ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆ ಬಾಡಿಗೆ ಮೇಲೆ ಯಾವುದೇ ಜಿಎಸ್‌ಟಿ ಪಾವತಿ ಮಾಡಬೇಕಿಲ್ಲ: ಸ್ಪಷ್ಟನೆ ಕೊಟ್ಟ ಪಿಐಬಿ

|
Google Oneindia Kannada News

ಭಾರತದಲ್ಲಿ ಹಲವಾರು ದಿನಬಳಕೆಯ ಉತ್ಪನ್ನಗಳು ಮತ್ತು ಸರಕುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ನು ಹೆಚ್ಚಿಸಿರುವುದರಿಂದ, ಮೂಲ ಅಗತ್ಯಗಳಾದ ಗೋಧಿ, ಅಕ್ಕಿ, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್‌ಗಳು ಮತ್ತು ಇತರ ದೈನಂದಿನ ಅಗತ್ಯಗಳ ಬೆಲೆ ಏರಿಕೆಯ ಬಗ್ಗೆ ದೇಶದ ಜನ ಚಿಂತಿತರಾಗಿದ್ದಾರೆ.

ಮೂಲಭೂತ ಅಗತ್ಯಗಳ ಹಲವಾರು ವಿಭಾಗಗಳಲ್ಲಿ ಬೆಲೆಗಳ ಏರಿಕೆಯ ಮಧ್ಯೆ, ಕೇಂದ್ರ ಸರ್ಕಾರವು ದೇಶಾದ್ಯಂತ ಬಾಡಿಗೆದಾರರ ಮನೆ ಬಾಡಿಗೆಗೆ 18 ಪ್ರತಿಶತ ಜಿಎಸ್‌ಟಿಯನ್ನು ವಿಧಿಸಲು ನಿರ್ಧರಿಸಿದೆ ಎನ್ನುವ ಸುದ್ದಿಯೊಂದು ಮಧ್ಯಮ ವರ್ಗದ ಜನಸಂಖ್ಯೆಯಲ್ಲಿ ಪ್ರಮುಖ ಆತಂಕವನ್ನು ಉಂಟುಮಾಡಿದೆ. ಜಿಎಸ್‌ಟಿ ಕುರಿತಂತೆ ಹಲವು ಗೊಂದಲಗಳು ಈ ನಡುವೆ ಕೇಳಿ ಬರುತ್ತಲೇ ಇದೆ. ಬ್ಯಾಂಕ್‌ ಚೆಕ್‌ ಪುಸ್ತಕದ ಮೇಲೆ ಜಿಎಸ್‌ಟಿ ವಿಧಿಸುವ ಕುರಿತು ಕೂಡ ಗೊಂದಲ ಉಂಟಾಗಿತ್ತು. ಈ ಬಗ್ಗೆ ಸ್ವತಃ ಆರ್ಥಿಕ ಸಚಿವ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದರು.

ಚೆಕ್‌ಬುಕ್, ಐಸಿಯು, ಅಂತ್ಯಕ್ರಿಯೆ ಮೇಲೆ ಜಿಎಸ್‌ಟಿ ವಿಧಿಸಿಲ್ಲ: ನಿರ್ಮಲಾ ಸೀತಾರಾಮನ್‌ಚೆಕ್‌ಬುಕ್, ಐಸಿಯು, ಅಂತ್ಯಕ್ರಿಯೆ ಮೇಲೆ ಜಿಎಸ್‌ಟಿ ವಿಧಿಸಿಲ್ಲ: ನಿರ್ಮಲಾ ಸೀತಾರಾಮನ್‌

ಪಿಐಬಿ ಪೋಸ್ಟ್ ಮಾಡಿದ ಟ್ವೀಟ್ ಪ್ರಕಾರ, ಮನೆ ಬಾಡಿಗೆಯ ಮೇಲೆ 18 ಪ್ರತಿಶತ ಜಿಎಸ್‌ಟಿ ಕುರಿತು ಮಾಧ್ಯಮ ವರದಿಗಳು ನಿಜವಲ್ಲ. ಪಿಐಬಿಯ ಫ್ಯಾಕ್ಟ್ ಚೆಕ್ ಆರ್ಮಿ ಕೂಡ ಈ ವಿಷಯದ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ.

