ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟ ಸಿದ್ದರಾಮಯ್ಯ ಎಲ್ಲಿ, ದೇವರಾಜ ಅರಸು ಎಲ್ಲಿ: ಲಿಂಗರಾಜ್ ಅರಸ್ ಕಿಡಿ

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 28: "ಅತೀ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಿ, ನಮ್ಮ ತಾತ, ಮುತ್ಸದ್ಧಿ ದೇವರಾಜ ಅರಸು ಎಲ್ಲಿ? ಇಬ್ಬರ ನಡುವೆ ಹೋಲಿಕೆಯೇ ಇಲ್ಲ," ಹೀಗಂದವರು ದೇವರಾಜ ಅರಸು ಅವರ ಮೊಮ್ಮಗ ಲಿಂಗಾರಾಜ ಅರಸ್.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಕಂಡ ಅಪರೂಪದ ರಾಜಕಾರಣಿ, ಸಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಮೊಮ್ಮಗನಾಗಿರುವ ಲಿಂಗಾರಾಜ ಅರಸ್ ಸದ್ಯ ಕೆ.ಆರ್.ಪುರಂ ಕ್ಷೇತ್ರದಿಂದ ಎಎಪಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

ಭ್ರಷ್ಟರಿಗೆ ಟಿಕೆಟ್ ಇಲ್ಲ, ಸಾಮಾನ್ಯರಿಂದ ದೇಶ ನಡೆಸುವೆ: ನೌಹೀರಾ ಶೇಖ್ಭ್ರಷ್ಟರಿಗೆ ಟಿಕೆಟ್ ಇಲ್ಲ, ಸಾಮಾನ್ಯರಿಂದ ದೇಶ ನಡೆಸುವೆ: ನೌಹೀರಾ ಶೇಖ್

'ಜೆನಿಸಿಸ್' ಎಂಬ ಸಾಫ್ಟ್ ವೇರ್ ಸಂಸ್ಥೆಯ ಸಹ ಸಂಸ್ಥಾಪಕರೂ ಆಗಿದ್ದ ಅವರು 2015ರಿಂದ ಕನ್ನಮಂಗಳ ಗ್ರಾಮ ಪಂಚಾಯತ್ ಸದಸ್ಯರಾಗಿದ್ದಾರೆ. ಸದ್ಯ ಅವರೀಗ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ.

ಸಾಗರ ಕ್ಷೇತ್ರದ ಟಿಕೆಟ್ ಗೊಂದಲ: ಬೇಳೂರು ಗೋಪಾಲಕೃಷ್ಣ ಸಂದರ್ಶನಸಾಗರ ಕ್ಷೇತ್ರದ ಟಿಕೆಟ್ ಗೊಂದಲ: ಬೇಳೂರು ಗೋಪಾಲಕೃಷ್ಣ ಸಂದರ್ಶನ

ಅವರ ಜತೆ 'ಒನ್ಇಂಡಿಯಾ ಕನ್ನಡ' ನಡೆಸಿದ ಸಂದರ್ಶನ ಇಲ್ಲಿದೆ. ಅವರಿಲ್ಲಿ ಆಮ್ ಆದ್ಮಿ ಪಕ್ಷದ ನಿಲುವು, ಬೆಳವಣಿಗೆಗಳು, ದೇವರಾಜ ಅರಸು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಾವು ಸ್ಪರ್ಧಿಸುತ್ತಿರುವ ಕೆ.ಆರ್.ಪುರಂ ಕ್ಷೇತ್ರದ ಬಗ್ಗೆ ಅವರಿಲ್ಲಿ ಬೆಳಕು ಚೆಲ್ಲಿದ್ದಾರೆ.

ಬೇರೆ ಪಕ್ಷಗಳನ್ನು ಬಿಟ್ಟು ಎಎಪಿಗೆ ಯಾಕೆ ಸೇರಿದ್ರಿ?

ಬೇರೆ ಪಕ್ಷಗಳನ್ನು ಬಿಟ್ಟು ಎಎಪಿಗೆ ಯಾಕೆ ಸೇರಿದ್ರಿ?

ಪೃಥ್ವಿರೆಡ್ಡಿ ನನ್ನ ಗೆಳಯರಾಗಿದ್ದರು. ನಾನು ಗ್ರಾಮ ಪಂಚಾಯತ್ ಸದಸ್ಯನಾಗಿ ಒಂದಷ್ಟು ಕೆಲಸಗಳನ್ನು ಮಾಡಿದೆ. ದೆಹಲಿಯಲ್ಲಿ ಎಎಪಿ ಸರಕಾರ ಮಾಡಿದ ಕೆಲಸಗಳಿಗೂ ಇದಕ್ಕೂ ಹೋಲಿಕೆ ಇತ್ತು. ಹಾಗಾಗಿ ನಾನು ಎಎಪಿಗೆ ಸೇರುವುದು ಉತ್ತಮ ಅನಿಸಿತು. ಹೀಗಾಗಿ ಎಎಪಿ ಪಕ್ಷಕ್ಕೆ ಬಂದೆ

ನೀವು ಯಾವತ್ತಾದರೂ ರಾಷ್ಟ್ರೀಯ ಪಕ್ಷಗಳಿಗೆ ಸೇರುವ ಬಗ್ಗೆ ಯೋಚಿಸಿದ್ರಾ?

