ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: ತೃಪ್ತಿ ದೇಸಾಯಿ ಶಬರಿಮಲೆ ಭೇಟಿ ಹಿಂದೆ ಬಿಜೆಪಿ ಪಾತ್ರ?

|
Google Oneindia Kannada News

ನವದೆಹಲಿ, ನವೆಂಬರ್ 24: ಮಹಿಳಾ ಕಾರ್ಯಕರ್ತೆ ತೃಪ್ತಿ ದೇಸಾಯಿ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶ ಮಾಡುವ ಯತ್ನವು ಎಲ್ಲರ ಗಮನ ಸೆಳೆದಿತ್ತು.

2018ರವರೆಗೆ ಇದ್ದ ಮುಟ್ಟಿನ ವಯಸ್ಸಿನ ಮಹಿಳೆಯರು ಶಬರಿಮಲೆಗೆ ಭೇಟಿ ನೀಡುವಂತಿಲ್ಲ ಎಂಬ ನಿಯಮವು ಸುಪ್ರೀಂಕೋರ್ಟ್‌ನಲ್ಲಿ ಬದಲಾದ ಬಳಿಕ ಅನೇಕ ಮಹಿಳಾ ಕಾರ್ಯಕರ್ತರು ದೇವಸ್ಥಾನದ ಒಳಗೆ ಪ್ರಯತ್ನಿಸಲು ಯತ್ನಿಸಿದರಾದರೂ ತೃಪ್ತಿ ದೇಸಾಯಿ ಅವರ ಹೆಸರು ಹೆಚ್ಚು ಸುದ್ದಿ ಮಾಡಿತ್ತು.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸ್ಕ್ರೀನ್‌ಶಾಟ್‌ ಒಂದು ಭಾರಿ ಚರ್ಚೆಗೆ ಕಾರಣವಾಗಿದೆ.

ತೃಪ್ತಿ ದೇಸಾಯಿ ಶಬರಿಮಲೆ ಪ್ರವೇಶದ ಹಿಂದೆ ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಅವರ ಕೈವಾಡವಿದೆ ಎಂಬ ಬಿಜೆಪಿ ಉಪಾಧ್ಯಕ್ಷೆ ಶೋಭಾ ಎಸ್ ಅವರು ಮನೋರಮ ವೆಬ್‌ಸೈಟ್‌ಗೆ ನೀಡಿದ್ದಾರೆಂಬ ಹೇಳಿಕೆಯ ಸ್ಕ್ರೀನ್‌ಶಾಟ್‌ಗಳು ಹರಿದಾಡುತ್ತಿವೆ.

ನಕಲಿ ಚಿತ್ರಗಳಲ್ಲಿ ಡೇಟ್‌ಲೈನ್ ವ್ಯತ್ಯಾಸ

ನಕಲಿ ಚಿತ್ರಗಳಲ್ಲಿ ಡೇಟ್‌ಲೈನ್ ವ್ಯತ್ಯಾಸ

ವೈರಲ್‌ ಆಗಿರುವ ಸ್ಕ್ರೀನ್‌ಶಾಟ್‌ನ್ನು ಮನೋರಮಾ ಆನ್‌ಲೈನ್‌ನಲ್ಲಿ ಪ್ರಕಟವಾದ ಇನ್ನಿತರೆ ಲೇಖನಗಳಿಗೆ ಹೋಲಿಕೆ ಮಾಡಿ ನೋಡಿದಾಗ ವೈರಲ್ ಸ್ಕ್ರೀನ್‌ಶಾಟ್‌ನಲ್ಲಿನ ಸ್ವರೂಪದಲ್ಲಿ ವ್ಯತ್ಯಾಸ ಕಾಣಿಸಿದ್ದು,ಅಧಿಕೃತ ಮತ್ತು ನಕಲಿ ಚಿತ್ರಗಳಲ್ಲಿ ಡೇಟ್‌ಲೈನ್ ವ್ಯತ್ಯಾಸವನ್ನು ಈ ಕೆಲಗಿನ ಚಿತ್ರಗಳಲ್ಲಿ ಗಮನಿಸಬಹುದಾಗಿದೆ. ಅಲ್ಲದೆ ಮನೋರಮಾ ಆನ್‌ಲೈನ್ನನ ಸಂಯೋಜಕ ಸಂಪಾದಕ ಸಂತೋಷ್ ಜಾರ್ಜ್ ಜಾಕೋಬ್‌ರನ್ನು ಫ್ಯಾಕ್ಟ್‌ಚೆಕ್ ತಂಡ ಸಂಪರ್ಕಿಸಿದಾಗ ಸ್ಕ್ರೀನ್ ಶಾಟ್ ನಕಲಿ ಎಂಬುದು ತಿಳಿದುಬಂದಿದೆ.