18 percent GST On House Rent Is Not True: Here Is The Fact

ಗೊಂದಲಕ್ಕೆ ತೆರೆ ಎಳೆದ ಪಿಐಬಿ; ಮನೆ ಬಾಡಿಗೆ ಮೇಲೆ ಜಿಎಸ್‌ಟಿ ವಿಚಾರದಲ್ಲೂ ಇದೇ ರೀತಿ ಗೊಂದಲ ಉಂಟಾಗಿದೆ. ಪಿಐಬಿ ಈ ಗೊಂದಲಗಳಿಗೆ ತೆರೆ ಎಳೆದಿದ್ದು, ಮನೆ ಬಾಡಿಗೆ ಮೇಲೆ ಜಿಎಸ್‌ಟಿ ವಿಧಿಸುವ ಕುರಿತು ಸ್ಪಷ್ಟನೆ ನೀಡಿದೆ.

ಪಿಐಬಿ ಟ್ವೀಟ್ ಮಾಡಿದ್ದು, "ವಸತಿ ಕಟ್ಟಡವನ್ನು ವಾಣಿಜ್ಯ, ವ್ಯಾಪಾರ ಉದ್ದೇಶಕ್ಕೆ ಬಾಡಿಗೆಗೆ ನೀಡಿದಾಗ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ವೈಯಕ್ತಿಕ ಬಳಕೆಗಾಗಿ ಖಾಸಗಿ ವ್ಯಕ್ತಿಗೆ ಬಾಡಿಗೆಗೆ ನೀಡಿದಾಗ ಜಿಎಸ್‌ಟಿ ಇರುವುದಿಲ್ಲ. ಸಂಸ್ಥೆಯ ಮಾಲೀಕರು ಅಥವಾ ಪಾಲುದಾರರು ವೈಯಕ್ತಿಕ ಬಳಕೆಗಾಗಿ ನಿವಾಸವನ್ನು ಬಾಡಿಗೆಗೆ ಪಡೆದರೂ ಸಹ ಯಾವುದೇ ಜಿಎಸ್‌ಟಿ ಇರುವುದಿಲ್ಲ." ಎಂದು ಸ್ಪಷ್ಟನೆ ನೀಡಿದೆ.

ಅನೇಕ ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ವರದಿಗಳು ಭಾರತದಲ್ಲಿ ಆಸ್ತಿಯನ್ನು ಬಾಡಿಗೆಗೆ ಪಡೆಯುವ ಎಲ್ಲರೂ, ಅದು ವೈಯಕ್ತಿಕ ಬಳಕೆಗಾಗಿ ಪಡೆದರೂ ಬಾಡಿಗೆಗೆ 18 ಪ್ರತಿಶತ ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ, ಇದು ಮಧ್ಯಮ ವರ್ಗದವರಿಗೆ ಹೊರೆಯಾಗುತ್ತದೆ ಎಂದು ಹೇಳಿದ್ದವು.

18 percent GST On House Rent Is Not True: Here Is The Fact

ಪ್ಯಾಕ್ ಮಾಡಲಾದ ಆಹಾರ ಪದಾರ್ಥಗಳು, ಗೃಹೋಪಯೋಗಿ ವಸ್ತುಗಳು, ಚಾಕುಕತ್ತರಿಗಳು ಮತ್ತು ಇತರ ದೈನಂದಿನ ಅಗತ್ಯತೆಗಳಂತಹ ಹಲವಾರು ಮೂಲಭೂತ ಸರಕುಗಳ ಮೇಲಿನ ಬೆಲೆಗಳನ್ನು ಹೆಚ್ಚಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರತಿಪಕ್ಷಗಳು ವಿರೋಧಿಸಿವೆ. ಆದರೆ, ಜಿಎಸ್‌ಟಿ ಹೆಚ್ಚಳದಿಂದ ಜನಸಾಮಾನ್ಯರ ಮೇಲೆ ಹೊರೆಯಾಗುವುದಿಲ್ಲ ಎಂದು ಕೇಂದ್ರ ಹೇಳಿದೆ.

Fact Check

ಕ್ಲೇಮು

ಮನೆ ಬಾಡಿಗೆ ಮೇಲೆ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗಿದೆ.

ಪರಿಸಮಾಪ್ತಿ

ಮನೆ ಬಾಡಿಗೆ ಮೇಲೆ ಜಿಎಸ್‌ಟಿ ವಿಧಿಸಲಾಗಿದೆ ಎಂಬ ಸುದ್ದಿ ಸುಳ್ಳು

Rating

False
ಗಾಗಿ ನಿಮ್ಮ ಮನವಿಯನ್ನು ಕಳಿಸಲು [email protected] ಗೆ ಇಮೇಲ್ ಮಾಡಿ
English summary
Press Information Bureau Clarified That There Is No 18 percent GST on house rent. The PIB tweeted, Renting of residential unit taxable only when it is rented to the business entity. No GST when it is rented to a private person for personal use. No GST even if proprietor or partner of firm rents residence for personal use.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X