ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಸಿಎಂ ಯೋಗಿ ಹತ್ರಾಸ್ ಸಂತ್ರಸ್ತೆಯ ಅಂತ್ಯಕ್ರಿಯೆ ಲೈವ್ ನೋಡಿದ್ರಾ?

|
Google Oneindia Kannada News

ಲಕ್ನೋ, ಅಕ್ಟೋಬರ್ 02: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಅಂತ್ಯಕ್ರಿಯೆಯ ವಿಡಿಯೋ ಲೈವ್ ನೋಡುತ್ತಿದ್ದರು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ.

ಹತ್ರಾಸ್‌ನಲ್ಲಿ 19 ವರ್ಷದ ದಲಿತ ಯುವತಿ ಮೇಲೆ ಅತ್ಯಾಚಾರ ನಡೆದಿದ್ದು, ಎರಡು ವಾರಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಮಂಗಳವಾರ ಕೊನೆಯುಸಿರೆಳೆದಿದ್ದಾಳೆ.

'ಹತ್ರಾಸ್ ಸಂತ್ರಸ್ತೆ ವಾರದ ಬಳಿಕ ಅತ್ಯಾಚಾರ ನಡೆದಿದ್ದ ವಿಷಯ ತಿಳಿಸಿದ್ದಳು' 'ಹತ್ರಾಸ್ ಸಂತ್ರಸ್ತೆ ವಾರದ ಬಳಿಕ ಅತ್ಯಾಚಾರ ನಡೆದಿದ್ದ ವಿಷಯ ತಿಳಿಸಿದ್ದಳು'

ಒಂದೆಡೆ ಸಂತ್ರಸ್ತೆಯ ಕುಟುಂಬಕ್ಕೆ ಮಗಳ ಅಂತ್ಯಕ್ರಿಯೆ ಮಾಡಲು ಅಥವಾ ನೋಡಲು ಯಾವುದೇ ಅವಕಾಶ ಮಾಡಿಕೊಡದೆ ಮಧ್ಯರಾತ್ರಿ 2.30ಕ್ಕೆ ಪೊಲೀಸರು ಅಂತ್ಯಸಂಸ್ಕಾರ ನೆರವೇರಿಸಿದ್ದರು ಎಂಬುದು ಇದೀಗ ತೀವ್ರ ಚರ್ಚೆಯಲ್ಲಿರುವ ವಿಷಯ.

Fact Check: Did Yogi Adityanath Watch Hathras Victim’s Cremation Live?

ಹೀಗಿರುವಾಗ ಸಿಎಂ ಯೋಗಿ ಆದಿತ್ಯನಾಥ್ ಹತ್ರಾಸ್ ಸಂತ್ರಸ್ತೆಯ ಸಂತ್ಯಸಂಸ್ಕಾರವನ್ನು ಲೈವ್‌ ಆಗಿ ನೋಡುತ್ತಿದ್ದರು ಎಂಬ ಸುದ್ದಿ ಹರಡಿದಾಡುತ್ತಿದೆ. ಅವರು ಲ್ಯಾಪ್‌ ಟಾಪ್ ಎದುರು ಕುಳಿತು ಬೆಂಕಿಯ ದೃಶ್ಯವೊಂದನ್ನು ನೋಡುತ್ತಿರುವುದು ಚಿತ್ರದಲ್ಲಿ ಕಂಡುಬಂದಿದೆ.

ಆದರೆ ಇದು ಸುಳ್ಳು, ಆದರೆ ಯೋಗಿ ಆದಿತ್ಯನಾಥ್ ಹತ್ರಾಸ್ ಸಂತ್ರಸ್ತೆ ಕುಟುಂಬದ ಜೊತೆ ವಿಡಿಯೋ ಸಂಭಾಷಣೆ ನಡೆಸಿದ್ದರು ಎಂಬುದು ತಿಳಿದುಬಂದಿದೆ.

ಹತ್ರಾಸ್ ಸಂತ್ರಸ್ತೆ ತಂದೆ ಮಾತನಾಡಿ, ಹೌದು ನಾವು ಮಗಳ ಮುಖವನ್ನು ಅಂತಿಮವಾಗಿ ನೋಡಿಲ್ಲ ಎಂಬುದು ಸತ್ಯ ಆದರೆ ನ್ಯಾಯ ಖಂಡಿತವಾಗಿಯೂ ಸಿಗುತ್ತದೆ ಎನ್ನುವ ನಂಬಿಕೆ ಇದೆ ಎಂದು ಹೇಳಿದ್ದರು.

ಎಎನ್‌ಐ ಲ್ಯಾಪ್‌ಟಾಪ್‌ ನಲ್ಲಿರುವ ಚಿತ್ರವನ್ನು ಬ್ಲರ್ ಮಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಚಿತ್ರ ಸುಳ್ಳು, ಯೋಗಿ ಹತ್ರಾಸ್ ಸಂತ್ರಸ್ತೆ ಅಂತ್ಯಕ್ರಿಯೆ ಲೈವ್ ವಿಡಿಯೋವನ್ನು ನೋಡಿಲ್ಲ.

Fact Check

ಕ್ಲೇಮು

ಹತ್ರಾಸ್ ಸಂತ್ರಸ್ತೆಯ ಅಂತ್ಯಕ್ರಿಯೆ ಲೈವ್ ವಿಡಿಯೋ ವೀಕ್ಷಿಸಿದ ಯೋಗಿ ಆದಿತ್ಯನಾಥ್

ಪರಿಸಮಾಪ್ತಿ

ಚಿತ್ರವು ಫೋಟೊ ಶಾಪ್ ಮಾಡಲಾಗಿತ್ತು, ಯೋಗಿ ಆದಿತ್ಯನಾಥ್ ಅವರು ಹತ್ರಾಸ್ ಸಂತ್ರಸ್ತೆ ಅಂತ್ಯಕ್ರಿಯೆ ಲೈವ್ ವೀಕ್ಷಿಸಿಲ್ಲ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Amidst this there is an image that has gone viral in which it is claimed that Chief Minister of Uttar Pradesh, Yogi Adityanath watched the funeral of the woman live.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X