ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಭಾರತೀಯ ಯುದ್ಧ ವಿಮಾನ ಹೊಡೆದುರುಳಿಸಿತಾ ಚೀನಾ?

|
Google Oneindia Kannada News

ನವದೆಹಲಿ, ಸಪ್ಟೆಂಬರ್.02: ಭಾರತ-ಚೀನಾದ ಲಡಾಖ್ ಪೂರ್ವ ಗಡಿ ಸಂಘರ್ಷದ ನಡುವೆ ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ದಿನ ಕಳೆದಂತೆ ಉದ್ವಿಗ್ನಗೊಳ್ಳುತ್ತಿದೆ. ಉರಿಯುವ ಬೆಂಕಿಗೆ ತುಪ್ಪ ಸುರಿದ ರೀತಿಯಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳನ್ನು ಹರಿ ಬಿಡಲಾಗುತ್ತಿವೆ.

ಭಾರತ-ಚೀನಾ ಕಮಾಂಡರ್ ಹಂತದ ಅಧಿಕಾರಿಗಳ ಸಭೆಯ ಬೆನ್ನಲ್ಲೇ ಪೀಪಲ್ಸ್ ಲಿಬರೇಷನ್ ಆರ್ಮಿಯು ಭಾರತಕ್ಕೆ ಸೇರಿದ ಸುಖೋಯ್ ಸು-30 ಜೆಟ್ ವಿಮಾನವನ್ನು ಟಿಬೆಟ್ ನಲ್ಲಿ ಹೊಡೆದುರುಳಿಸಿದೆ ಎಂಬ ಸುದ್ದಿ ಹರಿದಾಡುತ್ತಿದೆ.

Fact Check: ಚೀನಾ ಯೋಧರ ಸಮಾಧಿ ಹಿಂದಿನ ಸತ್ಯವೇನು?Fact Check: ಚೀನಾ ಯೋಧರ ಸಮಾಧಿ ಹಿಂದಿನ ಸತ್ಯವೇನು?

"ನಮ್ಮ ವಾಯು ಪಡೆಯು ಭಾರತೀಯ ಯುದ್ಧವಿಮಾನ ಸುಖೋಯ್ ಸು-30 ಅನ್ನು ಟಿಬೆಟ್ ಗಡಿ ಪ್ರದೇಶದಲ್ಲಿ ಹೊಡೆದುರುಳಿಸಿದೆ" ಎಂದು ಜೋಂಗ್ ಕ್ಸಿನ್ ಎಂಬುವವರು ಟ್ವೀಟ್ ಮಾಡಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು. ಈ ಸುದ್ದಿಯಲ್ಲಿ ಕಿಂಚಿತ್ತೂ ಸತ್ಯವಿಲ್ಲ ಎಂದು ಭಾರತೀಯ ಕೇಂದ್ರ ಸರ್ಕಾರವು ಸ್ಪಷ್ಟಪಡಿಸಿದೆ.

Fact Check: Fake China Expert Makes A Fake Claim About An IAF Jet Being Shot Down

ಸುಳ್ಳು ಸುದ್ದಿಯ ಬಗ್ಗೆ ಭಾರತದ ಸ್ಪಷ್ಟನೆ:

ಭಾರತೀಯ ಯುದ್ಧ ವಿಮಾನ ಸುಖೋಯ್ ಸು-30 ಹೊಡೆದುರುಳಿಸಲಾಗಿದೆ ಎಂಬ ಮಾಹಿತಿ ಸರಿಯಾಗಿಲ್ಲ. ಈ ರೀತಿ ಯಾವುದೇ ಘಟನೆಗಳು ಸಂಭವಿಸಿಲ್ಲ ಎಂದು ಭಾರತೀಯ ಕೇಂದ್ರ ಸರ್ಕಾರವು ಸ್ಪಷ್ಟಪಡಿಸಿದೆ. ಅದೊಂದು ಸುಳ್ಳು ಸುದ್ದಿಯಾಗಿದ್ದು, ಟ್ವಿಟರ್ ಖಾತೆ ಕೂಡಾ ನಕಲಿಯಾಗಿದೆ. ಕ್ಯಾಲಿಪೋರ್ನಿಯಾದ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕ ವಾಂಗ್ ಫೆಂಗ್ ಫೋಟೋವನ್ನು ಕ್ಸಿನ್ ಟ್ವಿಟರ್ ಖಾತೆಯಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ.

ಚೀನಾದ ತಜ್ಞ ಎಂದು ಗುರುತಿಸಿಕೊಂಡಿರುವ ಟ್ವಿಟರ್ ಖಾತೆದಾರನು ಚೀನಾದ ಯಾವುದೇ ಅಧಿಕಾರಿಗಳನ್ನು ಫಾಲೋ ಮಾಡುತ್ತಿಲ್ಲ. ಟ್ವಿಟರ್ ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಗ್ಲೋಬಲ್ ಟೈಮ್ಲ್ ಅಥವಾ ವಿದೇಶಾಂಗ ಸಚಿವಾಲಯವನ್ನು ಹಿಂಬಾಲಿಸುತ್ತಿಲ್ಲ ಎಂದು ತಿಳಿಸಿದೆ. ಅವರು ಚೀನಾ ಮತ್ತು ಪಾಕಿಸ್ತಾನದ ಪರ ವಿಶೇಷ ಲೇಖನಗಳನ್ನು ಬರೆಯುವ ಕಾಲಮಿಸ್ಟ್ ಆಗಿದ್ದು, ಚೀನಾದ ಗ್ರೋವ್ ಟಿಎಕ್ಸ್ ನಲ್ಲಿ ವಾಸವಾಗಿದ್ದಾರೆ ಎಂದು ತಿಳಿದು ಬಂದಿದೆ.

Fact Check

ಕ್ಲೇಮು

ಭಾರತೀಯ ವಾಯುಸೇನೆಗೆ ಸೇರಿದ ಯುದ್ಧ ವಿಮಾನವನ್ನು ಚೀನಾ ಹೊಡೆದುರುಳಿಸಿದೆ

ಪರಿಸಮಾಪ್ತಿ

ಈ ರೀತಿಯ ಯಾವುದೇ ಘಟನೆಗಳು ನಡೆದಿಲ್ಲ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: Fake China Expert Makes A Fake Claim About An IAF Jet Being Shot Down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X