• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fact check: ಅಖಿಲೇಶ್ ಸೋಲಿನಿಂದ ಮನನೊಂದು ಸಹೋದರರು ಆತ್ಮಹತ್ಯೆ?

|
Google Oneindia Kannada News

ಸತ್ಯಾಸತ್ಯತೆ: ಅಖಿಲೇಶ್ ಸೋಲಿನಿಂದ ಮನನೊಂದ ಪ್ರಯಾಗ್‌ರಾಜ್‌ನಲ್ಲಿ ಮೂವರು ಸಹೋದರರು ಆತ್ಮಹತ್ಯೆ? ವೈರಲ್ ಆದ ಫೋಟೋದ ಸತ್ಯ ಗೊತ್ತಾ

ಲಕ್ನೋ ಮಾರ್ಚ್ 14: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮತ್ತೆ ಸರ್ಕಾರ ರಚಿಸಲಿದ್ದಾರೆ. ಮಾರ್ಚ್ 10 ರಂದು ನಡೆದ ಚುನಾವಣಾ ಫಲಿತಾಂಶದಲ್ಲಿ ಭಾರತೀಯ ಜನತಾ ಪಕ್ಷವು 255 ಸ್ಥಾನಗಳನ್ನು ಪಡೆದರೆ, ಸಮಾಜವಾದಿ ಪಕ್ಷವು 111 ಸ್ಥಾನಗಳನ್ನು ಗಳಿಸಿದೆ. ಯುಪಿ ಚುನಾವಣಾ ಫಲಿತಾಂಶದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಹಲವು ಪೋಸ್ಟ್‌ಗಳು ವೈರಲ್ ಆಗುತ್ತಿದ್ದು, ಯುಪಿಯಲ್ಲಿ ಅಖಿಲೇಶ್ ಯಾದವ್ ಸೋಲಿನ ನಂತರ ಸಮಾಜವಾದಿ ಪಕ್ಷದ ಅನೇಕ ಕಾರ್ಯಕರ್ತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Fact check: ಮತದಾನ ಮಾಡದವರ ಖಾತೆಯಿಂದ ಹಣ ಕಡಿತವಾಗುವುದೇ? Fact check: ಮತದಾನ ಮಾಡದವರ ಖಾತೆಯಿಂದ ಹಣ ಕಡಿತವಾಗುವುದೇ?

ಅಖಿಲೇಶ್ ಯಾದವ್ ಸೋಲಿನಿಂದ ಹತಾಶರಾಗಿರುವ ಕಾರ್ಯಕರ್ತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹಲವಾರು ಫೇಸ್‌ಬುಕ್ ಬಳಕೆದಾರರು ಚಿತ್ರಗಳು ಮತ್ತು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಅಂತಹ ಮೂರು ಚಿತ್ರಗಳ ಕೊಲಾಜ್ ಅನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ಮೂರು ವಿಭಿನ್ನ ಚಿತ್ರಗಳಲ್ಲಿ ವಿಭಿನ್ನ ವ್ಯಕ್ತಿಗಳು ನೇಣಿಗೆ ನೇತಾಡುತ್ತಿರುವುದನ್ನು ತೋರಿಸಲಾಗಿದೆ. ಈ ಕೊಲಾಜ್ ಅನ್ನು ಹಂಚಿಕೊಂಡ ಬಳಕೆದಾರರು, ಅಖಿಲೇಶ್ ಯಾದವ್ ಸೋಲಿನಿಂದ ನಿರಾಶೆಗೊಂಡ ಮೂವರು ಸಹೋದರರು ಪ್ರಯಾಗ್‌ರಾಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಈ ಚಿತ್ರಗಳ ಸತ್ಯ ಏನು?

ನಿಮಗೂ ಇಂತಹ ಫೋಟೋಗಳು ಮತ್ತು ಸುದ್ದಿಗಳು ಬಂದಿದ್ದರೆ, ಈ ಚಿತ್ರಗಳ ಬಗ್ಗೆ ಮಾಹಿತಿ ಪಡೆಯುವುದು ಮುಖ್ಯ. ಯಾಕೆಂದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಫೋಟೋಗಳು ಕೆಲವು ಬಾರಿ ಸತ್ಯವಾಗಿರುವುದಿಲ್ಲ. ಪರಿಶೀಲನೆ ಬಳಿಕ ಈ ಫೋಟೋಗಳನ್ನು ನಕಲಿ ಎಂದು ಗುರುತಿಸಲಾಗಿದೆ. ಏಕೆಂದರೆ ಈ ಚಿತ್ರಗಳಿಗೂ ಯುಪಿ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಚುನಾವಣಾ ಫಲಿತಾಂಶದ ನಂತರ ಪ್ರಯಾಗ್‌ರಾಜ್‌ನಲ್ಲಿ ಮೂವರು ಸಹೋದರರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿಲ್ಲ. ಪ್ರಯಾಗ್‌ರಾಜ್‌ನಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಪ್ರಯಾಗ್‌ರಾಜ್‌ನ ಎಸ್‌ಎಸ್‌ಪಿ ಕೂಡ ಹೇಳಿದ್ದಾರೆ.

ಹಾಗಾದರೆ ಈ ಚಿತ್ರಗಳು ಯಾವವು?

ಈ ಚಿತ್ರಗಳ ಬಗ್ಗೆ ಮಾತನಾಡುವುದಾದರೆ ಈ ಫೋಟೋಗಳು 2020 ರಲ್ಲಿ ಜಾರ್ಖಂಡ್‌ನ ಬೊಕಾರೊದ ರಾಮಗಢ ಗ್ರಾಮದಲ್ಲಿ ತೆಗೆಯಲಾಗಿದೆ. 25 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಾಗಿನ ಫೋಟೋ ಇದು. ಈ ಘಟನೆಯ ಸುದ್ದಿ ಎರಡು ಮಾಧ್ಯಮ ಪೋರ್ಟಲ್‌ಗಳಲ್ಲಿ ಲಭ್ಯವಿದ್ದು, ಆರ್ಥಿಕ ಅಡಚಣೆಯಿಂದ ಈ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

Fact Check

ಕ್ಲೇಮು

ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೆಶ್ ಯಾದವ್ ಸೋಲಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ

ಪರಿಸಮಾಪ್ತಿ

ವೈರಲ್ ಆದ ಆತ್ಮಹತ್ಯೆಯ ಫೋಟೋಗಳಿಗೂ ಯುಪಿಯಲ್ಲಿ ಅಖಿಲೇಶ್ ಯಾದವ್ ಸೋಲಿಗೂ ಯಾವುದೇ ಸಂಬಂಧವಿಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು factcheck@one.in ಗೆ ಇಮೇಲ್ ಮಾಡಿ

English summary
After the election results of UP, many such posts are going viral on social media, in which it is being claimed that many Samajwadi Party workers have committed suicide after the defeat of Akhilesh Yadav in UP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X