ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ಆರ್.ಆರ್.ನಗರ : ಮತದಾನ ಅಂತ್ಯ, ಮೇ .31ರಂದು ಫಲಿತಾಂಶ

|
Google Oneindia Kannada News

ಬೆಂಗಳೂರು, ಮೇ 28: ವಿವಾದಗಳ ಕಾರಣ ಗಮನ ಸೆಳೆದಿದ್ದ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರಕ್ಕೆ ಸೋಮವಾರ ಮತದಾನ ನಡೆಯಿತು. ಮೇ 31ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರೂ, ಈ ಕ್ಷೇತ್ರದಲ್ಲಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳದೆಯೇ ಪರಸ್ಪರ ಎದುರಾಳಿಗಳಾಗಿರುವುದು ಈ ಚುನಾವಣೆಯ ವಿಶೇಷ.

ಮನೆ-ಮನೆ ಪ್ರಚಾರ ಮಾಡಲ್ಲ, ಮತ ಮಾರಿಕೊಂಡವರು ಎಕ್ಕಡ ಸಮಾನ!ಮನೆ-ಮನೆ ಪ್ರಚಾರ ಮಾಡಲ್ಲ, ಮತ ಮಾರಿಕೊಂಡವರು ಎಕ್ಕಡ ಸಮಾನ!

ಕಾಂಗ್ರೆಸ್‌ನಿಂದ ಮುನಿರತ್ನ ನಾಯ್ಡು, ಬಿಜೆಪಿಯಿಂದ ತುಳಸಿ ಮುನಿರಾಜು ಗೌಡ ಮತ್ತು ಜೆಡಿಎಸ್‌ನಿಂದ ಜಿ.ಎಚ್. ರಾಮಚಂದ್ರ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.

 Rajarajeshwarinagar constituency voting live updates

ತಮ್ಮ ಸಿನಿಮಾ, ವಿವಾದ, ಡೈಲಾಗ್ ಮತ್ತಿತರ ವಿಚಾರಗಳಿಂದ ಹೆಸರಾಗಿರುವ ನಟ ಹುಚ್ಚ ವೆಂಕಟ್ ಸಹ ಈ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಆರ್.ಆರ್.ನಗರ ಚುನಾವಣೆ ಮುಂದೂಡಲು ಕಾರಣಗಳುಆರ್.ಆರ್.ನಗರ ಚುನಾವಣೆ ಮುಂದೂಡಲು ಕಾರಣಗಳು

Newest FirstOldest First
6:11 PM, 28 May

ಮತಯಂತ್ರಗಳನ್ನು ಜ್ಞಾನಾಕ್ಷಿ ಶಾಲೆಯಲ್ಲಿ ಇಡಲಾಗುತ್ತದೆ. ಮೇ 31ರಂದು ಮತ ಎಣಿಕೆ ನಡೆಯಲಿದೆ.
6:04 PM, 28 May

ಆರ್.ಆರ್.ನಗರದಲ್ಲಿ ಮತದಾನ ಅಂತ್ಯ
5:32 PM, 28 May

ರಾಜರಾಜೇಶ್ವರಿ ನಗರದಲ್ಲಿ ಸಂಜೆ 5 ಗಂಟೆಯ ತನಕ ಶೇ 50ರಷ್ಟು ಮತದಾನ ನಡೆದಿದೆ
5:25 PM, 28 May

ಆರ್.ಆರ್.ನಗರ ಚುನಾವಣೆ ಮತದಾನ ಮಾಡಲು ಅರ್ಧಗಂಟೆಗಳು ಮಾತ್ರ ಬಾಕಿ ಉಳಿದಿದೆ
4:03 PM, 28 May

ಜ್ಞಾನಭಾರತಿ ಲೇಔಟ್‌ನ 129 ಮತಗಟ್ಟೆಗೆ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಭೇಟಿ ನೀಡಿ, ಚುನಾವಣಾ ಪ್ರಕ್ರಿಯೆನ್ನು ವೀಕ್ಷಿಸಿದರು. ಸೋಮವಾರ ಬೆಳಗ್ಗೆಯಿಂದ ಅವರು ನಾಪತ್ತೆಯಾಗಿದ್ದರು. ಅವರನ್ನು ಬಂಧಿಸಲಾಗಿದೆ ಎಂಬ ಸುದ್ದಿಗಳು ಹಬ್ಬಿದ್ದವು.
3:28 PM, 28 May

