• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fact Check: ನಟಿ ದೀಪಿಕಾ ಪಡುಕೋಣೆ ಟಿ-ಶರ್ಟ್ ಮೇಲೆ ರೈತರ ಪರ ಬರಹ

|

ನವದೆಹಲಿ, ಸೆಪ್ಟೆಂಬರ್ 28: ಮಾದಕ ವಸ್ತುಗಳ ನಿಯಂತ್ರಣ ಸಂಸ್ಥೆಯೆದುರು ವಿಚಾರಣೆಗೆ ಒಳಗಾಗುವ ಸಂದರ್ಭದಲ್ಲಿ ನಟಿ ದೀಪಿಕಾ ಪಡುಕೋಣೆ ಧರಿಸಿದ್ದ ಟಿ ಶರ್ಟ್‌ನಲ್ಲಿ ನಾನು ಭಾರತೀಯ ರೈತರ ಪರವಾಗಿ ನಿಲ್ಲುತ್ತೇನೆ ಎನ್ನುವ ಬರಹವಿತ್ತು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಅಂದಿನ ಫೋಟೊಗಳನ್ನು ತೆಗೆಸಿ ನೋಡಿದಾಗ ಚಿತ್ರವನ್ನು ಫೋಟೊಶಾಪ್ ಮಾಡಿರುವುದು ತಿಳಿದುಬಂದಿದೆ. ಹಾಗೂ ಆ ಫೋಟೊ ಕೂಡ 2018ರಲ್ಲಿ ತೆಗೆದಿದ್ದು ಎಂಬ ಮಾಹಿತಿ ಲಭ್ಯವಾಗಿದೆ.

Fact Check: ಸೆಪ್ಟೆಂಬರ್ 25ರಿಂದ ದೇಶಾದ್ಯಂತ ಮತ್ತೆ ಲಾಕ್‌ಡೌನ್

ದೀಪಿಕಾ ಪಡುಕೋಣೆ ಏರ್‌ಪೋರ್ಟ್‌ನಿಂದ ಬರುವ ವೇಳೆ ಈ ಫೋಟೊ ಕ್ಲಿಕ್ಕಿಸಲಾಗಿತ್ತು. ಹಾಗೆಯೇ ದೀಪಿಕಾ ಅವರ ಟಿ ಶರ್ಟ್ ಮೇಲೆ ಯಾವುದೇ ಬರಹವೂ ಇರಲಿಲ್ಲ, ಖಾಲಿ ಇತ್ತು ಎಂಬುದು ಕೂಡ ತಿಳಿದುಬಂದಿದೆ.

ಮುಂಬೈನಲ್ಲಿ ಎನ್‌ಸಿಬಿ ತನಿಖೆ ವೇಳೆ ದೀಪಿಕಾ ಪಲಾಜೋ ಸ್ಯೂಟ್ ಧರಿಸಿದ್ದರು. ಹಾಗೆಯೇ ಮುಖದಲ್ಲಿ ಮಾಸ್ಕ್ ಕೂಡ ಇತ್ತು.

ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಪ್ರಕರಣ ಮತ್ತು ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಎನ್‌ಸಿಬಿ ವಿಚಾರಣೆಗೆ ಹಾಜರಾಗಿದ್ದ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಸಾರಾ ಅಲಿಖಾನ್ ಅವರ ಫೋನ್ ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಮಾದಕ ವಸ್ತುಗಳ ನಿಯಂತ್ರಣ ಸಂಸ್ಥೆಯ (ಎನ್‌ಸಿಬಿ) ವಿಚಾರಣೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ನಟಿ ಸಾರಾ ಅಲಿಖಾನ್ ಶನಿವಾರ ಬೆಳಿಗ್ಗೆ ಹಾಜರಾದರು.

ದೀಪಿಕಾ ಅವರ ಉದ್ಯಮ ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ಅವರನ್ನು ಎನ್‌ಸಿಬಿಯ ವಿಶೇಷ ತಂಡ ಶುಕ್ರವಾರ ವಿಚಾರಣೆಗೆ ಒಳಪಡಿಸಿತ್ತು. ಶುಕ್ರವಾರ ರಾತ್ರಿಯೇ ದೀಪಿಕಾ ಅವರು ಕಾನೂನು ಸಲಹೆಗಾರರನ್ನು ಭೇಟಿಯಾಗಿದ್ದರು.

ವಿಚಾರಣೆ ವೇಳೆ ತಾವೂ ಹಾಜರಿರಬಹುದೇ ಎಂದು ದೀಪಿಕಾ ಪತಿ, ನಟ ರಣವೀರ್ ಸಿಂಗ್ ಮನವಿ ಮಾಡಿದ್ದರು ಎಂದು ವರದಿಯಾಗಿತ್ತು. ಆದರೆ, ಅಂತಹ ಯಾವುದೇ ಮನವಿ ಬಂದಿಲ್ಲ ಎಂದು ಬಳಿಕ ಎನ್‌ಸಿಬಿ ಸ್ಪಷ್ಟನೆ ನೀಡಿತ್ತು.

ಉಳಿದಂತೆ ನಟಿಯರಾದ ಶ್ರದ್ಧಾ ಕಪೂರ್‌, ಸಾರಾ ಅಲಿಖಾನ್‌ ಕೂಡ ಎನ್‌ಸಿಬಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದು ಈ ವೇಳೆ ಸಾರಾ ಅಲಿಖಾನ್ ಫೋನ್ ಅನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ.

Fact Check

ಕ್ಲೇಮು

ಎನ್‌ಸಿಬಿ ತನಿಖೆ ವೇಳೆ ನಟಿ ದೀಪಿಕಾ ಪಡುಕೋಣೆ ಭಾರತದ ರೈತರನ್ನು ಬೆಂಬಲಿಸುವಂತಹ ಬರಹ ಅವರ ಟಿ-ಶರ್ಟ್ ಮೇಲಿತ್ತು.

ಪರಿಸಮಾಪ್ತಿ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಚಿತ್ರ ಹಳೆಯದು, ದೀಪಿಕಾ ಪಡುಕೋಣೆ ಅವರ ಟಿ-ಶರ್ಟ್ ಮೇಲೆ ಅಂತಹ ಯಾವುದೇ ಬರಹವಿರಲಿಲ್ಲ. ಅವರು ಎನ್‌ಸಿಬಿ ತನಿಖೆ ವೇಳೆ ಪಲಾಜೋ ಸ್ಯೂಟ್ ಧರಿಸಿದ್ದರು.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು factcheck@one.in ಗೆ ಇಮೇಲ್ ಮಾಡಿ

English summary
The Narcotics Control Bureau (NCB) last week questioned Deepika Padukone in connection the Bollywood drugs case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X