ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಬಲಿಗರ ಒತ್ತಾಯ: ಜಿಟಿ ದೇವೇಗೌಡರ ಖಾತೆ ಬದಲಾವಣೆ ಸಾಧ್ಯತೆ

|
Google Oneindia Kannada News

Recommended Video

ಜಿಟಿ ದೇವೇಗೌಡರ ಖಾತೆ ಬದಲಾವಣೆ ಸಾಧ್ಯತೆ | Oneindia Kannada

ಬೆಂಗಳೂರು, ಜೂನ್ 11: ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಅವರ ಖಾತೆಯನ್ನು ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ತಮ್ಮ ಬೆಂಬಲಿಗರಿಗೆ ಸ್ವತಃ ಜಿಟಿಡಿ ತಿಳಿಸಿದ್ದಾರೆ.

ಜೂನ್ 8 ರಂದು ನಡೆದ ಖಾತೆ ಹಂಚಿಕೆ ಪ್ರಕ್ರಿಯೆಯಲ್ಲಿ ಜೆಡಿಎಸ್ ಮುಖಂಡ ಜಿ ಟಿ ದೇವೇಗೌಡರಿಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಈ ಖಾತೆಯ ಕುರಿತು ದೇವೇಗೌಡರಲ್ಲಿ ಸಮಾಧಾನವಿರಲಿಲ್ಲ. ಅದೂ ಅಲ್ಲದೆ, ಕೇವಲ 8 ನೇ ತರಗತಿಯನ್ನಷ್ಟೇ ಪಾಸು ಮಾಡಿದವರಿಗೆ 'ಉನ್ನತ ಶಿಕ್ಷಣ' ಖಾತೆ ನಿಡಲಾಗಿದೆ ಎಂದು ಸಾಕಷ್ಟು ಜನ ಈ ಕ್ರಮವನ್ನು ವಿರೋಧಿಸಿದ್ದರು. ಸಾಮಾಜಿಕ ಮಾಧ್ಯಮಗಳಲ್ಲೂ ಜಿಟಿಡಿ ಇದೇ ಕಾರಣಕ್ಕೆ ಟ್ರೋಲ್ ಆಗಿದ್ದರು.

Portfolio of Higher education minister GT Devegowda may be changed

ಇದೆಂಥ ವಿಪರ್ಯಾಸ, ವಿದ್ಯಾರ್ಹತೆ 8 ನೇ ತರಗತಿ, ಖಾತೆ-ಉನ್ನತ ಶಿಕ್ಷಣ!ಇದೆಂಥ ವಿಪರ್ಯಾಸ, ವಿದ್ಯಾರ್ಹತೆ 8 ನೇ ತರಗತಿ, ಖಾತೆ-ಉನ್ನತ ಶಿಕ್ಷಣ!

ಅದೂ ಅಲ್ಲದೆ, ಜಿಟಿಡಿ ಬೆಂಬಲಿಗರು ಮತ್ತು ಕಾರ್ಯಕರ್ತರು ಸಹ ಅವರ ಖಾತೆಯನ್ನು ಬದಲಿಸುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದ ಜಿಟಿಡಿ ಖಾತೆ ಬದಲಾಯಿಸುವ ಕುರಿತು ಮಾತುಕತೆ ನಡೆಸಿದ್ದರು. ಮೈಸೂರಿನ ಇನ್ಪೋಸಿಸ್ ವಸತಿಗೃಹದಲ್ಲಿ ಕುಮಾರಸ್ವಾಮಿ ಅವರೊಂದಿಗೆ ಜಿಟಿಡಿ ನಡೆಸಿದ ಮಾತುಕತೆ ಯಶಸ್ವಿಯಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?

ಹೀಗಾಗಿ ಜಿಟಿಡಿ ಅವರ ಖಾತೆ ಬದಲಾವಣೆಯಾಗುವ ಸಾಧ್ಯತೆ ಇದ್ದು, ಅವರಿಗೆ ಯಾವ ಖಾತೆ ನೀಡುವ ಬಗ್ಗೆ ಪಕ್ಷ ತೀರ್ಮಾನಿಸುತ್ತದೆ ಎಂಬುದನ್ನು ಕಾದುನೋಡಬೇಕು.

English summary
Karnataka Cabinet Expansion: Chief minister HD Kumaraswamy positively responsed to Higher education minister G T Devegowda, for changing his portfolio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X