ಮಧ್ಯಾಹ್ನ 3 ಗಂಟೆ ವೇಳೆಗೆ ಶೇ 41ರಷ್ಟು ಮತದಾನ ನಡೆದ ಬಗ್ಗೆ ವರದಿಯಾಗಿದೆ.
3:15 PM, 28 May

ಆರ್ ಆರ್ ನಗರ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿರುವವರಿಗೆ ಮತದಾನದ ವ್ಯವಸ್ಥೆ ಮಾಡಲಾಗಿತ್ತು. 300ಕ್ಕೂ ಹೆಚ್ಚು ಬಿಕ್ಷುಕರು ಸುಂಕದಕಟ್ಟೆಯ ಶ್ರೀನಿವಾಸ ನಗರದಲ್ಲಿ ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದರು. ಪುನರ್ವಸತಿ ಕೇಂದ್ರದಲ್ಲಿ 850 ಭಿಕ್ಷುಕರಿದ್ದು, ಅವರಲ್ಲಿ ಬುದ್ಧಿಮಾಂದ್ಯರನ್ನು ಹೊರತುಪಡಿಸಿ ಉಳಿದವರಿಗೆ ಮತದಾನ ಸೌಲಭ್ಯ ಕಲ್ಪಿಸಲಾಗಿತ್ತು.
Advertisement
2:34 PM, 28 May

ಬೆಂಗಳೂರಿಗರಿಗೆ ಟ್ವಿಟ್ಟರ್‌ನಲ್ಲಿ ಮತದಾನಕ್ಕೆ ಅವಕಾಶ ನೀಡಬೇಕು. ಆಗ ಶೇ 150ರಷ್ಟು ಮತದಾನವಾಗಲಿದೆ ಎಂದು ಆದಿತ್ಯ ಎಂಬುವವರು ಮತ ಚಲಾಯಿಸಲು ಬೆಂಗಳೂರಿಗರು ತೋರುತ್ತಿರುವ ನಿರಾಸಕ್ತಿ ಬಗ್ಗೆ ವ್ಯಂಗ್ಯವಾಡಿದ್ದಾರೆ.
2:06 PM, 28 May

ವೋಟರ್ ಐಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಮುನಿರತ್ನ ನಾಯ್ಡು ಮತಗಟ್ಟೆಗೆ ಆಗಮಿಸಿ ವದಂತಿಗಳಿಗೆ ತೆರೆ ಎಳೆದರು.
1:25 PM, 28 May

ಲಗ್ಗೆರೆ ವಾರ್ಡ್‌ನಲ್ಲಿ ಮುನಿರತ್ನ ಪರ ಮತಯಾಚನೆ ಮಾಡಿದ್ದಕ್ಕೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ವಿರುದ್ಧ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
1:18 PM, 28 May

ರಾಜರಾಜೇಶ್ವರಿ ನಗರದಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಶೇ 34ರಷ್ಟು ಮತದಾನ ನಡೆದಿದೆ.
12:48 PM, 28 May

ನಟ ಗಣೇಶ್, ಪತ್ನಿ ಶಿಲ್ಪಾ ಜತೆ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿದರು.
Advertisement
11:32 AM, 28 May

