ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಸಮುದ್ರದ ಆಳದಲ್ಲಿ ಪತ್ತೆಯಾದ ಹಿಂದೂ ವಿಗ್ರಹಕ್ಕೆ 5,000 ವರ್ಷಗಳ ಇತಿಹಾಸ!?

|
Google Oneindia Kannada News

ಬಾಲಿ, ಜುಲೈ 22: ಪುರಾತನ ಹಿಂದೂ ಧರ್ಮಕ್ಕೆ ಸೇರಿದ 5,000 ವರ್ಷಗಳಿಗಿಂತಲೂ ಹಳೆಯದಾದ ದೇವರ ಮೂರ್ತಿಗಳು ಸಮುದ್ರದ ಆಳದಲ್ಲಿ ಪತ್ತೆಯಾಗಿವೆ ಎಂದು ಹೇಳಲಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇಂಡೋನೆಷ್ಯಾದ ಬಾಲಿ ಸಮುದ್ರದ ಆಳದಲ್ಲಿ 5,000ಕ್ಕೂ ಹಳೆಯದಾದ ಶ್ರೀ ವಿಷ್ಣುವಿನ ಮೂರ್ತಿಗಳು ಪತ್ತೆಯಾಗಿವೆ ಎಂಬ ಅಡಿಬರಹವನ್ನು ಹೊಂದಿರುವ ಫೋಟೋಗಳು ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿವೆ. ಈಗ Nilesh Oak ji ಪ್ರಕಾರ, "ಮಹಾಭಾರತವು ಸುಮಾರು 5500BC ಆಗಿದೆ. ಹಾಗಾದರೆ ಇಂಡೋನೆಷ್ಯಾ ಭಾರತದ ಯಾವ ರಾಜ್ಯವಾಗಿತ್ತು ಹಾಗೂ ಮಹಾಭಾರತದಲ್ಲಿ ಅದು ಭಾಗವಹಿಸಿತ್ತಾ ಎಂಬ ಪ್ರಶ್ನೆ ಉದ್ಭವಿಸುತ್ತದೆ," ಎಂದು ಉಲ್ಲೇಖಿಸಲಾಗಿದೆ.

ಹಳೆಯ 10, 5 ನಾಣ್ಯಗಳನ್ನು ಮಾರಿ ಸಾಕಷ್ಟು ಹಣ ಗಳಿಸಿ, ಷರತ್ತು ಅನ್ವಯ!ಹಳೆಯ 10, 5 ನಾಣ್ಯಗಳನ್ನು ಮಾರಿ ಸಾಕಷ್ಟು ಹಣ ಗಳಿಸಿ, ಷರತ್ತು ಅನ್ವಯ!

ಇಂಡೋನೆಷ್ಯಾದ ಬಾಲಿ ಸಮುದ್ರದ ಆಳದಲ್ಲಿ ಪತ್ತೆಯಾಗಿರುವ ಕಲ್ಲಿನ ಮೂರ್ತಿಗಳ ಹಿಂದೆ 5000 ವರ್ಷಗಳ ಹಿಂದಿನ ಇತಿಹಾಸವಿದೆಯಾ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿರುವ ಈ ಫೋಟೋಗಳು ಹಿಂದಿನ ಅಸಲಿ ಎಷ್ಟು, ನಕಲಿ ಎಷ್ಟು ಎಂಬುದರ ಬಗ್ಗೆ "ಇಂಡಿಯಾ ಟುಡೇ ಆಂಟಿ-ಫೇಕ್ ನ್ಯೂಸ್ ವಾರ್ ರೂಮ್" ವಿಸ್ತೃತ ವರದಿ ಮಾಡಿದೆ.

