಾವುದೇ ಸಂಬಂಧವಿಲ್ಲ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: Is black mold inside refrigerators and on onions are causing mucormycosis. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X