ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check:ದೀರ್ಘಕಾಲದವರೆಗೆ ಮಾಸ್ಕ್ ಬಳಸಿದರೆ ಆಮ್ಲಜನಕ ಕೊರತೆ ಉಂಟಾಗುವುದೇ?

|
Google Oneindia Kannada News

ನವದೆಹಲಿ,ಮೇ 11: ದೀರ್ಘಕಾಲದವರೆಗೆ ಮಾಸ್ಕ್ ಧರಿಸಿದರೆ ಆಮ್ಲಜನಕ ಕೊರತೆ ಎದುರಾಗುತ್ತದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೊರೊನಾ ಎರಡನೇ ಅಲೆಯು ದೇಶಾದ್ಯಂತ ಹಬ್ಬುತ್ತಿದೆ, ಇದೇ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ತಪ್ಪು ಸಂದೇಶಗಳು ಹರಿದಾಡುತ್ತಿರುತ್ತವೆ.

ಇವೆಲ್ಲವೂ ಜನರ ದುಃಖ ಹಾಗೂ ಭಯವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ, ಫೇಸ್ ಮಾಸ್ಕ್ ದೀರ್ಘಕಾಲೀನವಾಗಿ ಬಳಕೆ ಮಾಡುವುದರಿಂದ ಉಸಿರಾಟದ ತೊಂದರೆ ಅಥವಾ ಆಮ್ಲಜನಕದ ಕೊರತೆ ಎದುರಾಗುತ್ತದೆ ಎಂದು ಹೇಳಲಾಗಿದೆ.

ಉಸಿರಾಡುವ ಗಾಳಿಯನ್ನು ಮತ್ತೆ ಮತ್ತೆ ಉಸಿರಾಡುವುದರಿಂದ ಇದು ಸಂಭವಿಸಬಹುದು, ಇದು ಇಂಗಾಲದ ಡೈಆಕ್ಸೈಡ್ ಆಗಿ ಬದಲಾಗುತ್ತದೆ. ಮತ್ತು ತಲೆ ತಿರುಗಿದ ಅನುಭವವಾಗುತ್ತದೆ. ಈ ಪೋಸ್ಟ್ ಜನರ ಭೀತಿ ಹಾಗೂ ಗೊಂದಲಗಳಿಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿ ಸುಳ್ಳು, ಮಾಸ್ಕ್ ಧರಿಸುವುದರಿಂದ ದೇಹದಲ್ಲಿ ಆಮ್ಲಜನಕದ ಕೊರತೆ ಉಂಟಾಗುವುದಿಲ್ಲ, ಮಾಸ್ಕ್ ವ್ಯಕ್ತಿಯ ರಕ್ತದಲ್ಲಿ ಆಮ್ಲಜನಕ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

Fact Check: Does Long-Term Use Of Face Masks Cause Oxygen Deficiency?

ಇದು ಸುಳ್ಳೆಂದು ಹೇಳುತ್ತಾ ಪಿಐಬಿ ಟ್ವೀಟ್‌ ಮಾಡಿದೆ, ದೀರ್ಘಕಾಲದವರೆಗೆ ಮಾಸ್ಕ್ ಬಳಕೆ ಮಾಡಿದರೆ ದೇಹದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ.

ಆದರೆ ಇದು ಸುಳ್ಳು, ಮಾಸ್ಕ್‌ ಸರಿಯಾಗಿ ಧರಿಸುವ ಮೂಲಕ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ, ನಿಯಮಿತವಾಗಿ ಕೈ ತೊಳೆದುಕೊಳ್ಳುವ ಮೂಲಕ ಕೊರೊನಾ ವೈರಸ್‌ ಹರಡುವುದನ್ನು ತಡೆಗಟ್ಟಬೇಕಿದೆ ಎಂದು ಹೇಳಿದೆ.

Fact Check

ಕ್ಲೇಮು

ದೀರ್ಘಕಾಲದವರೆಗೆ ಮಾಸ್ಕ್ ಧರಿಸುವುದರಿಂದ ದೇಹದಲ್ಲಿ ಆಮ್ಲಜನಕ ಕೊರತೆ ಉಂಟಾಗುತ್ತದೆ.

ಪರಿಸಮಾಪ್ತಿ

ದೀರ್ಘಕಾಲದವರೆಗೆ ಮಾಸ್ಕ್ ಧರಿಸುವುದರಿಂದ ದೇಹದಲ್ಲಿ ಆಮ್ಲಜನಕ ಕೊರತೆ ಉಂಟಾಗುವುದಿಲ್ಲ, ಇದರಿಂದ ಕೊರೊನಾ ಸೋಂಕಿನಿಂದ ದೂರವಿರಬಹುದು.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
As the second Covid wave rages across the country, there is a tremendous amount of misinformation and fake news circulating on the internet, further adding to the woes of the common man.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X