ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸಭೆಯಲ್ಲಿ ಈ ಬಾರಿಯೂ 6 ಮಂದಿ ಮಹಿಳೆಯರು!

By Nayana
|
Google Oneindia Kannada News

ಬೆಂಗಳೂರು, ಮೇ 15: ರಾಜ್ಯ ವಿಧಾನಸಭೆಯಲ್ಲಿ ಮಹಿಳೆ ಸದಸ್ಯರ ಸಂಖ್ಯೆ ನು ಈ ಬಾರಿಯೂ ಕಾಯ್ದುಕೊಂಡಿದೆ, ಈ ಬಾರಿ 6 ಶಾಸಕರು ಆಯ್ಕೆಯಾಗಿದ್ದಾರೆ. ಅದರಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾದ ಶಶಿಕಲಾ ಜೊಲ್ಲೆ ಗೆಲುವು ಸಾಧಿಸಿದ್ದಾರೆ.

ಬೆಳಗಾವಿ ಗ್ರಾಮೀಣದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್‌ ಗೆಲುವು ಸಾಧಿಸಿದ್ದಾರೆ. ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಕೃಷ್ಣಪ್ಪ ಅವರ ಪುತ್ರಿ ಪೂರ್ಣಿಮಾ ಶ್ರೀನಿವಾಸ್‌ ಗೆಲುವು ಸಾಧಿಸಿದ್ದಾರೆ.

ಸಿನಿಮಾದವರಿಗೆ ಕೈಕೊಟ್ಟ ಅದೃಷ್ಟ: ಪಾಸ್ ಆದವರು, ಫೇಲ್ ಆದವರು ಯಾರು.?ಸಿನಿಮಾದವರಿಗೆ ಕೈಕೊಟ್ಟ ಅದೃಷ್ಟ: ಪಾಸ್ ಆದವರು, ಫೇಲ್ ಆದವರು ಯಾರು.?

ಬಿಜೆಪಿ ಮೊದಲ ಪಟ್ಟಿಯಲ್ಲಿಯೇ ಟಿಕೆಟ್ ಪಡೆದ ಮಹಿಳಾ ಅಭ್ಯರ್ಥಿ ಇವರು. ಪೂರ್ಣಿಮಾ ಶ್ರೀನಿವಾಸ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೆ.ಆರ್.ಪುರ ವಾರ್ಡ್‌ನ ಸದಸ್ಯರಾಗಿದ್ದರು. ಕಾರವಾರದಿಂದ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯಕ್‌ ಗೆಲುವು ಸಾಧಿಸಿದ್ದಾರೆ.

ರೂಪಕಲಾ ಕೆಜಿಎಸ್‌ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲವು ಸಾಧಿಸಿದ್ದಾರೆ, ಖಮರುಲ್ ಇಸ್ಲಾಂ ಪತ್ನಿ ಖನೀಫಾ ಫಾತಿಮಾ ಬೇಗಂ ಕಲಬುರಗಿಯಲ್ಲಿ ಗೆಲುವು ಸಾಧಿಸಿದ್ದಾರೆ.

women MLAs number still reducing in state assembly

15ನೇ ವಿಧಾನಸಭಾ ಚುನಾವಣೆಯ ಕಣದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಹಿಳಾ ಸ್ಪರ್ಧಿಗಳು ಕಣದಲ್ಲಿದ್ದಾರೆ. 14ನೇ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ 170 ಅಭ್ಯರ್ಥಿಗಳು ಕಣದಲ್ಲಿದ್ದರು. ಆದರೆ, ಈ ಬಾರಿ 134 ಮಂದಿ ಮಾತ್ರ ಸ್ಪರ್ಧಿಸಿದ್ದರು.

2008ರ ಚುನಾವಣೆಯಲ್ಲಿ 107 ಮಹಿಳೆಯರು ಕಣದಲ್ಲಿದ್ದರು, ಇವರಲ್ಲಿ ಮೂವರು ಮಾತ್ರ ಗೆಲುವು ಸಾಧಿಸಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಮತ್ತು ಕಲ್ಪನಾ ಸಿದ್ದರಾಜು ಗೆಲುವು ಸಾಧಿಸಿದ್ದರು. 2013ರಲ್ಲಿ 170 ಅಭ್ಯರ್ಥಿಗಳ ಪೈಕಿ ಆರು ಮಂದಿ ಗೆಲುವು ಸಾಧಿಸಿದ್ದರು. ಮಹಿಳಾ ಶಾಸಕಿಯರ ಪೈಕಿ ಕಾಂಗ್ರೆಸ್ಸಿನಿಂದ ಮೂವರು, ಬಿಜೆಪಿಯಿಂದ ಇಬ್ಬರು ಮತ್ತು ಜೆಡಿಎಸ್ ನಿಂದ ಒಬ್ಬರು ವಿಜಯಲಕ್ಷ್ಮಿಯಾಗಿದ್ದರು.
ಹಾಲಿ ಮಹಿಳಾ ಶಾಸಕಿಯರು 1) ನಿಪ್ಪಾಣಿ -ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ (ಬಿಜೆಪಿ) 2) ಕೆಜಿಎಫ್-ವೈ ರಾಮಕ್ಕ (ಬಿಜೆಪಿ) 3) ತೇರದಾಳ -ಉಮಾಶ್ರೀ (ಕಾಂಗ್ರೆಸ್) 4) ಕುಮಟಾ-ಶಾರದಾ ಮೋಹನ್ ಶೆಟ್ಟಿ (ಕಾಂಗ್ರೆಸ್) 5) ಪುತ್ತೂರು-ಶಕುಂತಲಾ ಶೆಟ್ಟಿ (ಕಾಂಗ್ರೆಸ್) 6) ಶಿವಮೊಗ್ಗ ಗ್ರಾಮಾಂತರ- ಶಾರದಾ ಪೂರ್ಯ ನಾಯ್ಕ್ (ಜೆಡಿಎಸ್).

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ

ಮಹಿಳೆಯರ ಬಲಾಬಲ

1957-13

1962-18

1967-05

1972-00

1978-08

1983-01

1985-08

1989-10

1994-07

1999-06

2004-06

2008-03

2013-06

2018-4

English summary
The state assembly HSS witnessed reducing women MLAs again as only four women have won the election this time. There were six women MLAs won in 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X