ಕೊಟ್ಟಿಗೆಪಾಳ್ಯದ ಮತಗಟ್ಟೆ ಸಂಖ್ಯೆ 244 ರಲ್ಲಿ ಹಕ್ಕು ಚಲಾವಣೆ ಮಾಡಿದ ಅಂಗವಿಕಲರು ಮತದಾನದ ಕುರಿತು ಜಾಗೃತಿ ಮೂಡಿಸಿದರು.
11:27 AM, 28 May

ಬೆಳಿಗ್ಗೆ 11 ಗಂಟೆಯ ವೇಳೆಗೆ ಶೇ 21 ರಷ್ಟು ಮತದಾನ ನಡೆದಿದೆ.
11:03 AM, 28 May

ಶಾಸಕ ಆರ್ ಅಶೋಕ್ ಕುಟುಂಬ ಸಮೇತ ಜಾಲಹಳ್ಳಿ ವಿಲೇಜ್ ಮತಗಟ್ಟೆ 22ಕ್ಕೆ ಆಗಮಿಸಿ ಮತ ಚಲಾವಣೆ ಮಾಡಿದರು.
11:02 AM, 28 May

ಮೌಂಟ್ ಕಾರ್ಮೆಲ್ ಕಾಲೇಜಿನ ಮತಗಟ್ಟೆಯಲ್ಲಿ ನಟಿ ಪವಿತ್ರಾ ಲೋಕೇಶ್ ಮತ್ತು ನಟ ಸುಚೇಂದ್ರ ಪ್ರಸಾದ್ ದಂಪತಿ ಮತ ಚಲಾಯಿಸಿದರು.
11:01 AM, 28 May

ನಟ ಅವಿನಾಶ್ ಮತ್ತು ನಟಿ ಮಾಳವಿಕಾ ದಂಪತಿ ಮತಚಲಾವಣೆ ಮಾಡಿದರು. ಮತಗಟ್ಟೆಯ ಮೆಟ್ಟಿಲೇರುವ ಸಮಯದಲ್ಲಿ ಮಾಳವಿಕಾ ಎಡವಿ ಬಿದ್ದರು.
10:02 AM, 28 May

ಎರಡೂ ಕಾಲು ಊನವಿರುವ ವ್ಯಕ್ತಿಯೊಬ್ಬರು ರಾಜೇಶ್ವರಿ ವಿದ್ಯಾಲಯ ಕೆಂಚೇನಹಳ್ಳಿಯಲ್ಲಿ ಮತದಾನ ಮಾಡಿ ಸಹಾಯಕರ ನೆರವಿನಿಂದ ಹೊರಬಂದರು.
9:50 AM, 28 May

ಬೆಳಿಗ್ಗೆ 9 ಗಂಟೆಯವರೆಗೂ ಶೇ 11ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
9:24 AM, 28 May

ಲಗ್ಗೆರೆಯ 154ನೇ ಮತಗಟ್ಟೆಯಲ್ಲಿ ಇವಿಎಂನಲ್ಲಿ ಕಾಣಿಸಿಕೊಂಡಿದ್ದ ದೋಷವನ್ನು ಅಧಿಕಾರಿಗಳು ಸರಿಪಡಿಸಿದ್ದಾರೆ. ಈ ಮತಗಟ್ಟೆಯಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದೆ.
9:17 AM, 28 May

ಮತಗಟ್ಟೆ ಸಂಖ್ಯೆ 124 ರಲ್ಲಿ ಮತಚಲಾಯಿಸಿದ ಮತದಾರರು.
9:09 AM, 28 May

ಮುಂದುವರೆದ ಇವಿಎಂ ಸಮಸ್ಯೆ. ಸುಮಾರು ಒಂದು ಗಂಟೆಗಳ ಕಾರ್ಯ ನಿರ್ವಹಿಸದ ಇವಿಎಂ ಯಂತ್ರ. ಮತಗಟ್ಟೆ 212 ರಲ್ಲಿ ತಾಂತ್ರಿಕ ದೋಷ. ವೋಟ್ ಹಾಕಲು ಸರತಿ ಸಾಲಿನಲ್ಲಿ ಮತದಾರರು. ಇವಿಎಂ ಯಂತ್ರ ಸರಿಪಡಿಸಲು ಸಿಬ್ಬಂದಿಗಳ ಹೆಣಗಾಟ
9:06 AM, 28 May