ಎಎಪಿ ರಾಷ್ಟ್ರೀಯ ಪಕ್ಷ ಅಲ್ಲ ಅಂಥ ಹೇಗೆ ಹೇಳ್ತೀರಿ? ದೆಹಲಿಯಲ್ಲಿ ಸರಕಾರ ಇದೆ. ಪಂಜಾಬ್ ನಲ್ಲಿ ನಾವು ಮುಖ್ಯ ವಿರೋಧ ಪಕ್ಷ. ಇತ್ತೀಚೆಗೆ ಗುಜರಾತ್ ಮತ್ತು ಗೋವಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆವು. ಈಗ ಕರ್ನಾಟಕದಲ್ಲಿ ನಾವು ಸ್ಪರ್ಧಿಸುತ್ತಿದ್ದೇವೆ. ನಾವೂ ರಾಷ್ಟ್ರೀಯ ಪಕ್ಷವೇ. ನಮಗೆ ಎಲ್ಲಾ ರಾಜ್ಯಗಳಲ್ಲೂ ಪ್ರತಿನಿಧಿಗಳಿದ್ದಾರೆ.

ಎಎಪಿ 'ನಾವು ಕಳಂಕ ರಹಿತರಿಗೆ ಮಾತ್ರ ಟಿಕೆಟ್ ಕೊಡುತ್ತೇವೆ' ಎನ್ನುತ್ತಿದೆ. ಇವರಿಗೆಲ್ಲಾ ಮತ ಸಿಗುತ್ತದೆ ಎಂದನಿಸುತ್ತಾ?

ಎಎಪಿ 'ನಾವು ಕಳಂಕ ರಹಿತರಿಗೆ ಮಾತ್ರ ಟಿಕೆಟ್ ಕೊಡುತ್ತೇವೆ' ಎನ್ನುತ್ತಿದೆ. ಇವರಿಗೆಲ್ಲಾ ಮತ ಸಿಗುತ್ತದೆ ಎಂದನಿಸುತ್ತಾ?

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಮಯವನ್ನೇ ನೋಡುವುದಾದರೆ, ಭ್ರಷ್ಟರಲ್ಲದ, ಕಳಂಕ ರಹಿತರಿಗೆ, ಹಿತಾಸಕ್ತಿಗಳಿಲ್ಲದವರಿಗೆ ಜನರು ಮತ ಹಾಕುತ್ತಿದ್ದರು. ಆದರೆ ಸಮಯ ಕಳೆಯುತ್ತಾ ಹೋದ ಹಾಗೆ, ಗೂಂಡಾಗಳು, ರೌಡಿಗಳು ಈ ವ್ಯವಸ್ಥೆಯ ಲೋಪದೋಷಗಳನ್ನು ಬಳಸಿಕೊಂಡು, ವ್ಯವಸ್ಥೆಯನ್ನು ತಿರುಚಿ ಹಲವು ವರ್ಷ ಆಳಿದರು. ಇದು ವಿಷಾಧನೀಯ.

ಇದೀಗ ಸ್ವಚ್ಛ ಹಿನ್ನೆಲೆಯ, ಕಳಂಕ ರಹಿತರು ಜೊತೆಗೆ ಉತ್ತಮ ಕೌಶಲ್ಯ ಹೊಂದಿರುವವರು ರಾಜಕಾರಣಕ್ಕೆ ಬರುತ್ತಿದ್ದಾರೆ. ಹೀಗಿರುವಾಗ ಇವರು ಸರಕಾರವನ್ನು ಉತ್ತಮವಾಗಿ ನಡೆಸಬಲ್ಲರು.

2014ರಲ್ಲಿ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಎಎಪಿ ಸ್ಪರ್ಧಿಸಿತ್ತು. ಆದರೆ ಇದರಲ್ಲಿ ಒಂದೂ ಸ್ಥಾನ ಗೆಲ್ಲಲಾಗಲಿಲ್ಲ. ಇದರಿಂದ ಏನು ಪಾಠ ಕಲಿತ್ರಿ?

