ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ಬಸ್ ಅಪಘಾತದಲ್ಲಿ ಮೃತಪಟ್ಟ ಮಹಿಳೆಯರೆಲ್ಲರೂ ವೈದ್ಯರು?

|
Google Oneindia Kannada News

ಬೆಂಗಳೂರು, ಜನವರಿ 20: ಕರ್ನಾಟಕ ವೈದ್ಯಕೀಯ ಕಾಲೇಜಿನ 17 ವೈದ್ಯರು ಬಸ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

RIP ದಾವಣೆಗೆರೆ ಜೆಜೆಎಂಎಂ ಕಾಲೇಜಿನ 17 ಮಂದಿ ಮಹಿಳಾ ವೈದ್ಯರು ಬಸ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಬರೆಯಲಾಗಿದೆ. ದಾವಣೆಗೆರೆಯಿಂದ ಗೋವಾಗೆ ಪ್ರವಾಸಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ಪುಣೆ-ಬೆಂಗಳೂರು ಹೈವೇಯಲ್ಲಿ ಬಸ್ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು.

ಧಾರವಾಡದಲ್ಲಿ ಭೀಕರ ರಸ್ತೆ ಅಪಘಾತ; 13 ಜನರು ಸಾವು ಧಾರವಾಡದಲ್ಲಿ ಭೀಕರ ರಸ್ತೆ ಅಪಘಾತ; 13 ಜನರು ಸಾವು

ಆದರೆ ಅದು ಸುಳ್ಳು, ಮೃತಪಟ್ಟವರು 13 ಮಂದಿ ಅದರಲ್ಲಿ ಓರ್ವ ಮಾತ್ರ ವೈದ್ಯೆ, ಮಂದಿ ಸೇಂಟ್ ಪಾಲ್ಸ್ ಕಾನ್ವೆಂಟ್‌ನ ಹಿರಿಯ ವಿದ್ಯಾರ್ಥಿಗಳು, ಅವರು ಗೋವಾ ಪ್ರವಾಸಕ್ಕೆಂದು ಹೊರಟಾಗ ಬಸ್ ಟಿಪ್ಪರ್‌ಗೆ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.

Fact Check: Death Of 17 Female Doctors In Karnataka Bus Crash Is Misleading

13 ಮಂದಿ ಸೇಂಟ್ ಪಾಲ್ ಕಾನ್ವೆಂಟ್‌ನ 1989ನೇ ಬ್ಯಾಚ್‌ನ ವಿದ್ಯಾರ್ಥಿಗಳಾಗಿದ್ದರು. ಅದರಲ್ಲಿದ್ದ ಓರ್ವ ವೈದ್ಯೆ ಹೆಸರು ವೀಣಾ ಪ್ರಕಾಶ್ ಅವರು ಜೆಎಂಎಂ ಮೆಡಿಕಲ್ ಕಾಲೇಜಿನ ವೈದ್ಯೆಯಾಗಿದ್ದಾರೆ, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಿ ಗೋವಾದಲ್ಲಿ ಸಂತೋಷ ಕೂಟ ಆಚರಿಸಲು ಹೊರಟಿದ್ದ ಮಹಿಳೆಯರು ಮಸಣ ಸೇರಿದ ದುರ್ಘಟನೆ ಇಲ್ಲಿನ ಸಮೀಪದ ಇಟಿಗಟ್ಟಿ ಬಳಿ ನಸುಕಿನ ವೇಳೆ ನಡೆದಿದೆ.

ಸಂಕ್ರಾಂತಿ ಹಬ್ಬ ಆಚರಿಸಿ ಗೋವಾ ಪ್ರವಾಸಕ್ಕೆ ಟೆಂಪೋದಲ್ಲಿ ಹೊರಟಿದ್ದ ದಾವಣಗೆರೆಯ ಲೇಡಿಸ್ ಕ್ಲಬ್ ನ 18 ಮಹಿಳೆಯರ ಪೈಕಿ 13 ಮಂದಿ ಮೃತಪಟ್ಟಿರುವ ಮನಕಲಕುವ ದುರಂತ ಇಂದು ನಸುಕಿನಲ್ಲಿ ಸಂಭವಿಸಿದೆ.

