ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಗೊಳ್ಳಿ ಮೀನುಮಾರುಕಟ್ಟೆಯಲ್ಲಿ ವ್ಯಾಪಾರ ನಿರ್ಬಂಧ; ಸತ್ಯ- ಮಿಥ್ಯ?

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಅಕ್ಟೋಬರ್ 11: ಗೋ ಹತ್ಯೆಯನ್ನು ಖಂಡಿಸಿ ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ಅಕ್ಟೋಬರ್ 1ರಂದು ನಡೆದ ಪ್ರತಿಭಟನಾ ಸಭೆಯ ಕಾವು ಇನ್ನೂ ಆರಿಲ್ಲ. ಪ್ರತಿಭಟನಾ ಸಭೆಯ ಮೆರವಣಿಗೆ ವೇಳೆ ಪ್ರವಾದಿಯನ್ನು ಕೆಟ್ಟದಾಗಿ ನಿಂದಿಸಿದರು ಎಂಬ ಕಾರಣಕ್ಕಾಗಿ, ಹಿಂದೂ ಮಹಿಳಾ ಮೀನು ಮಾರಾಟಗಾರರ ಬಳಿ ವ್ಯಾಪಾರ ಮಾಡಬಾರದೆಂಬ ನಿರ್ಬಂಧ ಹೇರಿರುವ ಬಗ್ಗೆ ವ್ಯಾಪಕ ಪರ ವಿರೋಧದ ಚರ್ಚೆಯಾಗುತ್ತಿದೆ.

ಒಂದೆಡೆ ಮುಸ್ಲಿಂ ಮುಖಂಡರು ಆರ್ಥಿಕ ನಿರ್ಬಂಧವನ್ನು ಹೇರಿಲ್ಲ ಅಂತಾ ಸ್ಪಷ್ಟನೆ ನೀಡಿದರೆ, ಇತ್ತ ಹಿಂದೂ ಮುಖಂಡರು ಅವರು ಬರಲಿಲ್ಲವಾದರೆ ಏನಂತೆ ನಾವಿದ್ದೇವೆ ಎಂದು ಮಹಿಳಾ ಮೀನುಗಾರರಿಗೆ ಬೆಂಬಲ ನೀಡಿದ್ದಾರೆ.

ಉಡುಪಿ: ಮೀನು ವ್ಯಾಪಾರದಲ್ಲೂ ಕೋಮು ದ್ವೇಷ; ಹಿಂದೂಗಳಿಂದ ಮೀನು ಖರೀದಿಸದಂತೆ ತಾಕೀತುಉಡುಪಿ: ಮೀನು ವ್ಯಾಪಾರದಲ್ಲೂ ಕೋಮು ದ್ವೇಷ; ಹಿಂದೂಗಳಿಂದ ಮೀನು ಖರೀದಿಸದಂತೆ ತಾಕೀತು

"ಗಂಗೊಳ್ಳಿಯಲ್ಲಿ ಬಂದರು ಹೊರತುಪಡಿಸಿ ಮೂರು ಸಣ್ಣ ಮೀನು ಮಾರುಕಟ್ಟೆಗಳಿವೆ. ಈ ಮಾರುಕಟ್ಟೆಗಳೊಂದರ ಮಹಿಳೆಯರು ತಮ್ಮ ವ್ಯಾಪಾರವನ್ನು ಸ್ಥಗಿತಗೊಳಿಸಿ ಪ್ರತಿಭಟನಾ ಸಭೆಗೆ ತೆರಳಿದ್ದರು. ಪ್ರತಿಭಟನಾ ವೇಳೆ ಮಹಿಳೆಯರು ಪ್ರವಾದಿ ಬಗ್ಗೆ ಕೆಟ್ಟದಾಗಿ ಘೋಷಣೆ ಕೂಗಿದ್ದಾರೆ," ಅನ್ನುವುದು ಮುಸ್ಲಿಂ ಮುಖಂಡರ ಆರೋಪ.

Fact Check: Business Restriction On Gangolli Fishing Market

"ಕೆಲವರು ಬೇಸರಗೊಂಡು ಆ ಮಹಿಳೆಯರ ಬಳಿ ಮೀನು ವ್ಯಾಪಾರಕ್ಕೆ ಹೋಗುತ್ತಿಲ್ಲ. ಆದರೆ ನಾವು ಯಾರಿಗೂ ಬಹಿಷ್ಕಾರವನ್ನು ಹೇರಿಲ್ಲ. ಗಂಗೊಳ್ಳಿ ಭಾಗದಲ್ಲಿ ಹಿಂದೂ- ಮುಸ್ಲಿಮರು ಸಹಬಾಳ್ವೆಯಿಂದ ಬಾಳುತ್ತಿದ್ದರು. ಆದರೆ ಗೋಹತ್ಯೆಯ ವಿಡಿಯೋ ವೈರಲ್ ಆದ ಬಳಿಕ ಎರಡೂ ಧರ್ಮದ ಜನರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಹೀಗಾಗಿ ಕೆಲ ಜನರು ಮಾರುಕಟ್ಟೆಗಳಿಗೆ ಅವರ ಸ್ವಇಚ್ಛೆಯಿಂದ ಹೋಗದಿರಬಹುದು," ಅಂತಾ ಮುಸ್ಲಿಂ ಘಟನೆಗಳ ಮುಖಂಡರು ಸ್ಪಷ್ಟನೆ ನೀಡಿದ್ದಾರೆ.