ಸಾಮಾಜಿಕ ಜಾಲತಾಣದಲ್ಲಿರುವ ಸ್ಕ್ರೀನ್‌ಶಾಟ್ ನಕಲಿ

ಸಾಮಾಜಿಕ ಜಾಲತಾಣದಲ್ಲಿರುವ ಸ್ಕ್ರೀನ್‌ಶಾಟ್ ನಕಲಿ

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸ್ಕ್ರೀನ್‌ಶಾಟ್ ನಕಲಿ ಮತ್ತು ತಿರುಚಲಾಗಿದೆ ಎಂಬುದು ಇಂಡಿಯಾ ಟುಡೆ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ ನಡೆಸಿರುವ ಫ್ಯಾಕ್ಟ್‌ಚೆಕ್‌ನಿಂದ ಬಯಲಾಗಿದೆ. ಅಲ್ಲದೆ ಈ ರೀತಿಯ ಯಾವುದೇ ಹೇಳಿಕೆ ನೀಡಿಲ್ಲ ಎಂದು ಶೋಭಾ ಸಹ ಸ್ಪಷ್ಟನೆ ನೀಡಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಕೇರಳ ಸ್ಥಳೀಯ ಚುನಾವಣೆ ಹಿನ್ನೆಲೆಯಲ್ಲಿ ಸ್ಕ್ರೀನ್‌ಶಾಟ್ ವೈರಲ್ ಆಗಿದ್ದು, ಸಾಕಷ್ಟು ಟೀಕೆಗೆ ಕಾರಣವಾಗಿದೆ.

ಸುರೇಂದ್ರ ನನ್ನನ್ನು ಮೂಲೆಗುಂಪು ಮಾಡಲು ಯತ್ನಿಸುತ್ತಿದ್ದಾರೆ

ಸುರೇಂದ್ರ ನನ್ನನ್ನು ಮೂಲೆಗುಂಪು ಮಾಡಲು ಯತ್ನಿಸುತ್ತಿದ್ದಾರೆ

ಕೆ ಸುರೇಂದ್ರನ್ ಅವರು ನನ್ನನ್ನು ಮೂಲೆಗುಂಪು ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಶೋಭಾ ಅವರು ರಾಜ್ಯ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಾಷ್ಟ್ರೀಯ ನಾಯಕರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಸ್ಕ್ರೀನ್‌ಶಾಟ್ ಹರಿದಾಡುತ್ತಿದೆ. ಆದರೆ ಶೋಭಾ ಅವರು ಹೇಳಿಕೆಯನ್ನು ಸಾಬೀತು ಮಾಡುವ ಯಾವುದೇ ಸುದ್ದಿ ಮನೋರಮಾ ಆನ್‌ಲೈನ್‌ನಲ್ಲಿ ಪ್ರಕಟವಾಗಿಲ್ಲ. ಅಲ್ಲದೆ, ತೃಪ್ತಿ ದೇಸಾಯಿ ಹಿಂದೆ ಬಿಜೆಪಿಯ ನಾಯಕರು ಇದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ಯಾವ ಸುದ್ದಿಯೂ ಲಭ್ಯವಾಗಿಲ್ಲ.

ಶೋಭಾ ಹೇಳಿದ್ದೇನು?

ಶೋಭಾ ಹೇಳಿದ್ದೇನು?

ಶಬರಿಮಲೆ ವಿಚಾರದಲ್ಲಿ ನಾನೆಂದಿಗೂ ಆ ರೀತಿಯ ಹೇಳಿಕೆ ನೀಡಿಲ್ಲ. ಮನೋರಮಾ ಸಹ ಈ ಕುರಿತು ಖಚಿತಪಡಿಸಿದ್ದು, ಅದೊಂದು ನಕಲಿ ಸ್ಕ್ರೀನ್‌ಶಾಟ್ ಎಂದು ಹೇಳಿದೆ. ಈ ಕುರಿತು ಕಾನೂನು ಕ್ರಮ ತೆಗೆದುಕೊಳ್ಳಲು ನಾನು ಒತ್ತಾಯಿಸಿದ್ದೇನೆ ಎಂದು ತಿಳಿಸಿದ್ದಾರೆ.

Fact Check

ಕ್ಲೇಮು

ತೃಪ್ತಿ ದೇಸಾಯಿ ಶಬರಿಮಲೆ ಭೇಟಿಯ ಹಿಂದೆ ಬಿಜೆಪಿ ಪಾತ್ರವಿದೆ

ಪರಿಸಮಾಪ್ತಿ

ತೃಪ್ತಿ ದೇಸಾಯಿ ಶಬರಿಮಲೆ ಭೇಟಿಯ ಹಿಂದೆ ಬಿಜೆಪಿ ಪಾತ್ರವಿದೆ ಎನ್ನುವುದು ಸುಳ್ಳು ಸುದ್ದಿ.ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸ್ಕ್ರೀನ್ ಶಾಟ್ ಸುಳ್ಳು.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Gender rights activist Trupti Desai’s attempts to visit the Sabarimala temple in Kerala had gained national attention in 2018 and 2019. Women of menstrual age group were not allowed to enter the Sabarimala temple until 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X