ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಶ್ರೀಲಂಕಾದಲ್ಲಿ ಬಿಜೆಪಿ ತನ್ನ ನೂತನ ಘಟಕ ಆರಂಭಿಸಿದೆಯೇ?

|
Google Oneindia Kannada News

ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ಬಿಜೆಪಿ ತನ್ನ ಘಟಕ ಆರಂಭಿಸಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹಾಗೆಯೇ ಮುತ್ತುಸ್ವಾಮಿ ಎಂಬುವವರನ್ನು ಪಕ್ಷದ ಶ್ರೀಲಂಕಾ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ವಾಸ್ತವದಲ್ಲಿ ಶ್ರೀಲಂಕಾ ಬಿಜೆಪಿ ಆರಂಭವಾಗಿದ್ದು ಕೂಡಾ ಸತ್ಯ ಹಾಗಿದ್ದರೆ ನರೇಂದ್ರ ಮೋದಿ, ಅಮಿತ್ ಶಾ ಜೋಡಿಯು ಶ್ರೀಲಂಕಾದಲ್ಲಿ ತನ್ನ ಕಾರ್ಯ ಆರಂಭಿಸಿತೇ ಎನ್ನುವ ಪ್ರಶ್ನೆಗಳು ಕಾಡುತ್ತಿರಬಹುದು.

Fact Check: ಸಾಮಾಜಿಕ ಜಾಲತಾಣಗಳ ಬಳಕೆಗೆ ಸರ್ಕಾರಿ ಗುರುತಿನ ಚೀಟಿ ಕಡ್ಡಾಯ?Fact Check: ಸಾಮಾಜಿಕ ಜಾಲತಾಣಗಳ ಬಳಕೆಗೆ ಸರ್ಕಾರಿ ಗುರುತಿನ ಚೀಟಿ ಕಡ್ಡಾಯ?

ಶ್ರೀಲಂಕಾ ಬಿಜೆಪಿ ಆರಂಭವಾಗಿದ್ದೇನೋ ನಿಜ ಆದರೆ, ಆ ಬಿಜೆಪಿಯು ಭಾರತದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ.ಶ್ರೀಲಂಕಾದಲ್ಲಿನ ತಮಿಳರ ಹಕ್ಕು ರಕ್ಷಣೆ ಹಾಗೂ ಅಭಿವೃದ್ಧಿಗಾಗಿ IBJK ಅಥವಾ ಶ್ರೀಲಂಕಾ ಬಿಜೆಪಿ ಪಕ್ಷ ಆರಂಭಿಸಲಾಗಿದೆ.

Fact Check: Did The BJP Really Start A Sri Lanka Unit? Find Out Here

ಶ್ರೀಲಂಕಾ ಸರ್ಕಾರದ ನೆರವು ಪಡೆದು ತಮಿಳರ ಶಿಕ್ಷಣ ಹಾಗೂ ಕ್ರೀಡಾಕ್ಷೇತ್ರದಲ್ಲಿನ ಅಭಿವೃದ್ಧಿಯೇ ಪಕ್ಷದ ಪ್ರಮುಖ ಗುರಿ ಎಂದು ಅಧ್ಯಕ್ಷ ಮುತ್ತುಸ್ವಾಮಿ ತಿಳಿಸಿದ್ದಾರೆ. ಈ ಮುತ್ತುಸ್ವಾಮಿ ಭಾರತೀಯ ಮೂಲದ ತಮಿಳು ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ದೇಶದಲ್ಲಿ ಬಿಜೆಪಿ ಸರ್ಕಾರ: ಆಕ್ಷೇಪ ವ್ಯಕ್ತಪಡಿಸಿದ ನೇಪಾಳದೇಶದಲ್ಲಿ ಬಿಜೆಪಿ ಸರ್ಕಾರ: ಆಕ್ಷೇಪ ವ್ಯಕ್ತಪಡಿಸಿದ ನೇಪಾಳ

ಅವರೇ ಹೇಳುವ ಪ್ರಕಾರ ಭಾರತದಲ್ಲಿರುವ ಬಿಜೆಪಿಗೂ ಶ್ರೀಲಂಕಾದಲ್ಲಿ ಆರಂಭವಾಗಿರುವ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಇದು ಕೇವಲ ಶ್ರೀಲಂಕಾಗೆ ಸೀಮಿತವಾಗಿರುವ ಪ್ರತ್ಯೇಕ ಪಕ್ಷವಾಗಿದೆ, ಈ ಬಗ್ಗೆ ಯಾರೂ ಅಪ ಪ್ರಚಾರ ಮಾಡಬೇಡಿ ಎಂದು ಹೇಳಿದ್ದಾರೆ. ಈ ಮೂಲಕ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದಾರೆ.

Fact Check

ಕ್ಲೇಮು

ಶ್ರೀಲಂಕಾದಲ್ಲಿ ಬಿಜೆಪಿ ತನ್ನ ಹೊಸ ಘಟಕವನ್ನು ಆರೋಂಬಿಸಿದೆ

ಪರಿಸಮಾಪ್ತಿ

ಶ್ರೀಲಂಕಾದಲ್ಲಿ ಬಿಜೆಪಿ ಪಕ್ಷ ಹುಟ್ಟಿಕೊಂಡಿರುವುದು ನಿಜ ಆದರೆ ಭಾರತದಲ್ಲಿರುವ ಬಿಜೆಪಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A viral image on the internet is making rounds and claims that the ruling political party in India, Bharatiya Janata Party, has launched a ‘branch’ in Sri Lanka. The image is of a politician named V Muththusami, who is described as a leader of the Sri Lanka Bharatiya Janata Party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X