2014ರ ಚುನಾವಣೆಯಲ್ಲಿ ಮೋದಿ ಅಲೆ ಪ್ರಬಲವಾಗಿತ್ತು. ನಾವು ಮಾತ್ರ ಅಲ್ಲ, ನಮಗಿಂತ ದೊಡ್ಡ ದೊಡ್ಡ ಪಕ್ಷಗಳೇ ಈ ಚುನಾವಣೆಯಲ್ಲಿ ಸೋತರು. ನಾವಿನ್ನೂ ಹೊಸ ಪಕ್ಷ. ನಾವು ಚುನಾವಣೆಯಲ್ಲಿ ತೊಡಗಿಸಿಕೊಂಡು ಅನುಭವಗಳನ್ನು ಪಡೆಯುತ್ತೇವೆ. ನಾವು ಸೋತರೂ ಚುನಾವಣೆಯಲ್ಲಿ ಸ್ಪರ್ಧಿಸಲು ಮುಜುಗರಪಡುವುದಿಲ್ಲ. ಇದು ನಮಗೆ ಬಹಳ ಮುಖ್ಯ. ಪ್ರತೀ ಚುನಾವಣೆಯಲ್ಲೂ ಹೊಸ ಸವಾಲುಗಳಿರುತ್ತವೆ. ಇದರಿಂದ ನಾವು ಅನುಭವಗಳನ್ನು ಪಡೆದುಕೊಳ್ಳುತ್ತೇವೆ.

ಪಂಜಾಬ್ ನಲ್ಲಿ ಎಎಪಿ ಸೋತಿದ್ದು ಕರ್ನಾಟಕದ ಚುನಾವಣೆ ಮೇಲೆ ಪರಿಣಾಮ ಬೀರುತ್ತದಾ?

ಪಂಜಾಬ್ ನಲ್ಲಿ ಎಎಪಿ ಸೋತಿದ್ದು ಕರ್ನಾಟಕದ ಚುನಾವಣೆ ಮೇಲೆ ಪರಿಣಾಮ ಬೀರುತ್ತದಾ?

ಎಲ್ಲಾ ಚುನಾವಣೆಗಳಿಗೂ ಅದರದ್ದೇ ಆದ ಪರಿಣಾಮಗಳು ಇದ್ದೇ ಇರುತ್ತವೆ. ಎಲ್ಲಾ ಚುನಾವಣೆಗಳು ಸ್ಥಳೀಯ ಅಂಶಗಳ ಮೇಲೆ ನಡೆಯುತ್ತವೆ. ಕರ್ನಾಟಕದಲ್ಲಿ ಚುನಾವಣೆ ನಡೆಯುವ ವಿಚಾರಗಳೇ ಬೇರೆ, ಪಂಜಾಬ್ ವಿಷಯಗಳೇ ಬೇರೆ.

ಅರವಿಂದ ಕೇಜ್ರಿವಾಲ್ ಕೇಳುತ್ತಿರುವ ಕ್ಷಮೆ ಪಕ್ಷದ ಮೇಲೆ ಪರಿಣಾಮ ಬೀರುತ್ತದಾ?

ನಾವೆಲ್ಲಾ ತಪ್ಪುಗಳನ್ನು ಮಾಡುತ್ತೇವೆ. ತಪ್ಪುಗಳನ್ನು ಮಾಡಿದಾಗ ಕ್ಷಮೆ ಕೇಳುವುದು ಒಳ್ಳೆಯತನ. ನಾನದನ್ನು ಸ್ವಾಗತಿಸುತ್ತೇನೆ. ಇನ್ನು ಈ ಪ್ರಕರಣದಲ್ಲಿ ಆಡಳಿತ ಮತ್ತು ದೆಹಲಿಯ ಜನರ ಸೇವೆ ಎಲ್ಲದಿಕ್ಕಿಂತ ಮಿಗಿಲಾಗಿದ್ದು ಎಂದು ಕೇಜ್ರಿವಾಲ್ ನಿರೂಪಿಸಿದ್ದಾರೆ. ಕ್ಷಮೆ ಕೇಳುವ ಮೂಲಕ ಪ್ರಸಕ್ತ ನ್ಯಾಯಾಂಗ ವ್ಯವಸ್ಥೆ ಪಕ್ಷವನ್ನು ಮತ್ತು ದೆಹಲಿ ಸರಕಾರವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂಬುದನ್ನು ನಿರೂಪಿಸಿದ್ದಾರೆ.

ದೆಹಲಿಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತಂದಿದ್ದಾರೆ. ಈ ಎಲ್ಲಾ ಶ್ರಮ ವ್ಯರ್ಥವಾಗಲು ಬಿಟ್ಟಿಲ್ಲ. ಹೀಗಾಗಿ ಕ್ಷಮೆ ಕೇಳುವುದರಿಂದ ಕಳೆದುಕೊಳ್ಳುವುದು ಏನೂ ಇಲ್ಲ.

ರಾಷ್ಟ್ರೀಯ ಪಕ್ಷಗಳಿಗೆ ಹೋಲಿಸಿದರೆ ನೀವು ತಡವಾಗಿ ಚುನಾವಣಾ ಪ್ರಚಾರಕ್ಕೆ ಇಳಿದ್ರಿ ಅಲ್ವಾ?

ರಾಷ್ಟ್ರೀಯ ಪಕ್ಷಗಳಿಗೆ ಹೋಲಿಸಿದರೆ ನೀವು ತಡವಾಗಿ ಚುನಾವಣಾ ಪ್ರಚಾರಕ್ಕೆ ಇಳಿದ್ರಿ ಅಲ್ವಾ?

