ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಕೊರೊನಾ ಲಸಿಕೆ ಪಡೆಯಲು ಹಿರಿಯ ನಾಗರಿಕರು ಯಾವುದೇ ವಿವರ ನೀಡುವ ಅಗತ್ಯವಿಲ್ಲ

|
Google Oneindia Kannada News

ನವದೆಹಲಿ, ಜನವರಿ 06: ದೇಶದಲ್ಲಿ ಕೊವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಕೊರೊನಾ ಲಸಿಕೆಗೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ.

ಜನವರಿ 13ರ ಬಳಿಕ ಲಸಿಕೆ ನೀಡಲಾಗುತ್ತದೆ. 50 ವರ್ಷದ ಮೇಲ್ಪಟ್ಟವರು ಹಾಗೂ ಮುನ್ನೆಲೆಯ ಆರೋಗ್ಯ ಕಾರ್ಯಕರ್ತರಿಗೆ ಮೊದಲು ಕೊರೊನಾ ಲಸಿಕೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಕೊರೊನಾ ಲಸಿಕೆ ಪಡೆಯಲು ಶೇ.69ರಷ್ಟು ಭಾರತೀಯರು ಹಿಂದೇಟು, ಕಾರಣವೇನು?ಕೊರೊನಾ ಲಸಿಕೆ ಪಡೆಯಲು ಶೇ.69ರಷ್ಟು ಭಾರತೀಯರು ಹಿಂದೇಟು, ಕಾರಣವೇನು?

ಲಸಿಕೆ ಪಡೆಯುವವರು ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾಗೆ ತಮ್ಮ ಸಂಪೂರ್ಣ ವಿವರವನ್ನು ಸಲ್ಲಿಸಬೇಕು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

 Fact Check: DCGI Not Asking Senior Citizens Their Details On COVID-19 Vaccine

ಆಧಾರ್, ಬ್ಯಾಂಕ್ ಸೇರಿದಂತೆ ಇತರೆ ಮಾಹಿತಿ ಕೇಳಲಾಗುತ್ತದೆ, ಓಟಿಪಿಯನ್ನು ನೀಡಿದರೆ ಮಾತ್ರ ನಿಮಗೆ ಲಸಿಕೆ ನೀಡಲಾಗುವುದು ಎನ್ನುವ ಕೆಲವು ಸುಳ್ಳು ಸುದ್ದಿ ಹರಿದಾಡುತ್ತಿದೆ. ಇಂತಹ ಕೆಲವು ಘಟನೆಗಳಲ್ಲಿ ಜನರು 12 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ. ಇಂತಹ ಸುಳ್ಳು ಸುದ್ದಿಗೆ ಸೊಪ್ಪು ಹಾಕಬೇಡಿ ಎಂದು ಸರ್ಕಾರ ಹೇಳಿದೆ. ನೋಂದಣಿ ಕುರಿತು ಆರೋಗ್ಯ ಇಲಾಖೆಯಿಂದ ಯಾವುದೇ ಕರೆ ಬಂದರೂ ಅದಕ್ಕೆ ಪ್ರತಿಕ್ರಿಯಿಸಬೇಡಿ.

ಲಸಿಕೆ ನೀಡಲು ಇದುವರೆಗೆ ಯಾವುದೇ ನೋಂದಣಿ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿಲ್ಲ. ಯಾರೂ ಕೂಡ ತಮ್ಮ ಸ್ವವಿವರವನ್ನು ನೀಡುವ ಅಗತ್ಯವಿಲ್ಲ, ಒಂದೊಮ್ಮೆ ಅಂತವರ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡರೆ ಸೈಬರ್ ಅಪರಾಧ ದಾಳಿಯಲ್ಲಿ ನೀವು ಸಂತ್ರಸ್ತರಾಗುತ್ತೀರಿ.

12 ವರ್ಷಕ್ಕಿಂತ ಹೆಚ್ಚಿನ ಮಕ್ಕಳ ಮೇಲೆ ಮಾಡಿರುವ ಪ್ರಯೋಗದಿಂದ ಲಸಿಕೆ ಸುರಕ್ಷಿತ ಎಂದು ಕಂಡುಬಂದಿದ್ದು ಹೈದರಾಬಾದ್ ಮೂಲದ ಸಂಸ್ಥೆ ಮೂರನೇ ಹಂತದ ಪ್ರಯೋಗದಲ್ಲಿ ನಿರತವಾಗಿದೆ.

ಲಸಿಕೆ ಅಭಿಯಾನವನ್ನು ವಯಸ್ಕರಿಗೆ ಮಾತ್ರ ಸದ್ಯ ನಡೆಸಲಾಗುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ದತ್ತಾಂಶವಿದ್ದರೆ ಅದನ್ನು ಮುಂದಿನ ದಿನಗಳಲ್ಲಿ ಮಕ್ಕಳಿಗೆ ಸಹ ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ದೇಶದಲ್ಲಿ ಎರಡು ಕೊರೊನಾ ಲಸಿಕೆಗಳಿಗೆ ಅನುಮತಿ ದೊರೆತಿದೆ. ಐವತ್ತು ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮೊದಲು ಕೊರೊನಾ ಲಸಿಕೆ ಸಿಗಲಿದೆ. ಹಾಗೆಯೇ ಮುನ್ನಲೆ ಕಾರ್ಯಕರ್ತರಿಗೂ ಲಸಿಕೆ ಲಭ್ಯವಾಗಲಿದೆ. ಈ ಮೊದಲು 2021ರ ಆಗಸ್ಟ್ ಒಳಗೆ 30 ಕೋಟಿ ಜನರಿಗೆ ಲಸಿಕೆ ವಿತರಿಸಲು ಸರ್ಕಾರ ತೀರ್ಮಾನಿಸಿತ್ತು.

Fact Check

ಕ್ಲೇಮು

ಕೊರೊನಾ ಲಸಿಕೆ ಪಡೆಯಲು ಹಿರಿಯ ನಾಗರಿಕರ ಮಾಹಿತಿ ಕಡ್ಡಾಯ

ಪರಿಸಮಾಪ್ತಿ

ಕೊರೊನಾ ಲಸಿಕೆಪಡೆಯಲು ಯಾವುದೇ ಮಾಹಿತಿ ಅಗತ್ಯವಿಲ್ಲ

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
With the COVID-19 vaccine in India getting all set for a possible January 13 rollout, the seamsters are out in the open.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X