ಸಮುದ್ರದಲ್ಲಿ ಪತ್ತೆಯಾದ ಮೂರ್ತಿಗಳ ಹಿಂದಿನ ಕಥೆ

ಸಮುದ್ರದಲ್ಲಿ ಪತ್ತೆಯಾದ ಮೂರ್ತಿಗಳ ಹಿಂದಿನ ಕಥೆ

ಇಂಡೋನೆಷ್ಯಾದ ಪೆಮುಟೆರನ್ ಬೀಚ್ ಬಳಿ ಉತ್ತರ ಭಾಗದಲ್ಲಿರುವ ಬಾಲಿ ಸಮುದ್ರದಾಳದಲ್ಲಿ ಈ ಕಲ್ಲಿನ ಮೂರ್ತಿಗಳನ್ನು ಕೃತಕವಾಗಿ ರಚಿಸಲಾಗಿದೆ ಎಂಬುದು "ಇಂಡಿಯಾ ಟುಡೇ ಆಂಟಿ-ಫೇಕ್ ನ್ಯೂಸ್ ವಾರ್ ರೂಮ್" ನಡೆಸಿದ ಸತ್ಯಶೋಧನಾ ವರದಿಯಿಂದ ಗೊತ್ತಾಗಿದೆ. 2005ರಲ್ಲಿ ಹವಳದ ಬಂಡೆಯ ಸಂರಕ್ಷಣಾ ಯೋಜನೆಯ ಅಡಿಯಲ್ಲಿ ಕೆಲವು ಸ್ಕೂಬಾ ಡೈವರ್‌ಗಳು ಈ ಕಲ್ಲಿನ ಶಿಲ್ಪಗಳನ್ನು ರಚಿಸಿದ್ದಾರೆ.

ಸಮುದ್ರದಾಳದಲ್ಲಿ ಪತ್ತೆಯಾದ ಶಿಲ್ಪಗಳ ಸುತ್ತ ತನಿಖೆ

ಸಮುದ್ರದಾಳದಲ್ಲಿ ಪತ್ತೆಯಾದ ಶಿಲ್ಪಗಳ ಸುತ್ತ ತನಿಖೆ

ಇಂಡಿಯಾ ಟುಡೇ ಆಂಟಿ-ಫೇಕ್ ನ್ಯೂಸ್ ವಾರ್ ರೂಮ್ ಫೋಟೋಗಳ ಸುತ್ತ ತನಿಖೆ ಶುರು ಮಾಡಿತು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಸಮುದ್ರದಾಳದ ಶಿಲ್ಪಗಳಿಗೆ ಸಂಬಂಧಿಸಿದ ಫೋಟೋಗಳನ್ನು ಕೆಲವು ಕೀ ವರ್ಡ್ ಮೂಲಕ ಶೋಧಿಸಲಾಯಿತು. 2010 ರಿಂದಲೂ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿರುವುದು ಬೆಳಕಿಗೆ ಬಂದಿತು. "ಪಾಲ್ ಟರ್ಲಿ" ಎಂಬ ಯೂಟ್ಯೂಬ್ ಚಾನೆಲ್ "UnderWater Temple Garden Pemuteran Bali" ಹೆಸರಿನಲ್ಲಿ ಇದೇ ರೀತಿಯ ಸಮುದ್ರದಲ್ಲಿ ಪತ್ತೆಯಾದ ಶಿಲ್ಪಗಳಿಗೆ ಸಂಬಂಧಿಸಿದ ವಿಡಿಯೋವೊಂದರನ್ನು ಅಪ್ ಲೋಡ್ ಮಾಡಲಾಗಿತ್ತು.

ಈ ವಿಡಿಯೋದ ಜೊತೆಗೆ ಅದರ ಸಾರಾಂಶವನ್ನು ಸಹ ಉಲ್ಲೇಖಿಸಲಾಗಿತ್ತು. 2005ರಲ್ಲಿ ಬಂಡೆಗಳ ಉದ್ಯಾನವನ ನಿರ್ಮಾಣದ ಯೋಜನೆ ಅಡಿ ಪೆಮುಟೆರನ್ ಬೀಚ್ ಬಳಿ ಸಮುದ್ರದ ಆಳದಲ್ಲಿ 'ದೇವಸ್ಥಾನದ ಉದ್ಯಾನವನ', 'ದೇವಸ್ಥಾನದ ಗೋಡೆ'ಯನ್ನು ನಿರ್ಮಾಣ ಮಾಡಲಾಗಿತ್ತು.