ನಾವು ಸರಿಯಾದ ಸಮಯಕ್ಕೆ ಬರುತ್ತಿದ್ದೇವೆ. ನಮ್ಮಲ್ಲಿ ಕಾರ್ಯಕರ್ತರ ಪಡೆ ಇದೆ. ಜನರು ಸ್ವಯಂ ಪ್ರೇರಿತರಾಗಿ ಬಂದು ಏನು ಮಾಡಬೇಕು ಎಂದು ಕೇಳುತ್ತಿದ್ದಾರೆ. ನಾವು ಕಡಿಮೆ ಅವಧಿಯಲ್ಲಿ ಹೆಚ್ಚಿನ ಪರಿಣಾಮ ಬೀರಲಿದ್ದೇವೆ. ನಾವು ಹೇಗೆ ಪ್ರಚಾರ ನಡೆಸುತ್ತಿದ್ದೇವೆ ಎಂಬುದನ್ನು ನೀವು ಕೆ.ಆರ್.ಪುರಂನಲ್ಲಿ, ಬೇರೆ ಕ್ಷೇತ್ರಗಳಲ್ಲಿಯೂ ಬಂದು ನೋಡಬಹುದು.

ಎಎಪಿ ಉತ್ತರ ಭಾರತದಲ್ಲಿ ಗಟ್ಟಿಯಾಗಿದೆ. ಆದರೆ ದಕ್ಷಿಣ ಭಾರತದಲ್ಲಿ ಯಾಕಿಲ್ಲ?

ನೀವು ಉತ್ತರ ಭಾರತದಲ್ಲಿ ನಮ್ಮ ಪಕ್ಷ ಗಟ್ಟಿಯಾಗಿದೆ ಎಂದು ಹೇಳುತ್ತಿದ್ದೀರಿ. ನಾನು ನಿಮ್ಮ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಹೌದು ನಾವು ಉತ್ತರದಲ್ಲಿ ಗಟ್ಟಿಯಾಗಿದ್ದೇವೆ. ದಕ್ಷಿಣದಲ್ಲಿ ಬೆಂಗಳೂರಿನಲ್ಲಿ ನಮಗೆ ದೊಡ್ಡ ನೆಲೆ ಇದೆ. ಹಾಗಾಗಿ ನಾವಿಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ. ದೆಹಲಿಯಲ್ಲಿ ಸರಕಾರ ನಡೆಸಿದ್ದೇವೆ, ಪಂಜಾಬ್ ನಲ್ಲಿಯೂ ಒಳ್ಳೆ ಸ್ಪರ್ಧೆ ನೀಡಿದ್ದೇವೆ, ಉತ್ರರ ಪ್ರದೇಶ ಸ್ಥಳೀಯ ಚುನಾವಣೆಯಲ್ಲೂ ಉತ್ತಮ ಫಲಿತಾಂಶ ದಾಖಲಿಸಿದ್ದೇವೆ. ಈಗ ಸರಿಯಾದ ಸಂದರ್ಭದಲ್ಲಿ ಕರ್ನಾಟಕಕ್ಕೆ ಬಂದಿದ್ದೇವೆ.

ಎಎಪಿಗೆ ದೆಹಲಿ ಬಿಟ್ಟರೆ ಹೆಚ್ಚಿನ ಫಂಡ್ ಬೆಂಗಳೂರಿನಿಂದ ಬರುತ್ತದೆ. ಆದರೂ ಇಲ್ಲಿ ಪಕ್ಷ ಕಟ್ಟುವ ಬಗ್ಗೆ ಹೆಚ್ಚು ಆಸಕ್ತರಾಗಿಲ್ಲ ಯಾಕೆ?

ಎಎಪಿಗೆ ದೆಹಲಿ ಬಿಟ್ಟರೆ ಹೆಚ್ಚಿನ ಫಂಡ್ ಬೆಂಗಳೂರಿನಿಂದ ಬರುತ್ತದೆ. ಆದರೂ ಇಲ್ಲಿ ಪಕ್ಷ ಕಟ್ಟುವ ಬಗ್ಗೆ ಹೆಚ್ಚು ಆಸಕ್ತರಾಗಿಲ್ಲ ಯಾಕೆ?

ಹೇಗೆ ಹೇಳ್ತೀರಾ ನೀವು ಹಾಗೆ?

ನೀವಿಲ್ಲಿ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲಿಲ್ಲ. ಲೋಕಾಯುಕ್ತ, ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಿದ್ದು ಬಿಟ್ಟರೆ ಅಂಥಹ ಪ್ರತಿಭಟನೆಗಳೂ ಕಾಣಿಸಲಿಲ್ಲ?

