• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fact Check: USA ಅಧ್ಯಕ್ಷರ ಪದಗ್ರಹಣದಲ್ಲಿ ಡಾ.ಮನಮೋಹನ್ ಸಿಂಗ್ ಮುಖ್ಯಅತಿಥಿ

|

ವಾಶಿಂಗ್ಟನ್, ನವೆಂಬರ್.12: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಆತಂಕದ ನಡುವೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ 46ನೇ ಅಧ್ಯಕ್ಷರಾಗಿ ಜೋ ಬಿಡೆನ್ ಅವರು ಜನವರಿ 20, 2020ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಅಮೆರಿಕಾದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದಾಡುತ್ತಿವೆ.

ಹಿಂದಿಯಲ್ಲಿ ಬರೆದ ಬ್ರೇಕಿಂಗ್ ಸುದ್ದಿಯ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪೋಸ್ಟ್ ನಲ್ಲಿ "ಬ್ರೇಕಿಂಗ್ ನ್ಯೂಸ್: ಅಮೆರಿಕಾದ ನೂತನ ಅಧ್ಯಕ್ಷರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾರತದ ಡಾ. ಮನಮೋಹನ್ ಸಿಂಗ್ ಮುಖ್ಯಅತಿಥಿಯಾಗಲಿದ್ದಾರೆ" ಎಂದು ಬರೆಯಲಾಗಿದೆ. ಆದರೆ ಇದೊಂದು ಸುಳ್ಳು ಸುದ್ದಿ ಎನ್ನುವುದನ್ನು ಇಂಡಿಯಾ ಟುಡೇ ಸುದ್ದಿ ಸಂಸ್ಥೆಯ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ ಪತ್ತೆ ಮಾಡಿದೆ.

ಡಾ. ಮನಮೋಹನ್ ಸಿಂಗ್ ರಿಗೆ ಆಹ್ವಾನ ಬಂದಿಲ್ಲ

ಡಾ. ಮನಮೋಹನ್ ಸಿಂಗ್ ರಿಗೆ ಆಹ್ವಾನ ಬಂದಿಲ್ಲ

ಅಮೆರಿಕಾ ಅಧ್ಯಕ್ಷರ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸುವಂತೆ ನವೆಂಬರ್.09ರವರೆಗೂ ಯಾವುದೇ ರೀತಿಯ ಆಹ್ವಾನಗಳು ಬಂದಿಲ್ಲ ಎಂದು ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕಚೇರಿ ಮೂಲಗಳು ಇಂಡಿಯಾ ಟುಡೇ ಸುದ್ದಿ ಸಂಸ್ಥೆಯ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ ಗೆ ಸ್ಪಷ್ಟಪಡಿಸಿವೆ.

ಭಾರತದೊಂದಿಗೆ ಜೋ ಬಿಡೆನ್ ಉತ್ತಮ ಬಾಂಧವ್ಯ

ಭಾರತದೊಂದಿಗೆ ಜೋ ಬಿಡೆನ್ ಉತ್ತಮ ಬಾಂಧವ್ಯ

ಇದೀಗ ಯುಎಸ್ಎ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಜೋ ಬಿಡೆನ್ ಮೊದಲಿನಿಂದಲೂ ಭಾರತದ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಸೆನೆಟರ್, ಅಮೆರಿಕಾದ ಉಪಾಧ್ಯಕ್ಷರಾದ ಕಾಲದಿಂದಲೂ ಭಾರತದೊಂದಿಗೆ ಬಾಂಧವ್ಯ ಬೆಸೆದುಕೊಂಡಿದ್ದರು. ಕಳೆದ 2008ರಲ್ಲಿ, ಬಿಡೆನ್ ಸೆನೆಟ್ ವಿದೇಶ ಸಂಬಂಧ ಸಮಿತಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಯುಎಸ್-ಭಾರತ ನಾಗರಿಕ ಪರಮಾಣು ಒಪ್ಪಂದಕ್ಕೆ ಯುಎಸ್ ಸೆನೆಟ್ ಅನುಮೋದನೆಗಾಗಿ ಕೆಲಸ ಮಾಡಿದರು.

ಅತಿಥಿಗಳಿರುತ್ತಾರೆಯೇ ವಿನಃ ಮುಖ್ಯ ಅತಿಥಿಗಳು ಇರುವುದಿಲ್ಲ!

ಅತಿಥಿಗಳಿರುತ್ತಾರೆಯೇ ವಿನಃ ಮುಖ್ಯ ಅತಿಥಿಗಳು ಇರುವುದಿಲ್ಲ!