ಕಾಲ್ಪನಿಕ ಕಥೆಗಳಿಗೆ ಯಾವುದೋ ಫೋಟೋಗಳ ಬಳಕೆ

ಕಾಲ್ಪನಿಕ ಕಥೆಗಳಿಗೆ ಯಾವುದೋ ಫೋಟೋಗಳ ಬಳಕೆ

ಟರ್ಲಿ ಎಂಬ ಯುಟ್ಯೂನ್ ಚಾನೆಲ್ ಇಂಡೋನೆಷ್ಯಾದ ಬಾಲಿ ಪ್ರದೇಶದಲ್ಲಿ ಇರುವ "ಸೀ ರೋವರ್ಸ್ ಡೈವ್ ಸೆಂಟರ್" ಎಂಬ ಪ್ರವಾಸೋದ್ಯಮ ಕಂಪನಿಗೆ ಸೇರಿದೆ. ಈ ಯೂಟ್ಯೂಬ್ ಚಾನೆಲ್ ಮಾಲೀಕ ತನ್ನ ಬ್ಲಾಗ್ ವೊಂದರಲ್ಲಿ ಹೀಗೆ ಬರೆದುಕೊಂಡಿದ್ದಾರೆ. "ತಾವು ಹಾಕುವ ಫೋಟೋಗಳನ್ನು ಪ್ರವಾಸಿಗರು ತಮ್ಮ ತಮ್ಮ ಕಾಲ್ಪನಿಕ ಕಥೆಗಳಿಗೆ ಹೋಲಿಕೆಯಾಗುವಂತೆ ಬಳಸಿಕೊಳ್ಳುತ್ತಾರೆ, ಸಮುದ್ರದಾಳದಲ್ಲಿ ಒಂದು ದೇವಾಲಯ ಎನ್ನುವುದೂ ಕೂಡ ಅಂಥದ್ದೇ ಒಂದು ಕಲ್ಪನೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ."

ಟರ್ಲಿ ಮಾಲೀಕ ಬರೆದ ಪೋಸ್ಟ್ ನಲ್ಲಿ ಏನಿದೆ?

ಟರ್ಲಿ ಮಾಲೀಕ ಬರೆದ ಪೋಸ್ಟ್ ನಲ್ಲಿ ಏನಿದೆ?

"ಯಾರೋ ಒಬ್ಬರು ನಾನು ಕ್ಲಿಕ್ಕಿಸಿದ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದು ಮೇಲಿಂದ ಮೇಲೆ ಪೋಸ್ಟ್ ಆಗಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಆ ಮೂಲಕ ಬಾಲಿಯ ಕರಾವಳಿಯಲ್ಲಿ ಪುರಾತತ್ವ ಶಾಸ್ತ್ರದ ಆವಿಷ್ಕಾರವಾಗಿದೆ. ಆದ್ದರಿಂದ ನಗರದಲ್ಲಿ ದಂತಕಥೆಯೊಂದು ಜನಿಸಿದ್ದು, ಸಾಮಾಜಿಕ ಜಾಲತಾಣಕ್ಕೆ ಧನ್ಯವಾದ," ಎಂದು ಬರೆದುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳಾಗ ಬಿಬಿಸಿ ನ್ಯೂಸ್ ಮತ್ತು ದಿ ಟೆಲಿಗ್ರಾಂ ಕೂಡ ಟರ್ಲಿಯ ಪೋಸ್ಟ್ ಮತ್ತು ಬಾಲಿಯ ಶಿಲ್ಪಗಳ ಬಗ್ಗೆ ವರದಿ ಮಾಡಿವೆ.

