ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: 'ಬಸ್‌ ಬಣ್ಣ ಬದಲಿಸಿದ ಹರಿಯಾಣ' ಹೀಗೊಂದು ಸಂದೇಶ ವೈರಲ್

|
Google Oneindia Kannada News

ಚಂಡಿಗಡ್ ನವೆಂಬರ್ 22: ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆಗೆ ಮುಂದಾದಾಗಿನಿಂದಲೂ ಕಳೆದ ಒಂದು ವರ್ಷದಿಂದ ಹರಿಯಾಣ ಆಗಾಗ ಸುದ್ದಿಯಲ್ಲಿದೆ. ಆದರೆ ಈ ಬಾರಿ ಇದು ಸಂಪೂರ್ಣವಾಗಿ ವಿಭಿನ್ನ ಕಾರಣಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ. ಕೆಲವು ನೆಟ್ಟಿಗರು ಹರಿಯಾಣದ ಬಿಳಿ ಮತ್ತು ನೀಲಿ ಬಸ್‌ಗಳು ಈಗ ಕೆಂಪು ಬಣ್ಣಕ್ಕೆ ಬದಲಾಗಿವೆ ಎಂಬ ಸಂದೇಶದೊಂದಿಗೆ ಕೆಲ ಬಸ್‌ಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. 'ಹರಿಯಾಣಾ ರೋಡ್‌ವೇಸ್' ನ ಹೊಸ ಬಸ್ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಲಾಗುತ್ತಿದೆ. ಬಿಳಿ ಮತ್ತು ನೀಲಿ ಬಸ್‌ಗಳ ಬದಲಿಗೆ ಕೆಂಪು ಬಸ್‌ಗಳನ್ನು ಓಡಿಸಲು ಸರ್ಕಾರ ಪ್ರಾರಂಭಿಸಿದೆ ಎಂಬ ಹೇಳಿಕೆಯೊಂದಿಗೆ ಈ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಈ ಬಸ್ಸುಗಳು ಹರಿಯಾಣ ರಸ್ತೆ ಮಾರ್ಗಗಳಿಗೆ ಸೇರಿದೆಯೇ, ಈ ವೈರಲ್ ಚಿತ್ರಗಳಿಗೆ ಸಂಬಂಧಿಸಿದಂತೆ OneIndia ಹಿಂದಿ ಅಂತರ್ಜಾಲದಲ್ಲಿ ತನಿಖೆಯನ್ನು ಪ್ರಾರಂಭಿಸಿತು. ಹರಿಯಾಣ ಈಗಾಗಲೇ ಹಲವಾರು ಡೀಲಕ್ಸ್ ಕೆಂಪು ಬಸ್‌ಗಳನ್ನು ಹೊಂದಿದ್ದರೂ, ಬಿಳಿ ಮತ್ತು ನೀಲಿ ಬಸ್‌ಗಳ ಬಣ್ಣವನ್ನು ಬದಲಾಯಿಸಿದಿಲ್ಲ ಎಂದು ಕಂಡುಹಿಡಿದಿದೆ.

Fact Check: Bus color changed Haryana message is viral

ತನಿಖೆ

ಮೊದಲು ಹರಿಯಾಣ ರೋಡ್‌ವೇಸ್ ಬಸ್‌ಗಳ ಬಣ್ಣವನ್ನು ಬದಲಾಯಿಸಬಹುದೇ ಎಂಬ ಮಾಧ್ಯಮ ವರದಿಗಳನ್ನು ಹುಡುಕಲು ಪ್ರಯತ್ನಿಸಲಾಯಿತು. ಆದರೆ ಅಂಥ ಬದಲಾವಣೆಯ ಬಗ್ಗೆ ಯಾವುದೇ ಮಾಹಿತಿ ಕಂಡುಬಂದಿಲ್ಲ. ನಂತರ ಹರಿಯಾಣ ರಾಜ್ಯ ಸಾರಿಗೆ ನಿರ್ದೇಶನಾಲಯದ ವೆಬ್‌ಸೈಟ್‌ಗೆ ಭೇಟಿ ನೀಡಲಾಯಿತು. ಅದರಲ್ಲಿ ಅದೇ ಬಿಳಿ ಮತ್ತು ನೀಲಿ ಬಸ್‌ಗಳನ್ನು ಕಂಡುಕೊಂಳ್ಳಲಾಗಿದೆ. ಇದು ಅಧಿಕೃತವಾಗಿ ಬಸ್ ಬಣ್ಣವನ್ನು ಇನ್ನೂ ಬದಲಾಯಿಸಿಲ್ಲ ಎಂದು ಖಚಿತಪಡಿಸಿದೆ. ಈ ವೆಬ್‌ಸೈಟ್‌ನಲ್ಲಿ ಹುಡುಕಿದಾಗ, ಮುಂದಿನ ದಿನಗಳಲ್ಲಿ ಬಸ್‌ನ ಬಣ್ಣವನ್ನು ಬದಲಾಯಿಸಲಾಗುವುದು ಎಂಬ ಯಾವುದೇ ನಿರ್ದೇಶನ ಕಂಡುಬಂದಿಲ್ಲ.

