• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Fact Check: ಸೆಪ್ಟೆಂಬರ್ 25ರಿಂದ ದೇಶಾದ್ಯಂತ ಮತ್ತೊಂದು ಲಾಕ್‌ಡೌನ್

|

ನವೆಹಲಿ, ಸೆಪ್ಟೆಂಬರ್ 14: ಸೆಪ್ಟೆಂಬರ್ 25ರಿಂದ ದೇಶಾದ್ಯಂತ ಮತ್ತೊಂದು ಸುತ್ತಿನ ಲಾಕ್‌ಡೌನ್ ಜಾರಿಯಾಗಲಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆದರೆ ವಿಪತ್ತು ನಿರ್ವಹಣಾ ಪ್ರಾಧಿಕಾರ ಇಂತಹ ಯಾವುದೇ ವಿಷಯವನ್ನು ಕೇಂದ್ರ ಸರ್ಕಾರದ ಮುಂದಿಟ್ಟಿಲ್ಲ ಇದೆಲ್ಲವೂ ಸುಳ್ಳು ಎಂದು ಹೇಳಿದೆ.

Fact Check: ಅಕ್ಟೋಬರ್ 1ರಿಂದ ಚಿತ್ರ ಮಂದಿರಗಳು ತೆರೆಯಲಿವೆ

ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬಹುದೊಡ್ಡ ಅಪಾಯವೊಂದು ಭಾರತಕ್ಕೆ ಎದುರಾಗಲಿದೆ ಹೀಗಿ ಸೆಪ್ಟೆಂಬರ್ 25ರಿಂದ ಮತ್ತೊಂದು ಸುತ್ತಿನ ಲಾಕ್‌ಡೌನ್ ಘೋಷಿಸಲಾಗುತ್ತದೆ ಎಂದು ಹೇಳಲಾಗಿತ್ತು.

ಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೋ ಇದೊಂದು ಸುಳ್ಳು ಸುದ್ದಿ ಎಂದು ಹೇಳಿದೆ. ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಸೆಪ್ಟೆಂಬರ್ 25ರ ಮಧ್ಯರಾತ್ರಿಯಿಂದ 46 ದಿನಗಳ ಕಾಲ ಕೊರೊನಾ ಲಾಕ್‌ಡೌನ್ ವಿಧಿಸಲಾಗುತ್ತದೆ ಎನ್ನುವ ಸುದ್ದಿ ಹರಿದಾಡಿತ್ತು.

ಇದೀಗ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತೆ ದೇಶಾದ್ಯಂತ ಲಾಕ್‌ಡೌನ್ ವಿಧಿಸುವ ಕ್ರಮವನ್ನು ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.

Fact Check

ಕ್ಲೇಮು

ಸೆಪ್ಟೆಂಬರ್ 25 ರಿಂದ ಮತ್ತೊಂದು ಹಂತದ ಲಾಕ್‌ಡೌನ್

ಪರಿಸಮಾಪ್ತಿ

ಸೆಪ್ಟೆಂಬರ್ 25ರಿಂದ ಮತ್ತೊಂದು ಹಂತದ ಲಾಕ್‌ಡೌನ್ ಇಲ್ಲ, ಕೇಂದ್ರ ಸರ್ಕಾರ ಇಂತಹ ಯಾವ ಆಲೋಚನೆಯನ್ನೂ ಮಾಡಿಲ್ಲ, ಆದೇಶವನ್ನೂ ಹೊರಡಿಸಿಲ್ಲ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು factcheck@one.in ಗೆ ಇಮೇಲ್ ಮಾಡಿ

English summary
The government today denied reports that another lockdown had been recommended from September 25 because of a spurt in coronavirus cases in the country. The Press Information Bureau denied the news in a post with a "Fake News" alert.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X