ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನೂ ಕಣದಲ್ಲಿದ್ದೇನೆ ಮರೆಯಬೇಡಿ ಎಂದ ವಾಟಾಳ್!

|
Google Oneindia Kannada News

Recommended Video

ತಾನೂ ಕೂಡ ಕಣದಲ್ಲಿದೀನಿ ಎಂದು ನೆನಪಿಸಿದ ವಾಟಾಳ್ ನಾಗರಾಜ್ | Oneindia Kannada

ಬೆಂಗಳೂರು, ಏಪ್ರಿಲ್ 26: ನಾನು ಚುನಾವಣೆಗೆ ನಿಂತಿದ್ದೇನೆ ಈ ವಿಚಾರ ಹಲವರಿಗೆ ಗೊತ್ತಿಲ್ಲ ನನ್ನ ಗೆಲವು ಖಚಿತ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.

ಮೇ 12ರಂದು ರಾಜ್ಯದ ವಿಧಾನಸಭಾ ಚುನಾವಣೆ ಹಿನ್ನೆಲೆ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ತತ್ವಸಿದ್ಧಾಂತಗಳಿಗೆ ಬದ್ಧತೆ ಬೆಳಸಿಕೊಂಡವನು ನಾನು, ಪಕ್ಷಾಂತರ ಅಪಾಯಕಾರಿ ಬೆಳವಣಿಗೆ ಪಕ್ಷಾಂತರ ಮಾಡಿದವರನ್ನು ಜೈಲಿಗೆ ದೂಡಬೇಕು. ಕನಿಷ್ಠ 3 ವರ್ಷಗಳ ಜೈಲು ಶಿಕ್ಷೆ ನೀಡಬೇಕು ಎಂದರು.

ವಾಟಾಳ್ ನಾಗರಾಜ್‍ರನ್ನು ಗೆಲ್ಲಿಸ್ತಾರಾ ಚಾಮರಾಜನಗರದ ಜನ?ವಾಟಾಳ್ ನಾಗರಾಜ್‍ರನ್ನು ಗೆಲ್ಲಿಸ್ತಾರಾ ಚಾಮರಾಜನಗರದ ಜನ?

ಸಂವಿಧಾನ ಬುಡಮೇಲು ಮಾಡುವಂತಹ ಕೆಲಸ ಪಕ್ಷಾಂತರ ಅತ್ಯಂತ ಪಾಪದ ಕೆಲಸದ ಸೀಟು ಸಿಗಲಿಲ್ಲ ಎಂಬ ಕಾರಣಕ್ಕೆ ಪಕ್ಷಾಂತರ ಮಾಡುವುದು ಸರಿಯಲ್ಲ, ಪಕ್ಷಾಂತರ ಗಳಿಗೆ ಮಣೆ ಹಾಕುವ ಕೆಲಸಕ್ಕೆ ರಾಷ್ಟ್ರೀಯ ಪಕ್ಷಗಳು ಮುಂದಾಗಿವೆ ಜೈಲಿಗೆ ಹೋದವರು, ಕೊಳ್ಳೆ ಹೊಡೆಯುವವರಿಗೆ ಸೀಟು ನೀಡಲಾಗುತ್ತಿದೆ ಎಂದು ಆರೋಪಿಸಿದರು.

Vatal Nagaraj dares dont neglect me, I am in fray!

ಈ ಕಾಲದಲ್ಲಿ ರಾಷ್ಟ್ರಪಿತ ಗಾಂಧಿಜೀಯೇ ಚುನಾವಣೆಗೆ ನಿಂತಿದ್ದರೂ ಠೇವಣಿ ಕಳೆದುಳ್ಳುತ್ತಿದ್ದರು. 67 ರಲ್ಲಿ ನಾನು ಸ್ವರ್ಗದಂತಹ ಆಡಳಿತ ಕಣ್ಣಾರೆ ಕಂಡಿದ್ದೇನೆ. ಕೊನೆy ಅದ್ಭುತ ಸರ್ಕಾರ ಎಂದರೆ ಜೆ.ಹೆಚ್.ಪಟೇಲ್ ಅವರದ್ದು, ಈಗಿನಿದ್ದು ನರಕದ ಸರ್ಕಾರ ಎಂದರು.

ಮೇ 12 ರ ನಂತರ ಬರುವ ಸರ್ಕಾರವೂ ನರಕದ ಸರ್ಕಾರವೇ ಸರಿ, ಮಠಾಧೀಶರಿಗೆ ತಲೆ ಕೆಟ್ಟಿದೆ. ರಾಷ್ಟ್ರೀಯ ಪಕ್ಷಗಳ ಪ್ರಚಾರಕ್ಕೆ ಮೋದಿ, ರಾಹುಲ್ ಗಾಂಧಿ ಅವರನ್ನು ಕರೆತರುತ್ತಾರೆ ಅವರಿಗೆ ಕನ್ನಡ ಭಾಷೆ ಬರೋದಿಲ್ಲ. ಹಿಂದಿ, ಆಂಗ್ಲ ಭಾಷೆಯಲ್ಲಿ ಬಡಾಯಿ ಕೊಚ್ಚಿ ಹೋಗುತ್ತಾರೆ ಇದು ದುರಂತ ಎಂದು ಹೇಳಿದರು. ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ಅವರು ಸದ್ದಿಲ್ಲದೆ ಚಾಮರಾಜನಗರದಲ್ಲಿ ಸ್ಪರ್ಧಿಸಿದ್ದಾರೆ.

15 ವರ್ಷಗಳ ಹಿಂದೆಯೇ ನಾನು ಮುಖ್ಯಮಂತ್ರಿಯಾಗುತ್ತಿದ್ದೆ, ಆದರೆ ಹೋರಾಟದ ಹೆಸರಿನಲ್ಲಿ ನಾನೇ ಸಿಎಂ ಆಗಲಿಲ್ಲ ಆದರೆ ಈ ಬಾರಿ ನಾನು ಚುನಾವಣೆಯಲ್ಲಿ ಗೆದ್ದೆ ಗೆಲ್ಲುತ್ತೇನೆ, ಶಾಸಕನಾಗಿ ನಿಮ್ಮ ಮುಂದೆ ಬಂದೇ ಬರುತ್ತೇನೆ ವಿಶ್ವಾಸ ವ್ಯಕ್ತಪಡಿಸಿದರು.

English summary
Kannada activist and former MLA Vatal Nagaraj addressed a press conference in Bangalore on Thursday and said he has contested in assemble elections no one could forget me since I am fray for protect the interest of the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X