ಎಲ್ಲಾ ರಾಜಕೀಯ ಪಕ್ಷಗಳು ದಿನಕಳೆದಂತೆ ರೂಪುಗೊಳ್ಳುತ್ತವೆ. ರಾತ್ರಿ ಕಳೆದು ಬೆಳಗಾಗುವುದರ ಒಳಗೆ ಪಕ್ಷ ಕಟ್ಟಲು ಸಾಧ್ಯವಿಲ್ಲ. ಎಲ್ಲರನ್ನೂ ಒಂದೇ ವ್ಯವಸ್ಥೆಗೆ ತರಲು ಸಮಯ ತೆಗೆದುಕೊಳ್ಳುತ್ತದೆ. ನಮ್ಮ ಪಕ್ಷವೂ ಹಾಗೆಯೇ. ಹಲವು ವಿಚಾರಗಳು ಬಂದಾಗ ನಾವು ನಮ್ಮಲ್ಲೇ ಈ ವಿಚಾರದಲ್ಲಿ ಭಾಗವಹಿಸಬೇಕಾ ಬೇಡ್ವಾ ಅಂತ ಚರ್ಚೆಗಳನ್ನು ನಡೆಸುತ್ತೇವೆ.

ನೀವು ಬಿಬಿಎಂಪಿ ಪ್ರಸ್ತಾಪ ಮಾಡಿದ್ರಿ. ಇಲ್ಲಿ ಪಕ್ಷ ನಿಧಾನಕ್ಕೆ ರೂಪುಗೊಳ್ಳುತ್ತಿದೆ. ಈಗ ಜನರು ಅವರಾಗಿಯೇ ಬಂದು ನಮಗೆ ಟಿಕೆಟ್ ಕೊಡಿ ಎಂದು ಕೇಳುತ್ತಿದ್ದಾರೆ. ಇದು ಜನರು ನಮ್ಮ ಪಕ್ಷವನ್ನು ಕ್ಲೀನ್ ಪಕ್ಷ ಎಂದು ಒಪ್ಪಿಕೊಂಡಿರುವುದರ ಪರಿಣಾಮ.

ಪಂಚಾಯತ್ ಸದಸ್ಯರಾಗಿ ನೀವು ಪಡೆದ ಅನುಭವಗಳೇನು?

ಪಂಚಾಯತ್ ಸದಸ್ಯರಾಗಿ ನೀವು ಪಡೆದ ಅನುಭವಗಳೇನು?

ಕನ್ನಮಂಗಲ ಪಂಚಾಯತ್ ಸದಸ್ಯನಾಗಿದ್ದಾಗ ನಾನಿದ್ದ ಪ್ರದೇಶದಲ್ಲಿ ದೊಡ್ಡ ಮಟ್ಟಕ್ಕೆ ತೆರಿಗೆ ಸಂಗ್ರಹಿಸಲಾಯಿತು. ರಸ್ತೆ ನಿರ್ಮಾಣ, ಬೀದಿ ದೀಪಗಳ ಅಳವಡಿಕೆಯನ್ನೆಲ್ಲಾ ಮಾಡಲಾಯಿತು. ಭ್ರಷ್ಟಾಚಾರವನ್ನು ಕಡಿತಗೊಳಿಸಲಾಯಿತು. ನಮ್ಮ ರಾಜಕೀಯ ವ್ಯವಸ್ಥೆಯ ಬಗ್ಗೆ, ವ್ಯವಸ್ಥೆಯಲ್ಲಿರುವ ಸಮಸ್ಯೆಗಳ ಬಗ್ಗೆ ನನಗೆ ಅರಿತುಕೊಳ್ಳಲು ಸಹಾಯವಾಯಿತು. ಎಲ್ಲರ ಜತೆ ಸೇರಿ ಕನ್ನಮಂಗಲವನ್ನು ಮಾದರಿ ಪ್ರದೇಶವಾಗಿ ನಿರ್ಮಿಸಿದ್ದೇವೆ.

ಕೆ.ಆರ್.ಪುರಂನಲ್ಲಿ ನೀವು ಸ್ಪರ್ಧಿಸಲು ಎಷ್ಟರಮಟ್ಟಿಗೆ ಸಿದ್ಧವಾಗಿದ್ದೀರಿ?

ನಾನು ವಿಧಾನಸಭೆ ಚುನಾವಣೆಗೆ ಸಿದ್ಧವಾಗಿದ್ದೇನೆ. ಇದಕ್ಕೆ ಬೇಕಾದ ಅನುಭವಗಳು ನನಗಿವೆ. ನನ್ನ ಅಜ್ಜ ದೇವರಾಜ ಅರಸು ಅವರು ನನ್ನ ಮೇಲೆ ತುಂಬಾ ಪರಿಣಾಮ ಬೀರಿದ್ದಾರೆ. ಅವರು ಕರ್ನಾಟಕದಲ್ಲೊಂದು ಹೆಗ್ಗುರುತು; ಮುತ್ಸದ್ದಿ. ಇವರು ನಿಜವಾಗಿಯೂ ನನಗೆ ದಾರಿ ದೀಪವಾಗಿದ್ದಾರೆ.

ಎಎಪಿಗೆ ಮತ ಹಾಕಿ ಎಂದು ಹೇಗೆ ಜನರನ್ನು ಮನವೊಲಿಸುತ್ತೀರಿ?

