ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಬ್ರಾಹ್ಮಣ ಎಂಬ ಕಾರಣಕ್ಕೆ ವೈದ್ಯರನ್ನು ಅಖಿಲೇಶ್ ಯಾದವ್ ನಿಂದಿಸಿದ್ದಾರಾ?

|
Google Oneindia Kannada News

ಲಕ್ನೋ ಫೆಬ್ರವರಿ 17: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಬ್ರಾಹ್ಮಣ ಎಂಬ ಕಾರಣಕ್ಕಾಗಿ ವೈದ್ಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೋವೊಂದು ವೈರಲ್ ಆಗಿದೆ.

ವಿಡಿಯೋದಲ್ಲಿ ಅಖಿಲೇಶ್ ಒಬ್ಬ ವ್ಯಕ್ತಿಯನ್ನು ಗದರಿಸಿ ಸ್ಥಳದಿಂದ ಹೊರಹೋಗುವಂತೆ ಹೇಳುತ್ತಾರೆ. ಬ್ರಾಹ್ಮಣ ಎಂಬ ಕಾರಣಕ್ಕಾಗಿ ಕನ್ನೌಜ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಡಿ ಎಸ್ ಮಿಶ್ರಾ ಅವರೊಂದಿಗೆ ಎಸ್ಪಿ ನಾಯಕ ಅನುಚಿತವಾಗಿ ವರ್ತಿಸಿದರು ಎಂದು ಬರೆದು 28 ಸೆಕೆಂಡುಗಳ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಬಾರಿ ಹಂಚಿಕೊಳ್ಳಲಾಗಿದೆ.

ಇದು ಹಳೆಯ ಘಟನೆ ಎಂದು ತಿಳಿದುಬಂದಿದ್ದು, ವಿಡಿಯೋವನ್ನು ಜನವರಿ 14, 2020 ರಂದು ಚಿತ್ರೀಕರಿಸಲಾಗಿದೆ. ಸುದ್ದಿ ಸಂಸ್ಥೆ ಎಎನ್‌ಐ ಈ ಘಟನೆಯನ್ನು ವರದಿ ಮಾಡಿದೆ ಮತ್ತು ಕನ್ನೌಜ್ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಭೇಟಿ ಮಾಡಲು ಹೋದ ಮಾಜಿ ಸಿಎಂ ಅಖಿಲೇಶ್ ಯಾದವ್ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಿದೆ. ಗಾಯಾಳುಗಳಿಗೆ ನೀಡಲಾದ ಪರಿಹಾರದ ಮೊತ್ತದ ಕುರಿತು ಮಾತನಾಡುವಾಗ ಚಿಬ್ರಮೌ ತುರ್ತು ವೈದ್ಯಕೀಯ ಅಧಿಕಾರಿಗೆ ಕೊಠಡಿಯಿಂದ ಹೊರಹೋಗುವಂತೆ ಅಖಿಲೇಶ್ ಗದರಿಸುತ್ತಾರೆ. "ತುಮ್ ಸರ್ಕಾರ್ ಕಾ ಪಕ್ಷ್ ನಹಿ ಲೇ ಸಕ್ತೇ...ಬಹರ್ ಭಾಗ್ ಜಾವೋ" ಎಂದು ಹೇಳುತ್ತಾರೆ.

Fact Check: Did Akhilesh Yadav Scold a Doctor Because He Was Brahmin
ಆದರೆ ಈ ವಿಡಿಯೋವನ್ನು ಸಂದರ್ಭಕ್ಕೆ ಬಳಸಿಕೊಳ್ಳಲಾಗಿದೆ. ಈ ರೀತಿಯ ಘಟನೆ ನಡೆದಿರುವಾಗ ಅಖಿಲೇಶ್ ಯಾದವ್ ಬ್ರಾಹ್ಮಣ ಎಂಬ ಕಾರಣಕ್ಕೆ ವೈದ್ಯರಿಗೆ ನಿಂದಿಸಿದ್ದಾರೆ ಎಂಬ ಮಾತು ಸುಳ್ಳು.

