ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಗ್ರಾಮಗಳಲ್ಲಿ ರಾಜಕೀಯ ದ್ವೇಷವಿರದ ಕರ್ನಾಟಕ ನನ್ನದಾಗಬೇಕು'

|
Google Oneindia Kannada News

Recommended Video

ಗ್ರಾಮಗಳಲ್ಲಿ ರಾಜಕೀಯ ದ್ವೇಷವಿರದ ಕರ್ನಾಟಕ ನನ್ನದಾಗಬೇಕು | Oneindia Kannada

ಬೆಂಗಳೂರು, ಮೇ 06 : 'ರಾಜ್ಯದಲ್ಲಿ ಪ್ರತಿಯೊಬ್ಬರು ಶಾಂತಿ, ಸುವ್ಯವಸ್ಥೆಯಿಂದ ಬದುಕುವ ಕರ್ನಾಟಕ ನನ್ನದಾಗಬೇಕು' ಎಂದು ಶಿಕಾರಿಪುರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಿನಯ್ ಕೆ.ಸಿ. ರಾಜಾವತ್ ಹೇಳಿದರು.

25 ವರ್ಷದ ವಿನಯ್ ಕೆ.ಸಿ. ರಾಜಾವತ್ ಶಿಕಾರಿಪುರ ಕ್ಷೇತ್ರದಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ, 2018ರ ಚುನಾವಣೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯೆಡಿಯೂರಪ್ಪ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಳಿದಿದ್ದಾರೆ.

ಶಿಕಾರಿಪುರದಲ್ಲಿ 50 ಸಾವಿರ ಅಂತರದಲ್ಲಿ ಗೆಲ್ಲುವೆ : ವಿನಯ್ ಕೆ.ಸಿ.ರಾಜಾವತ್ ಸಂದರ್ಶನಶಿಕಾರಿಪುರದಲ್ಲಿ 50 ಸಾವಿರ ಅಂತರದಲ್ಲಿ ಗೆಲ್ಲುವೆ : ವಿನಯ್ ಕೆ.ಸಿ.ರಾಜಾವತ್ ಸಂದರ್ಶನ

ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ ಅವರು, ಕನಸಿನ ಕರ್ನಾಟಕ ಹೇಗಿರಬೇಕು? ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ರಾಜಕೀಯವನ್ನು ಎಲ್ಲರೂ ದೂರವಿಟ್ಟು, ಒಂದಾಗಿ ಬಾಳಬೇಕು. ಪಕ್ಷಗಳ ವಿಚಾರದಲ್ಲಿ ಜನರು ಜಗಳವಾಡಬಾರದು' ಎಂದು ಹೇಳಿದ್ದಾರೆ.

Vinay KC Rajavath shares his dream about Karnataka

'ರಾಜ್ಯದ ಪ್ರತಿಯೊಬ್ಬರು ಶಾಂತಿ ಸುವ್ಯವಸ್ಥೆಯಿಂದ ಬದುಕುವ ಕರ್ನಾಟಕ ನನ್ನದಾಗಬೇಕು.

ಹಿಂದೆ ಊರಿನವರು, ಕುಟುಂಬದವರು ಎಲ್ಲರೂ ಒಟ್ಟಾಗಿ ಹಬ್ಬ ಮಾಡುತ್ತಿದ್ದರು. ಅಂತಹ ದಿನಗಳು ಮತ್ತೆ ಬರಬೇಕು' ಎಂದರು.

'ಈಗ ಒಂದು ಊರ ಹಬ್ಬ ಬಂದರೆ ಮೊದಲು ಕಾಂಗ್ರೆಸ್, ನಂತರ ಬಿಜೆಪಿ, ಆಮೇಲೆ ಜೆಡಿಎಸ್‌ನವರು ದೇವಾಲಯಕ್ಕೆ ಹೋಗುತ್ತಾರೆ. ಇಂತಹ ವ್ಯವಸ್ಥೆ ಇರಬಾರದು. ರಾಜಕೀಯ ದೂರತಳ್ಳಿ ಎಲ್ಲರೂ ನೆಮ್ಮದಿಯಿಂದ ಬಾಳುವ ವಾತಾವರಣ ನಿರ್ಮಾಣವಾಗಬೇಕು' ಎಂದು ಹೇಳಿದರು.

English summary
Shikaripura assembly constituency independent candidate Vinay K.C. Rajavath shared his dream about Karnataka. 25-year-old Vinay K.C. Rajavath contesting for Karnataka assembly elections 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X