ಈ ಹಿಂದೆ ಒಂದು ಅವಧಿಗೆ ಬಿಜೆಪಿಯ ನಂದೀಶ್ ರೆಡ್ಡಿ, ಇದೀಗ ಬಸವರಾಜ್ ಪ್ರತಿನಿಧಿಸುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ 3500 ಕೋಟಿ ರೂಪಾಯಿ ಅನುದಾನ ತಂದಿದ್ದೇನೆ ಎನ್ನುತ್ತಿದ್ದಾರೆ. ಆದರೆ ಅನುದಾನ ಎಲ್ಲಿದೆ?

ಕ್ಷೇತ್ರದಲ್ಲಿ 6 ಲಕ್ಷ ಜನರಿದ್ದಾರೆ, ಆರೋಗ್ಯ ಸೇವೆಗಳಿಲ್ಲ. ಆಸ್ಪತ್ರೆಗಳಿಲ್ಲ. ಹತ್ತಿರದ ಆಸ್ಪತ್ರೆಗಗೆ 1 ರಿಂದ ಒಂದೂವರೆ ಗಂಟೆ ಪ್ರಯಾಣಿಸಬೇಕು. ಬೆಂಗಳೂರಿನ ಟ್ರಾಫಿಕ್ ನಲ್ಲಂತೂ ಎರಡು ಗಂಟೆಯೇ ಬೇಕು. ಇಷ್ಟು ಹಣ ಎಲ್ಲಿಗೆ ಹೋಯಿತು. ಜನರನ್ನು ಸಂಪರ್ಕಿಸಿದಾಗ, 'ಹೌದು ಇಲ್ಲಿ ಸಮಸ್ಯೆ ಇದೆ. ಬದಲಾವಣೆ ಬೇಕು' ಎಂದಿದ್ದಾರೆ. ಹಾಗಾಗಿ ನಾವು ಇಲ್ಲಿ ಸ್ಪರ್ಧೆಗೆ ಇಳಿದಿದ್ದೇವೆ.

ನೀವು ಚುನಾವಣೆಗೆ ಯಾಕೆ ಇಷ್ಟು ತಡವಾಗಿ ಧುಮುಕಿದ್ರಿ? ಅದೂ ದೇವರಾಜ ಅರಸು ಅವರಂಥ ದೊಡ್ಡ ಹೆಸರನ್ನು ಹಿಂದೆ ಇಟ್ಟುಕೊಂಡು?

ನೀವು ಚುನಾವಣೆಗೆ ಯಾಕೆ ಇಷ್ಟು ತಡವಾಗಿ ಧುಮುಕಿದ್ರಿ? ಅದೂ ದೇವರಾಜ ಅರಸು ಅವರಂಥ ದೊಡ್ಡ ಹೆಸರನ್ನು ಹಿಂದೆ ಇಟ್ಟುಕೊಂಡು?

ಭಾರತದಲ್ಲಿ ಕುಟುಂಬ ರಾಜಕೀಯ ಅನ್ನುವುದು ಕುಟುಂಬದ ಉದ್ಯಮ ಇದ್ದ ಹಾಗೆ. ಆದರೆ ನಮ್ಮ ಪ್ರಕರಣದಲ್ಲಿ ನಾವು ತುಂಬಾ ಸರಳ ಜೀವನ್ನು ಪಾಲಿಸಿದ್ದೇವೆ. ಕಂಪನಿಯೊಂದನ್ನು ಕಟ್ಟಿ ಅದನ್ನು ದೊಡ್ಟ ಮಟ್ಟಕ್ಕೆ ಬೆಳೆಸಿ ಅನುಭವಗಳನ್ನು ಪಡೆದುಕೊಂಡ ಬಳಿಕ ಇದೀಗ ನಾನು ರಾಜಕೀಯಕ್ಕೆ ಬರಬೇಕು ಅನಿಸಿತು. ಹಾಗಾಗಿ ನಾನು ಇಲ್ಲಿದ್ದೇನೆ.

ದೇವರಾಜ ಅರಸು ಅವರ ಹೆಸರು ನಿಮಗೆ ಚುನಾವಣೆಯಲ್ಲಿ ಉಪಯೋಗವಾಗಲಿದೆಯಾ?

ಹೌದು. ಸಂಶಯವೇ ಬೇಡ.

ಕೆ.ಆರ್.ಪುರಂ ನಲ್ಲಿ ಗೆಲ್ಲಬೇಕಿದ್ದರೆ ಕನಿಷ್ಠ 1 ಲಕ್ಷ ಮತಗಳು ಬೇಕೇ ಬೇಕು. ಆ ಮತಗಳನ್ನು ಪಡೆಯುವ ಧೈರ್ಯ ನಿಮಗಿದೆಯಾ?