ಆದರೆ ಹಿಂದೂ ಸಂಘಟನೆಗಳ ಮುಖಂಡರು ಮತ್ತು ಬಿಜೆಪಿ ಮುಖಂಡರು, ಮುಸ್ಲಿಮರು ಹಿಂದೂಗಳ ಮೇಲೆ ಹೇರಿರುವ ಆರ್ಥಿಕ ನಿರ್ಬಂಧದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರುಕಟ್ಟೆಗೆ ತೆರಳಿದ ಬಿಜೆಪಿ ಹಿಂದುಳಿದ ಮೋರ್ಚಾದ ಮುಖಂಡರು ಇನ್ಮುಂದೆ ಎಲ್ಲರೂ ಆರ್ಥಿಕ ನಿರ್ಬಂಧ ಹೇರಿರುವ ಮಾರುಕಟ್ಟೆಯಲ್ಲೇ ಮೀನು ಖರಿದೀಸಬೇಕು ಅಂತಾ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

Fact Check: Business Restriction On Gangolli Fishing Market

"ಕೆಲವು ಮುಸ್ಲಿಮರು ಹಿಂದೂ ಮೀನುಗಾರ ಮಹಿಳೆಯರಿಗೆ ಆರ್ಥಿಕ ನಿರ್ಬಂಧ ಹೇರಿದ್ದಾರೆ. ಈ ಮಹಿಳೆಯರ ಬಳಿ ಮೀನು ಖರೀದಿಸಬಾರದೆಂದು ತಾಕೀತು ಮಾಡಿದ್ದಾರೆ. ಪ್ರತಿ ದಿನ ಮೀನು ಮಾರಿ ಜೀವನ ಮಾಡುವ ಮಹಿಳೆಯರನ್ನು ಸೋಲುವುದಕ್ಕೆ ಬಿಡಬಾರದು. ಪ್ರತಿದಿನ ಕಾರ್ಯಕರ್ತರು ಈ ಮಹಿಳೆಯರಿಂದಲೇ ಮೀನು ಖರೀದಿ ಮಾಡಬೇಕೆಂದು," ಸೂಚನೆ ನೀಡಿದ್ದಾರೆ.

ಆದರೆ ಬಡ ಮೀನುಗಾರ ಮಹಿಳೆಯರಿಗೆ ಕಳೆದೊಂದು ವಾರಗಳಿಂದ ವ್ಯಾಪಾರ ಇಲ್ಲ. ಪ್ರತಿಭಟನೆಯಲ್ಲಿ ಭಾಗವಹಿಸಿದ ಮಹಿಳೆಯರ ವಿರುದ್ಧ ಕೋಮು ದ್ವೇಷ ಕಾರಿರುವುದರಿಂದ ಪ್ರತಿದಿನ ತೆಗೆದುಕೊಂಡ ಮೀನು ವ್ಯಾಪಾರ ಆಗುವುದೇ ಅನುಮಾನವಾಗಿದೆ. ಹೀಗಾಗಿ ಆರ್ಥಿಕ ನಿರ್ಬಂಧ ಹೇರಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗಂಗೊಳ್ಳಿ ಪೊಲೀಸರ ಮೊರೆ ಹೋಗಿದ್ದಾರೆ.

Fact Check: Business Restriction On Gangolli Fishing Market

ಪೊಲೀಸರು ಶಾಂತಿ ಸಭೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಇನ್ಮುಂದೆ ಮುಸ್ಲಿಮರ ಬಳಿ ಹಿಂದೂಗಳು ವ್ಯಾಪಾರ ಮಾಡಬಾರದೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ. ಅದೇನೇ ಆದರೂ ಎರಡು ಕೋಮಿನ ಜನರ ನಡುವಿನ ದ್ವೇಷ ಬಡ ವ್ಯಾಪಾರಿಗಳ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿರುವಂತೆ ಮಾಡಿರುವುದು ಮಾತ್ರ ವಿಪರ್ಯಾಸ.

Fact Check

ಕ್ಲೇಮು

ಅನೇಕ ಸುದ್ದಿ ಮಾಧ್ಯಮಗಳಲ್ಲಿ ಉಡುಪಿ ಜಿಲ್ಲೆಯ ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಮುಸ್ಲಿಂ ಸಮುದಾಯದವರು ಹಿಂದೂಗಳ ಬಳಿ ಮೀನು ವ್ಯಾಪಾರ ಮಾಡದೇ ಕೋಮುದ್ವೇಷ ಸಾಧಿಸಲಾಗುತ್ತದೆ ಎಂದು ಸುದ್ದಿಯಾಗಿತ್ತು. ಆದರೆ ಅಲ್ಲಿ ಹಿಂದೂ- ಮುಸ್ಲಿಂ ಸಮುದಾಯದವರು

ಪರಿಸಮಾಪ್ತಿ

ಅಂತಿಮವಾಗಿ, ಅಕ್ಟೋಬರ್ 1ರಂದು ಗೋ ಹತ್ಯೆಯನ್ನು ಖಂಡಿಸಿ ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ನಡೆದ ಪ್ರತಿಭಟನಾ ಸಭೆಯ ಸಭೆಯಲ್ಲಿ ಮಹಿಳೆಯರು ಭಾಗವಹಿಸಿದ್ದ ಒಂದು ಮೀನು ಮಾರುಕಟ್ಟೆಯಲ್ಲಿ ಮಾತ್ರ ಮುಸ್ಲಿಂ ಸಮುದಾಯದವರು ಸ್ವಇಚ್ಚೆಯಿಂದ ವ್ಯಾಪಾರಕ್ಕೆ

Rating

True
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Muslim leaders have clarified that there is no trade restriction on the Gangolli fish market in Udupi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X