FAKE: ಭಾರತೀಯ ಪಾಸ್‌ಪೋರ್ಟ್‌ಗಳಿಂದ ರಾಷ್ಟ್ರೀಯತೆಯ ಹಕ್ಕನ್ನು ತೆಗೆದುಹಾಕಿಲ್ಲFAKE: ಭಾರತೀಯ ಪಾಸ್‌ಪೋರ್ಟ್‌ಗಳಿಂದ ರಾಷ್ಟ್ರೀಯತೆಯ ಹಕ್ಕನ್ನು ತೆಗೆದುಹಾಕಿಲ್ಲ

ಇಲ್ಲಿಗೆ ಸಮೀಪದ ಇಟಿಗಟ್ಟಿ ಬಳಿಯ ಪೂನಾ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಿಳೆಯರು ಪ್ರಯಾಣಿಸುತ್ತಿದ್ದ ಟೆಂಪೋ ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಪ್ರವೀಣ್, ಆಶಾ, ಮೀರಾಬಾಯಿ, ಪರಂಜ್ಯೋತಿ, ರಾಜೇಶ್ವರಿ, ಶಕುಂತಲಾ, ಉಷಾ, ವೇದ, ವೀಣಾ, ಮಂಜುಳಾ, ನಿರ್ಮಲಾ, ರಜನೇಶಿ, ಪ್ರೀತಿ, ಸ್ವಾತಿ ಎಂದು ಗುರುತಿಸಲಾಗಿದ್ದು, ಮೃತರ ಪೈಕಿ ಇಬ್ಬರು ವೈದ್ಯರಿದ್ದಾರೆ.

ಮೃತರೆಲ್ಲರೂ ದಾವಣಗೆರೆ ಮೂಲದವರಾಗಿದ್ದು, ಲೇಡಿಸ್ ಕ್ಲಬ್ ನ 18 ಮಹಿಳೆಯರು ಗೋವಾಕ್ಕೆ ಜಾಲಿಟ್ರಿಪ್ ಹೊರಟಿದ್ದಾಗ, ಈ ದುರಂತ ಸಂಭವಿಸಿದೆ ಎಂದು ಗಾಯಗೊಂಡಿರುವ ಮಹಿಳೆ ಘಟನೆಯ ವಿವರವನ್ನು ತಿಳಿಸಿದ್ದಾರೆ.

Recommended Video

ಬಿಎಂಟಿಸಿ ಬಸ್ ಅಲ್ಲಿ ಕಾಂಗ್ರೆಸ್ಸ್ ಕಾರ್ಯಕರ್ತರು!! | Oneindia Kannada

ದಾವಣಗೆರೆಯಿಂದ ನಸುಕಿನ ವೇಳೆ ಹೊರಟಿದ್ದ ಇವರುಗಳು ಧಾರವಾಡದ ಪರಿಚಯಸ್ಥರ ಮನೆಯಲ್ಲಿ ಬೆಳಗಿನ ಉಪಹಾರ ಸ್ವೀಕರಿಸಲು ಸಿದ್ಧತೆ ಮಾಡಿಕೊಂಡಿದ್ದರು

Fact Check

ಕ್ಲೇಮು

ಬಸ್ ಅಪಘಾತದಲ್ಲಿ ಮೃತಪಟ್ಟ ಮಹಿಳೆಯರೆಲ್ಲರೂ ವೈದ್ಯರಾಗಿದ್ದರು.

ಪರಿಸಮಾಪ್ತಿ

ಬಸ್ ಅಪಘಾತದಲ್ಲಿ 13 ಮಂದಿ ಮೃತಪಟ್ಟಿದ್ದರು, ಆದರೆ ಅವರು ಸೇಂಟ್ ಪಾವ್ ಕಾನ್ವೆಂಟ್‌ನ ಹಿರಿಯ ವಿದ್ಯಾರ್ಥಿಗಳಾಗಿದ್ದರು

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
A viral post on social media says 17 female professors from a Karnataka medical college succumbed to a fatal bus mishap on the Bengaluru-Pune highway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X