ಪಡಿತೀನಿ ಅಂತಲ್ಲ. ಗೆಲ್ಲುವ ಧೈರ್ಯ ನನಗಿದೆ. ಕೆ.ಆರ್.ಪುರಂನಲ್ಲಿ ಯಾರನ್ನೇ ಕೇಳಿದರೂ ಭ್ರಷ್ಟಾಚಾರ ಮಾಡಿದ್ದಾರೆ, ದುಡ್ಡು ಹೊಡೆದಿದ್ದಾರೆ ಎನ್ನುತ್ತಾರೆ. ಕೆಲಸ ನಡೆದಿದೆ ಎಂದು ಯಾರೂ ಹೇಳುತ್ತಿಲ್ಲ. ಹಾಗಾಗಿ ಇಲ್ಲಿ ಒಂದು ಉತ್ತಮ ಅವಕಾಶ ಇದೆ.

ಅವರಿಂದ ನೀವು ಕಲಿತಿದ್ದೇನು? ಅದರಲ್ಲಿ ಯಾವುದನ್ನು ಅಳವಡಿಸಿಕೊಳ್ಳಬೇಕು ಎಂದುಕೊಂಡಿದ್ದೀರಿ?

ದೇವರಾಜ ಅರಸು ಅಂದರೆ ದೂರದೃಷ್ಟಿ. ಸರಳತೆ, ವಿನಯವಂತಿಗೆ, ತಂತ್ರಗಾರಿಕೆಗೆ ಅವರು ಹೆಸರುವಾಸಿ. ಅವರಿಗೆ ಜನರೇ ಸರ್ವಸ್ವ. ಅವರೊಬ್ಬ ನಿಜವಾದ ಜನನಾಯಕ. ಅವರ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಇತ್ತು. ಹಾಗಾಗಿ ಪ್ರತಿ ಸಮುದಾಯದ ಜನರಿಗೆ ಬೇಕಾದ ಯೋಜನೆಗಳನ್ನು ತಯಾರಿಸಿ ಜಾರಿಗಳಿಸಲು ಸಾಧ್ಯವಾಯಿತು. ಇದು ಜನರಿಗೆ ಉಪಯೋಗಕ್ಕೆ ಬಂತು. ಇದೆಲ್ಲಾ ನನಗೆ ಸ್ಪೂರ್ಥಿ.

 ಇದೊಂದು ಕುತೂಹಲದ ಪ್ರಶ್ನೆ. ಅರಸು ಪ್ರತಿನಿಧಿಸುತ್ತಿದ್ದ ಹುಣಸೂರು ಬಿಟ್ಟು ಕೆ.ಆರ್.ಪುರಂನಲ್ಲಿ ಸ್ಪರ್ಧಿಸುವ ನಿರ್ಧಾರಕ್ಕೆ ಯಾಕೆ ಬಂದ್ರಿ?

ಇದೊಂದು ಕುತೂಹಲದ ಪ್ರಶ್ನೆ. ಅರಸು ಪ್ರತಿನಿಧಿಸುತ್ತಿದ್ದ ಹುಣಸೂರು ಬಿಟ್ಟು ಕೆ.ಆರ್.ಪುರಂನಲ್ಲಿ ಸ್ಪರ್ಧಿಸುವ ನಿರ್ಧಾರಕ್ಕೆ ಯಾಕೆ ಬಂದ್ರಿ?

ನಾನು ಹತ್ತು ವರ್ಷದಿಂದ ಇಲ್ಲಿಯೇ ಇದ್ದೇನೆ. ಇಲ್ಲಿ ಕನ್ನಮಂಗಲದಲ್ಲಿ 2015ರಿಂದ ಗ್ರಾಮ ಪಂಚಾಯತ್ ಸದಸ್ಯನಾಗಿದ್ದು, ಇಲ್ಲಿ ಮಾಡಿದ ಕೆಲಸಗಳ ರೀತಿಯದ್ದೇ ಸಮಸ್ಯೆಗಳು ಕೆಆರ್.ಪುರಂನಲ್ಲಿವೆ. ಇಲ್ಲಿ ಕಂಡುಕೊಂಡ ಪರಿಹಾರಗಳನ್ನು ಇಡೀ ಕ್ಷೇತ್ರಕ್ಕೆ ವಿಸ್ತರಿಸಬಹುದು ಎಂದು ಇಲ್ಲಿ ಚುನಾವಣೆಗೆ ನಿಲ್ಲುವ ನಿರ್ಧಾರಕ್ಕೆ ಬಂದೆ.
ದೇವರಾಜ ಅರಸು ಅವರೊಂದಿಗೆ ಆಗಾಗ ಸಿದ್ದರಾಮಯ್ಯರನ್ನು ಹೋಲಿಕೆ ಮಾಡುತ್ತಾರೆ. ಈ ಬಗ್ಗೆ ನೀವು ಏನು ಹೇಳ್ತೀರಿ?

ನಿಮಗೇ ಗೊತ್ತಿದೆ. ಹೋಲಿಕೆ ಎನ್ನುವಂಥದ್ದು ಎಲ್ಲಿದೆ? ಸಿದ್ದರಾಮಯ್ಯರನ್ನು ಅತೀ ಭ್ರಷ್ಟ ಎಲ್ಲಿ, ನಮ್ಮ ತಾತ ಮುತ್ಸದ್ಧಿ ದೇವರಾಜ ಅರಸು ಎಲ್ಲಿ. ಹೋಲಿಕೆಯೇ ಇಲ್ಲ. ಸಿದ್ದರಾಮಯ್ಯನವರು ದೇವರಾಜು ಅರಸು ಅವರ ಹೆಸರನ್ನು ತೆಗೆದ ತಕ್ಷಣ ಅವರ ದಾರಿಯಲ್ಲಿ ನಡೆಯುತ್ತಿದ್ದಾರೆ ಎನ್ನುವುದಕ್ಕೆ ಏನಿದೆ ಸಾಕ್ಷಿ?