Fact Check: Bus color changed Haryana message is viral

ಇನ್ನುಷ್ಟು ಖಾತರಿಗಾಗಿ ವೈರಲ್ ಚಿತ್ರಗಳನ್ನು ಹುಡುಕಾಟ ನಡೆಸಲಾಯಿತು. ಹರಿಯಾಣದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಕಂಡುಕೊಳ್ಳಲಾಯಿತು. ಈ ಹ್ಯಾಂಡಲ್‌ಗೆ ವೈರಲ್ ಸಂದೇಶವನ್ನು ಸತ್ಯ-ಪರಿಶೀಲನಾ ತಂಡ ಕಳುಹಿಸಿದೆ. ಆದರೆ ಹರಿಯಾಣದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವೈರಲ್ ಸಂದೇಶವನ್ನು ತಳ್ಳಿಹಾಕುವ ಪೋಸ್ಟ್ ಅನ್ನು ಟ್ವೀಟ್ ಮಾಡಿದೆ.

ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳಲ್ಲಿ ಒಂದಾಗಿದೆ. ಹರ್ಯಾಣ ರಸ್ತೆಗಳಲ್ಲಿ ಡೀಲಕ್ಸ್ ಸಾರಿಗೆಯ ಕೆಂಪು ಬಸ್ಸುಗಳು ಈಗಾಗಲೇ ಸೇವೆಯಲ್ಲಿವೆ ಎಂದು ಅದು ಉಲ್ಲೇಖಿಸಿದೆ. ಕೆಂಪು ಬಣ್ಣದ ಬಸ್‌ಗಳು ಎರಡನೇ ಸ್ಥಾನದಲ್ಲಿವೆ.ಈ ಟ್ವೀಟ್ ಅಧಿಕೃತವಾಗಿ ಬಸ್‌ನ ಬಣ್ಣವನ್ನು ಇನ್ನೂ ಬದಲಾಯಿಸಿಲ್ಲ ಎಂದು ಖಚಿತಪಡಿಸಿದೆ.

Fact Check: Bus color changed Haryana message is viral

Recommended Video

ರಾಹುಲ್ ದ್ರಾವಿಡ್ ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada

ಹರ್ಯಾಣ ಸಾರಿಗೆ ಸದ್ಯಕ್ಕೆ ಬಣ್ಣ ಬದಲಾಯಿಸಲು ಯಾವುದೇ ಸೂಚನೆ ಇಲ್ಲ ಎಂದು ಹೇಳಿರುವ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರವೂ ಇದೆ. ಹರ್ಯಾಣ ರಸ್ತೆಮಾರ್ಗಗಳಿಗೆ ಡೀಲಕ್ಸ್ ಸಾರಿಗೆ ಸಾಧನವಾಗಿ ಕೆಂಪು ಬಸ್ಸುಗಳು ಈಗಾಗಲೇ ಸೇವೆಯಲ್ಲಿವೆ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ, ಹರಿಯಾಣ ರಾಜ್ಯ ಸಾರಿಗೆ ನಿರ್ದೇಶನಾಲಯದ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ, ಬುಕ್ಕಿಂಗ್ ವಿಭಾಗದಲ್ಲಿ ರೆಡ್ ವೋಲ್ವೊದ ಇದೇ ರೀತಿಯ ಚಿತ್ರಗಳನ್ನು ಕಂಡುಕೊಂಡಿದ್ದೇವೆ. ಹರಿಯಾಣ ರೋಡ್‌ವೇಸ್ ಬಸ್‌ಗಳ ಬಣ್ಣವನ್ನು ಕೆಂಪು ಬಣ್ಣಕ್ಕೆ ಬದಲಾಯಿಸಲಾಗುವುದು ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಸಂದೇಶದೊಂದಿಗೆ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಆದರೆ ಹರಿಯಾಣ ರೋಡ್‌ವೇಸ್ ತನ್ನ ಬಸ್‌ಗಳ ಬಣ್ಣವನ್ನು ಬಿಳಿ ಮತ್ತು ನೀಲಿ ಬಣ್ಣಕ್ಕೆ ಬದಲಾಯಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ. ಆದ್ದರಿಂದ ಹರಿಯಾಣ ರಸ್ತೆ ಮಾರ್ಗದ ಬಸ್‌ಗಳಿಗೆ ಕೆಂಪು ಬಣ್ಣ ಬಳಿಯಲಾಗುತ್ತಿದೆ ಎಂಬ ಮಾತು ನಿಜವಲ್ಲ ಎಂದು ಹೇಳಬಹುದು.

Fact Check

ಕ್ಲೇಮು

ಹರಿಯಾಣದಲ್ಲಿ ಬಿಳಿ, ನೀಲಿ ಬಸ್ ಬದಲಿಗೆ ಕೆಂಪು ಬಸ್ ರಸ್ತೆಗಿಳಿದಿದೆ.

ಪರಿಸಮಾಪ್ತಿ

ಹರಿಯಾಣ ಸಾರಿಗೆ ಸಂಸ್ಥೆ ತನ್ನ ಬಿಳಿ ಮತ್ತು ನೀಲಿ ಬಸ್‌ಗಳ ಬಣ್ಣವನ್ನು ಬದಲಾಯಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Some natives shared a photo of some buses with the message that the white and blue buses of Haryana have now turned red.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X