ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಮಹಿಳಾ ಮತದಾರರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ

|
Google Oneindia Kannada News

ಬೆಂಗಳೂರು, ಮಾರ್ಚ್ 9: 2013ರ ಮತದಾರರ ಪಟ್ಟಿಗೆ ಹೋಲಿಸಿದರೆ ಈ ಸಲದ ಪಟ್ಟಿಯ ಪರಿಷ್ಕರಣೆಯಲ್ಲಿ ಮಹಿಳಾ ಮತದಾರರ ನೋಂದಣಿ ಪ್ರಮಾಣದಲ್ಲಿ ಶೇ.13ರಷ್ಟು ಹೆಚ್ಚಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದರು.

ಬೆಂಗಳೂರು ದಕ್ಷಿಣದಲ್ಲಿ ಹೆಚ್ಚು, ಶೃಂಗೇರಿಯಲ್ಲಿ ಅತೀ ಕಡಿಮೆ ಮತದಾರರುಬೆಂಗಳೂರು ದಕ್ಷಿಣದಲ್ಲಿ ಹೆಚ್ಚು, ಶೃಂಗೇರಿಯಲ್ಲಿ ಅತೀ ಕಡಿಮೆ ಮತದಾರರು

ಅಂತಾರಾಷ್ಟ್ರೀಯ ಮಹಿಳಾ ದಿನದ ನಿಮಿತ್ತ ನಿನ್ನೆ(ಮಾ.8) ಮಾರತಹಳ್ಳಿಯ ಬರ್ಥ್ ರೈಟ್ ಬೈ ರೈನ್ಬೋ ಚಿಲ್ಡ್ರನ್ಸ್ ಹಾಸ್ಪಿಟಲ್ ಆಯೋಜಿಸಿದ್ದ ವಾಕಥಾನ್ ನಲ್ಲಿ ಭಾಗವಹಿಸಿದ್ದ ಅವರು, ಮುಂದಿನ ವಿಧಾನಸಭೆಯ ಚುನಾವಣೆಗೆ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡಬೇಕು ಎಂದರು.

Women voters have increased by 13 pc: Sanjiv Kumar

2018ರ ಪರಿಷ್ಕೃತ ಮತದಾರರ ಪಟ್ಟಿಯ ಪ್ರಕಾರ ಕರ್ನಾಟಕದಲ್ಲಿ 4,95,56,059 ಮತದಾರರಿದ್ದು ಅವರಲ್ಲಿ ಮಹಿಳೆಯರು 2,44,72,288 ಮಂದಿ ಇದ್ದಾರೆ. ಬೆಂಗಳೂರಿನಲ್ಲಿ 41,92,706 ಮಹಿಳಾ ಮತದಾರರಿದ್ದಾರೆ. 46,04,190 ಪುರುಷ ಮತದಾರರಿದ್ದಾರೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆಗೆ ಒಟ್ಟು ಮತದಾರರು ಎಷ್ಟು? ಚಿತ್ರದಲ್ಲಿ ಮಾಹಿತಿವಿಧಾನಸಭೆ ಚುನಾವಣೆಗೆ ಒಟ್ಟು ಮತದಾರರು ಎಷ್ಟು? ಚಿತ್ರದಲ್ಲಿ ಮಾಹಿತಿ

2013ರ ಮತದಾರರ ಪಟ್ಟಿಗೆ ಹೋಲಿಸಿದರೆ ಈ ಸಲದ ಪಟ್ಟಿಯ ಪರಿಷ್ಕರಣೆಯಲ್ಲಿ ಮಹಿಳಾ ಮತದಾರರ ನೋಂದಣಿ ಪ್ರಮಾಣದಲ್ಲಿ ಶೇ.13ರಷ್ಟು ಹೆಚ್ಚಾಗಿದೆ. '18-19ರ ವಯೋಮಾನದ 7.72 ಲಕ್ಷ ಯುವ ಮತದಾರರು ಈ ವಿಶೇಷ ಪರಿಷ್ಕರಣೆ ಸಮಯದಲ್ಲಿ ನೋಂದಣಿ ಮಾಡಿಕೊಂಡಿದ್ದು, ಒಟ್ಟು 15.42 ಲಕ್ಷ ಮತದಾರರು ಸೇರ್ಪಡೆಯಾಗಿದ್ದಾರೆ. 2013ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿನ ಲಿಂಗಾನುಪಾತ 958 ಇದ್ದು, ಈಗ 972ಕ್ಕೆ ಏರಿಕೆಯಾಗಿದೆ' ಎಂದು ಅವರು ಮಾಹಿತಿ ನೀಡಿದರು.