ಅಮೆರಿಕಾದ ಅಧ್ಯಕ್ಷರಾಗಿ ಚುನಾಯಿತರಾದ ಬಿಡೆನ್ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಡಾ. ಮನಮೋಹನ್ ಸಿಂಗ್ ಸೇರಿದಂತೆ ಯಾವುದೇ ಭಾರತೀಯ ನಾಯಕರಿಗೆ ಅಮೆರಿಕದಿಂದ ಆಹ್ವಾನ ಬಂದಿರುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಅಮೆರಿಕಾ ಅಧ್ಯಕ್ಷರ ಪ್ರಮಾಣವಚನ ಸ್ವೀಕಾರ ಸಮಾರಂಭಗಳಲ್ಲಿ ಅತಿಥಿಗಳು ಮಾತ್ರ ಇರುತ್ತಾರೆಯೇ ಹೊರತೂ ಮುಖ್ಯ ಅತಿಥಿಯಾಗಿರುವುದಿಲ್ಲ.

  ಸ್ಮಾರ್ಥ ಬ್ರಾಹ್ಮಣ ವಿಧಿವಿಧಾನದಲ್ಲಿ ನಡೆಯಲಿದೆ ರವಿ ಬೆಳಗೆರೆ ಅಂತ್ಯಕ್ರಿಯೆ
  ಜೋ ಬಿಡೆನ್ ಗೆಲುವಿನ ಅಧಿಕೃತ ಘೋಷಣೆಯೇ ಆಗಿಲ್ಲವಲ್ಲ

  ಜೋ ಬಿಡೆನ್ ಗೆಲುವಿನ ಅಧಿಕೃತ ಘೋಷಣೆಯೇ ಆಗಿಲ್ಲವಲ್ಲ

  ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಚುನಾವಣಾ ಫಲಿತಾಂಶ ಇಂದಿಗೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಚುನಾವಣಾ ಪ್ರಕ್ರಿಯೆಗಳೇ ಇನ್ನೂ ಪೂರ್ಣಗೊಂಡಿಲ್ಲ. ಹೀಗಿರುವಾಗ ಭಾರತದ ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರಿಗೆ ಜೋ ಬಿಡೆನ್ ಪದಗ್ರಹಣದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವಂತೆ ಆಹ್ವಾನ ನೀಡುವುದಕ್ಕೆ ಹೇಗೆ ತಾನೇ ಸಾಧ್ಯವಾಗುತ್ತದೆ ಎಂದು ಡಾ. ಮನಮೋಹನ್ ಸಿಂಗ್ ಕಚೇರಿ ಮೂಲಗಳು ತಿಳಿಸಿವೆ.

  ಅಮೆರಿಕಾ ಅಧ್ಯಕ್ಷರ ಪ್ರಮಾಣವಚನ ಕಾರ್ಯಕ್ರಮದ ವೇದಿಕೆಯಲ್ಲಿ ಸಾಮಾನ್ಯವಾಗಿ ಕುಳಿತುಕೊಳ್ಳುವುದೇ ಅಮೆರಿಕಾದ ಪ್ರಮುಖ ಅಧಿಕಾರಿಗಳು ಮತ್ತು ಗಣ್ಯರು. ಈ ವೇದಿಕೆಯಲ್ಲಿ ಯಾವುದೇ ಅಂತಾರಾಷ್ಟ್ರೀಯ ನಾಯಕರಿಗೆ ಸ್ಥಾನ ಮೀಸಲಿರಿಸುವ ಬಗ್ಗೆ ಇದುವರೆಗೂ ಎಲ್ಲಿಯೂ ಉಲ್ಲೇಖಿಸಲಾಗಿಲ್ಲ. ಇದರಿಂದ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರಿಗೆ ಯಾವುದೇ ಆಹ್ವಾನ ಬಂದಿಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

  Fact Check

  ಕ್ಲೇಮು

  ಅಮೆರಿಕಾ ನೂತನ ಅಧ್ಯಕ್ಷರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಡಾ. ಮನಮೋಹನ್ ಸಿಂಗ್ ಮುಖ್ಯ ಅತಿಥಿ.

  ಪರಿಸಮಾಪ್ತಿ

  ನವೆಂಬರ್.09ರವರೆಗೂ ಜೋ ಬಿಡೆನ್ ಅವರ ಪದಗ್ರಹಣ ಸಮಾರಂಭಕ್ಕೆ ಆಗಮಿಸುವಂತೆ ಯಾವುದೇ ಆಹ್ವಾನ ಬಂದಿಲ್ಲ.

  Rating

  False
  ಗಾಗಿ ನಿಮ್ಮ ಮನವಿಯನ್ನು ಕಳಿಸಲು factcheck@one.in ಗೆ ಇಮೇಲ್ ಮಾಡಿ

  English summary
  Fact Check: Ex-PM Manmohan Singh Will Chief Guest In US President Oath Function.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X