ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact check: ಯುಪಿ ಆಕಾಶದಲ್ಲಿ ಕಂಡ ನಿಗೂಢ ದೀಪಗಳ ಸಾಲು- ಇದರ ಹಿಂದಿನ ಸತ್ಯವೇನು?

|
Google Oneindia Kannada News

ಲಕ್ನೋ, ಸೆಪ್ಟೆಂಬರ್ 13: ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಬಿಹಾರದ ಹಲವು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 12 ರ ಸೋಮವಾರ ತಡರಾತ್ರಿ ನಿಗೂಢ ಬೆಳಕಿನ ಅದ್ಭುತ ದೃಶ್ಯ ಕಂಡುಬಂದಿದೆ ಎಂದು ಹೇಳುವ ವಿಡಿಯೋವೊಂದು ವೈರಲ್ ಆಗಿದೆ. ಈ ದೃಶ್ಯವನ್ನು ನೋಡಿದ ಜನರು ಆಶ್ಚರ್ಯಗೊಂಡಿದ್ದಾರೆ. ಆಕಾಶದಲ್ಲಿ ಕಂಡ ಈ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ ಎಂದು ಹೇಳಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೊ ತುಂಬಾ ಹಳೆಯದಾಗಿದೆ ಎಂದು ಪರಿಶೀಲನೆ ಬಳಿಕ ತಿಳಿದು ಬಂದಿದೆ.

ವಿಡಿಯೋ ವೈರಲ್ ಆದ ಬಳಿಕ ಆಕಾಶದಲ್ಲಿ ಈ ಬೆಳಕು ಜನರಿಗೆ ಆಶ್ಚರ್ಯಕರ ವಿಷಯವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಲಕ್ನೋ, ಔರೈಯಾ, ಕನ್ನೌಜ್, ಇಟಾವಾ, ಸೀತಾಪುರ್ ಮತ್ತು ಲಖಿಂಪುರ ಖೇರಿ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಸಂಜೆ ತಡವಾಗಿ ಆಕಾಶದಲ್ಲಿ ಗೆರೆಗಳಂತಹ ಬೆಳಕಿನ ವಿಡಿಯೊವನ್ನು ರೆಕಾರ್ಡ್ ಮಾಡಲಾಗಿದೆ. ಈ ನಿಗೂಢ ಬೆಳಕು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದ್ದು ಚರ್ಚೆಯ ವಿಷಯವಾಗಿದೆ. ರೈಲಿನಂತೆ ದೀಪಗಳು ಗಾಳಿಯಲ್ಲಿ ಚಲಿಸುತ್ತಿರುವುದನ್ನು ಕಂಡು ಜನರು ಬೆರಗಾಗಿದ್ದಾರೆ.

Fact check: A row of mysterious lights seen in the sky of UP- What is the truth behind it?