ಉದಾಹರಣೆಗೆ ದೇವರಾಜ ಅರಸು ಅವರು ಒಬಿಸಿಗೆ ಏನು ಮಾಡಿದ್ದಾರೋ ಅದರ ಶೇಕಡಾ 5 ಅಂಶ ಕೂಡ ಇವರು ಮಾಡಿಲ್ಲ. 5 ವರ್ಷದಲ್ಲಿ 60 ಸಾವಿರ ಕೋಟಿ ಖರ್ಚು ಮಾಡಿದ್ದೇನೆ ಅಂತ ಹೇಳಿದ್ದಾರೆ. ಎಲ್ಲಿ ಹೋಗಿದೆ. ಅವರ ಆರ್ಥಿಕ ಸ್ಥಿತಿ ಏನು ಬದಲಾವಣೆ ಆಗಿದೆ. ದಯವಿಟ್ಟು ಈ ರೀತಿಯ ಹೋಲಿಕೆ ಮಾಡಬೇಡಿ.

ಕೇಂಬ್ರಿಡ್ಜ್ ಅನಾಲಿಟಿಕಾದ ಬಗ್ಗೆ, ದತ್ತಾಂಶ ಸೋರಿಕೆ ಬಗ್ಗೆ ಏನು ಹೇಳುತ್ತೀರಿ?

ಕೇಂಬ್ರಿಡ್ಜ್ ಅನಾಲಿಟಿಕಾದ ಬಗ್ಗೆ, ದತ್ತಾಂಶ ಸೋರಿಕೆ ಬಗ್ಗೆ ಏನು ಹೇಳುತ್ತೀರಿ?

ದತ್ತಾಂಶಗಳಿಗೆ ಸಂಬಂಧಿಸಿದ ಹಾಗೆ ಅದು ಯಾವುದೇ ಯಾವುದೇ ಮಾಧ್ಯಮವಾಗಿರಬಹುದು, ಒಂದು ಶಿಸ್ತು ಮತ್ತು ಪಾರದರ್ಶಕತೆ ಪಾಲನೆ ಮಾಡುವುದು ಬಹಳ ಮುಖ್ಯ, ಎಲ್ಲವನ್ನೂ ಕಾನೂನು ನಿಯಂತ್ರಿಸಲು ಸಾಧ್ಯವಿಲ್ಲ. ಕಾನೂನು, ನೀತಿಗಳು ಸಮಯ ಕಳೆದ ಹಾಗೆ ರೂಪುಗೊಳ್ಳುವಂಥವು.

ಈ ಪ್ರಕರಣದಲ್ಲಿ ಎರಡು ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಈ ರೀತಿಯ ದತ್ತಾಂಶ ಸೋರಿಕೆಯಿಂದ ಲಾಭ ಪಡೆದಿವೆ. ಇದರಿಂದ ತುಂಬಾ ಉಪಯೋಗ ಗಿಟ್ಟಿಸಿವೆ. ಇದು ಸಂಪೂರ್ಣವಾಗಿ ಜನರ ವೈಯಕ್ತಿಕ ಸ್ವಾತಂತ್ರ್ಯದದ ಹರಣ.

ಮತ್ತು ಈ ರೀತಿಯ ಘಟನೆಗಳಿಂದ ಸಾಮಾಜಿಕ ಜಾಲತಾಣಗಳಂಥ ಸರಕುಗಳ ಬಗ್ಗೆ ಇಟ್ಟಿದ್ದ ಜನರ ನಂಬಿಕೆಯನ್ನು ಇದು ಕಸಿದಿದೆ. ಜನರು ತಮ್ಮ ಮಾಹಿತಿಯನ್ನು ನಂಬಿಕೆಯೊಂದಿಗೆ ಹಂಚಿಕೊಳ್ಳುತ್ತಿದ್ದರು. ಇದು ಮಾಹಿತಿ ಹಂಚಿಕೊಳ್ಳುವುದರ ಬಗ್ಗೆ ಜನರೇ ಸ್ವಯಂ ನಿಯಂತ್ರಣ ಹೇರುವಂತೆ ಮಾಡಿದೆ. ಒಟ್ಟಾರೆ ನಂಬಿಕೆಯ ಬಂಧವನ್ನು ಇಲ್ಲಿ ಮುರಿಯಾಲಾಗಿದೆ.

English summary
There is no comparison between chief minister Siddaramaiah and statesman Devaraj Urs said grandson of Urs and KR Puram AAP candidate Lingaraj Urs in an interview with Oneindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X