ಸಮುದ್ರದಲ್ಲಿ ಉದ್ಯಾನವನ ನಿರ್ಮಾಣದ ಪರಿಕಲ್ಪನೆ

ಇಂಡೋನೆಷ್ಯಾದ ಸಮುದ್ರದ ಆಳದಲ್ಲಿ ಒಂದು ಉದ್ಯಾನವನ ನಿರ್ಮಾಣ ಮಾಡುವ ಪರಿಕಲ್ಪನೆಯು ಆಸ್ಟ್ರೇಲಿಯಾ ಮೂಲದ ಉದ್ಯಮಿ ಕ್ರಿಸ್ ಬ್ರೌನ್ ರದ್ದು ಎಂದು ಟರ್ಲಿ ಉಲ್ಲೇಖಿಸಿದೆ. ಬಾಲಿಯ ರೀಫ್ ಸೀನ್ ಡೈವರ್ಸ್ ಕಂಪನಿಯ ಸಂಸ್ಥಾಪಕ ಕ್ರಿಸ್ ಬ್ರೌನ್ ಸಮುದ್ರದೊಳಗೆ ಶಿಲ್ಪಕಲೆಯನ್ನು ಮೂಡಿಸುವ ಕನಸು ಕಟ್ಟಿಕೊಂಡಿದ್ದರು ಎಂದು ಹೇಳಿದೆ. ಈ ರೆಸಾರ್ಟ್ ವೆಬ್ ಸೈಟ್ ಪ್ರಕಾರ, 2005ರಲ್ಲಿ ಮೊದಲ ಬಾರಿಗೆ ಸಮುದ್ರದಲ್ಲಿ ಹವಳದ ಬಂಡೆಯ ಸಂರಕ್ಷಣೆಗಾಗಿ ಮಾಡಲಾಯಿತು. "10 ಬೃಹತ್ ಕಲ್ಲಿನ ಪ್ರತಿಮೆ, ಕಲ್ಲಿನ ಬುನಾದಿ, 4 ಮೀಟರ್ ಎತ್ತರದ ಬ್ಯಾಲಿನೆಸ್ ಕ್ಯಾಂಡಿ ಬೆಂಟಾರ್ ಗೇಟ್ ವೇ, ಇದು 28 ಮೀಟರ್ ಆಳದಲ್ಲಿ ಪತ್ತೆಯಾಗಿರುವುದು ಇಂಜಿನಿಯರ್ಸ್ ಸಾಧನೆ," ಎಂದು ಉಲ್ಲೇಖಿಸಲಾಗಿದೆ.

Recommended Video

ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ | Oneindia Kannada

ವೈರಲ್ ಫೋಟೋ ಹಿಂದಿನ ಸತ್ಯ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಫೋಟೋಗಳು 5000 ವರ್ಷಗಳ ಹಿಂದಿನ ಶಿಲ್ಪಕಲೆಗೆ ಸಂಬಂಧಿಸಿದ್ದು ಅಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

Fact Check

ಕ್ಲೇಮು

ಇಂಡೋನೇಷ್ಯಾದ ಬಾಲಿಯಲ್ಲಿ ಸಮುದ್ರದ ಆಳದಲ್ಲಿ 5,000 ವರ್ಷಗಳಷ್ಟು ಹಳೆಯದಾದ ವಿಷ್ಣುವಿನ ವಿಗ್ರಹಗಳು ಕಂಡುಬಂದಿವೆ.

ಪರಿಸಮಾಪ್ತಿ

ಈ ಕಲ್ಲಿನ ವಿಗ್ರಹಗಳು ಉತ್ತರ ಬಾಲಿಯ ಪೆಮುಟೆರನ್ನಲ್ಲಿ ಕೃತಕವಾಗಿ ರಚಿಸಲಾದ ನೀರೊಳಗಿನ ಉದ್ಯಾನದ ಭಾಗವಾಗಿದೆ. ಹವಳದ ಬಂಡೆಯ ಸಂರಕ್ಷಣಾ ಯೋಜನೆಯ ಭಾಗವಾಗಿ 2005ರಲ್ಲಿ ಕೆಲವು ಸ್ಕೂಬಾ ಡೈವರ್‌ಗಳು ಈ ಶಿಲ್ಪಗಳನ್ನು ರಚಿಸಿದ್ದಾರೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
5,000-year-old Hindu idols found in the sea off Indonesia’s Bali gone viral on social media. According to fact check, these stone idols were created artificially in an underwater garden at Pemuteran in northern Bali. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X