ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಸೋನಿಯಾ ಗಾಂಧಿ ಹಿಂದೆ ಕ್ರೈಸ್ತ ಧರ್ಮ ಮತಾಂತರ ಸಂಬಂಧಿಸಿದ ಪುಸ್ತಕವಿತ್ತೇ?

|
Google Oneindia Kannada News

ನವದೆಹಲಿ, ಜೂನ್ 01: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರಿರುವ ಫೋಟೋ ಒಂದರಲ್ಲಿ ಅವರ ಹಿಂದೆ 'ಪವಿತ್ರ ಬೈಬಲ್' ಹಾಗೂ ಜೀಸಸ್ ಕ್ರಿಸ್ತನ ಮೂರ್ತಿ ಮತ್ತು 'ಹೌ ಟು ಕನ್ವರ್ಟ್ ಇಂಡಿಯಾ ಇಂಟು ಕ್ರಿಶ್ಚಿಯನ್ ನೇಷನ್' ಎನ್ನುವ ಪುಸ್ತಕವಿತ್ತು ಎನ್ನುವ ಮಾತುಗಳು ಕೇಳಿಬಂದಿದೆ.

ಇದನ್ನು ತಮಿಳುನಾಡು ಬಿಜೆಪಿ ಕಾರ್ಯದರ್ಶಿ ಸುಮತಿ ವೆಂಕಟೇಶ್ ಎಂಬುವವರು ಹಾಗೂ ಬಿಜೆಪಿ ಬೆಂಬಲಿಗರಾದ ರೇಣುಕಾ ಜೈನ್ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದರು. ಹಾಗೆಯೇ ಬಿಜೆಪಿ ಬೆಂಬಲಿಗರಾದ ಮೀನಾ ದಾಸ್ ನಾರಾಯಣ್ ಕೂಡ ಇದನ್ನು ಟ್ವೀಟ್ ಮಾಡಿದ್ದರು.

ಈ ಚಿತ್ರ ಫೇಸ್‌ಬುಕ್‌ನಲ್ಲಿ ಕೂಡ ವೈರಲ್ ಆಗಿದೆ, ಅಕ್ಟೋಬರ್ 2020ರಲ್ಲಿ ರಾಹುಲ್ ಗಾಂಧಿ ಇಂಧನ ಬೆಲೆ ಏರಿಕೆ ವಿರುದ್ಧ ಹಾಗೂ ರೈತರ ಪರವಾಗಿ ಪ್ರತಿಭಟನೆ ನಡೆಸಿದ್ದರು. ಆ ಸಮಯದಲ್ಲಿ ರಾಹುಲ್ ಗಾಂಧಿ ವಿಡಿಯೋ ಒಂದನ್ನು ಮಾಡಿದ್ದರು.

Fact Check: Book Titled How To Convert India Into Christian Nation Behind Sonia Gandhi

ಆ ವಿಡಿಯೋದ ಸ್ಕ್ರೀನ್‌ಶಾಟ್ ಇಟ್ಟುಕೊಂಡು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಆ ವಿಡಿಯೋದಲ್ಲಿ ಸೋನಿಯಾ ಗಾಂಧಿ ಅವರು ಕುಳಿತಿರುವ ಹಿಂಭಾಗದಲ್ಲಿರುವ ಶೆಲ್ಫ್‌ನಲ್ಲಿ ಭಾರತವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುವುದು ಹೇಗೆ ಎನ್ನುವ ಪುಸ್ತಕವಿದೆ, ಹಾಗೆಯೇ ಬೈಬಲ್ ಪುಸ್ತಕವೂ ಅವರ ಹಿಂದಿದೆ ಎಂದು ಆರೋಪಿಸಲಾಗಿತ್ತು.

ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ಅವರು, "ಈ ಎಡಿಟ್ ಮಾಡಿದ ಚಿತ್ರವನ್ನು ಹಂಚಿಕೊಳ್ಳುವ ಎಲ್ಲ ಸೋಷ್ಯಲ್ ಮೀಡಿಯಾ ಹ್ಯಾಂಡಲ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ನಾವು ನಿರ್ಧರಿಸಿದ್ದೇವೆ. ಅಮಿತ್ ಮಾಲ್ವೇರ್ ಮತ್ತು ಕಂಪನಿಯ ಕೊಳಕು ತಂತ್ರಗಳನ್ನು ಇನ್ನಷ್ಟು ಸಹಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಆದರೆ ಆ ಚಿತ್ರ ಸುಳ್ಳಾಗಿದ್ದು, ಸೋನಿಯಾ ಗಾಂಧಿ ಅವರ ಹಿಂದೆ ಅಂತಹ ಯಾವುದೇ ಪುಸ್ತಕವಿರಲಿಲ್ಲ ಎನ್ನುವ ಸ್ಪಷ್ಟನೆ ಲಭ್ಯವಾಗಿದೆ.

Fact Check

ಕ್ಲೇಮು

ಸೋನಿಯಾ ಗಾಂಧಿ ಹಿಂಭಾಗ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುವ ಕುರಿತ ಪುಸ್ತಕವಿತ್ತು

ಪರಿಸಮಾಪ್ತಿ

ಸೋನಿಯಾ ಗಾಂಧಿ ಹಿಂಭಾಗ ಅಂತಹ ಯಾವುದೇ ಪುಸ್ತಕಗಳಿರಲ್ಲಿಲ್ಲ, ಎಲ್ಲವೂ ಸೃಷ್ಟಿ ಮಾಡಿತ್ತುರೇಟಿಂಗ್: False

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Fact Check: An image of Congress President Sonia Gandhi has been shared on social media and it allegedly shows that the bookshelf behind her has the ‘Holy Bible’, a statue of Jesus and a book titled ‘How to Convert India into Christian Nation’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X