2022 ಸೆಪ್ಟೆಂಬರ್ 12 ರ ಸೋಮವಾರ ತಡರಾತ್ರಿ ಇಂತಹದೊಂದು ದೃಶ್ಯ ಆಕಾಶದಲ್ಲಿ ಕಂಡುಬಂದಿದೆ ಎಂದು ಹೇಳುವ ಸುದ್ದಿಗಳು ಇಂದು ಅನೇಕ ವೆಬ್‌ಸೈಟ್‌ಗಳಲ್ಲಿ ವರದಿಯಾಗಿದೆ. ಆದರೆ ಈ ವಿಡಿಯೋ 2020ರಿಂದಲೇ ಯೂಟ್ಯೂಬ್‌ನಲ್ಲಿ ನೋಡಲು ಲಭ್ಯವಿದೆ. ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೊದಲ್ಲಿ, ಆಕಾಶದಲ್ಲಿ ಸಾಗುವ ಅನೇಕ ದೀಪಗಳು ಉರಿಯುತ್ತಿರುವುದನ್ನು ಸ್ಪಷ್ಟವಾಗಿ ಕಾಣಬಹುದು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಊಹಾಪೋಹಗಳು ಶುರುವಾಗಿದೆ. ಆದಾಗ್ಯೂ ಕೆಲವು ಮಾಧ್ಯಮ ವರದಿಗಳು ಫ್ಯಾಕ್ಟ್ ಚೆಕ್‌ನಲ್ಲಿ, ಇದು ವಿಚಿತ್ರವಾದ ಬೆಳಕು ಅಲ್ಲ ಎಂದು ಹೇಳಿವೆ. ಈ ವಿಡಿಯೋ 2020ರಿಂದಲೇ ಯೂಟ್ಯೂಬ್‌ನಲ್ಲಿ ನೋಡಲು ಲಭ್ಯವಿರುವುದರಿಂದ ಇದು ವಿಶ್ವದ ಶ್ರೀಮಂತ ವ್ಯಕ್ತಿ ಮತ್ತು ಟೆಸ್ಲಾ ಮಾಲೀಕ ಎಲೋನ್ ಮಸ್ಕ್‌ನ ಸ್ಟಾರ್‌ಲಿಂಕ್ ಉಪಗ್ರಹದ ಪರಿಣಾಮವಾಗಿದೆ ಎಂದು ಸ್ಪಷ್ಟವಾಗಿ ಹೇಳಬಹುದು.

ವಿಶ್ವದ ಅತ್ಯಂತ ಕುಗ್ರಾಮಗಳಿಗೂ ಶರವೇಗದ ಅಂತರ್ಜಾಲ ಸೇವೆ ಒದಗಿಸಲು ಅಮೆರಿಕದ ಉದ್ಯಮಿ ಎಲಾನ್‌ ಮಸ್ಕ್‌ ಒಡೆತನದ ಸ್ಪೇಸ್‌ ಎಕ್ಸ್‌ ಕಂಪನಿ ಹಾರಿಬಿಟ್ಟಿದ್ದ ಉಪಗ್ರಹಗಳು ಆಗಸದಿಂದ ಧರೆಯತ್ತ ಉದುರಿದ ವಿಡಿಯೋ ಇದಾಗಿದೆ. ಆದರೆ ಇವು ನಿಗದಿತ ಕಕ್ಷೆಯಿಂದ ಭೂಮಿಯ ವಾತಾವರಣಕ್ಕೆ ಪ್ರವೇಶಿಸುತ್ತಲೇ ಸುಟ್ಟು ಭಸ್ಮವಾಗಿರುವ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಬಿಹಾರದಲ್ಲಿ ನಿನ್ನೆ ರಾತ್ರಿ ಕಾಣಿಸಿಕೊಂಡಿದೆ ಎಂದು ಹೇಳಿಕೊಳ್ಳುವ ವಿಡಿಯೋ ಎರಡು ವರ್ಷ ಹಳೆಯದಾಗಿದೆ. ಇದು ಯೂಟ್ಯೂಬ್‌ನಲ್ಲೂ ನೋಡಬಹುದಾಗಿದೆ.

Fact Check

ಕ್ಲೇಮು

ಉತ್ತರಪ್ರದೇಶದ ಆಕಾಶದಲ್ಲಿ ಕಂಡ ನಿಗೂಢ ದೀಪಗಳ ಸಾಲು ಕಂಡುಬಂದ ವಿಡಿಯೋ ವೈರಲ್ ಮಾಡಲಾಗಿದೆ.

ಪರಿಸಮಾಪ್ತಿ

ಟೆಸ್ಲಾ ಮಾಲೀಕ ಎಲೋನ್ ಮಸ್ಕ್‌ನ ಸ್ಟಾರ್‌ಲಿಂಕ್ ಉಪಗ್ರಹದ ಪರಿಣಾಮದ ಹಳೆಯ ವಿಡಿಯೋ ವೈರಲ್ ಆಗಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Late on Monday 12th September, a video has gone viral claiming that a mysterious light was seen in several districts of Uttar Pradesh, Uttarakhand and Bihar. Know the truth behind it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X