ಹಿಂದಿನ ಮತದಾರರ ಪಟ್ಟಿಯ ಪರಿಷ್ಕರಣೆ ಅನ್ವಯ ಮತದಾರರ ಲಿಂಗಾನುಪಾತ:

ಪರಿಷ್ಕರಣೆಯ ವರ್ಷ ಲಿಂಗಾನುಪಾತ
2013 ರ ವಿಧಾನಸಭಾ ಚುನಾವಣೆ 958
2014 ಲೋಕಸಭೆ ಚುನಾವಣೆ 960
2015 ಅಂತ್ಯಕ್ಕೆ 963
2016 ಅಂತ್ಯಕ್ಕೆ 969
2017 ಅಂತ್ಯಕ್ಕೆ 969
2018 ಕರಡು 971
2018 ಅಂತಿಮ 972

ಹಿಂದಿನ ಚುನಾವಣೆಗಳಲ್ಲಿ ಒಟ್ಟು ಮತದಾನ ಮಾಡಿದ ಮತದಾರರಲ್ಲಿ ಶೇಕಡಾವಾರು ಮಹಿಳಾ ಮತದಾರರ ಪ್ರಮಾಣ

ಪರಿಷ್ಕರಣೆಯ ವರ್ಷ % ಮಹಿಳೆಯರು %ಪುರುಷರು %ಇತರರು
2013ರ ವಿಧಾನಸಭೆ ಚುನಾವಣೆ 70.47 72.40 2
2014ರ ಲೋಕಸಭೆ ಚುನಾವಣೆ 65.54 67 7

18 ವರ್ಷ ವಯೋಮಾನದ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗದೇ ಇದ್ದರೆ ನಾಮಪತ್ರಗಳನ್ನು ಸಲ್ಲಿಸುವ ಕೊನೆಯ ದಿನಾಂಕದವರೆಗೆ ಮತದಾರರು ತಮ್ಮ ಹೆಸರನ್ನು ಪಟ್ಟಿಯಲ್ಲಿ ಸೇರಿಸಬಹುದು ಎಂದರು. ರೈನ್ ಬೋ ಚಿಲ್ಡ್ರನ್ಸ್ ಹಾಸ್ಪಿಟಲ್‍ನ ಕ್ಲಸ್ಟರ್ ಹೆಡ್ ಮತ್ತು ಉಪಾಧ್ಯಕ್ಷ ನೀರಜ್ ಲಾಲ್ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸಬೇಕೆಂದು ಬಯಸಿದ್ದೆವು. ಆದ್ದರಿಂದ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳನ್ನು ಆಹ್ವಾನಿಸುವ ಮೂಲಕ ಮಹಿಳಾ ಮತದಾರರನ್ನು ಉತ್ತೇಜಿಸುವ ಮತ್ತು ಸಂದೇಶ ಪಸರಿಸುವ ಪ್ರಯತ್ನ ನಡೆಸಲಾಯಿತು ಎಂದರು. ಈ ವಾಕಥಾನ್ ಬೆಂಗಳೂರಿನಲ್ಲಿ ಸುರಕ್ಷಿತ ಮತ್ತು ಭದ್ರತೆಯ ಪರಿಸರವನ್ನು ಮಹಿಳೆಯರಿಗೆ ಸೃಷ್ಟಿಸುವ ಕುರಿತು ಅರಿವನ್ನು ಉಂಟು ಮಾಡಲು ಆಯೋಜಿಸಲಾಗಿತ್ತು. ಮಿಸೆಸ್ ಇಂಡಿಯಾ 2017 ತೃಪ್ತಿ ಅರವಿಂದ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದು ವಾಕಥಾನ್ ನೇತೃತ್ವ ವಹಿಸಿದ್ದರು.

English summary
Speaking in an occasion, CEO Sanjiv Kumar said it was time for women to turn up in large numbers in the coming assembly polls to exercise their franchise. Giving out the latest statistics, Mr Kumar said that the total number of voters in Karnataka as per final revision of electoral roll 2018 was 4,96,56,059 , out of which 2,44,72,288 were women alone. In Bengaluru, there were 41, 92,706 female voters (as against 46, 04,190 male voters).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X