ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Fact Check: LPG ವಿತರಕರು ಶ್ರೀಮಂತರಾಗುವ ಅವಕಾಶ?

|
Google Oneindia Kannada News

ಸಾಮಾಜಿಕ ಮಾಧ್ಯಮಗಳು ಮಾಹಿತಿ ವಿನಿಮಯಕ್ಕೆ ಉತ್ತಮ ಮಾರ್ಗವಾಗಿದೆ. ಆದರೆ ಇಂದು ಅನೇಕ ಜನರು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನವೂ ಸುಳ್ಳು ಸುದ್ದಿ ಮತ್ತು ಸುಳ್ಳು ಜಾಹೀರಾತುಗಳನ್ನು ನೀಡಲಾಗುತ್ತಿದೆ. ಬುದ್ಧಿವಂತ ಮತ್ತು ಜಾಗೃತರಾಗಿರಬೇಕಾದ ಜನರು ಅದನ್ನು ನಿರ್ಲಕ್ಷಿಸುತ್ತಿರುವುದರಿಂದ ದುರಾಸೆಯ ಅನೇಕ ಜನರು ತಪ್ಪು ಮಾಹಿತಿಯನ್ನು ರವಾನಿಸುತ್ತಿದ್ದಾರೆ. ಈಗ ಗ್ಯಾಸ್ ಏಜೆನ್ಸಿಯ ಬಗ್ಗೆ ಒಂದು ಆಫರ್ ಹೆಚ್ಚು ವೈರಲ್ ಆಗುತ್ತಿದೆ. ಆದರೆ ಅದರ ಸತ್ಯ ಬೇರೆಯೇ ಆಗಿದೆ.

ಸೋಷಿಯಲ್ ಮೀಡಿಯಾ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಪೋಸ್ಟ್ ವೈರಲ್ ಆಗಿದ್ದು. ಅದರಲ್ಲಿ ಜನರನ್ನು ಶ್ರೀಮಂತರನ್ನಾಗಿ ಮಾಡುವ ಕನಸುಗಳನ್ನು ತೋರಿಸಲಾಗುತ್ತಿದೆ. ಇದಕ್ಕಾಗಿ ಇಂಡಿಯನ್ ಆಯಿಲ್ ವಾಟರ್ ಮಾರ್ಕ್ ಪೇಪರ್ ಕೂಡ ಬಳಸಲಾಗಿದೆ. ಎಲ್‌ಪಿಜಿ ವಿತರಕತ್ವವನ್ನು ಪಡೆಯುವ ಬಗ್ಗೆ ಮಾತನಾಡಲಾಗುತ್ತಿದೆ. ಪೋಸ್ಟ್ ಪ್ರಕಾರ, ನೀವು ತುಂಬಾ ಸುಲಭವಾದ ರೀತಿಯಲ್ಲಿ LPG ವಿತರಕತ್ವವನ್ನು ಪಡೆಯಬಹುದು. ಇದರ ನಂತರ ನೀವು ಪ್ರತಿದಿನ ಸಾವಿರಾರು ರೂಪಾಯಿ ಗಳಿಸುವಿರಿ. ಅನೇಕರು ಈ ಪೋಸ್ಟ್ ಅನ್ನು ಸತ್ಯವೆಂದು ತಿಳಿದು ವೈರಲ್ ಮಾಡುತ್ತಿದ್ದಾರೆ ಮತ್ತು ತಮ್ಮ ಪರಿಚಯಸ್ಥರಿಗೆ ಪ್ರಕ್ರಿಯೆಯನ್ನು ನೀಡಲು ಸಲಹೆ ನೀಡುತ್ತಿದ್ದಾರೆ.

ವಿಷಯದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಆಯಿಲ್ ಇಂಡಿಯಾ ಲಿಮಿಟೆಡ್ ಸ್ವತಃ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಕೆಲ ನಕಲಿ ಜನರು ಎಲ್‌ಪಿಜಿ ವಿತರಕರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಕಂಪನಿ ತಿಳಿಸಿದೆ. ಇದಕ್ಕಾಗಿ, ಅವರು ಕೆಲವು ದಾಖಲೆಗಳನ್ನು ಸಹ ವೈರಲ್ ಮಾಡಿದ್ದಾರೆ. ಆದರೆ ಆ ದಾಖಲಾತಿ ಕ್ರಿಯೇಟೆಡ್ ಆಗಿದ್ದು ಅದರ ಮೇಲೆ ಇಂಡಿಯನ್ ಆಯಿಲ್‌ನ ಲೋಗೋವನ್ನು ಸೃಷ್ಟಿಸಲಾಗಿದೆ. ಈ ಕೊಡುಗೆ ನಕಲಿಯಾಗಿದೆ. ಈ ಸಂದೇಶ ನಿಜವಲ್ಲ. ಹೀಗಾಗಿ ಎಲ್‌ಪಿಜಿ ವಿತರಕರು ಹತ್ತಿರದ ಕಛೇರಿಗೆ ಮೊದಲು ಭೇಟಿ ನೀಡಿ ಅಲ್ಲಿಂದ ಸಂಪೂರ್ಣ ಮಾಹಿತಿ ಪಡೆಯಲು ಪ್ರತಿಯೊಬ್ಬರಿಗೂ ಸೂಚಿಸಲಾಗಿದೆ.