ಉತ್ತರಪ್ರದೇಶದಲ್ಲಿ ಮೂರನೇ ಹಂತದ ಚುನಾವಣೆ ಭಾನುವಾರ (ಫೆ.20) ನಡೆಯಲಿದೆ. ಈ ಚುನಾವಣೆಯಲ್ಲಿ ಸ್ಪರ್ಧಿಸುವ ಕೆಲ ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೂರನೇ ಹಂತದಲ್ಲಿ 623 ಅಭ್ಯರ್ಥಿಗಳ ಪೈಕಿ 135 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ನ ವರದಿಯ ಪ್ರಕಾರ 103 (17%) ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ.


"ಆಲೂಗಡ್ಡೆ ಬೆಲ್ಟ್" ಎಂದೂ ಕರೆಯಲ್ಪಡುವ ಯಾದವ ನಾಡಿನಲ್ಲಿ ಮೂರನೇ ಸುತ್ತಿನ ಚುನಾವಣೆ ಪ್ರವೇಶಿಸುವುದರೊಂದಿಗೆ ಬಿಜೆಪಿ ಮತ್ತು ಎಸ್ಪಿ ನಡುವೆ ಮಾತಿನ ಸಮರ ತೀವ್ರಗೊಂಡಿದೆ. ಈ ಪ್ರದೇಶ ಹೆಚ್ಚಿನ ಅಪರಾಧಕ್ಕಾಗಿ ಕುಖ್ಯಾತವಾಗಿದೆ. ಐದು ಜಿಲ್ಲೆಗಳು - ಝಾನ್ಸಿ, ಲಲಿತ್‌ಪುರ್, ಜಲೌನ್, ಹಮೀರ್‌ಪುರ್ ಮತ್ತು ಮಹೋಬಾದಲ್ಲಿ ಮೂರನೇ ಹಂತದಲ್ಲಿ ಫೆಬ್ರವರಿ 20 ರಂದು 59 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಫೆಬ್ರವರಿ 20 ರಂದು ಉತ್ತರ ಪ್ರದೇಶದ "ಆಲೂಗಡ್ಡೆ ಬೆಲ್ಟ್"(ಯಾದವರ ನಾಡು) ನ 59 ಕ್ಷೇತ್ರಗಳಲ್ಲಿ ಮೂರನೇ ಸುತ್ತಿನ ಮತದಾನದಲ್ಲಿ ಬಿಜೆಪಿ ಮತ್ತು ಎಸ್ಪಿ ನಡುವೆ ಕಠಿಣ ಹೋರಾಟ ನಡೆಸುತ್ತಿವೆ. ಮೊದಲ ಎರಡು ಸುತ್ತುಗಳಿಗಿಂತಲೂ ಇದು ಬಿಜೆಪಿಗೆ ಕಷ್ಟಕರವಾಗಿದೆ. ಈ ಪ್ರದೇಶದಲ್ಲಿ ಗಣನೀಯ ಯಾದವ ಸಮುದಾಯದ ಬೆಂಬಲವನ್ನು ಹೊಂದಿರುವ ಎಸ್‌ಪಿ, ಯಾದವೇತರ ಒಬಿಸಿಗಳ ನಡುವೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಯತ್ನಗಳನ್ನು ಮಾಡುತ್ತಿದೆ. ಚುನಾವಣೆ ನಡೆಯಲಿರುವ 16 ಜಿಲ್ಲೆಗಳ ಪೈಕಿ ಒಂಬತ್ತರಲ್ಲಿ ಯಾದವ ಸಮುದಾಯ ಚೆನ್ನಾಗಿ ಬೇರೂರಿದ್ದರೆ, ಫಿರೋಜಾಬಾದ್, ಫರೂಕಾಬಾದ್, ಕನ್ನೌಜ್ ಮತ್ತು ಕಾನ್ಪುರ ನಗರದಲ್ಲಿ ಮುಸ್ಲಿಂ ಪಾಕೆಟ್ಸ್ ಕಡಿಮೆ ಇದ್ದಾರೆ.

