ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: 10,100 ರೂ. ಜಮೆ ಮಾಡಿದರೆ ನಿಮ್ಮ ಖಾತೆಗೆ ಬರುತ್ತಾ 30 ಲಕ್ಷ!?

|
Google Oneindia Kannada News

ನವದೆಹಲಿ, ಮೇ 10: ನಮ್ಮ ದೇಶದಲ್ಲಿ ಮೋಸ ಹೋಗುವವರು ಎಲ್ಲಿಯವರೆಗೂ ಇರುತ್ತಾರೋ, ಮೋಸ ಮಾಡುವವರೂ ಅಲ್ಲಿಯವರೆಗೂ ಇದ್ದೇ ಇರುತ್ತಾರೆ. ಅಂಥದ್ದೇ ಉದ್ದೇಶದಿಂದ ಹರಿ ಬಿಡಲಾಗಿದ್ದ ಸುಳ್ಳು ಸುದ್ದಿಯ ಅಸಲಿ ಕಥೆ ಈಗ ಬಟಾ ಬಯಲಾಗಿದೆ.

ನೀವು ಬ್ಯಾಂಕ್ ಖಾತೆಗೆ ಕೇವಲ 10,100 ರೂಪಾಯಿ ಜಮೆ ಮಾಡಿ, ಅದಕ್ಕೆ ಪ್ರತಿಯಾಗಿ 30 ಲಕ್ಷ ರೂಪಾಯಿ ಅನ್ನು ಪಡೆಯಬಹುದು ಎಂಬ ಅಧಿಸೂಚನೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿತ್ತು. ಆದರೆ ಇದು ನಕಲಿ ಅಧಿಸೂಚನೆ ಎಂದು ಪಿಐಬಿ ಸ್ಪಷ್ಟಪಡಿಸಿದೆ.

Fact check: ಸರ್ಕಾರ 3 ತಿಂಗಳವರೆಗೆ ಉಚಿತ ಇಂಟರ್ನೆಟ್ ನೀಡುತ್ತಿದೆ?Fact check: ಸರ್ಕಾರ 3 ತಿಂಗಳವರೆಗೆ ಉಚಿತ ಇಂಟರ್ನೆಟ್ ನೀಡುತ್ತಿದೆ?

PIB ಫ್ಯಾಕ್ಟ್ ಚೆಕ್‌ನ ಟ್ವೀಟ್ ಪ್ರಕಾರ, ಭಾರತ ಸರ್ಕಾರದ ಹೆಸರಿನಲ್ಲಿ ನಕಲಿ ಪತ್ರವನ್ನು ನೀಡಲಾಗಿದ್ದು, 10,100 ರೂಪಾಯಿ ಪಾವತಿಸಿದರೆ ನಿಮಗೆ 30 ಲಕ್ಷ ರೂಪಾಯಿ ಅನ್ನು ನೀಡಲಾಗುತ್ತದೆ ಎಂಬುದಾಗಿ ಹೇಳುತ್ತದೆ.

ನಕಲಿ ಅಧಿಸೂಚನೆಯಲ್ಲಿ ಹೇಳಿರುವುದೇನು?: ನಕಲಿ ನೋಟೀಸ್‌ನಲ್ಲಿ, ಆತ್ಮೀಯ ಗ್ರಾಹಕರೇ ನಿಮ್ಮ ಒಟ್ಟು ಮೊತ್ತ 30,00,000 ರೂಪಾಯಿ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗಿದೆ. ಆದರೆ ಈ ಮೊತ್ತವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ನಿಮ್ಮ ಪ್ರಕ್ರಿಯೆಯು ಪೂರ್ಣಗೊಳ್ಳುವ ಹಂತದಲ್ಲಿದೆ ಭಾರತ ಸರ್ಕಾರದಿಂದ ಈ ಮೊತ್ತವನ್ನು ಸ್ವೀಕರಿಸಲು ಬ್ಯಾಂಕ್‌ನಲ್ಲಿ ರೂ 10,100 ಠೇವಣಿ ಮಾಡಬೇಕು ಎಂದು ಹೇಳಲಾಗಿದೆ.

Fact Check: Can Depositing Rs 10,100 In Bank Account get You Rs 30 Lakh In Return PIB Clarifies

ಜನರಿಗೆ ವಂಚಿಸುವ ಉದ್ದೇಶದಿಂದ ಹೊರಡಿಸುವ ಇಂಥ ನಕಲಿ ಅಧಿಸೂಚನೆಗಳು ಮತ್ತು ಪ್ರಕಟಣೆಗಳ ಬಗ್ಗೆ ಸಾರ್ವಜನಿಕರು ಜಾಗೃತರಾಗಿರುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುವ ಇಂಥ ನಕಲಿ ಸೂಚನೆಗಳು ಮತ್ತು ಇತರ ದಾಖಲೆಗಳನ್ನು ಪರಿಶೀಲಿಸುವುದಕ್ಕಾಗಿ ಪಿಐಬಿಗೆ ಕಳುಹಿಸುವಂತೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ನಕಲಿ ಸುದ್ದಿಗಳ ಪರಾಮರ್ಶೆ ಹೇಗೆ?: ಜನರು ನಕಲಿಯಾಗಬಹುದಾದ ಚಿತ್ರಗಳು, ವೀಡಿಯೊಗಳು ಮತ್ತು ಲೇಖನಗಳನ್ನು ಕಳುಹಿಸಲು ಪಿಐಬಿ ಅನುಮತಿಸುತ್ತದೆ. ಇದು ಅವರಿಗೆ ಸತ್ಯ-ಪರೀಕ್ಷೆಯನ್ನು ನಡೆಸುತ್ತದೆ. ಜನರು ಈ ಕೆಳಗಿನ ಹಂತಗಳ ಮೂಲಕ ಸತ್ಯ-ಪರಿಶೀಲನೆಯನ್ನು ಮಾಡಬಹುದು.

* www.factcheck.pib.gov.in ಗೆ ಹೋಗಿ ಮತ್ತು ಚಿತ್ರ ಅಥವಾ ವೀಡಿಯೊವನ್ನು ಅಪ್‌ಲೋಡ್ ಮಾಡಿ.

* ಅಥವಾ ಚಿತ್ರ ಅಥವಾ ವೀಡಿಯೊವನ್ನು Whatsapp ಸಂಖ್ಯೆ +91-8799711259 ಗೆ ಸಂದೇಶದ ಮೂಲಕ ಕಳುಹಿಸಿ

* ಅಥವಾ, ಇಮೇಲ್ ವಿಳಾಸ [email protected] ಗೆ ಇಮೇಲ್ ಮೂಲಕ ಫೈಲ್‌ಗಳನ್ನು ಕಳುಹಿಸಿ

Fact Check

ಕ್ಲೇಮು

10,100 ರೂಪಾಯಿ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿದರೆ, 30 ಲಕ್ಷ ರೂಪಾಯಿ ಪಡೆಯಬಹುದು.

ಪರಿಸಮಾಪ್ತಿ

ಭಾರತ ಸರ್ಕಾರದಿಂದ 30 ಲಕ್ಷ ರೂಪಾಯಿ ಪಡೆಯುವುದಕ್ಕೆ 10,100 ಜಮಾ ಮಾಡಬೇಕು ಎಂಬುದಾಗಿ ಯಾವುದೇ ಅಧಿಸೂಚನೆಯನ್ನು ಹೊರಡಿಸಿಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: Can Depositing Rs 10,100 In Bank Account get You Rs 30 Lakh In Return? PIB Clarifies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X