ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಮೋದಿ ಹೇಳಿದಂತೆ ಭಾರತದ ಇತಿಹಾಸದಲ್ಲಿ ಲಸಿಕೆ ಕೊರತೆ ಇತ್ತೇ?

By ಒನ್‌ಇಂಡಿಯಾ ಡೆಸ್ಕ್‌
|
Google Oneindia Kannada News

ನವದೆಹಲಿ, ಜೂನ್ 08: ಪ್ರಧಾನಿ ನರೇಂದ್ರ ಮೋದಿಯವರು ಭಾಷಣದಲ್ಲಿ ಹೇಳಿದಂತೆ ಭಾರತದ ಇತಿಹಾಸದಲ್ಲಿ ಲಸಿಕೆಯ ಕೊರತೆ ಇತ್ತು ಎಂಬುದು ಸುಳ್ಳು ಎಂಬುದು ತಿಳಿದುಬಂದಿದೆ.

'ದಿ ಹಿಂದು'ವಿನಲ್ಲಿ ಬರೆದ ಫ್ಯಾಕ್ಟ್‌ ಚೆಕ್‌ನಲ್ಲಿ ಈ ಕುರಿತು ವಿವರಣೆ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಮಾಡಿದ ಭಾಷಣದಲ್ಲಿ ಸಿಡುಬು, ಹೆಪಟೈಟಿಸ್ ಬಿ ಹಾಗೂ ಪೋಲಿಯೋ ಲಸಿಕೆಗಳನ್ನು ವಿದೇಶದಿಂದ ಖರೀದಿಸಲು ದಶಕಗಳೇ ಕಾಯಬೇಕಾಗುತ್ತಿತ್ತು, ಬೇರೆ ದೇಶಗಳಲ್ಲಿ ಕೊರೊನಾ ಲಸಿಕೆ ಉತ್ಪಾದನೆ ಪೂರ್ಣಗೊಂಡಾಗ ನಮ್ಮ ದೇಶದಲ್ಲಿ ಪ್ರಾರಂಭವಾಗುತ್ತಿತ್ತು ಎಂದು ಹೇಳಿರುವುದು ಸತ್ಯಕ್ಕೆ ದೂರವಾದದ್ದು ಎಂದು ಹೇಳಲಾಗಿದೆ.

ಜೂನ್ 21ರಿಂದ ರಾಜ್ಯಗಳಿಗೆ ಕೇಂದ್ರದಿಂದಲೇ ಉಚಿತ ಲಸಿಕೆ ಪೂರೈಕೆ: ಮೋದಿಜೂನ್ 21ರಿಂದ ರಾಜ್ಯಗಳಿಗೆ ಕೇಂದ್ರದಿಂದಲೇ ಉಚಿತ ಲಸಿಕೆ ಪೂರೈಕೆ: ಮೋದಿ

ಭಾರತವು ಸ್ವಾತಂತ್ರ್ಯಕ್ಕಿಂತ ಮೊದಲು ಸ್ಥಳೀಯವಾಗಿ ಲಸಿಕೆಗಳನ್ನು ತಯಾರಿಸಿದ ಉದಾಹರಣೆಗಳಿವೆ ಇದರ ಬಗ್ಗೆ ದಾಖಲೆಗಳಿವೆ ಎಂದು ವರದಿ ಮಾಡಲಾಗಿದೆ.ಲಸಿಕೆಗಳನ್ನು ತೆಗೆದುಕೊಳ್ಳುವಲ್ಲಿ ಹಲವು ಸವಾಲುಗಳು ಎದುರಾಗಿದ್ದರೂ, ಲಭ್ಯತೆಯ ಕೊರತೆ ಇರಲಿಲ್ಲ.

 Fact Check: Indian Vaccine Hystory Shows Did Not Lack Access To Vaccines As Claimed By PM Modi

ಇನ್ನು ಸಿಡುಬು ಔಷಧದ ಬಗ್ಗೆ ಮಾತನಾಡುವುದಾದರೆ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್‌ನಲ್ಲಿ 2012ರಲ್ಲಿ ಡಾ. ಚಂದ್ರಕಾಂತ್ ಲಹಾರಿಯಾ ಪ್ರಕಟಿಸಿದ ವರದಿ ಪ್ರಕಾರ 1802ರಲ್ಲಿ ಮೂರು ವರ್ಷದ ಭಾರತೀಯರಿಗೆ ಮೊದಲು ಲಸಿಕೆಯನ್ನು ನೀಡಲಾಯಿತು.

1850ರವರೆಗೆ ಭಾರತದಲ್ಲಿ ಸಿಡುಬಿನ ಲಸಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು ಆದರೆ, ಅವುಗಳನ್ನು ಕಾಪಾಡುವುದೇ ದೊಡ್ಡ ಸವಾಲಾಗಿತ್ತು.''1944-1945ರ ಅವಧಿಯಲ್ಲಿ ಅತಿ ಹೆಚ್ಚು ಸಿಡುಬು ಪ್ರಕರಣಗಳು ವರದಿಯಾಗಿತ್ತು, ಎರಡನೇ ಮಹಾಯುದ್ಧ ಮುಗಿದ ಬಳಿಕ ಸಿಡುಬು ಲಸಿಕೆ ಬಗ್ಗೆ ಮತ್ತೆ ಗಮನಹರಿಸಲಾಯಿತು. ಬಳಿಕ ಕಡಿಮೆಯಾಯಿತು, 1947ರಲ್ಲಿ ಸಿಡುಬು ಲಸಿಕೆಗಳ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಿತ್ತು'' ಎಂದು ಡಾ. ಲಹರಿಯಾ ಹೇಳುತ್ತಾರೆ.

ಇನ್ನು ಭಾರತದಲ್ಲಿ ಪೋಲಿಯೋ ಲಸಿಕೆ ಇತಿಹಾಸವು ಜಟಿಲವಾಗಿದೆ, ಪೋಲಿಯೋ ಸಂಶೋಧನೆ, ಸಾಂಕ್ರಾಮಿಕ ರೋಗಶಾಸ್ತ್ರ, ಸೋಂಕು ತಡೆಗಟ್ಟುವಿಕೆ, ಪೋಲಿಯೋ ಲಸಿಕೆ ಎರಡರ ತಯಾರಿಯಲ್ಲಿ ಭಾರತ ಎಡವಿತ್ತು ಎಂದು 2013ರಲ್ಲಿ ಎಂ.ವಿಪಿನ್ ಐಜೆಎಂಆರ್‌ನಲ್ಲಿ ಬರೆದಿದ್ದರು.

Fact Check

ಕ್ಲೇಮು

ಭಾರತದ ಇತಿಹಾಸದಲ್ಲಿ ಲಸಿಕೆ ಕೊರತೆ ಎದುರಿಸಲಾಗಿತ್ತು

ಪರಿಸಮಾಪ್ತಿ

ಭಾರತದ ಇತಿಹಾಸದಲ್ಲಿ ಯಾವುದೇ ಲಸಿಕೆಯ ಕೊರತೆ ಎದುರಾಗಿರಲಿಲ್ಲ ಎಂದು ದಿ ಹಿಂದು ಪ್ರಕಟಿಸಿದ ಫ್ಯಾಕ್ಟ್‌ಚೆಕ್‌ನಲ್ಲಿ ತಿಳಿಸಲಾಗಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Prime Minister Narendra Modi’s speech on Monday presented a view of India’s vaccination history that is at odds with the facts. “If you look at the history of vaccinations in India, whether it was a vaccine for smallpox, hepatitis B or polio, you will see that India would have to wait decades for procuring vaccines from abroad. When vaccination programmes ended in other countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X