ಬಿಜೆಪಿಯಲ್ಲಿ ಟಿಕೆಟ್ ಸಿಗದ ಕಾರಣಕ್ಕೇ ಜೆಡಿಎಸ್ ಸೇರಿದ್ದ ರಾಮಚಂದ್ರ ಅವರು ಕಾಂಗ್ರೆಸ್ಸಿನ ಮುನಿರತ್ನ ಅವರನ್ನು ಬೆಂಬಲಿಸಲು ಒಪ್ಪದ ಕಾರಣ ಜೆಡಿಎಸ್-ಕಾಂಗ್ರೆಸ್ ನಡುವಲ್ಲೂ ಸ್ಪರ್ಧೆ ಏರ್ಪಟ್ಟಿದೆ. ಇದರಿಂದ ಬಿಜೆಪಿ ಲಾಭ ಪಡೆಯುತ್ತದೆಯೇ ಎಂಬುದನ್ನು ಕಾದುನೋಡಬೇಕು.
8:46 AM, 28 May

ಬಿಜೆಪಿ ಮತ್ತು ಜೆಡಿಎಸ್‌ನ ಕೆಲವು ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದರಿಂದ ಮತಗಟ್ಟೆಯೊಂದರಲ್ಲಿ ಗೊಂದಲ ಉಂಟಾಯಿತು. ಕೂಡಲೇ ಪೊಲೀಸರು ಅವರನ್ನು ಹೊರಹೋಗುವಂತೆ ಸೂಚಿಸಿದರು.
7:53 AM, 28 May

ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಅವರ ಸೊಸೆ, ನಟಿ ಅಮೂಲ್ಯ ಅವರು ಮತಗಟ್ಟೆ ಸಂಖ್ಯೆ 366ರಲ್ಲಿ ಮತಚಲಾವಣೆ ಮಾಡಿದರು.
7:49 AM, 28 May

ಲಗ್ಗೆರೆಯ 154ನೇ ಮತಗಟ್ಟೆಯಲ್ಲಿ ಇವಿಎಂನಲ್ಲಿ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತದಾನ ಇನ್ನೂ ಶುರುವಾಗಿಲ್ಲ. ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾವಣೆಗೆ ಕಾಯುತ್ತಿದ್ದಾರೆ.
7:22 AM, 28 May

ಮೇ 31 ರಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬೀಳಲಿದೆ.
7:18 AM, 28 May

ಚುನಾವಣಾ ಕಣದಲ್ಲಿ ಒಟ್ಟು 14 ಜನ ಅಭ್ಯರ್ಥಿಗಳಿದ್ದಾರೆ. ಇಲ್ಲಿ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ನಿರೀಕ್ಷಿಸಲಾಗಿದೆ.
7:13 AM, 28 May

ಚುನಾವಣೆಗಾಗಿ ಒಟ್ಟು 421 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿದೆ. ಒಟ್ಟು ಮತದಾರರ ಸಂಖ್ಯೆ 4,54,901 . ಪುರುಷ ಮತದಾರರ ಸಂಖ್ಯೆ 2,38,015, ಮಹಿಳಾ ಮತದಾರರ ಸಂಖ್ಯೆ 2,16,821, ತೃತೀಯ ಲಿಂಗಿಗಳು ಒಟ್ಟು 65.
7:09 AM, 28 May

ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಸೂಕ್ಷ್ಮ ಮತಗಟ್ಟೆಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
READ MORE

English summary
Karnataka assembly elections 2018: Rajarajeshwari Nagar constituency voting live updates in kannada. Get latest trends, developments, voting percentage updates. Voting of Rajarajeshwari nagar constituency was postponed to May 28 due to some issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X