2017 ರ ಚುನಾವಣೆಯಲ್ಲಿ ಈ ಪ್ರದೇಶದಲ್ಲಿ ಒಬಿಸಿ, ಮೇಲ್ಜಾತಿಗಳು ಮತ್ತು ಜಾತವ್ ಅಲ್ಲದ ದಲಿತರೊದಿಗಿನ ಮೈತ್ರಿಯೊಂದಿಗೆ ಬಿಜೆಪಿ ಯಶಸ್ವಿಯಾಗಿತ್ತು. ಆದಾಗ್ಯೂ, ಕಳೆದ ಐದು ವರ್ಷಗಳಲ್ಲಿ ಬಡ ಜನರಲ್ಲಿ "ಫಲಾನುಭವಿ ಗುಂಪು" (ಸರಕಾರದ ವಿವಿಧ ಯೋಜನೆಗಳಿಂದ ಪ್ರಯೋಜನ ಪಡೆದ ಜನರು) ಹೊರಹೊಮ್ಮುವಿಕೆಯು ಬಿಜೆಪಿಯ ಬೆಂಬಲದ ನೆಲೆಯನ್ನು ಮತ್ತಷ್ಟು ಬಲಪಡಿಸಿದೆ. ಬಿಜೆಪಿಗೆ ಈ ಗುಂಪಿನ ಮೌನ ಬೆಂಬಲವಿದೆ ಎಂದು ರಾಜಕೀಯ ವಿಶ್ಲೇಷಕ ಬ್ರಿಜೇಶ್ ಶುಕ್ಲಾ ಹೇಳಿದ್ದಾರೆ. ಹತ್ರಾಸ್, ಫಿರೋಜಾಬಾದ್, ಕಾಸ್ಗಂಜ್, ಇಟಾಹ್, ಮೈನ್‌ಪುರಿ, ಫರೂಕಾಬಾದ್, ಕನ್ನೌಜ್, ಇಟಾವಾ, ಔರಯ್ಯ, ಕಾನ್ಪುರ್ ದೇಹತ್, ಕಾನ್ಪುರ್, ಜಲೌನ್, ಝಾನ್ಸಿ, ಲಲಿತ್‌ಪುರ್, ಹಮೀರ್‌ಪುರ್ ಮತ್ತು ಮಹೋಬಾದಲ್ಲಿ ಮತದಾನ ನಡೆಯಲಿದೆ.

Fact Check

ಕ್ಲೇಮು

ಬ್ರಾಹ್ಮಣ ಎಂಬ ಕಾರಣಕ್ಕೆ ಅಖಿಲೇಶ್ ಯಾದವ್ ವೈದ್ಯರನ್ನು ನಿಂದಿಸಿದರೆ ಎಂದು ವಿಡಿಯೋ ವೈರಲ್ ಮಾಡಲಾಗಿದೆ.

ಪರಿಸಮಾಪ್ತಿ

ಈ ರೀತಿಯ ಘಟನೆ ನಡೆದಿರುವಾಗ ಅಖಿಲೇಶ್ ಯಾದವ್ ಬ್ರಾಹ್ಮಣ ಎಂಬ ಕಾರಣಕ್ಕೆ ವೈದ್ಯರಿಗೆ ನಿಂದಿಸಿದ್ದಾರೆ ಎಂಬ ಮಾತು ಸುಳ್ಳು

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A video of former Uttar Pradesh chief minister and Samajwadi Party leader Akhilesh Yadav went viral with the claim that he misbehaved with a doctor because he was a Brahmin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X