Fact Check: A chance for LPG dealers to get rich?

ಅಂತಹ ಜಾಹೀರಾತುಗಳನ್ನು ತೋರಿಸಿ ಪುಂಡರು ನಿಮ್ಮನ್ನು ಬಲೆಗೆ ಬೀಳಿಸುತ್ತಾರೆ. ನೀವು LPG ವಿತರಕತ್ವವನ್ನು ತೆಗೆದುಕೊಳ್ಳಲು ಹೆಚ್ಚು ಸಿದ್ಧರಿದ್ದೀರಿ ಎಂದು ಅವರು ಕಂಡುಕೊಂಡು ಸೇರ್ಪಡೆಗೊಳ್ಳಲು ಮುಂಗಡ ಭದ್ರತಾ ಹಣ ಇತ್ಯಾದಿಗಳ ಹೆಸರಿನಲ್ಲಿ ನಿಮ್ಮಿಂದ ದೊಡ್ಡ ಮೊತ್ತವನ್ನು ಹಣವನ್ನು ಪಡೆದುಕೊಳ್ಳುತ್ತಾರೆ. ಇದಾದ ನಂತರ ಆ ಪುಂಡರ ಫೋನ್ ಕರೆಗಾಗಲಿ, ನೇರವಾಗಿಯಾಗಲಿ ಸಿಗುವುದಿಲ್ಲ. ಹೀಗಾಗಿ ಯಾವುದೇ ಜಾಹೀರಾತಿಗೆ ಬಲಿಯಾಗುವ ಮೊದಲು, ಅದನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು ಎಂದು ಇಂಡಿಯಾ ಆಯಿಲ್ ಲಿಮಿಟೆಡ್ ತಿಳಿಸಿದೆ.

ಪೆಟ್ರೋಲಿಯಂ ಕಂಪನಿಗಳು ವಾಣಿಜ್ಯ ಬಳಕೆಯ ಗ್ಯಾಸ್ ದರ ಹೆಚ್ಚಿಸಿವೆ. ಇದೀಗ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 100 ರೂ. ಏರಿಸಲಾಗಿದೆ. 100 ರೂ. ಏರಿಕೆಯೊಂದಿಗೆ ಸದ್ಯಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ 2,101 ರೂ.ಗೆ ಲಭ್ಯವಾಗುತ್ತಿದೆ. ಈ ಹಿಂದೆ, ನವೆಂಬರ್ 1 ರಂದು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ದರವನ್ನು 266 ರೂ.ಗಳಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಗೃಹ ಬಳಕೆ ಎಲ್‌ಪಿಜಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

Recommended Video

Punjab ತಂಡದಿಂದ Rahul ಆಚೆ ಬಂದಿದ್ದರ ಹಿಂದಿನ ರಹಸ್ಯವೇನು | Oneindia Kannada

ತೈಲ, ತರಕಾರಿ ಸೇರಿದಂತೆ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರು ಈಗಾಗಲೇ ಕಂಗಾಲಾಗಿದ್ದಾರೆ. ಈ ನಡುವೆಯೇ ಇಂದಿನಿಂದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಲಾಗಿದೆ. ವಾಣಿಜ್ಯ ಸಿಲಿಂಡರ್‌ ಬೆಲೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಹೋಟೆಲ್, ರೆಸ್ಟೋರೆಂಟ್‌ನಲ್ಲಿ ಆಹಾರ ಮತ್ತು ಪಾನೀಯಗಳ ಬೆಲೆ ಕೂಡ ದುಬಾರಿಯಾಗಲಿದೆ. ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 100 ರೂಪಾಯಿ ಏರಿಕೆಯಾಗಿದೆ. ಈ ಬೆಲೆ ಏರಿಕೆ ಬಳಿಕ ದೇಶದ ರಾಜಧಾನಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 2101 ರೂಪಾಯಿಗೆ ಏರಿದೆ. ಈ ಹಿಂದೆ ನವೆಂಬರ್ 1 ರಂದು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು 266 ರೂ.ಗಳಷ್ಟು ಹೆಚ್ಚಿಸಲಾಗಿತ್ತು.

Fact Check

ಕ್ಲೇಮು

LPG ವಿತರಕರು ಶ್ರೀಮಂತರಾಗುವ ಅವಕಾಶ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ವೈರಲ್

ಪರಿಸಮಾಪ್ತಿ

ಆಯಿಲ್ ಇಂಡಿಯಾ ಲಿಮಿಟೆಡ್ ಸ್ವತಃ ಈ ಬಗ್ಗೆ ಸ್ಪಷ್ಟನೆ ನೀಡಿ, ಈ ಕೊಡುಗೆ ನಕಲಿಯಾಗಿದೆ ಎಂದಿದೆ.

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Social media is the best way to exchange information, but today many people are misusing it. Fake news and fake advertisements are given on social media every day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X