ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check; ಬೆಂಗಳೂರಲ್ಲಿ ಕೋವಿಡ್ ಪರೀಕ್ಷೆ ಬಳಿಕ ಮಹಿಳೆ ನಾಪತ್ತೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 13: ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಅಂಬ್ಯುಲೆನ್ಸ್‌ನಲ್ಲಿ ತೆರಳಿದ್ದ ಮಹಿಳೆ ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದಾಳೆ ಎಂಬ ಸುದ್ದಿ ಹಬ್ಬಿತ್ತು. ಮಾಧ್ಯಮಗಳಲ್ಲಿಯೂ ಈ ಸುದ್ದಿ ಪ್ರಕಟವಾಗಿತ್ತು. ಬೆಂಗಳೂರು ಪೊಲೀಸರು FactCheck ಮೂಲಕ ಸುದ್ದಿಗೆ ಸ್ಪಷ್ಟನೆ ನೀಡಿದ್ದಾರೆ.

ಗಂಡ-ಹೆಂಡತಿ ನಡುವೆ ಜಗಳ ನಡೆದು ನಡೆದು ಮಹಿಳೆ ಸ್ವ ಇಚ್ಛೆಯಿಂದ ಪರಿಚಿತ ವ್ಯಕ್ತಿಯೊಬ್ಬನ ಸಹಾಯದಿಂದ ಮನೆ ಬಿಟ್ಟು ತೆರಳಿರುವುದು ಸಾಕ್ಷ್ಯಾಧಾರಗಳಿಂದ ತಿಳಿದುಬಂದಿದೆ. ಮಹಿಳೆ ಸುರಕ್ಷಿತವಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರಲ್ಲಿ ಅಂಬ್ಯುಲೆನ್ಸ್ ಹತ್ತಿದ ಯುವತಿ ದೆಹಲಿಯಲ್ಲಿ ಪತ್ತೆ!ಬೆಂಗಳೂರಲ್ಲಿ ಅಂಬ್ಯುಲೆನ್ಸ್ ಹತ್ತಿದ ಯುವತಿ ದೆಹಲಿಯಲ್ಲಿ ಪತ್ತೆ!

ಈ ಪ್ರಕರಣಕ್ಕೂ ಕೋವಿಡ್ ಪರೀಕ್ಷೆ ನಡೆಸುವ ಬಿಬಿಎಂಪಿ, ವೈದ್ಯಕೀಯ ಇಲಾಖೆಯ ಸಿಬ್ಬಂದಿಗಳಿಗೂ ಯಾವುದೇ ಸಂಬಂಧವಿಲ್ಲ. ಜನರು ಯಾವುದೇ ಆತಂಕ, ಮುಗುಗರಕ್ಕೆ ಒಳಗಾಗದೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಬೆಂಗಳೂರು ಪೊಲೀಸರು ಮನವಿ ಮಾಡಿದ್ದಾರೆ.

Fact Check: ಕೋವಿಡ್ ರೋಗಿಗಳಿಗೆ ಐಸಿಎಂಆರ್‌ನಿಂದ ಐವರ್ಮೆಕ್ಟಿನ್ ಶಿಫಾರಸು?Fact Check: ಕೋವಿಡ್ ರೋಗಿಗಳಿಗೆ ಐಸಿಎಂಆರ್‌ನಿಂದ ಐವರ್ಮೆಕ್ಟಿನ್ ಶಿಫಾರಸು?

Fact Check Bengaluru Women Missing After Ambulance Picks Her Up

ಘಟನೆ ವಿವರ: ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಾಗ ಮಹಿಳೆಗೆ ಪಾಸಿಟೀವ್ ಬಂದಿತ್ತು, ಆಕೆ ಆಂಬ್ಯುಲೆನ್ಸ್‌ನಲ್ಲಿ ತೆರಳಿದ್ದಳು. ಬಳಿಕ ಕಾಣೆಯಾಗಿದ್ದಳು, 4/9/2020ರಂದು ನಡೆದ ಘಟನೆ ಬಗ್ಗೆ ಅಂದೇ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

Fact Check: ಲಡಾಖ್ ಸಂಘರ್ಷದ ವಿಷ್ಯ; ಏನು ಫೋಟೋಗಳ ಹಿಂದಿನ ಸತ್ಯ? Fact Check: ಲಡಾಖ್ ಸಂಘರ್ಷದ ವಿಷ್ಯ; ಏನು ಫೋಟೋಗಳ ಹಿಂದಿನ ಸತ್ಯ?

ಗಂಡ ಮತ್ತು ಹೆಂಡತಿ ನಡುವೆ ಗಲಾಟೆ ನಡೆದಿತ್ತು. ಮಹಿಳೆ ಮನೆಯಿಂದ ಹೊರ ಹೋಗಲು ಬಯಸಿದ್ದಳು. ಅದಕ್ಕಾಗಿ ಸ್ನೇಹಿತನ ಸಹಾಯ ಪಡೆದಿದ್ದಳು. 8/9/2020ರಂದು ಆಕೆ ಮಾಡಿದ ದೂರವಾಣಿ ಕರೆಯನ್ನು ತನಿಖಾಧಿಕಾರಿಗಳು ರೆಕಾರ್ಡ್ ಮಾಡಿಕೊಂಡಿದ್ದಾರೆ.

Recommended Video

Karnataka ಯಾವ ಪ್ರದೇಶದಲ್ಲಿ ಭಾರಿ ಮಳೆ ನಿರೀಕ್ಷೆ | Oneindia Kannada

ಮಹಿಳೆಯ ಧ್ವನಿಯನ್ನು ದೂರು ನೀಡಿದ ಪತಿ ಗುರುತಿಸಿದ್ದಾರೆ. ಮಹಿಳೆ ಸುರಕ್ಷಿತವಾಗಿದ್ದು, ಸಾಂಸಾರಿಕ ತೊಂದರೆಯನ್ನು ಬಗೆಹರಿಸಿಕೊಳ್ಳುವೆ ಎಂದು ಆಕೆ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

Fact Check

ಕ್ಲೇಮು

ಬೆಂಗಳೂರಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಅಂಬ್ಯುಲೆನ್ಸ್‌ನಲ್ಲಿ ತೆರಳಿದ್ದ ಮಹಿಳೆ ನಾಪತ್ತೆಯಾಗಿದ್ದಾಳೆ

ಪರಿಸಮಾಪ್ತಿ

ಈ ವರದಿಯನ್ನು ಬೆಂಗಳೂರು ಪೊಲೀಸರು ನಿರಾಕರಿಸಿದ್ದಾರೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
In a Fact Check Bengaluru police said that Covid positive women in Bengaluru goes missing after ambulance picks her up news in false.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X